ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಈ ನನ್ನ ಕವನ.

ಮೌನದಲಿ ಬರೆದೆ ಮಾತಿನ ಕವನ
ತುಟಿ ಹಂಚಲಿ ಬರೆದೆ ಮುತ್ತಿನ ಕವನ
ಕಣ್ಣಲ್ಲಿ ಬರೆದೆ ನೋಟದ ಕವನ
ಹೃದಯದಲ್ಲಿ ಬರೆದೆ ಪ್ರೀತಿಯ ಕವನ ...................

ಇಬ್ಬನಿಯ ಮಳೆಯಲಿ ಚಿಗುರಿದ ಕವನ
ರವಿ ಕಂಡು ಮೊಗ್ಗರಳಿ ಮೂಡಿದ ಕವನ
ದುಂಬಿ ಸಿಹಿಜೇನ ಹೀರಿದ ಕವನ
ಕಣ್ಣು ತುಂಬಿ ಮನತುಂಬಿದ ಭಾವನ ಕವನ ................

ಮದುವನದ ವಿಹಾರದಲಿ ಜೀವನ ಕವನ
ನೀ ನನ್ನ ಪ್ರೀತಿಸಿ ಮರೆತ ಕವನ

ಈ ನನ್ನ ಕವನ

ಮೌನದಲಿ ಬರೆದೆ ಮಾತಿನ ಕವನ
ತುಟಿ ಹಂಚಲಿ ಬರೆದೆ ಮುತ್ತಿನ ಕವನ
ಕಣ್ಣಲ್ಲಿ ಬರೆದೆ ನೋಟದ ಕವನ
ಹೃದಯದಲ್ಲಿ ಬರೆದೆ ಪ್ರೀತಿಯ ಕವನ ..............

ಇಬ್ಬನಿಯ ಮಳೆಯಲಿ ಚಿಗುರಿದ ಕವನ
ರವಿ ಕಂಡು ಮೊಗ್ಗರಳಿ ಮೂಡಿದ ಕವನ
ದುಂಬಿ ಸಿಹಿಜೇನ ಹೀರಿದ ಕವನ
ಕಣ್ಣು ತುಂಬಿ ಮನತುಂಬಿದ ಭಾವನ ಕವನ ........

ಮದುವನದ ವಿಹಾರದಲಿ ಜೀವನ ಕವನ
ನೀ ನನ್ನ ಪ್ರೀತಿಸಿ ಮರೆತ ಕವನ

ಚಿಕ್ಕಂದಿನ ಆಟದ ನೆನಪುಗಳು

ಇಂದಿನ ಮಕ್ಕಳಿಗೆ" ಅಮ್ಮನ ಆಟ" ಅಂದ್ರೆ ಗೊತ್ತಾ? ಅಮ್ಮನ ಆಟ ಏನು ಕ್ರಿಕೆಟ್ ಬಿಟ್ಟು ಯಾವ ಆಟವೂ ಅನೇಕ ಮಕ್ಕಳಿಗೆ ಗೊತ್ತೇ ಇಲ್ಲ. ನನ್ನ ಬಾಲ್ಯದ ನೆನಪು ಸ್ವಲ್ಪ ಮಾಡಿಕೊಳ್ತೀನಿ. ಶಾಲೆ ಬಿಟ್ಟು ಮನೆಗೆ ಬಂದರೆ ಸಾಕು ನಾವು ಒಂದೈದಾರು ಮಕ್ಕಳು ಒಟ್ಟಿಗೆ ಸೇರಿ ಅಮ್ಮನ ಆಟ ಆಡುತ್ತಿದ್ದೆವು. ಸಾಮನ್ಯವಾಗಿ ನಾನು ಅಪ್ಪ. ಅಮ್ಮನ ಪಾತ್ರಕ್ಕೆ ಮಂಜುಳ. ನಮಗೆ ಮೂರು ಮಕ್ಕಳೂ ಕೂಡ. ನಮ್ಮ ಆಟಕ್ಕೆ ಪರಿಕರ ಅಂದ್ರೆ ನಾಡಹೆಂಚಿನ ಚೂರುಗಳು, ಮಣ್ಣಿನಲ್ಲಿ ಮಾಡಿದ ಸೌದೆ ಒಲೆ[ ಪಾಪ! ಇಂದಿನ ಮಕ್ಕಳು ಸೌದೆ ಒಲೆ, ಬೀಸುಕಲ್ಲು, ಒರಳು, ಮಡಿಕೆ-ಕುಡಿಕೆ, ಇದೆಲ್ಲಾ ನೋಡಿದ್ದಾರೋ ಇಲ್ಲವೋ! ] ನಾನು ಸಾಮಾನು ತಂದರೆ ಮಂಜುಳ ಅಡಿಗೆ ಮಾಡಿ ನಮಗೆಲ್ಲಾ ಬಡಿಸುತ್ತಿದ್ದಳು!! ಅಮ್ಮನ ಆಟದಲ್ಲಿ ದೇವರ ಪೂಜೆ, ಅತಿಥಿ ಸತ್ಕಾರ, ಗಲಾಟೆ ಮಾಡಿದ ಮಕ್ಕಳಿಗೆ ಹೊಡೆತ, ಭಗವದ್ಗೀತಾ ಪಠಣ, ರಾಗಿಬೀಸುವುದು, ಭತ್ತ ಕುಟ್ಟುವುದು, ಎಲ್ಲಾ ಇರುತ್ತಿತ್ತು. ಸಾಮಾನ್ಯವಾಗಿ ನಮ್ಮ ಮನೆಯ ಜಗಲಿಯೇ ನಮ್ಮ ಆಟದ ಜಾಗ,ಅದುವೇ ನಮ್ಮ ಮನೆ, ’ರಾತ್ರಿಯಾಯ್ತು,ಮಕ್ಕಳೆಲ್ಲಾ ಮಲಗಿಕೊಳ್ಳಿ, ಎಂದರೆ ಜಗಲಿಯ ಮೇಲೆ ಮಲಗಿದ್ದೂ ಉಂಟು. ಪಟ್ಟಣಕ್ಕೆ ಹೋಗಿ ಅಂಗಡಿಯಲ್ಲಿ ಸಾಮಾನು ತರಬೇಕೂ ಅಂದ್ರೆ ಗಾಡಿ ಬೇಡ್ವೆ? ಸರಿ ಮಣ್ಣು ಕಲಸಿ ಗಾಡಿ ತಯಾರ್. ಅದಕ್ಕೆ ಚಕ್ರ ಯಾಯುದು ಗೊತ್ತಾ? ಸೋಡಾ ಬಾಟಲ್ ಮುಚ್ಚುಳ ಗಳು.

ಕಣ್ಣಿದ್ದೂ ಕುರುಡನಾಗುವುದು ಹೇಗೆ?

ಇರುವುದೊಂದನೆ ಕಣ್ಣು ಸಾಜದಾ ತಿಳಿವೆಂದು!
ಅರಿತವರ ಒಡನಾಟವೆರಡನೆಯದು!!
ಎರಡು ಇವು ಇರದಾತ ಹುಟ್ಟುಗುರುಡನು ತಾನೆ?
ದಾರಿ ತಪ್ಪಿದರೆ ತಪ್ಪವನದೇನು?

ಸಂಸ್ಕೃತ ಮೂಲ:

ಬೆಂಗಳೂರಿನ ಹೊರವಲಯದಲ್ಲಿ ಮಾದರಿ ಜಲಪ್ರಯೋಗ

(ಬೆಂಗಳೂರಿನ ಸುತ್ತಲಿನ ಅರದೇಶಹಳ್ಳಿ, ಕಡತನಮಲೆ, ಅದ್ದೆ ಮತ್ತು ಬಿಸುವನಹಳ್ಳಿ ಗ್ರಾಮಗಳಲ್ಲಿ ಸದ್ದಿಲ್ಲದ ಜಲಕ್ರಾಂತಿಯೊಂದು ನಡೆಯುತ್ತಿದೆ. ಐದು ವರ್ಷಗಳ ಹಿಂದೆ ದೊಡ್ಡಬಳ್ಳಾಪುರದ ಜನಜಾಗೃತಿ ಸಂಸ್ಥೆ ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳ ಸಹಕಾರ ಪಡೆದು, ಈ ಭಾಗದ ಒಂದು ಕಿ.ಮೀ ಉದ್ದ, ೫ರಿಂದ ೩೦ ಮೀಟರ್ ಅಗಲ ಹಾಗೂ ೨-೩ ಮೀಟರ್ ಆಳವಿರುವ ಕೊರಕಲನ್ನು ಅಂತರ್ಜಲ ಇಂಗಿಸುವ ತಾಣವನ್ನಾಗಿ ಆರಿಸಿಕೊಳ್ಳಲಾಯಿತು. ಏನೂ ಕಷ್ಟವಿಲ್ಲದೇ ರೂ.೨ ಲಕ್ಷ ದೇಣಿಗೆ ಸಂಗ್ರಹವಾಯಿತು. ಸರ್ಕಾರದ ನೆರವಿಗಾಗಿ ಕಾಯದೇ ರೈತರು, ನೀರನ್ನು ನಿಲ್ಲಿಸಲು ಮಣ್ಣಿನ ಐದು ಚೆಕ್ ಡ್ಯಾಂಗಳನ್ನು ಕಟ್ಟಲು ಸಿದ್ಧರಾದರು. ನಂತರ ಏನಾಯಿತು? ಜಲ ಮರುಪೂರಣ ಯಶಸ್ವಿಯಾಯಿತೆ?)

ಬೆಂಗಳೂರಿನ ಹೊರವಲಯದ ಅರದೇಶಹಳ್ಳಿ, ಕಡತನಮಲೆ, ಅದೆ ಮತ್ತು ಬಿಸುವನಹಳ್ಳಿ ಗ್ರಾಮದಲ್ಲಿ ಸದ್ದಿಲ್ಲದ ಜಲಕ್ರಾಂತಿಯೊಂದು ನಡೆಯುತ್ತಿದೆ. ಸುತ್ತಲ ಊರುಗಳ ಹಲವಾರು ರೈತರಿಗೆ ಬೆಂಗಳೂರು-ದೊಡ್ಡಬಳ್ಳಾಪುರ ರಸ್ತೆಯ ಅಂಚಿನ ಒಂದು ಸಣ್ಣ ಮಣ್ಣಿನ ಚೆಕ್ ಡ್ಯಾಂ (ಅಣೆಕಟ್ಟು) ಯಾತ್ರಾ ಸ್ಥಳದಂತಾಗಿಬಿಟ್ಟಿದೆ.

ಗಾದೆಗಳು-ಅರಿವು!

ಹತ್ತು ಗಾದೆಗಳು

೧. ಅತ್ತೂ ಕರೆದೂ ಔತಣಕ್ಕೆ ಹೇಳಿಸಿಕೊಂಡರಂತೆ.

೨. ಅಂಕೆ ಇಲ್ಲದ ಕುದುರೆ ಅಗುಳು ದಾಟಿತಂತೆ.

೩. ಇದ್ದಿದ್ದು ಇದ್ದಂತೆ ಹೇಳಿದ್ರೇ ಸಿದ್ದಪ್ಪಂಗೆ ಸಿಡಿಲು ಹೋಡೀತಂತೆ.

೪. ಇದ್ದವರು ಮೂರಲ್ಲಿ ಕದ್ದವರು ಯಾರು?

೫. ಉಂಡ್ಯೇನೋ ಗುಂಡ ಅಂದ್ರೇ ಮುಂಡಾಸ್ ಮೂವತ್ ಮಳ ಅಂದ್ನಂತೆ.

೬. ಉಂಡೆಲೆ ಎತ್ತೋ ಗುಂಡ ಅಂದ್ರೇ ಉಂಡವರು ಎಷ್ಟು ಜನ ಅಂದ್ನಂತೆ.