ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಓದಿದ್ದು ಕೇಳಿದ್ದು ನೋಡಿದ್ದು-79 ಹೀರು ಗುಂಡಿಗಳಿಂದ ಹೀರೋ

ಅಂತೂ ಇಂತೂ ಮುಗಿದ  ಇರಾಕ್  ಯುದ್ಧ

ವಿಶ್ವದ ಜನರೆಲ್ಲರೂ ಎದುರು ನೋಡುತ್ತಿದ್ದ ಸುದ್ದಿ ಇದೀಗ ಹೊರಬಿದ್ದಿದೆ. ವರುಷಗಳಿಂದ ನಮ್ಮನ್ನು ಕಾಡುತ್ತಿರುವ ಇರಾಕ್ ಯುದ್ಧ ಅಂತ್ಯವಾಗಿದೆ.

ನಂಬಿಕೆಯಾಗದೇ? ಇಲ್ಲಿದೆ ನ್ಯೂಯಾರ್ಕ್ ಟೈಮ್ಸ್ ವರದಿ.

ನ್ಯೂಯಾರ್ಕ್ ಟೈಮ್ಸ್

ಬೇರೊಂದು ನಕ್ಷತ್ರವನ್ನು ಸುತ್ತುವ ಗ್ರಹದ ಮೊದಲ ಚಿತ್ರಗಳು

ನಮ್ಮ ಸೂರ್ಯನನ್ನು ಬಿಟ್ಟು ಬೇರೆ ನಕ್ಷತ್ರಗಳಿಗೆ ಗ್ರಹಗಳಿರುವ ವಿಷಯವನ್ನು ಎಷ್ಟೋ ವರ್ಷಗಳ ಹಿಂದೆ ಕಂಡುಹಿಡಿದಿದ್ದರೂ, ನೇರವಾದ ಚಿತ್ರಗಳು ಯಾವುದೂ ಸಿಕ್ಕಿರಲಿಲ್ಲ.

ಇವತ್ತಿನ ತನಕ!

ಫೋಮಲ್‍ಹಾಟ್ ಅನ್ನುವ ನಕ್ಷತ್ರದ ಸುತ್ತ ಇರುವ ಒಂದು ಗ್ರಹದ ಚಿತ್ರವನ್ನು ಹಬಲ್ ದೂರದರ್ಶಕ ತೆಗೆದಿದೆ!

ಗಟ್ಟಿ ಚಿಂತನೆಗಳು

ಕನ್ನಡದ ಬಗ್ಗೆ ಕೆಲವು ’ಗಟ್ಟಿ’ ಆಲೋಚನೆಗಳಿಗೆ ಕೆಂಡಸಂಪಿಗೆಯಲ್ಲಿ ಪ್ರಕಟವಾಗಿರುವ ಈ ಬರಹವನ್ನು ಓದಿ:

 ಬಳಕೆಯ ಭಾಷೆಯಾಗಿ ಶಾಸ್ತ್ರೀಯ ಕನ್ನಡ: ಗಟ್ಟಿ ಚಿಂತನೆಗಳು

ಎಲ್ಲರಿಗೂ ಯೋಚಿಸಲು ಬೇಕಾದಷ್ಟು ಸಾಮಗ್ರಿಯನ್ನು ಕೆ.ಟಿ.ಗಟ್ಟಿ ಅವರು ಕೊಟ್ಟಿದ್ದಾರೆ.

 -ಹಂಸಾನಂದಿ

Breaking News ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?

Breaking Newsಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?

ಹಾಗೇನೆ Flash Newsಗೂ ಕನ್ನಡದಲ್ಲಿ ಏನಂತಾರೆ?

ಎರಡಕ್ಕೂ ಒಂದೇ ಅರ್ಥ ಬರುವಂತೆ "ಇದೀಗ ಬಂದ ಸುದ್ದಿ" ಅಂತ ಹೇಳಬಹುದಾ?

