ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಂಕುತಿಮ್ಮನ ಕಗ್ಗ

ಕನ್ನಡದ ಭಗವದ್ಗೀತೆಯೆಂದೆ ಹೆಸರಾದ ಮಂಕುತಿಮ್ಮನ ಕಗ್ಗದ ಕರ್ತೃ ಡಿ.ವಿ. ಗುಂಡಪ್ಪನವರು, ೧೯೪೨ರಲ್ಲೇ ಈ ಕಗ್ಗದ ಮೊದಲ ಮುದ್ರಣ, ಇತ್ತೀಚೆಗೆ ಇದರ ಧ್ವನಿ ಮುದ್ರಣದ ಜೊತೆಗೆ ಅದರ ತಾತ್ಪರ್ಯವೂ ಬಂದಿದೆ, ಕಗ್ಗವನ್ನು ಕೇಳಿದವರು, ಓದಿದವರು ನಿಮ್ಮ ಅಭಿಪ್ರಾಯಗಳನ್ನು ದಯಮಾಡಿ ಹಂಚಿಕೊಳ್ಳಿ.

ಮಹಾಭಾರತ- ಕಿರುತೆರೆ ಚರಿತ್ರೆಯಲ್ಲಿ ಅಮರವಾಗಿ ಉಳಿಯುವ ಮಹಾನ್ ಸೀರಿಯಲ್, ಬಿ. ಆರ್. ಛೋಪ್ರರವರ ಅನುಪಮ ಕೊಡುಗೆ!

ಅನೇಕ ದಿನಗಳಿಂದ ತೀವ್ರ ಆನಾರೋಗ್ಯಕ್ಕೆ ಒಳಗಾಗಿದ್ದ ಬಾಲಿವುಡ್ ನ ಹಿರಿಯ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಬಲದೇವ್ ರಾಜ್ ಛೋಪ್ರಾ (೫ನೆಯ ತಾರೀಖು), ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. 90 ದಶಕದಲ್ಲಿ ಮಹಾಭಾರತ ಕಥೆಯನ್ನು ಕಿರುತೆರೆಯಲ್ಲಿ ಪ್ರಸಾರ ಮಾಡಿದ ಕೀರ್ತಿಯು ಇವರಿಗೆ ಸಲ್ಲುತ್ತದೆ. ಅದರಿಂದ ಅವರ ಕೀರ್ತಿಯು ದೇಶವಿದೇಶಗಳಲ್ಲೂ ಹಬ್ಬಿ ಅವರು ಅಮರರಾದರು.

ಎಮ್. ಎ (ಇಂಗ್ಲೀಷ್) ನಲ್ಲಿ ಪದವಿ ಪಡೆದ ಬಿ. ಆರ್. ಛೋಪ್ರರವರು, ತಮ್ಮ ವೃತ್ತಿಜೀವನವನ್ನು ಪತ್ರಿಕೋದ್ಯಮದಲ್ಲಿ ಶುರುಮಾಡಿದ್ದರು. ದೆಹಲಿಯಿಂದ ಬೊಂಬಾಯಿಗೆ ಬಂದು, ಚಿತ್ರೋದ್ಯಮದ ಗಂಧವನ್ನೇ ಅರಿಯದ ಅವರು, ತಮ್ಮ ಮೊದಲಚಿತ್ರವನ್ನು ನಿರ್ದೇಶಿಸಲು ಹೊರಟ ಧೀಮಂತ ವ್ಯಕ್ತಿ- ಅದೂ ಅಶೋಕ್ ಕುಮಾರ್ ರವರನ್ನು ತಮ್ಮ ಚಿತ್ರದ ನಾಯಕನನ್ನಾಗಿ ಇರಿಸಿಕೊಂಡು ! ಅಶೋಕ್ ಅವರನ್ನು ಕೇಳೇ ಬಿಟ್ಟರು, " ನಿಮಗೆ ಚಿತ್ರ ನಿರ್ದೇಶನ ಅನುಭವವಿಲ್ಲದೆ, ನನ್ನಂತಹ, ಪ್ರಖ್ಯಾತನಟನನ್ನು ತೆಗೆದುಕೊಂಡು, ಮಹಾತಪ್ಪುಮಾಡುತ್ತಿದ್ದೀರಿ. ಇದರಿಂದ ನನ್ನ ಕೆರಿಯರ್ ಮೇಲೂ ದುಷ್ಪ್ರಭಾವವಾಗುವ ಸಾಧ್ಯತೆಗಳಿವೆ." ಆದರೆ ಆತ್ಮವಿಶ್ವಾಸದ ಖಣಿಯಾಗಿದ್ದ ಛೋಪ್ರರವರು ಅಂತಹ ತಪ್ಪುಮಾಡುವರೇ ? ಮುಂದೆ ಅಶೋಕ್ ಕುಮಾರ್ ಅವರ ಚಿತ್ರಗಳಲ್ಲಿ ಖಾಯಂಆಗಿ ನಟಿಸಲು ಆರಂಭಿಸಿದರು.

ಈ ತಲೆಮಾರಿನ ಕನಸು ಮತ್ತು ಆದರ್ಶದ ಗಳಿಗೆ...

[ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇನ್ನೂ ಎರಡು ದಿನ ಇರುವಾಗ, ವಿಕ್ರಾಂತ ಕರ್ನಾಟಕದ ನವೆಂಬರ್ 14, 2008 ರ ಸಂಚಿಕೆಗೆ ಬರೆದ ಲೇಖನ.]

"ಕರಿಯಗಂಡು, ಬಿಳಿಹೆಣ್ಣಿನ ಮಗನಾದ ಬರಾಕ್ ಹುಸೇನ್ ಒಬಾಮ ಎಂಬ ಸೆನೆಟರ್ ಮುಂದಿನ ಏಳೆಂಟು ವರ್ಷ ಅಂತಹ ದೊಡ್ಡ ತಪ್ಪುಗಳನ್ನು ಮಾಡದಿದ್ದರೆ ಈ ದೇಶದ ಅಧ್ಯಕ್ಷನೂ ಆಗಬಹುದು!" ಹಾಗೆಂದು ನಾನು ಬರೆದಿದ್ದು ವಿಕ್ರಾಂತ ಕರ್ನಾಟಕದ ಜುಲೈ 7, 2007 ರ ಸಂಚಿಕೆಯಲ್ಲಿ. ಕರ್ನಾಟಕದಲ್ಲಿ ಅಂತರ್ಜಾತಿ ವಿವಾಹಕ್ಕೆ ಅಪಾರ ಪ್ರೋತ್ಸಾಹ ಕೊಟ್ಟ ಮೈಸೂರಿನ ಚಿಂತಕ ರಾಮದಾಸರು ತೀರಿಕೊಂಡಾಗ ಬರೆದ ಲೇಖನದಲ್ಲಿ ನಾನು ಹಾಗೆ ಮೇಲಿನಂತೆ ಬರೆದದ್ದು. ಆ ಸಮಯದಲ್ಲಿ ಬಹುಪಾಲು ಜನರ ಊಹೆ ಇದ್ದದ್ದು, ಈ ಬಾರಿ ಹಿಲ್ಲರಿ ಕ್ಲಿಂಟನ್ ಅಮೆರಿಕದ ಅಧ್ಯಕ್ಷಳಾಗಲಿದ್ದಾಳೆ ಎಂದು. ಅದೇ ದಿಕ್ಕಿನಲ್ಲಿ ಯೋಚಿಸುತ್ತ, ಈ ಲೇಖನ ಬರೆಯುವುದಕ್ಕೆ ನಾಲ್ಕು ತಿಂಗಳಿನ ಮೊದಲು ಬರಾಕ್ ಒಬಾಮ ಅಮೆರಿಕದ ಸಿಲಿಕಾನ್ ಕಣಿವೆಯ ಬಳಿ ಆಯೋಜಿಸಿದ್ದ ಸಭೆಯೊಂದರಲ್ಲಿ ಆತನ ಭಾಷಣ ಕೇಳಿಕೊಂಡು ಬಂದಿದ್ದ ನಾನು, ಈ ಸಲ ಅಲ್ಲದಿದ್ದರೂ ಕ್ಲಿಂಟನ್‌ಳ ಅವಧಿ ಮುಗಿದ ನಂತರವಾದರೂ ಖಂಡಿತ ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷನಾಗುವುದು ಸಾಧ್ಯ ಎನ್ನುವ ತೀರ್ಮಾನಕ್ಕೆ ಬಂದಿದ್ದೆ. ಆದರೆ, ಅಮೆರಿಕದ ಜನ ನನ್ನಂತಹ ಕೋಟ್ಯಾಂತರ ಜನರ ಊಹೆಗಳನ್ನೆಲ್ಲ ಹುಸಿ ಮಾಡಿಬಿಟ್ಟಿದ್ದಾರೆ; ಕನಸಿದ್ದಕ್ಕಿಂತ ಹೆಚ್ಚಿನ ಮಟ್ಟದ್ದನ್ನು ಕೊಟ್ಟುಬಿಟ್ಟಿದ್ದಾರೆ. ಈ ಒಂದೇ ಕಾರಣಕ್ಕೆ ಅಮೆರಿಕದ ಜನತೆ ವಿಶ್ವದ ಅನೇಕ ಜನರ ಪ್ರೀತಿಯನ್ನು ಗಳಿಸಿಕೊಂಡು ಬಿಟ್ಟಿದ್ದಾರೆ.

ಬರೀ ಇದೇ ಆಯ್ತು! ಪ್ರೊಗ್ರಾಮ್ ಬರೆಯೋ ಪ್ರೊಗ್ರಾಮ್ ಬರೆಯೋದು.

