ಮಿಸಿಸಿಪ್ಪಿ ನದಿ, ರಾಜ್ಯದ ’ಜಲದೇವ,’ ನ ಆವಾಸಸ್ಥಾನ

ಮಿಸಿಸಿಪ್ಪಿ ನದಿ, ರಾಜ್ಯದ ’ಜಲದೇವ,’ ನ ಆವಾಸಸ್ಥಾನ

ಬರಹ

ಅಮೆರಿಕದ ಮಿಸ್ಸೂರಿರಾಜ್ಯದ ಇತಿಹಾಸ ಬಹಳ ಅದ್ಭುತವಾದದ್ದು. ಅನೇಕ ಶ್ರೇಷ್ಟರಾಜಕಾರಣಿಗಳು, ವೀರರು, ಇಲ್ಲಿಜನಿಸಿ ಅಮೆರಿಕವನ್ನು ವಿಶಾಲಗೊಳಿಸಿ ಅದರ ಪ್ರಾಕೃತಿಕ ಸಂಪತ್ತನ್ನು ದೇಶವಾಸಿಗಳಿಗೆ ಲಭಿಸಲು ಶ್ರಮಪಟ್ಟಿದ್ದಾರೆ.

 ಮಿಸ್ಸೂರಿರಾಜ್ಯದ ರಾಜಧಾನಿ, ಜೆಫರ್ಸನ್ ನಗರದಲ್ಲಿ, ಈಗಕಾಣುವ ’ಸ್ಟೇಟ್ ಕ್ಯಾಪಿಟಲ್ ಕಟ್ಟಡ, ’ನಾಲ್ಕನೆಯದು. ಸ್ಟೇಟ್ ಕ್ಯಾಪಿಟಲ್ ಕಟ್ಟಡವನ್ನು, ’ಸೇಂಟ್ ಚಾರ್ಲ್ಸ್’ ನಲ್ಲಿ ಮೊಟ್ಟಮೊದಲು ನಿರ್ಮಿಸಲಾಯಿತು. [೧೮೨೧-೧೮೨೬] ಅದುಅತಿ-ಚಿಕ್ಕದು. ಎರಡನೆಯ ಕಟ್ಟಡ, ಈಗಿನ ಗವರ್ನರ್ ರವರ ಬಂಗಲೆಬಳಿ ನಿರ್ಮಿಸಿದ್ದರು. ೧೮೩೭ ನಲ್ಲಿ ಬೆಂಕಿಯ ಅಪಘಾತದಲ್ಲಿ ನಾಶವಾಯಿತು. ೩ ನೆಯದು ೧೮೪೦ ಯಲ್ಲಿ ಕಟ್ಟಿದ್ದು, ಅದೂ ಸಿಡಿಲಿನ ಅಪಘಾತದಲ್ಲಿ, ಫೆಬ್ರವರಿ ೫, ೧೯೧೧ ರಲ್ಲಿ ಹೇಳಹೆಸರಿಲ್ಲದಂತೆ ನಿರ್ಣಾಮವಾಯಿತು. ೧೯೧೩-೧೯೧೮ ರ ಅವಧಿಯಲ್ಲಿ ಮಿಸ್ಸೂರಿರಾಜ್ಯದ ಸಹೃದಯ ಜನಸ್ತೋಮದ ಸಹಕಾರದಿಂದ ಭವ್ಯವೂ, ವಿಶಾಲವೂಆದ ಕ್ಯಾಪಿಟಲ್ ಭವನ ತಲೆಯೆತ್ತಿತು. ಉದ್ದ ೪೩೭ ಅಡಿ, ಅಗಲ, ೩೦೦ ಅಡಿ,ಹಾಗೂ ನೆಲದಿಂದ ಗೋಪುರದ ಶಿಖರದವರೆಗಿನ ಎತ್ತರ, ೨೬೨ ಅಡಿ. ೩.೫ ಮಿಲಿಯನ್ ಡಾಲರ್ ಹಣವನ್ನು ಸಾರ್ವಜನಿಕರು ಸಂಗ್ರಹಿಸಿ ತಮ್ಮಸಹಕಾರವನ್ನು ಅಭಿವ್ಯಕ್ತಗೊಳಿಸಿದ್ದಾರೆ.