ಮರೆಯದ ಆ ಮುಸ್ಸಂಜೆಯಲಿ

ಆ ಸಂಜೆ ನಿನಗೆ ನೆನಪಿದೆಯಾ ಚಿನ್ನಾ, ನನ್ನ ಜೊತೆ ನೀ ಕಡೇ ಬಾರಿ ಇದ್ದ ಕ್ಷಣ, ಮರೆಯದ ಆ ಮುಸ್ಸಂಜೆ. ಈ ನನ್ನ ಕಣ್ಣೊಳಗೆ ಕೆಂಪಾದ ಸೂರ್ಯ, ನನ್ನೆದೆಯೊಳಗೆ ಬಿಸಿಯಾದ ಆ ತಂಗಾಳಿಯನ್ನ ಮರೆಯೋಕಾಗತ್ತಾ ಹೇಳು. ಕಡಲ ತೀರಕ್ಕೆ ಪ್ರತಿಸಲ ನಾನೇ ಕರೆದುಕೊಂಡು ಹೋಗುತ್ತಿದ್ದೆ.

ಕಸ್ತೂರಿ ವಾಹಿನಿಯ ’ಸಪ್ತಸ್ವರ-೨ರ ಗ್ರಾಂಡ್ ಫೈನಲ್ಸ್’

ಇದೇ ತಿಂಗಳ ೧೬ನೇ ತಾರೀಖಿನಂದು ಹಾಸನದಲ್ಲಿ ಕಸ್ತೂರಿ ವಾಹಿನಿಯ ’ಸಪ್ತಸ್ವರ-೨ರ ಗ್ರಾಂಡ್ ಫೈನಲ್ಸ್’ ನಡೆಯಲಿದೆ.

ಪಿ.ವಿ. ಕಾಣೆ ಯವರ "ಇತಿಹಾಸದ ಧರ್ಮಶಾಸ್ತ್ರ"

ಸಹೃದಯರೇ,

ಪಿ.ವಿ. ಕಾಣೆ ಯವರ "ಇತಿಹಾಸದ ಧರ್ಮಶಾಸ್ತ್ರ" ಬೃಹತ್ ಹೊತ್ತಗೆಯನ್ನು ಖರೀದಿಸಲು ಹವಣಿಸುತ್ತಿರುವೆ. ನನಗೆ ಈ ಗ್ರಂಥವು ಎಲ್ಲಿ ಸಿಗುತ್ತದೆಯೆಂದು ಯಾರಾದರು ತಿಳಿಸುವಿರಾ?

ನಿಮ್ಮ

ಸಂದೀಪ್ ಶರ್ಮ

ಮಿಸಿಸಿಪ್ಪಿ ನದಿ, ರಾಜ್ಯದ ’ಜಲದೇವ,’ ನ ಆವಾಸಸ್ಥಾನ

ಅಮೆರಿಕದ ಮಿಸ್ಸೂರಿರಾಜ್ಯದ ಇತಿಹಾಸ ಬಹಳ ಅದ್ಭುತವಾದದ್ದು. ಅನೇಕ ಶ್ರೇಷ್ಟರಾಜಕಾರಣಿಗಳು, ವೀರರು, ಇಲ್ಲಿಜನಿಸಿ ಅಮೆರಿಕವನ್ನು ವಿಶಾಲಗೊಳಿಸಿ ಅದರ ಪ್ರಾಕೃತಿಕ ಸಂಪತ್ತನ್ನು ದೇಶವಾಸಿಗಳಿಗೆ ಲಭಿಸಲು ಶ್ರಮಪಟ್ಟಿದ್ದಾರೆ.

