ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತ್ರಿಪದಿ ೧೪-೧೫-೧೬

ಬಾಳ್ವೆದೀಪ ನೀನಾಗಿ ಬಾಳು ಎನದಿದ್ದು
ಬೆಳಗುದೀಪ ನೀನಾಗಿ ಬೆಳಕು ಎನಗಿದ್ದು
ಸ್ಮರಣ ದೀಪ ನೀನಾಗಿ ಮರಣ ಎನದಿರಲಿ ಪ್ರಭುಶಂಕರ

ಕನ್ನಡದ ನುಡಿ ನುಡಿಯು ಸುರಿದು
ಕನ್ನಡಿಗರ ನರ ನಾಡಿಯಲಿ ಹರಿದು
ಕನ್ನಡದೀಪ ಮನೆ ಮನೆಯಲುರಿದು ಮೆರೆಯಲಿ ಪ್ರಭುಶಂಕರ

ನಾರಿ ಚಟವಿಟ್ಟವನು ಮತಿಗೆಟ್ಟು ಬಾಳ್
ದಾರಿ ಬಿಟ್ಟು ಕಡೆಯಲ್ಲಿ ಹಾಳ್
ಮೋರಿ ಮೆಟ್ಟುವನು ಪ್ರಭುಶಂಕರ

ತ್ರಿಪದಿ ೧೧-೧೨-೧೩

ದುಂಡು ಮಲ್ಲಿಗೆ ಸೂಡಿ ಅಂಗಳಲಿ ಬೆಳದಿಂಗಳೂಟ ಊಡಿ
ಅಂಗಕ್ಕೆ ಆಲಿಂಗನ ನೀಡುವ ಮಡದಿ
ಸಂಗಡವೇ ಮಂಗಳ ಪ್ರಭುಶಂಕರ

ಕುಡುಕರೆಲ್ಲಾ ಕೆಡುಕರಲ್ಲ ಹೆಂಡ
ಕುಡಿದು ಹೆಂಡತಿ ಹೊಡೆದು ಅರಚುವ
ಗಂಡ ಗುಂಡಿಗೆಯಿಲ್ಲದ ಷಂಡ ಪ್ರಭುಶಂಕರ

ಕರಿಬಟ್ಟೆಯ ಧರಿಸಿ ಐಯ್ಯಪ್ಪನೊಲಿಸುವಿರಿ
ಕರಿಮಣಿ ಧರಿಸಿ ಹೆಂಗಳು ಮಾಂಗಲ್ಯವುಳಿಸುವಿರಿ

ತ್ರಿಪದಿ ೭-೮-೯-೧೦

ಮನದಲ್ಲೊಂದು ನುಡಿದು ಆನನಲೊಂದು ನುಡಿವ
ಮಾನವನ ಸಹವಾಸಕ್ಕಿಂತ ಹಾವಿನೊಡನೆ
ಸರಸ ಲೇಸು ಪ್ರಭುಶಂಕರ

ಚಿಂದಿಯನ್ನುಟ್ಟು ಒಕ್ಕಲು ಬಿಟ್ಟು ಮಂದಿಯನ್ನೊಟ್ಟು
ರಂಡೆಯರಂತೆ ಆಡುವರೇಕೆ ಈ
ಮಂಡೆಗೆಟ್ಟ ಬೆಡಗಿಯರು ಪ್ರಭುಶಂಕರ

ನಚ್ಚುವೆಂಬುದು ಸ್ವಚ್ಛ ಕನ್ನಡಿಯಂತೆ
ಪಿಚ್ಚಿನ ನೋಟ ನಾಟಿದಾಗ ನುಚ್ಚಾಗಿ ಎದೆಯ
ಚುಚ್ಚಿ ನೋಚ್ಚುವುದು ಪ್ರಭುಶಂಕರ

ತ್ರಿಪದಿ ೪-೫-೬

ಪಾಪಂ ಮಾಡದವನಿಲ್ಲ ಕೋಪಂ ಕಾಣದವನಿಲ್ಲ
ಕಂದನಂ ಬಯಸದ ಸತಿಯಿಲ್ಲ ಅಂತೆಯೇ
ನನ್ನೊಲುಮೆ ನಿನಗೆ ನಂದಾದೀಪಂ ಪ್ರಭುಶಂಕರ

ತಿಲಕವ ಧರಿಸಿ ಧೂಪಕವ ಉರಿಸಿ
ಜಾತಕವ ನೋಡಿ ಮದುವೆಗೆ ಸೂತಕ ಹೂಡುವ
ಕೃತಕರಿಗೆ ಏನೆನ್ನಲಿ ಪ್ರಭುಶಂಕರ

ಚಲದಿಂದ ಚಲಿಸುವನು ಬಾಳ ಸುಳಿ ಈಸುವನು
ಹಠವನ್ನು ತ್ಯಜಿಸದವನು ಹರಿನಾಮ ಭಜಿಸಿದರೂ
ಫಲಿಸದೆ ಮುಳುಗಿ ಹೋಹ ಮರುಳ ಪ್ರಭುಶಂಕರ

ಸಾಫ್ಟ್ ವೇರ್ ಕಂಪನಿ ಸೇರಿ!!!

ಗೆಳೆಯ ಕಳಿಸಿದ ಇಮೇಲ್ನಲ್ಲಿ ಬಂದ ಕವನ, ಬರೆದವರು ಯಾರೋ ಗೊತ್ತಿಲ್ಲ. ಆದ್ರೆ ಸ್ವಲ್ಪ ಸ್ವಲ್ಪ ನಿಜ ಇದೆ ಇದರಲ್ಲಿ. ಸಾಫ್ಟವೇರ್ ಇಂಜಿನಿಯರ್ ಜೀವನ ಹೀಗೂ ಇರುತ್ತೆ!!!

ಕವನ ಕೆಟ್ಟದಾಗಿದ್ರು, ಒಳ್ಳೆದಾಗಿದ್ರು ಎರಡು ಬರೆದವರಿಗೆ ಸೇರುತ್ತದೆ.

ಕಷ್ಟಪಟ್ಟು ಇಂಜಿನಿಯರಿಂಗ್ ಸೇರಿದ್ವಿ , ೪ ವರ್ಷ ಪರೀಕ್ಷೆ ಬರೆದು ಪಾಸದ್ವಿ,

ನಿಮ್ಮಲ್ಲಿ ನಲ್ಮೆಯ ವಿನಂತಿ...

ನಾವು ನಮ್ಮ ಕಳೆದುಹೋದ ದಿನಗಳತ್ತ ತಿರುಗಿ ನೋಡಿದರೆ ಎಂದಾದರೂ ಒಮ್ಮೆ ನಿಮಗೆ ನಿಮ್ಮ ಮನೆಯ ವಿಳಾಸಕ್ಕೆ ಒಂದು ಪತ್ರ ಅಥವಾ ಕರಪತ್ರ ಬಂದಿರಬಹುದು... "ಜೈ ಸಂತೋಷೀ ಮಾ" ...... ಹೀಗೆ ಆರಂಭವಾಗುವ ಪತ್ರ "ಇದನ್ನು ____ ಜನರಿಗೆ ಕಳುಹಿಸಿದರೆ ಒಳ್ಳೆಯದಾಗುತ್ತದೆ, ಇಲ್ಲವಾದಲ್ಲಿ ಕೆಡುಕಾಗುತ್ತದೆ" ಇಲ್ಲಿಯವರೆಗೆ ಇರುತ್ತಿತ್ತು.

ಖಾಸಗಿ ವಲಯದಲ್ಲಿ ಮೀಸಲಾತಿ ಎಷ್ಟು ಸರಿ…?

ಸ್ನೇಹಿತರೆ, ಇಂದಿನ ರಾಜಕೀಯದ ಈ ದುಸ್ಥಿತಿಗೆ ಮತ್ತು ಈ ನರ ಸತ್ತ ವ್ಯೆವಸ್ಥೆಗೆ ಯಾರನ್ನ ದೋಶಿಸೊದು ಅಂತಾ ತಿಳಿಯದಾಗಿದೆ. ಸ್ವಾತಂತ್ರ ತಂದುಕೊಟ್ಟ ಯೋಧರನ್ನೆ ಅಥವಾ ಈ ದೇಶದ ಕಾನುನನ್ನು ರಚಿಸಿದ ಮತ್ತು ತಿದ್ದುಪಡೆಯನ್ನು ತರುವ ರಾಜಕೀಯ ವ್ಯೆವಸ್ಥೆಯನ್ನೆ…? ಅಥವ ಇದನ್ನ ಸಹಿಸಿಕೊಂಡಿರುವ ಈ ದೇಶದ ಜನಸಾಮಾನ್ಯೆರನ್ನೆ…? ಇದನ್ನ ದೆಶದ ನಾಗರೀಕರಾದ ನೀವೆ ಹೆಳಬೇಕು.

ತುಳು ಭಾಷೆಯ ಹೋರಾಟಕ್ಕೆ ಕರವೇ ಬೆಂಬಲ

ತುಳು ಭಾಷೆಯನ್ನು ಸಂವಿಧಾನದ ೮ನೇ ಪರಿಛೇದದಲ್ಲಿ ಸೇರಿಸಬೇಕು ಅನ್ನುವ ತುಳುವರ ಹೋರಾಟಕ್ಕೆ ಈಗ ಆನೆ ಬಲ ಬಂದಂತಿದೆ. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ನಾರಾಯಣಗೌಡರು ಇದಕ್ಕೆ ಬೆಂಬಲ ಸೂಚಿಸಿ, ತುಳುವರ ಹೋರಾಟಕ್ಕೆ ಬೆಂಬಲ ನೀಡುವ ಬಗ್ಗೆ ಮಾತಾಡಿರುವ ಸುದ್ಧಿ ನಮ್ಮ ಮಂಗಳೂರಿನ ಈ ವೆಬ್ ಸೈಟನಲ್ಲಿ ನೋಡಿದೆ.