’ಕ್ಯಾಪಿಟಲ್ ಭವನ,’ ದ ಎಡ, ಬಲ ಪಕ್ಕಗಳಲ್ಲಿ, ಮಹಾಜೀವನದಿಗಳಾದ ಮಿಸ್ಸೂರಿ-ಮಿಸಿಸಿಪ್ಪಿನದಿಗಳನ್ನು ಪ್ರತಿಬಿಂಬಿಸುವ, ಕಂಚಿನ ಭಾರಿ-ಭಾರಿ ಪ್ರತಿಮೆಗಳಿವೆ. ಇವಲ್ಲದೆ ಇನ್ನೂ ಹಲವು ವಿಶಿಷ್ಠ ಶಿಲ್ಪಗಳನ್ನು ಭವನದ ಸುತ್ತಲೂ ನಿರ್ಮಿಸಿದ್ದಾರೆ. ಇವೆರಡು ಕಂಚಿನಮೂರ್ತಿಗಳನ್ನೂ, ಮತ್ತು ಸುತ್ತಮುತ್ತಲಿರುವ ಸೊಗಸಾದ ಶಿಲ್ಪಗಳನ್ನು ರಾಬರ್ಟ್ ಅಟ್ಕಿನ್ ನಿರ್ಮಿಸಿದ್ದು. ಮಿಸ್ಸೂರಿನದಿ, ಸ್ತ್ರೀದೇವತೆಯ ಪ್ರತೀಕ.

ಮಿಸಿಸಿಪ್ಪೀನದಿ, ಅಲ್ಲಿನ ಜನರಿಗೆ   ಪುರುಷನಂತೆ !  ’ಜಲದೇವ’, ನೆಂಬಹೆಗ್ಗಳಿಕೆಯಿಂದ ಜನಗಳ ಮನಸ್ಸಿನಲ್ಲಿ ಅಮರವಾಗಿ ನೆಲಸಿದ್ದಾನೆ. ಗೌರವಿಸಲ್ಪಟ್ಟಿದ್ದಾನೆ ;  ಎಡಗೈನಲ್ಲಿ ವಾಣಿಜ್ಯ ನಿಯಂತ್ರಣ ಆಯುಧ, ದೋಣಿಯನ್ನು ಓಡಿಸುವ ಚುಕ್ಕಾಣಿ, ಹಾಗೂ ಕಡಲ-ವ್ಯಾಪಾರದಲ್ಲಿ ರಾಜ್ಯದ ಪ್ರಮುಖಪಾತ್ರಗಳನ್ನು ಪ್ರತಿಬಿಂಬಿಸುವ ಈ ಶಿಲ್ಪಗಳು ಅತಿ ಸುಂದರವಗಿ ನಿರ್ಮಿಸಲ್ಪಟ್ಟಿವೆ. ಜಲದೇವನ ಬಲಗೈನಲ್ಲಿ, ’ಸರ್ಪಾಯುಧ,’ ವಿದೆ. ಈ ಪ್ರಗತಿಯದೇವತೆ, ಧಾನ್ಯಗಳ ತೆನೆಗಳಮೇಲೆ ವಿಶ್ರಮಿಸುತ್ತಾನೆ. ಅಲ್ಲಿನ ಭಿತ್ತಿಯಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ಸಾಂಕೇತಿಕವಾಗಿ ಚಿತ್ರಿಸಿದ್ದಾರೆ. ವಿಜ್ಞಾನದ ಪರಿಮಳ ಇನ್ನೂ ಜನರಿಗೆ ಲಭ್ಯವಾಗಿರಲಿಲ್ಲ. ಒಟ್ಟಾರೆ, ಈ ಶಿಲ್ಪಗಳ ಮಹತ್ವವೆಂದರೆ, ಅವು ಪರ್ಯಟನೆ, ವಾಣಿಜ್ಯೋದ್ಯಮ, ಪ್ರಗತಿಪರ-ಕೃಷಿಯನ್ನು ಪ್ರತಿನಿಧಿಸುತ್ತದೆ. ’ಜಲದೇವ,’ ನ ಮೊಣಕಾಲಿನ ಬಳಿ ಮೊಸಳೆ, ಇದೆ. ಇದು ಕಡಲಯಾನದಲ್ಲಿ ಸಹಿಸಬೇಕಾದ ಕಷ್ಟ ಕೋಟಲೆಗಳನ್ನು ಮನಸ್ಸಿಗೆ ತರುತ್ತದೆ. ಶಿಲ್ಪದ ಹಿಂಭಾಗದಲ್ಲಿ ಡಾಲ್ಫಿನ್, ಹಾಗೂ ೩ ಪುಟ್ಟಮೀನುಗಳು, ವಿಪುಲವಾದ ಮೀನುಗಾರಿಕೆಉದ್ಯಮದ ಸುವ್ಯವಸ್ಥೆಯ ಪ್ರತೀಕವಂತೆ ! ಶಿಲ್ಪದ ಕೆಳಭಾಗದಲ್ಲಿ, ೪ ಫಲಕಗಳಿವೆ. ಮುಂದಿನ ಉದ್ದವಾದ ಫಲಕ, ಸೂರ್ಯದೇವತೆ ಹಾವನ್ನು ನಡುವಿಗೆ ಕಟ್ಟಿಕೊಂಡಿರುವ ಕೆತ್ತನೆ ಇದೆ. ಸೂರ್ಯಕಿರಣಗಳು ಬೀಳುತ್ತಿವೆ. ಕರಗುತ್ತಿರುವ ಹಿಮ, ಹಿಂದಿನ ಫಲಕದಲ್ಲೂ ಸೂರ್ಯದೇವತೆ. ಎದುರಿಗೆ ಆವಿ, ಕಾವಳ, ಎಡಭಾಗದಲ್ಲಿ, ಸುಂಟರಗಾಳಿ, ಮಿಂಚು, ಮಳೆ, ನೀರಿನ ಮಹತ್ವ, ’ನೀರೇ ಶಕ್ತಿ’, ’ನೀರೇ ಜೀವವಾಹಿನಿ,’ ಎಂಬ ಹೇಳಿಕೆಗಳು ಇತ್ಯಾದಿಗಳಿವೆ. ಒಟ್ಟಿನಲ್ಲಿ ಕೃಷಿಯಬೀಡಾದ ಈ ಭೂಭಾಗದ ಶ್ರೀಮಂತಿಕೆಯನ್ನೂ, ವ್ಯಾಪಾರ, ವಾಣಿಜ್ಯಗಳ ಸಂಗಮಗಳನ್ನು ಕಂಚಿನ ಶಿಲ್ಪಗಳು, ವಿಶ್ವದ ಜನರಿಗೆ ಎತ್ತಿಸಾರುತ್ತಿವೆ.

