ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿದೇಶದಲ್ಲಿನ ವಾಸ ಹೆತ್ತವರಿಂದ ಹಾಗೂ ಬಂದು ಮಿತ್ರರಿಂದ ದೂರವಿರೋ ವನವಾಸ!!

ನನ್ನ ಸ್ನೇಹಿತೆಯೊಬ್ಬಳಿಗೆ ೬ ತಿಂಗಳು ತುಂಬಿದಾಗ, ಮನೆಯವರೆಲ್ಲ ಸಂತೋಷದಿಂದ ಮುಂಬರೋ ಮಗುವಿನ ಕನಸು ಕಾಣೋ ಹೊತ್ತು. ಪ್ರತೀ ದಿನ ಮನೆಯವರೊಂದಿಗೆ ಇಂಟರ್‌ನೆಟ್ ಮುಖಾಂತರ ಮಾತು, ಅಮ್ಮ ಭಾರತದಿಂದ ಮಗಳಿಗೆ ಅದು ತಿನ್ನು, ಇದು ತಿನ್ನು, ಹೀಗೆ ಮಾಡು, ಹಾಗೆ ಮಾಡು ಅಂತ ಪ್ರತೀ ದಿನ ಸಲಹೆ ನೀಡುತ್ತಿದ್ದರು.

ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೧

ಒಂದಾನೊಂದು ಕಾಲದಲ್ಲಿ ಸೀಗೆ ಗುಡ್ಡದ ತಪ್ಪಲಲ್ಲಿ ಒಂದು ಕರಡಿ ಸಂಸಾರ ವಾಸವಾಗಿತ್ತು. ಅಮ್ಮ, ಅಪ್ಪ ಮತ್ತೆ ಪುಟಾಣಿ. ಬೆಟ್ಟದ ಮೇಲೆ ಕುರುಚಲು ಕಾಡಿದ್ದರಿಂದ ಅವರ ಸಂಸಾರಕ್ಕೆ ಹಲಸಿನ ಹಣ್ಣಿಗೂ, ಜೇನುತುಪ್ಪಕ್ಕೂ ಯಾವತ್ತೂ ಕೊರತೆ ಆಗಿರ್ಲಿಲ್ಲ. ಸುತ್ತ ಮುತ್ತ ಹಳ್ಳೀ ಜನರೂ ಕೂಡ ಸೀಗೆ ಗುಡ್ಡದಲ್ಲಿ ಕರಡಿ ಸಂಸಾರ ಇರೋದು ಗೊತ್ತಿದ್ರಿಂದ ಹೆಚ್ಚಾಗಿ ಯಾರೂ ಬೆಟ್ಟದ ಮೇಲೇ ಬರೋದಾಗ್ಲಿ, ಕರಡಿಗಳಿಗೆ ತೊಂದ್ರೆ ಮಾಡೋದಾಗ್ಲಿ ಮಾಡ್ತಿರ್ಲಿಲ್ಲ.

