ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಿಮ್ಮ ವ್ಯಂಗ್ಯಚಿತ್ರ(ಕ್ಯಾರಿಕೇಚರ್) ಬೇಕೇ?

ನಿಮ್ಮ ಕ್ಯಾರಿಕೇಚರ್ ಬೇಕಾದರೆ ಪ್ರಕಾಶ್ ಶೆಟ್ಟಿಯವರನ್ನು ಸಂಪರ್ಕಿಸಿ. ಮಿಂಚಂಚೆ ಮೂಲಕ ನಿಮ್ಮ ಪೋಸ್ಟ್ ಕಾರ್ಡ್ ಆಕಾರದ ಚಿತ್ರ ಕಳುಹಿಸಿ(soft copy). DDಯನ್ನು ಅವರ ವಿಳಾಸಕ್ಕೆ ಕಳುಹಿಸಿ.

ವಾರೆಕೋರೆ ಮೂಲಕ ಕಾರ್ಟೂನ್ ಕಲಿಯಿರಿ

"ವಾರೆಕೋರೆ" ಹಾಸ್ಯ ಮಾಸಪತ್ರಿಕೆಯು ನಿಮ್ಮನ್ನು ನಗಿಸಲು ಬರುತ್ತಿದೆ. ಖ್ಯಾತ ವ್ಯಂಗ್ಯಚಿತ್ತಾರಿಗ ಪ್ರಕಾಶ್ ಶೆಟ್ಟಿ ಈ ನಗೆ ಪತ್ರಿಕೆಯ ನೇತೃತ್ವ ವಹಿಸಲಿದ್ದಾರೆ. ಮೂರು ದಶಕಗಳಿಂದ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಪ್ರಯೋಗ ಮಾಡುತ್ತಾ, ಮುಂಗಾರು,ಚಿತ್ರತಾರಾ,ಸಂತೋಷ ಮುಂತಾದ ಪತ್ರಿಕೆಗಳನ್ನು ತನ್ನ ವ್ಯಂಗ್ಯಚಿತ್ರ,ಕ್ಯಾರಿಕೇಚರ್ ಮತ್ತು ವಿನ್ಯಾಸಗಳಿಂದ ಅಲಂಕರಿಸಿದ ಕನ್ನಡಿಗ ಪ್ರಕಾಶ್ ಅವರ ಹೊಸ ಸಾಹಸ ಈ ಕನ್ನಡ ಪತ್ರಿಕೆ.

ಕಾರ್ಟೂನ್ ಕಲಿಯಿರಿ:

ವಾರೆಕೋರೆಯಲ್ಲಿ "ಕಾರ್ಟೂನ್ ಕಲಿಯಿರಿ" ಎನ್ನುವ ಉಚಿತ ಸಂಚಿಕೆ ಪ್ರತಿತಿಂಗಳೂ ಕನ್ನಡ-ಇಂಗ್ಲೀಷ್ ಎರಡೂ ಭಾಷೆಯಲ್ಲಿಯೂ ಬರಲಿದೆ.ಇದು ಓದುಗರಿಗೆ ಬೋನಸ್ .ಕಾರ್ಟೂನ್ ಕಲಿಯುವ ಆಸಕ್ತಿ ಇದ್ದವರು, ಇಂಗ್ಲೀಷ್ ಗೊತ್ತಿಲದವರಿಗೂ ಅನುಕೂಲ.