ಒಳ್ಳೇ projectಉ. ಪ್ರೊಗ್ರಾಮ್ ಬರೆಯೋ ಪ್ರೊಗ್ರಾಮ್ ಬರೆಯೋ ಕೆಲ್ಸ. ಸುಮ್ನೆ spec ಕೊಟ್ಟ್ರೆ ಸಾಕು, ಯಾವ್ ಪ್ರೋಗ್ರಾಮಾದ್ರೂ ಸರಿ, ಮಿಕ್ಕಿದ್ದೆಲ್ಲ ಅದೆ ಬರ್ದ್ ಮುಗ್ಸಿ ಸುರೀತಿರ್ಬೇಕು, ಅಂಥಾದ್ದು. ಹೆಸ್ರು ನೆನ್ಪಿಲ್ಲ. :) team ನಲ್ಲಿ ಒಂದೆಂಟ್ ಜನ ಇದ್ದ್ವಿ. ನೆನ್ಪಲ್ಲಿರೊ ಹಾಗೆ, mostly, ಯಾವ್ದೊ ಬೇರೆ ದೇಶ್ದಲ್ಲಿರೊ ಕಂಪ್ನಿ.

ಕೌಪೀನ ಬ್ರಹ್ಮಚಾರಿ

ಒಂದೂರಲ್ಲಿ ಒಬ್ಬ ಸರಳ ಬ್ರಹ್ಮಚಾರಿಯಿದ್ದ. ಅವನ ಧರಿಸುತ್ತಿದ್ದುದು ಒಂದು ಕೌಪೀನ ಮಾತ್ರ. ಅವನ ಬೞಿಯಿದ್ದುದು ಎರಡು ಕೌಪೀನಗಳು ಮಾತ್ರ. ಒಂದು ಒಗೆದು ಹರವುವುದು. ಇನ್ನೊಂದು ಧರಿಸಿಕೊಳ್ಳುವುದು. ಒಟ್ಟು ಎರಡೇ. ಒಂದು ದಿನ ಬ್ರಹ್ಮಚಾರಿ ನೋಡುತ್ತಾನೆ ತಾನು ಒಗೆದು ಹರವಿದ ಕೌಪೀನವನ್ನು ಇಲಿಯೊಂದು ಕತ್ತರಿಸಿ ಹಾಕಿದೆ. ಬ್ರಹ್ಮಚಾರಿಗೆ ತಳಮಳವಾಯ್ತು.

ಉಚಿತ ವಿದ್ಯುತ್ ದುರ್ಬಳಕೆ

ಇತ್ತೀಚೆಗೆ ನಾನು ಕಂಡಂತೆ ಉಚಿತ ವಿದ್ಯುತ್ತನ್ನು ರೈತರು ಹೇಗೆ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಬರೆಯುತ್ತಿದ್ದೇನೆ. ಹದಿನೈದು ಇಪ್ಪತ್ತು ಎಕರೆ ಜಮೀನು ಹೊಂದಿರುವ ರೈತರು ಇಂದು ಉಚಿತ ವಿದ್ಯುತ್ ಸೌಲಭ್ಯವನ್ನು ಸಮರ್ಥವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಒಗಟುಗಳು - ೬

ಈ ಒಗಟುಗಳನ್ನು ಬಿಡಿಸಿರಿ.

೧. ದಡದಡ ಓಡುತ್ತೆ, ಕುದುರೆಯಲ್ಲ. ಕೂಕೂ ಕೂಗುತ್ತೆ, ಕೋಳಿಯಲ್ಲ. ಹೊಗೆ ಉಗುಳುತ್ತೆ, ಒಲೆಯ ಗೂಡಲ್ಲ. ಏನದು?
೨. ಪೆಟ್ಟಿಗೆ ತೆರೆದರೆ ಕೃಷ್ಣ ಹುಟ್ಟಿದ.
೩. ಹಗಲು ಹಾಳು ತೋಟ, ರಾತ್ರಿ ಹೂದೋಟ. ಹೂವ ನೋಡುವವರುಂಟು, ಮುಡಿವವರಿಲ್ಲ.
೪. ಅಕ್ಕ ಅಕ್ಕ ಬಾವಿ ನೋಡು, ಬಾವಿಯೊಳಗೆ ನೀರು ನೋಡು, ನೀರಿನೊಳಗೆ ಬಳ್ಳಿ ನೋಡು, ಬಳ್ಳಿಗೊಂದು ಹೂವು ನೋಡು.

ಕವಿನಮನ

ಸ್ನೇಹಿತರೇ,
ನವಂಬರ್ ೧ ರಂದು ಯಾವುದೋ ಖಾಸಗಿ ಚಾನಲ್ ಒಂದರಲ್ಲಿ ಪ್ರಸಾರವಾದ ಕವಿನಮನ ಕಾರ್ಯಕ್ರಮ ನಿಮ್ಮಲ್ಲಿ ಯಾರಾದರು ನೋಡಿದ್ದೀರ? ಸಂತೆಗೆ ಒಂದು ಮೊಳ ಎಂಬಂತೆ ವಿಶೇಷ ದಿನಗಳಿಗೆಂದೇ ತರಾತುರಿಯಲ್ಲಿ ತಯಾರಾಗುವ ಕಾರ್ಯಕ್ರಮಗಳಿಗೆ ಹೋಲಿಸಿದರೆ ತುಂಬ ವಿಭಿನ್ನವಾಗಿತ್ತು ಹಾಗು ಅಷ್ಟೆ ಸೊಗಸಾಗಿತ್ತು ಕೂಡ .