ಪುಟಾಣಿ ಕರಡಿ ಇದೆಯಲ್ಲ, ಅದು ಬಹಳ ಚೇಷ್ಟೆ. ನಿಂತ ಕಡೆ ಕಾಲು ನಿಲ್ಲೋದಿಲ್ಲ. ಒಂದು ದಿನ ಹಾಡುಹಗಲೇ ಅಮ್ಮನ ಕಣ್ಣು ತಪ್ಪಿಸಿ ಗುಡ್ಡದ ಕೆಳಗಿರೋ ಊರಿಗೆ ಹೋಗಿಬಿಟ್ಟಿದೆ! ನಟ್ಟ ನಡು ಮಧ್ಯಾಹ್ನ. ಎಲ್ಲೋ ಮಕ್ಕಳು ಹಾಡು ಹೇಳೋದು ಕೇಳಿ ಹೋಗಿ ನೋಡತ್ತೆ, ಒಂದು ಪುಟಾಣಿ ಗುಡಿಯೊಳಗೆ ಯಾರೋ ಮಕ್ಕಳಿಗೆ ಏನೋ ಹೇಳಿಕೊಡ್ತಿದಾರೆ. ಪುಟಾಣಿ ಅಲ್ಲೇ ಕಿಟಕಿ ಹತ್ರ ಕಿವಿಇಟ್ಟು ಕೇಳತ್ತೆ. ಮೂಡಲ - ಪಡುವಲ - ಬಡಗಲ - ತೆಂಕಲ ಇವು ನಾಕು ದಿಕ್ಕುಗಳು. ಇವಕ್ಕೇ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಅಂತಲೂ ಅಂತಾರೆ ಅಂತ ಪೇಟ ಕಟ್ಟಿಕೊಂಡವರೊಬ್ಬ್ರು ಹೇಳ್ತಿದ್ರೆ, ಮಕ್ಕಳೂ ಅದೇ ಮಾತನ್ನೆ ತಿರುಗಿ ತಿರುಗಿ ಹೇಳ್ತಿದ್ದು ಕೇಳಿಸ್ತು. ಅಷ್ಟರಲ್ಲೇ, ಪೇಟದವರು, ಹೋಗಿ ಮಕ್ಳಾ , ಇನ್ನು ಮನೇಗೆ ಹೋಗಿ ಊಟ ಮಾಡೀ ಅಂತ ಇದ್ದಾಗ ಕರಡೀ ಮರಿಗೆ ಯಾರಾದ್ರೂ ನೋಡಿದ್ರೆ ಅಂತ ಭಯವಾಗಿ ಓಟ ಕಿತ್ತಿತು.

ಅತ್ಲಾಗಿ ಅಮ್ಮ ಕರಡೀಗೆ ಜೀವವೇ ಬಾಯಿಗೆ ಬಂದಿತ್ತು. ಮಗು ಎಲ್ಲಾದ್ರೂ ಹೋಗಿ ಏನಾದ್ರೂ ಅಪಾಯ ಮಾಡಿಕೊಂಡರೆ ಅಂತ. ವಾಪಸ್ ಬಂದ ಮಗುವಿಗೆ ಒಂದು ಕೋಪದಲ್ಲಿ ಏಟು ಕೊಟ್ಟು, ಆಮೇಲೆ ಮುದ್ದು ಮಾಡಿ, ಹಾಗೆಲ್ಲ ಮಾಡ್ಬಾರ್ದು ಮರೀ, ನಮ್ಮ ಮನೆ ಈ ಗುಡ್ಡ. ನಮ್ಮ ಮನೆಯಲ್ಲಿ ನಾವೇ ರಾಜರು. ಹೊರಗೆ ಹೋದರೆ ನಮಗೆ ಕಷ್ಟ ಅಂತ ಒಳ್ಳೇ ಮಾತಲ್ಲಿ ತಿಳೀಹೇಳಿ, ಇನ್ಯಾವತ್ತೂ ಹಾಗೆ ಹಳ್ಳೀಗೆ ಹೋಗ್ಬಾರ್ದು ಅಂತ ಮಾತು ತೊಗೋತು.

ವಿಶೇಷ ಸಂದರ್ಶನ: ಶ್ರೀ ಧರ್ಮಾವಲಂಬಿ ಸ್ವಾಭಿಮಾನಿ ಬಾಬಾರೊಂದಿಗೆ 2

(ಇಲ್ಲಿಂದ ಮುಂದುವರೆದದ್ದು)

ನ.ಸಾ: ಅಲ್ಲ ಗುರುಗಳೇ, ದೇವರು ಇದ್ದಾನೆ ಎಂದು ವೈಜ್ಞಾನಿಕವಾಗಿ ಸಾಬೀತು ಮಾಡುವುದು
ನಿಮ್ಮ ಕರ್ತವ್ಯವಲ್ಲವೇ? ಜನರು ಪ್ರಶ್ನಿಸಲೇ ಬಾರದು ಎಂದರೆ ವೈಜ್ಞಾನಿಕ ಮನೋಭಾವೆನೆ
ಹೇಗೆ ಬೆಳೆಯಲು ಸಾಧ್ಯ?