 ಮಿಸ್ಸೂರಿರಾಜ್ಯದ ರಾಜಧಾನಿ, ಜೆಫರ್ಸನ್ ನಗರದಲ್ಲಿ, ಈಗಕಾಣುವ ’ಸ್ಟೇಟ್ ಕ್ಯಾಪಿಟಲ್ ಕಟ್ಟಡ, ’ನಾಲ್ಕನೆಯದು. ಸ್ಟೇಟ್ ಕ್ಯಾಪಿಟಲ್ ಕಟ್ಟಡವನ್ನು, ’ಸೇಂಟ್ ಚಾರ್ಲ್ಸ್’ ನಲ್ಲಿ ಮೊಟ್ಟಮೊದಲು ನಿರ್ಮಿಸಲಾಯಿತು. [೧೮೨೧-೧೮೨೬] ಅದುಅತಿ-ಚಿಕ್ಕದು. ಎರಡನೆಯ ಕಟ್ಟಡ, ಈಗಿನ ಗವರ್ನರ್ ರವರ ಬಂಗಲೆಬಳಿ ನಿರ್ಮಿಸಿದ್ದರು. ೧೮೩೭ ನಲ್ಲಿ ಬೆಂಕಿಯ ಅಪಘಾತದಲ್ಲಿ ನಾಶವಾಯಿತು. ೩ ನೆಯದು ೧೮೪೦ ಯಲ್ಲಿ ಕಟ್ಟಿದ್ದು, ಅದೂ ಸಿಡಿಲಿನ ಅಪಘಾತದಲ್ಲಿ, ಫೆಬ್ರವರಿ ೫, ೧೯೧೧ ರಲ್ಲಿ ಹೇಳಹೆಸರಿಲ್ಲದಂತೆ ನಿರ್ಣಾಮವಾಯಿತು. ೧೯೧೩-೧೯೧೮ ರ ಅವಧಿಯಲ್ಲಿ ಮಿಸ್ಸೂರಿರಾಜ್ಯದ ಸಹೃದಯ ಜನಸ್ತೋಮದ ಸಹಕಾರದಿಂದ ಭವ್ಯವೂ, ವಿಶಾಲವೂಆದ ಕ್ಯಾಪಿಟಲ್ ಭವನ ತಲೆಯೆತ್ತಿತು. ಉದ್ದ ೪೩೭ ಅಡಿ, ಅಗಲ, ೩೦೦ ಅಡಿ,ಹಾಗೂ ನೆಲದಿಂದ ಗೋಪುರದ ಶಿಖರದವರೆಗಿನ ಎತ್ತರ, ೨೬೨ ಅಡಿ. ೩.೫ ಮಿಲಿಯನ್ ಡಾಲರ್ ಹಣವನ್ನು ಸಾರ್ವಜನಿಕರು ಸಂಗ್ರಹಿಸಿ ತಮ್ಮಸಹಕಾರವನ್ನು ಅಭಿವ್ಯಕ್ತಗೊಳಿಸಿದ್ದಾರೆ.

’ಕ್ಯಾಪಿಟಲ್ ಭವನ,’ ದ ಎಡ, ಬಲ ಪಕ್ಕಗಳಲ್ಲಿ, ಮಹಾಜೀವನದಿಗಳಾದ ಮಿಸ್ಸೂರಿ-ಮಿಸಿಸಿಪ್ಪಿನದಿಗಳನ್ನು ಪ್ರತಿಬಿಂಬಿಸುವ, ಕಂಚಿನ ಭಾರಿ-ಭಾರಿ ಪ್ರತಿಮೆಗಳಿವೆ. ಇವಲ್ಲದೆ ಇನ್ನೂ ಹಲವು ವಿಶಿಷ್ಠ ಶಿಲ್ಪಗಳನ್ನು ಭವನದ ಸುತ್ತಲೂ ನಿರ್ಮಿಸಿದ್ದಾರೆ. ಇವೆರಡು ಕಂಚಿನಮೂರ್ತಿಗಳನ್ನೂ, ಮತ್ತು ಸುತ್ತಮುತ್ತಲಿರುವ ಸೊಗಸಾದ ಶಿಲ್ಪಗಳನ್ನು ರಾಬರ್ಟ್ ಅಟ್ಕಿನ್ ನಿರ್ಮಿಸಿದ್ದು. ಮಿಸ್ಸೂರಿನದಿ, ಸ್ತ್ರೀದೇವತೆಯ ಪ್ರತೀಕ.

ಪೂರ್ವಿ

ಕಿಶೋರನ ಮೆಸೇಜ್ ಬಂದಾಗಿನಿಂದ ಪೂರ್ವಿ ಪೂರ್ವಿಯಾಗಿರಲಿಲ್ಲ, ಅವಳಲ್ಲಿ ಏನೋ ಹೊಸತನ ಉಕ್ಕಿ ಹರಿಯುತಿತ್ತು, ಮನಸ್ಸು ಹಗುರವಾಗಿತ್ತು ಪ್ರೀತಿಯ ಗಾಳಿಗೆ ಸಿಕ್ಕ ಸೂತ್ರವಿಲ್ಲದ ಗಾಳಿಪಟದಂತೆ. ಮನದಲ್ಲಿ ಸಂಭ್ರಮ ಮನೆ ಮಾಡಿತ್ತು.