ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮತ್ತೆ ಮತ್ತೆ ನೆನಪಾಗುವ ಶಂಕರ್ ನಾಗ್

ಮೊನ್ನೆ ಭಾನುವಾರ, ಅಂದರೆ ನವೆಂಬರ್ ೯ ರಂದು, ಶಂಕರ್ ನಾಗ್ ಅವರ ನೆನಪಾಯಿತು.

ಯಾಕೆ ಅಂದರೆ ನವೆಂಬರ್ ೯ ರಂದು ಅವರ ಜನ್ಮದಿನ. ೧೯೫೪ ನವೆಂಬರ್ ೯ ರಂದು ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ್ ಅವರು ಹುಟ್ಟಿದರು.

ಅವರ ಬಗ್ಗೆ ಈಗಾಗಲೇ ಇಲ್ಲಿ ಬರೆದಿದ್ದೇನೆ.

ಏನಪ್ಪ ಇವನು ಶಂಕರ್ ನಾಗ್ ಹುಟ್ಟಿದ ದಿನ ಮತ್ತು ಅವರು ತೀರಿಹೋದ ದಿನ ಮಾತ್ರ ಇವರನ್ನು ನೆನಪಿಸಿಕೊಳ್ಳುತ್ತಾನೆ ಅಂತ ತಿಳಿಯಬೇಡಿ. ಆಗಾಗ ಶಂಕರ್ ನಾಗ್ ನೆನಪಾಗ್ತಾ ಇರ್ತಾರೆ.

ಶಂಕರ್ ನಾಗ್ ಒಬ್ಬ ಮಹಾನ್ ಕಲಾವಿದ, ಅದಕ್ಕಿಂತ ಹೆಚ್ಚಾಗಿ ಒಬ್ಬ ಒಳ್ಳೇ ಮನುಷ್ಯ.

ಶಂಕರ್ ನಾಗ್ ಇಳಯರಾಜ ಜೊತೆಗೂಡಿ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಇದೇ ನಾಡು ಇದೇ ಭಾಷೆ - ತಿರುಗುಬಾಣ

"ತಿರುಗುಬಾಣ" ಚಲನಚಿತ್ರ ಎಂದಾಕ್ಷಣ ನಮಗೆ ನೆನಪಿಗೆ ಬರುವುದು "ಇದೇ ನಾಡು ಇದೇ ಭಾಷೆ" ಎಂಬ ಹಾಡು. ಈ ಹಾಡನ್ನು ನೀವೆಲ್ಲರೂ ಕೇಳಿರ್ತೀರಾ, ನೋಡಿರ್ತೀರಾ.

ಈ ಹಾಡಿನ ಸಂಗೀತ ನಿರ್ದೇಶಕರು ದಿ||ಸತ್ಯಂ ಅವರು. ಇಂದು "ಥಟ್ ಅಂತ ಹೇಳಿ" ಕಾರ್ಯಕ್ರಮದಲ್ಲಿ ಈ ಹಾಡಿನ ಸಂಗೀತ ನಿರ್ದೇಶಕರು ಯಾರು? ಎಂಬ ಪ್ರಶ್ನೆಗೆ ಈ ಹಾಡನ್ನು ತೋರಿಸಲಾಯಿತು. ಆಗ ನನಗೆ ತುಂಬಾ ಸಂತೋಷವಾಯಿತು, ಯಾಕಂದ್ರೆ, ಈ ಹಾಡನ್ನ ಕೇಳಿ ಬಹಳ ದಿನಗಳಾಗಿದ್ದವು.

ಅಂದು ಸಂಜೆ,

ಅಂದು ಸಂಜೆ,

ಬಿಳಿಯಾದ ಮೊಡವೆಲ್ಲ ತುಂಬಿತ್ತು

ನಾಚಿಕೆಯಾದ ಹೆಣ್ಣಿನ ಕೆನ್ನೆಯಂತೆ ಕೆಂಪಗೆ

ಅದು ರವಿ ಮುಳುಗುವ ಸಮಯ

ರವಿಯು ಇಂದಿನ ದಿನದ ಸೋಲುಗಳನು ಮರೆಸಿ

ನಾಳೆಯ ಹೊಸ ಕನಸುಗಳಿಗೆ ನಾಂದಿ

ಹಾಡಲು ಕಾತುರನಾಗಿದ್ದಾನೆ.

ಹಿಡಿ ಭಾನು ಮರೆಯಾಗುತ್ತಿರುವ ರವಿಯ ಕಂಡು

ಅತ್ತು ಅತ್ತು ಕೆಂಪಾಗದಂತೆ

ಹಾಕ್ಕಿಗಳೆಲ್ಲ ತಮ್ಮ ಸೂರುಗಳಿಗೆ ಆತುರದಿಂದ

ಉತ್ತರ ಕರ್ನಾಟಕದ ಮುಸ್ಲೀಮರ ಮಾತುಗಳು

ಗೆಳೆಯರೆ,
ನಮ್ಮ ಕಡೆ ಮುಸ್ಲೀಮರು ಹೆಂಗ ಮಾತಾಡ್ತಾರ ನೋಡ್ರಿ.

ಕುಂಬಿ ಪೆ ಮಂಗ್ಯಾ ಬೈಟಾ ಥಾ
ಕಲ್ಲ ತಗೊಂಡು ಮಾರ್‍ಯಾ..
ಮಂಗ್ಯಾ ಬುದುಗ್ನ ಹಟ್ಗಯಾ...

ಮೆ ಹೊಲಕ್ ಜಾರಹಾ ಥಾ..
ಅಡ್ಡಡ್ಡ ಹಾದಿ ಮೆ ಉದ್ದುದ್ದ ಹಾವು ಪಡ್ಯಾ ಥಾ
ಮೆ ಬಡಗಿ ಲೇಕೆ ಹಿಂಗ ಮಾರ್‍ಯಾ..
ಹಾವು ವಿಲವಿಲ ಒದ್ಯಾಡ್ಕರ್‍ ಮರ್‍ಗಯಾ..

ಕ್ಯಾ ಮನಗಂಡ ಗದ್ಲಾ ಹೈ ಜಿ ಬಸ್ಸಾ....(ಏನರ ಗೊತ್ತಾತನು? ;))

ಧನ ಕನಕ

ಧನ ಕನಕವೆಂಬ ಅಸೆ ಎನಗಿಲ್ಲ
ಆದರೆ, ಧನವಿಲ್ಲದೆ ಕನಕ ಸಿಗಬಲ್ಲಳೇ?
ಸಿಕ್ಕರೂ ಕನಕ ಲೇಪಿತ ಕಬ್ಬಿಣವೇ?
ನಿಜ ಹೇಳಿ ನನ್ನೀಚಿಂತೆಯ ದೂರಮಾಡಿ

Deutschlandನಲ್ಲಿ ದೀಪಾವಳಿ

ಹೊರದೇಶದಲ್ಲಿ ನಮ್ಮ ಹಬ್ಬಗಳ ಆಚರಣೆ ನಡೆಯೋದು ಅನುಕೂಲದ ಮೇಲೆ. ಅಂದ್ರೆ, ವಾರದ ದಿನಗಳಲ್ಲಿ ಸಾಧ್ಯವಿಲ್ಲ. ಸಾಧ್ಯವಿದ್ದರ ಅದು ಬರೀ ಮನೆಯಲ್ಲಿ ದೇವರ ಪೂಜೆ, ಸ್ವಲ್ಪ ಸಿಹಿ ತಿಂಡಿ, ಅಷ್ಟೆ. ರಜೆ ಹಾಕಿ, ಬಂಧು ಮಿತ್ರರ ಮನೆಗೆ ಭೇಟಿ ಬಹಳ ಕಷ್ಟ. ಆದ್ದರಿಂದ ಇಲ್ಲಿ ವೀಕೆಂಡ್ ಹಬ್ಬಗಳದ್ದೇ ಭರಾಟೆ. ಹೀಗಾಗಿಯೇ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಬಂದ ದೀಪಾವಳಿಯನ್ನು ಜೆರ್ಮನಿಯ ಹ್ಯಾಂಬರ್ಗ್ ನಗರದ ನಮ್ಮ "ಅನಿವಾಸಿ ಭಾರತಿ" ಮಿತ್ರರು ನವೆಂಬರ್ ಎಂಟರಂದು ಬಹಳ ಅದ್ಧೂರಿಯಾಗಿ ಆಚರಿಸಿದೆವು.

ದಿನಾಂಕ : ನವೆಂಬರ್ 8, 2008

ಸ್ಥಳ : ಆಫ್ಘಾನ್ ಹಿಂದೂ ಮಂದಿರ, ರೋಥೆನ್ಬರ್ಗ್ ಸಾರ್ಟ್, ಹ್ಯಾಂಬರ್ಗ್ (ಈ ಮಂದಿರವನ್ನು ಆಫ್ಘಾನಿಸ್ತಾನದಿಂದ ಇಲ್ಲಿ ವಲಸೆ ಬಂದ ಹಿಂದೂಗಳು 1998 ರಲ್ಲಿ ಕಟ್ಟಿಸಿದರು)

ಅನಿವಾಸಿ ಭಾರತಿ ಎಂಬುದು ಭಾರತೀಯ ಸಂಘವಾದರೂ, ಬಹಳ ಖುಷಿ ಕೊಟ್ಟ ಸಂಗತಿಎಂದರೆ, ಈ ಸಂಘದಲ್ಲಿ 70% ನಮ್ಮ ಕನ್ನಡಿಗರೇ ಇರೋದು, ಹಾಗು ಇದನ್ನು ಶುರು ಮಾಡಿದವರೂ ನಮ್ಮವರೇ.

ನಮ್ಮ ಅವ್ವಾ...

ಗೆಳೆಯರೆ,
ನನ್ನ ಗೆಳೆಯನ ಹತ್ತಿರ ಈ ಒಂದು ಹಾಡು ಇತ್ತು..ನಾನಿದನ್ನ ಎಲ್ಲಿಂದ ತಂದೆ ಅಂತ ಕೇಳಿದೆ. ಅವ ಹೇಳಿದ, ಹಿಂಗ ಒಂದು ಮೇಲ್ ನಿಂದ ಮೇಲ್ ಗೆ ಬಂದಿದ್ದು ಅಂತ ಅಂದ. ಅದನ್ನು ಇಲ್ಲಿ ಹಾಕೀನಿ ಯಾರು ಬರೆದಿದ್ದು ಅಂತ ನಿಮಗೇನರ ಗೊತ್ತಿದ್ದರ ಹೇಳ್ರಿ.. ಅಂದಂಗ ಇದು..ತಾರೆ ಜಮೀನ್ ಪರ್‍ ಚಿತ್ರದ..ಮೇರಿ ಮಾ ರಿಮಿಕ್ಸ..

ಅವ್ವಾ ನೀ ಚೂಡ ಮಾಡಿಟ್ಟಿರು
ಸಂಜೀಕ ಬಂದು ತಿಂತೀನಿ ನಾ

ನಿಸರ್ಗ - ಪರಿಸರ ಪ್ರೇಮಿಗಳಿಗೊಂದು ಮಾಸಿಕ

ಈವತ್ತು ಮಿಂಚಂಚೆಯಲ್ಲಿ ಬಂದ ಹೊಸ ವಿಚಾರ..

"ನಿಸರ್ಗ" - ಪರಿಸರ ಪ್ರೇಮಿಗಳಿಗೊಂದು ಮಾಸಿಕ.

http://nisarga.maasika.googlepages.com/

ಪ್ರಾಣಿ, ಪಕ್ಷಿ, ಕೀಟಗಳು, ಹೂವು, ಹಣ್ಣುಗಳು, ಪರಿಸರ, ಚಾರಣ, ಮನಸೆಳೆಯುವ ಪ್ರಕೃತಿಯ ಅಪಾರ ಚಿತ್ರಗಳು....ಹೀಗೆ ಅನೇಕ ವಿಷಯಗಳಿವೆ. ಉಪಯುಕ್ತ ಮಾಹಿತಿ ಹಂಚಿಕೊಳ್ಳಬೇಕೆನ್ನಿಸಿತು... ಅದಕ್ಕೆ ಇಲ್ಲಿ ಸೇರಿಸುತ್ತಿದ್ದೇನೆ :)

-ಸವಿತ

ಡಿಸ್ನಿ ಲ್ಯಾಂಡ್ ನ, ’ಸುಂದರ ಮತ್ಸ್ಯಕನ್ಯೆ’ !

ಮರ್ಮೇಡ್ ಕಥಾಪ್ರಸಂಗ, ಇಂದು ಅಪ್ರಸ್ತುತ ; ಆದರೆ ಸಮುದ್ರಯಾನ, ಇನ್ನೂ ಗರಿಕೆದರದ ಅವಸ್ಥೆಯಲ್ಲಿದ್ದಾಗ, ನಾವಿಕರು, ಕಂಡದ್ದು, ಕೇಳಿದ್ದು ಅಥವಾ ಹೇಳಿದ್ದೆಲ್ಲಾ ವೇದವಾಕ್ಯಗಳೇ ! ಮರ್ಮೇಡ್ ಗಳ ಬಗ್ಗೆ ಅದೆಷ್ಟು ಜನ ಸಮುದ್ರಯಾನ ಮಾಡಿದ ಧೀರ ನಾವಿಕರು, ನಿಜಕ್ಕೂ ತಲೆಯಮೇಲೆ ಹೊಡೆದಂತೆ ಕೊಟ್ಟಿರುವ ಮಾಹಿತಿಗಳು ಅನನ್ಯ.