ತ್ರಿಪದಿ ೧೭-೧೮-೧೯-೨೦

ಹೊತ್ತೊತ್ತಿಗೆ ಎನಗೆ ಪ್ರೀತಿಯಿಂದ ತುತ್ತಾಕುವ
ಹೆತ್ತವರಲ್ಲಿ ಕಾಣದ ಪ್ರೀತಿಯ ತುತ್ತನ್ನು
ಬಿತ್ತವರಿಗೆ ನೀತಿ ಮರೆತವನಾದೆ ಪ್ರಭುಶಂಕರ

ಶರಣನಲ್ಲಿ ಶಿವನ ಸ್ಮರಣೆಯಿರಲು
ಹರಣದಲ್ಲಿ ನಡೆ ಸರಳವಿರಲು
ಮರಣದಲ್ಲಿ ನಗುವಿನ ಶಯನ ಕಾಣಯ್ಯ ಪ್ರಭುಶಂಕರ

ತನ್ವಂಗಿಯ ಕಂಡು ಆನನದಲ್ಲಿ
ತಂಗಿಯಂದು ಕರೆದು ಮನದಲ್ಲಿ
ಅಂಗಿ ಕಳಚುವ ಡೋಂಗಿಗಳುಂಟು ಪ್ರಭುಶಂಕರ

"ವೇಶ್ಯೆಯ ಮೇಲೆ ಅತ್ಯಾಚಾರ ": ವಿ ಕ ವರದಿ , ಇದೆಂಥಾ ಶೀರ್ಷಿಕೆ?

ಇಂದಿ ಅಪರಾಧ ಸುದ್ದಿಯಲ್ಲಿ
ವರದಿ ಮಾಡುವ ಭರದಲ್ಲಿ ಮೇಲಿನ ಶೀರ್ಷಿಕೆ ಕೊಟ್ಟಿದ್ದಾರೆ
ಇದಕ್ಕೆ ಏನನ್ನಬೇಕು?
ವೇಶ್ಯೆಯ ಮೇಲೆ ಎಂದೇಕೆ ಒತ್ತಿ ಹೇಳಬೇಕು?
ಮಹಿಳೆಯ ಮೇಲೆ ಎಂದು ಹೇಳಿ ನಂತರವೆಲ್ಲಾದರೂ ಈ ಅಂಶವನ್ನು ಪ್ರಸ್ತಾಪಿಸಬಹುದಿತ್ತಲ್ಲವವೇ?
ಸೆನ್ಸೇಶನಲ್ ಟೈಟಲ್ ಕೊಡುವ ಭರದಲ್ಲಿ ಹೀಗೆ ಕೊಡುವ ಅಗತ್ಯವೇನು?

ಭಾರತೀಯ ಭಾಷೆಗಳ ಸ್ವರೂಪ

ಭಾರತೀಯ ಭಾಷೆಗಳಲ್ಲಿ ಮೂಲಪದ (ಧಾತು ಅಥವಾ ನಾಮಪದ) ಹೆಚ್ಚಾಗಿ ಎರಡು ಸ್ವರಗಳಿಂದ ಕೂಡಿರುತ್ತದೆ. ಎಲ್ಲೋ ಕೆಲವು ನಾಲ್ಕು ಸ್ವರಗಳಿಂದ ಕೂಡಿರಬಹುದು. ಸಂಸ್ಕೃತದಲ್ಲಿ ’ಸರ್ವಂ ಧಾತುಜಮಾಹ ಪಾಣಿನಿಃ" ಎಂಬುದನ್ನು ತೆಗೆದುಕೊಂಡರೆ ಶಬ್ದದ ಮೂಲರೂಪ ಎರಡು ಸ್ವರಗಳಿಗಿಂತ ಹೆಚ್ಚಿರದು.

’ಅತ್ತೆಗೊಂದುಕಾಲ, ಸೊಸೆ.... ಕ್ಷಮಿಸಿ, ಇದಲ್ಲ ಮಹತ್ವದ್ದು ; ಈಗ ಕತ್ತೆಗೊಂದು ಕಾಲ ಬಂದಿದೆ !

