ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೊರದೇಶದಲ್ಲಿ ಬೆಳೆಯುತ್ತೀರೋ ಭಾರತೀಯ ಮಕ್ಕಳ ಪ್ರಶ್ನೆ ಮತ್ತು ಪ್ರತ್ರ್ಯುತ್ತರಗಳು!!

ನಾನ್ ಕೆಲ್ಸಾ ಮಾಡ್ತೀರೋ ಕಂಪನೀನಲ್ಲಿ ನನ್ನ ಸ್ನೇಹಿತೆ ಒಬ್ಬಳಿಗೆ ೨ ಗಂಡು ಮಕ್ಳು. ಒಬ್ಬ ಭಾರತೀಯ, ಮತ್ತೊಬ್ಬ ಅಮೇರಿಕಾ ದೇಶದ ಪ್ರಜೆ. ಅವಳು ೮ ವರ್ಷದ ಹಿಂದೆ ಅಮೇರಿಕಕ್ಕೆ ಬಂದಿದ್ದು. ಬಂದ ೩ನೇ ವರ್ಷಕ್ಕೆ ೨ನೇ ಮಗು ಆಯ್ತು.

’ಹೀರೊ" ರಹಿತ ಹೀರೊಗಳ ಕನ್ನಡ ಸಿನಿಮಾ ’ನವಗ್ರಹ’

ನಮ್ಮ ಸ್ಯಾಂಡಲ್ ವುಡ್ ಕನ್ನಡ ಚಿತ್ರರಂಗ.ಬಾಲಿವುಡ್ ಗೆ ಸಮನಾಗಿ ಬೆಳೆಯ ಬೇಕೆಂದರೆ ಏನು ಮಾಡಬೇಕು...?

೧. ಅವರ ಸಮವಾಗಿ ಯೋಚನೆ ಮಾಡಬೇಕು.
ಅಥವಾ
೨. ಅವರ ಯೋಚನೆಗಳನ್ನು ನಮ್ಮ ಪ್ರಾದೇಶಿಕತೆಗೆ ತಕ್ಕಂತೆ ಪರಿ’ವರ್ತಿಸಿ’ ನಮ್ಮ ಸಿನಿಮಾಗಳನ್ನು ಮಾಡಬೇಕು.(ಇದು ಕನ್ನಡ ಚಿತ್ರರಂಗವನ್ನು ಬಾಲಿವುಡ್ಗೆ ಸಮನಾಗಿ ತರಬೇಕೆಂದು ಯೋಚಿಸುವವರಿಗೆ ಮಾತ್ರ.)

ಕನಸಿನ ಪ್ರಾಯ ಹಾಗು ಮರೆತದ್ದು

ಕನಸಿನ ಪ್ರಾಯ

"ಯೌವ್ವನದಲ್ಲಿ ಕನಸದವರಿಲ್ಲವಂತೆ
ನಡುವಯಸ್ಸಲ್ಲಿ ಕನಸದವರು ವ್ಯರ್ಥವಂತೆ
ಇಳಿವಯಸ್ಸಲ್ಲಿ ಕನಸುಳಿಸಿಕೊಂಡವರು ಧನ್ಯರಂತೆ"
ಎನ್ನುವುದು ಬರೀ ಪ್ರಾಸಕ್ಕಾಗಿ ಅಲ್ಲ, ಅಲ್ಲವೆ?

.

.

ಗಣೇಶ ಬಂದ...ಕಾಯಿ ಕಡುಬು ತಿಂದ...


ಏನಪ್ಪಾ, ದೀಪಾವಳಿ ಕೂಡ ಆಗೋಯ್ತು ಈಗ ’ಗಣೇಶ ಬಂದ...ಕಾಯಿ ಕಡುಬು ತಿಂದ’ ಅಂತಿದಾನೆ ಅಂದುಕೊಂಡಿರಾ...?
ಇದಕ್ಕೆ ಕಾರಣವಿದೆ...ತುಮಕೂರಿನಿಂದ ಕುಣಿಗಲ್ ದಾರಿಯಲ್ಲಿ ಸುಮಾರು ೧೦ ಕಿ.ಮೀ ದೂರದಲ್ಲಿರುವ ಗೂಳೂರು ಗಣೇಶನ ನೋಡಲು ಇದೇ ಸರಿ ಸಮಯ...!
ಗೂಳೂರಿನ ಗಣೇಶನಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಊರಿನ ಮಂದಿ ಹೇಳುತ್ತಾರೆ...

ಶಾಸ್ತ್ರೀಯ ಭಾಷೆಯಿಂದ ಏನ್ ಮಣ್ಣು ಪ್ರಯೋಜನಾನೂ ಆಗಲ್ವಾ?