ಅರಸಿಕೆರೆಯ ಬಗ್ಗೆ ಗೊತ್ತಿದ್ದರೆ ತಿಳಿಸಿ

ನಾವು ಮುಂದಿನ ವಾರದಲ್ಲಿ ಹಾಸನದ ಬಳಿಇರುವ ಅರಸೀಕೆರೆಗೆ ಹೋಗಬೇಕಾಗಿದೆ.
ಅಲ್ಲಿ ಕಣಕಟ್ಟೆ ದುಗ್ಗಮ್ಮ ಎಂಬ ದೇವಿಯ ದರ್ಶನಕ್ಕಾಗಿ ಹೋಗುತ್ತಿದ್ದೇವೆ.
ಅಂತರ್‌ಜಾಲವನ್ನೆಲ್ಲಾ ತಡುಕಿದರು ಅದರ ಬಗ್ಗೆ ಅಷ್ಟು ಮಾಹಿತಿ ಇಲ್ಲ
ನಿಮಗ್ಯಾರಿಗಾದರೂ ಗೊತ್ತಿದ್ದರೆ ಈ ಪ್ರಶ್ನೆಗಳನ್ನು ಪರಿಹರಿಸಿ

ಅರಸಿಕೆರೆ ಬೆಂಗಳೂರಿನಿಂದ ಎಷ್ಟು ದೂರ?

ಬಸವಣ್ಣನವರ ವಚನಸುಧೆ 2

ಲೋಕದ ಡೊಂಕ ನೀವೇಕೆ ತಿದ್ದುವಿರಿ? (ಡೊಂಕ=ದೋಷ)
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ (ತನು=ದೇಹ)
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವಾ.

ಕುರಿವಿಂಡು ಕಬ್ಬಿನ ಉಲಿವ ತೋಂಟವ ಹೊಕ್ಕು (ಉಳಿ=ರಸಪೂರ್ಣ)
ತೆರನನರಿಯದೆ ತನಿರಸದ (ತನಿರಸ=ಸವಿಯಾದ ರಸ, ತೆರ= ರೀತಿ)
ಹೊರಗಣೆಲೆಯನೆ ಮೇದುವು!

ಕ್ರಿಕೆಟಿಗ ಶ್ರೀಶಾಂತ್‌ಗೆ ಏನಾಗಿದೆ ?

ಭಾರತೀಯ ಕ್ರಿಕೆಟಿಗ ಶ್ರೀಶಾಂತ್‌ಗೂ, ಕೀಟಲೆಗಳಿಗೂ ಅದೇನು ನಂಟಿದೆಯೋ ಗೊತ್ತಿಲ್ಲ. ತನ್ನ ಕ್ರಿಕೆಟ್ ಸಾಧನೆಗಿಂತಲೂ, ಮೈದಾನದಾಚೆಗಿನ ದಾಂಧಲೆಗಳಿಂದಾಗಿಯೇ ಶ್ರೀಶಾಂತ್ ಸುದ್ದಿಯಾದದ್ದು ಹೆಚ್ಚು. ದೊಡ್ಡ ಭರವಸೆ ಮೂಡಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಶ್ರೀಶಾಂತ್, ಈಗ ಕಾಲಿಟ್ಟಲ್ಲೆಲ್ಲಾ ದಾಂಧಲೆ ನಡೆಸುತ್ತಿದ್ದಾರೆ.

ನಿಮ್ಮ ಗೆಳೆಯ ಅಥವಾ ಗೆಳತಿಯರ ಮೇಲೆ ನಿಮಗೆ ಅನುಮಾನ ಬಂದಲ್ಲಿ ನೀವು ಏನು ಮಾಡುತೀರಾ???????????

೧. ಅವರಲ್ಲಿ ಮಾತಾಡಿ ಅನುಮಾನ ನ ಬಗೆ ಹರಿಸಿಕೊಳ್ಳುತೀರ?
೨. ಅವರ ಜೊತೆ ಸ್ನೇಹವನ್ನೇ ಕಿತ್ತು ಹಾಕುತೀರ?
೩. ಅವರ ಜೊತೆ ಜಗಳ ಆಡುತೀರ?
೪. ಅವರನ್ನು ಕೆಟ್ಟ ಪದಗಳಿಂದ ಬಯ್ದು ಅವರ ಸ್ನೇಹ ಬಿಟ್ಟು ಬಿಡುತೀರಾ?
೫. ಅಥವಾ ಅವರನ್ನು ವಿಚಾರಿಸಿ ಅವರ ಜೊತೆಗೆ ಅನುಸರಿಸಿ ಕೊಂಡು ಹೋಗುವಿರ?
೬. ಅಥವಾ ನಿಮ್ಮ ಅನುಮಾನವೇ ನಿಜ ಎಂದು ನಿಮ್ಮನ್ನು ನೀವು ಸಮರ್ಥಿಸಿ ಕೊಳ್ಳುತೀರ?

ಪರದೇಸಿ ಬೆನ್ನು ಶಾಶ್ವತವಾದಾಗ!

ಗಿರೀಶ್: ಇನ್ನು ಸ್ವಲ್ಪವೆ ದಿನ, ನಾನು ನಮ್ಮೂರಿಗೆ ಹೊಗ್ತಾ ಇದ್ದಿನಿ ಕಣೊ.

ನಾನು : ಗುಡ ಮ್ಯಾನ್, ಎ೦ಜಾಯಿ ಇಟ್.  

"ಅವನು ಒ೦ದು ವರುಶದ ಮೇಲೆ ತನ್ನ ಊರಿಗೆ ಹೋಗ್ತಾ ಇದ್ದಾನೆ. ಕೋನೆಯ ದಿಪಾವಳಿಗೆ ಹೋಗಿದ್ದರ ಸ೦ಬ್ರಮ ಹೇಳುತ್ತಾ ಇದ್ದಾ. ಸಾಫ್ಟವೇರ್ ಎ೦ಜಿನೀರ ಆಗಿ ಕೆಲಸ ಮಾಡುತ್ತಿದ್ದ ಅವನಿಗೆ ರಜೆ ಗಿಟ್ಟಿಸಿಕೊಳ್ಳಲು ಹರ-ಸಾಹಸ ಮಾಡ ಬೇಕಾಯಿತು. ಅ೦ತು ಒ೦ದು ವಾರ ರಜೆ ಸಿಕ್ತು ಅ೦ತ ನನ್ನ ಕಡೆಗೆ ಓಡಿ ಬ೦ದಾ."

ಗಿರೀಶ್: ಲೋ ಪ್ರಸಾದಿ, ನನಗೆ ರಜಾ ಸಿಕ್ತು. ಇ ಶನಿವಾರನೆ ಹೊಗ್ತಾ ಇದ್ದಿನಿ. ಮನೆ ನೆನಪು ತು೦ಬಾ ಅಗ್ತಾ ಇದೆ, ಅಮ್ಮಾ ಹೇಳಿದ ಆ ಮಾತು ಇನ್ನು ನೆನಪಾಗ್ತ ಇದೆ.

ನಾನು: ಅದೆನಪ್ಪಾ ನಿಮ್ಮ ಅಮ್ಮಾ ಹೇಳಿದ ಮಾತು?

ಸಂಪದದ ಹೊಸ ಲೋಗೋ

ಹೊಚ್ಚ ಹೊಸತು, ಉತ್ತಮವಾದದು, ಹೊಸ ಹೊಸತು ಬರುತ್ತಿದ್ದರೆ ಎಷ್ಟು ಚೆಂದ ಇರುತ್ತದೆ ಅಲ್ವ?

ಈಗ ಬದಲಾವಣೆಯ ಸಮಯ. ಇಗೋ ನಿಮ್ಮ ಮುಂದೆ 'ಸಂಪದ'ದ ಹೊಸ ಲೋಗೋ:

ಇಂದು ಹಿಂದಿನದ್ದಕ್ಕಿಂತ ಕಡಿಮೆ ಗಾತ್ರದ್ದು, ಬೇಗ ಲೋಡ್ ಆಗುತ್ತದೆ. ಮುಂಚಿಗಿಂತ ಸಿಂಪಲ್ ಕೂಡ.