ಪ್ರಜಾವಾಣಿ ಫೋಟೋ ಗ್ಯಾಲರಿಯಲ್ಲಿ ಒಂದು ಗಮ್ಮತ್ತಿನ ಸಂಗತಿ ಇದೆ. ಅಹ್ಮದಾಬಾದ್ ನ ’ ಔಥಾ,’ ಎಂಬಲ್ಲಿ ಕತ್ತೆಗಳ ಮೇಳ ನಡೆಯಿತು. ಅದರಲ್ಲಿ ಭಾಗವಹಿಸಿದ್ದ ಕತ್ತೆಗಳನ್ನು ವೀಕ್ಷಿಸಲು ಹಲವಾರು ಜನ ಬಂದಿದ್ದರು. ಕತ್ತೆಗಳ ಖರೀದಿಗೆಂದು ಬಂದ, ಕತ್ತೆ ಅಲ್ಲ, ಕ್ಷಮಿಸಿ, ಗಾರ್ದಭ-ಗ್ರಾಹಕರು ಅವುಗಳನ್ನು ಪರೀಕ್ಷಿಸಿದರು.

'ಟ್ವಿನ್ ಗ್ರೂವ್ ಗಾಳಿಶಕ್ತಿ ಕೇಂದ್ರ,' ಬ್ಲೂಮಿಂಗ್ಟನ್ ರೈತರ ಹೆಮ್ಮೆಯ ಕೂಸು !

'ಟ್ವಿನ್ ಗ್ರೂವ್ ಗಾಳಿಶಕ್ತಿ ಕೇಂದ್ರ,' ವನ್ನು ಸ್ಥಾಪಿಸುವ ಉದ್ದೇಶ್ಯದ ಹಿಂದೆ ಖಾಸಗಿಯಾಗಿ ಕೆಲಸ ನಿರ್ವಹಿಸುತ್ತಿರುವ ಪ್ರತಿಷ್ಠಿತ ಹೊರೈಜಾನ್ ಕಂಪೆನಿಯಯ ಜೊತೆಗೆ, ಸ್ಥಳೀಯ ರೈತಾಪಿಜನರ, ವೈಜ್ಞಾನಿಕ ಮನೋಭಾವ, ದೂರದೃಷ್ಟಿ, ಹಾಗೂ ನೆರವಾಗುವ ಸುಬುದ್ಧಿಗಳ ಯೋಗದಾನದಿಂದ ಕೆಲಸಗಳು ಸುಗಮವಾಗಿ ನಡೆಯುತ್ತಿವೆ. ಅಮೆರಿಕದಲ್ಲಿ ಪ್ರಸಿದ್ಧಿಯಾದ 'ಹೊರೈಜಾನ್ ಗಾಳಿಶಕ್ತಿ' ಕಂಪೆನಿ ತನ್ನ ದಿಟ್ಟಹೆಜ್ಜೆಯಿಂದ ಮುನ್ನಡೆದು, ಗಾಳಿಯಂತ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ಥಾಪಿಸಿ ಯಶಸ್ಸನ್ನು ಸ್ಥಾಪಿಸಿದೆ. ಇದರ ಶಾಖೆಗಳು ಅಮೆರಿಕದ ಮೂಲೆ-ಮೂಲೆಗಳಲ್ಲಿ ಸಫಲತಾಪೂರ್ವಕವಾಗಿ ಕೆಲಸಮಾಡುತ್ತಿವೆ.

ಮುಕ್ಕು/ಬುಕ್ಕು

ಮುಕ್ಕು, ಬುಕ್ಕು=ಗಬಗಬನೆ ತಿನ್ನು. ಮುಕ್ಕು ಗ್ರಂಥಸ್ಥವಾಗಿದ್ದು ಬಹಳ ಪ್ರಚಲಿತವಾಗಿದೆ. ಬುಕ್ಕು ಆಡುಭಾಷೆಯಲ್ಲಿ ಬೞಕೆಯಲ್ಲಿದೆ.

ಭೂತಕೃದ್ವಾಚಿ ಮುಕ್ಕಿದ/ಬುಕ್ಕಿದ
ವರ್ತಮಾನಕೃದ್ವಾಚಿ ಮುಕ್ಕುವ/ಬುಕ್ಕುವ