ವಿಶ್ವದ ಕೆಲವೇ ಅತಿ ದೊಡ್ಡನದಿಗಳ ಪಟ್ಟಿಯಲ್ಲಿ 'ಮಿಸಿಸಿಪ್ಪಿ-'ಮಿಸ್ಸೂರಿನದಿ', ನಾಲ್ಕನೆಯ ಸ್ಥಾನದಲ್ಲಿದೆ. ಗಮನಿಸಿ.

 'ಮಿಸಿಸಿಪ್ಪಿ-'ಮಿಸ್ಸೂರಿನದಿ', ಉತ್ತರ ಅಮೆರಿಕದಲ್ಲೇ ಅತಿ ಉದ್ದವಾದ ನದಿ. ವಿಶ್ವದ ಅತಿದೊಡ್ಡ ನದಿಗಳ ಜೊತೆಯಲ್ಲಿವೆ. ಉದ್ದದಲ್ಲಿ *(೩,೯೦೦ ಮೈಲಿಗಳು (೬,೩೦೦ ಕಿಮೀಟರ್ ಗಳು), ವಿಶ್ವದ ೪ ನೆಯ ಅತಿ ದೊಡ್ಡನದಿ. ಹೊರಬೀಳುವ ನೀರಿನ ಗಾತ್ರ, ೫೭೨,೦೦೦ ಘನ ಅಡಿಗಳು (೧೬,೨೦೦ ಚದರ ಮೀಟರ್ ಗಳು).

ಮಿಸಿಸಿಪ್ಪಿ ನದಿಯೊಂದನ್ನೇ ಗಣನೆಗೆ ತೆಗೆದುಕೊಂಡರೆ, ಜಗತ್ತಿನ ಅತಿದೊಡ್ಡನದಿಗಳ ಶ್ರೇಣಿಯಲ್ಲಿ ಹತ್ತನೆಯ ಭಾರಿ ನದಿಯೆಂದು ದಾಖಲೆಯ ಮೂಲಗಳು ತಿಳಿಸುತ್ತವೆ. ಅಮೆರಿಕದ ಅತಿ ಉದ್ದವಾದ ನದಿ-'ಮಿಸ್ಸೂರಿ ನದಿ'. ೨,೫೪೦ ಮೈಲಿಗಳು (೪,೦೯೦ ಕಿಮೀಟರ್ ಗಳು)ಮಿಸಿಸಿಪ್ಪಿ ನದಿ, 'ಜೆಫೆರ್ಸನ್ ಮಿಸ್ಸೂರಿ ಮಿಸಿಸಿಪ್ಪಿ ನದಿ ಪ್ರಾಧಿಕಾರ,' ದ ಒಂದು ಭಾಗವಾಗಿದೆ. ಅಮೆರಿಕದಲ್ಲಿ ಎರಡನೆಯ ಅತಿ ಉದ್ದವಾದ ನದಿ, 'ಮಿಸಿಸಿಪ್ಪಿ ನದಿ'. ೨,೩೪೦ ಮೈಲಿಗಳು (೩,೭೭೦ ಕಿ. ಮೀಟರ್) 'ಮಿನ್ನೆಸೋಟರಾಜ್ಯ' ದ 'ಲೇಕ್ ಇಟಾರ್ಸ್ಕ,' ದಿಂದ, 'ಗಲ್ಫ್ ಆಫ್ ಮೆಕ್ಸಿಕೊ' ವರೆಗೆ. ಇದು ಮಿಸಿಸಿಪ್ಪಿಯನ್ನು 'ಸೇಂಟ್ ಲೂಯಿಸ್ ನ ಸಂಗಮ,' ದಲ್ಲಿ ಸೇರಿಕೊಂಡು ಭಾರಿನದಿಗಳಾಗಿ ಒಂದಾಗಿ ಪ್ರವಹಿಸುತ್ತವೆ. ಅಲ್ಲಿ ವಾಸಿಸುತ್ತಿದ್ದ 'ಒಝಿಬ್ವೆ ಜನರ' ಆಡುಭಾಷೆಯಲ್ಲಿ 'ಮಿಸಿ ಝಿಬಿ' ಎಂದರೆ ದೊಡ್ಡ ನದಿ. ಅಥವಾ 'ಗಿಚಿ ಝಿಬಿ' ಎಂದರೆ, ಭಾರಿನದಿ ಎಂದರ್ಥ.

ಜಗತ್ತಿನ ಅತಿಭಾರಿ ನದಿಗಳ ಪಟ್ಟಿ : ೧. ನೈಲ್ ನದಿ - ಆಫ್ರಿಕ - ೪,೧೬೦ ಮೈಲಿಗಳು - ೬,೬೯೫ ಕಿ. ಮೀ

೨. ಅಮೆಝಾನ್ ನದಿ - ದ. ಅಮೆರಿಕ - ೪,೦೪೯ ಮೈಲಿಗಳು - ೬,೫೧೬ ಕಿ. ಮೀ

೩. ಯಾಂಗ್ ಟ್ಝ್ ನದಿ- ಚೈನ- ೩,೯೬೪ ಮೈಲಿಗಳು - ೬,೩೮೦ ಕಿ. ಮೀ

೪.* ಮಿಸಿಸಿಪ್ಪಿ ಮತ್ತು ಮಿಸ್ಸೂರಿ ನದಿ ಪ್ರಾಧಿಕಾರ- ಉತ್ತರ ಅಮೆರಿಕ-೩,೭೦೯ ಮೈಲಿಗಳು- ೫,೯೬೯ ಕಿ. ಮೀ.

 ೫. **ಗಂಗಾ ನದಿ. ಉದ್ದ : (೧,೫೬೦ ಮೈಲಿಗಳು) -೨,೫೧೦ ಕಿ. ಮೀ. ** ಪಾವಿತ್ರ್ಯತೆಗೆ ಹೆಚ್ಚು ಪ್ರಾಮುಖ್ಯವಾಗಿದೆ. ಶ್ರೇಯಾಂಕದಲ್ಲಿ ದೂರವಿರಬಹುದು. [೩೨ ನೆಯದು.] -ಚಿತ್ರ-ವೆಂ.