ಗೆಳೆಯರೇ,

ಶಾಸ್ತ್ರೀಯ ಭಾಷೆ ಸ್ಥಾನ ಮಾನ ಸಿಕ್ತು ಅಂತ ನಾವೆಲ್ಲ ಖುಷಿ ಏನೋ ಆಗಿದಿವಿ, ಆದ್ರೆ ಅದರಿಂದ ಆಗೋ ಪ್ರಯೋಜನ ಏನು ಅನ್ನೋದನ್ನ ತಿಳಕೋಬೇಕು ಅಂತಾ ನಾನೊಬ್ಬ ಭಾಷಾ ತಜ್ಞರನ್ನ ಮಾತಾಡಿಸಿದಾಗ ತಿಳಿದದ್ದು ಇಷ್ಟು:

ಮುಖ ನೋಡಿ ಮಣೆ ಹಾಕುವುದು ಸರಿಯೇ?

ಚರಿಯೆ* ನೋಡಿ ಮನದಾಳವ 
ಅರಿಯುಬೇಕು ಚತುರರು!
ಅರಳದ ಕೇದಗೆ ಪರಿಮಳವನು
ಅರಿವಂತೆ ಅಲರುಣಿ**ಗಳು!

ಸಂಸ್ಕೃತ ಮೂಲ:

ಆಕಾರಾಣೈವ ಚತುರಾಃ ತರ್ಕಯಂತಿ ಪರೇಂಗಿತಂ
ಗರ್ಭಸ್ಥಂ ಕೇತಕೀ ಪುಷ್ಪಂ ಆಮೋದೇನೇವ ಷಟ್ಪದಾಃ

*ಕೊ:ಚರಿಯೆ ~= ಚರ್ಯೆ, ಚಹರೆ, ಹೊರಕ್ಕೆ ತೋರುವ ನಡವಳಿಕೆ

ಉರಿಯ ಉಯ್ಯಾಲೆಯಲಿ......

ಚರಿತ್ರೆಯ ಹಾಳೆಗಳನ್ನೆಲ್ಲ ತಿರುವಿ

ಉಳಿದ ಭಗ್ನಾವಶೇಷಗಳ ನಡುವೆ-

 

ಮದೋನ್ಮತ್ತ  ರಾಜ ದರಬಾರುಗಳು

ಸಿಂಹಾಸನಕ್ಕಂಟಿನಿಂತ ಸಾಲಭಂಜಿಕೆಯರು

ಮಾಯೆ ಮುಸುಕಿನ ನೃತ್ಯಾಂಗನೆಯರು

 

ಹಗಲ ಬೆಳಕಲ್ಲೂ ದೀಪ ಹಿಡಿದರಷ್ಟೇ

ಅರಿವೆಗೆ ಬರುವ ಸತ್ಯ, ನ್ಯಾಯದ ಮಸಕು ನೆರಳುಗಳು.

ಒಗಟುಗಳು - ೭

ಈ ಒಗಟುಗಳನ್ನು ಬಿಡಿಸಿರಿ.

೧. ಬಿಳಿ ಲಂಗದ್ ಹುಡ್ಗಿ, ಮೇಲೆ ಥಳುಕು, ಒಳಗೆ ಹುಳುಕು. ಎಳೆದ್ರೆ, ಬಾಯಿ ತುಂಬಾ ಬರ್ತಾಳೆ, ಬಿಟ್ಟ್ರೆ, ದೇಶ ತುಂಬ್ತಾಳೆ.
೨. ಬಡಗಿ ಮಾಡಿದ ಬಂಡಿಯಲ್ಲ, ಮನುಷ್ಯ ಮಾಡಿದ ಯಂತ್ರವಲ್ಲ, ಒಂದು ನಿಮಿಷವೂ ಪುರುಸೊತ್ತಿಲ್ಲ.
೩. ಬರೋದು ಕಂಡವರೆಲ್ಲ ಕೈ ತೋರ್ತಾರೆ.

ಉಚಿತ ಸಂಸ್ಕೃತ ಕಲಿಕಾಶಿಬಿರ

ಬೆಂಗಳೂರಿನ ಗಿರಿನಗರದಲ್ಲಿರುವ ಸಂಸ್ಕೃತ ಭಾರತಿ ಪ್ರತಿಷ್ಠಾನವು ಇದೇ ನವಂಬರ್ ೨೨ ಮತ್ತು ೨೩ ರಂದು ಉಚಿತ ಸಂಸ್ಕೃತ ಕಲಿಕಾ ತರಗತಿಗಳನ್ನು ನಡೆಸುತ್ತಿದೆ. ಆಸಕ್ತಿಯುಳ್ಳವರು ನೊಂದಾಯಿಸಿಕೊಳ್ಳಬಹುದು.

ವಿಳಾಸ:
ಅಕ್ಷರಂ, ೮ನೇ ಅಡ್ಡರಸ್ತೆ, ೨ನೇ ಮುಖ್ಯರಸ್ತೆ, ಗಿರಿನಗರ , ಬೆಂಗಳೂರು.
ಮಂಜುನಾಥ್ : ೯೦೦೮೦೦೨೩೬೭.

(ಮೊದಲ ೨೫ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ)