ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಚನಕಾರರು - ೧

ಅಕ್ಕಮಹಾದೇವಿಅಕ್ಕಮಹಾದೇವಿ (೧೧೩೦ - ೧೧೬೦): ಸಮಾಜಸಧಾರಣೆಯಲ್ಲಿ ಮಹಿಳೆಯ ಪಾತ್ರವು ಹಿರಿದಾದುದು. ಪುರಷಪ್ರಧಾನವಾದ ಸಮಾಜದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ನಿಲ್ಲಬಲ್ಲರೆಂಬ ಪ್ರಜ್ಞೆಯನ್ನು ಸುಮಾರು ಎಂಟುನೂರು ವರ್ಷಗಳ ಹಿಂದೆಯೇ ಮೂಡಿಸಿದ ಕರ್ನಾಟಕದ ಪ್ರಪ್ರಥಮ ಮಹಿಳೆಯೆಂದರೆ ಅಕ್ಕಮಹಾದೇವಿ.

ಹನ್ನೆರಡನೆಯ ಶತಮಾನದಲ್ಲೇ ಇಂತಹ ಮಹಿಳಾ ಜಾಗೃತಿಯನ್ನು ಮೂಡಿಸಿದರು. ಸಂಸಾರವನ್ನು ತ್ಯಜಿಸಿ, ಚೆನ್ನಮಲ್ಲಿಕಾರ್ಜುನ ದೇವರೇ ತನ್ನ ಪತಿಯೆಂಬುದಾಗಿ ನಂಬಿದರು. ತಮ್ಮ ವೈರಾಗ್ಯದ ಮೂಲಕವೇ ಪುರುಷರೊಡನೆ ಹೋರಾಡಿ ಸಮಾಜೋದ್ಧಾರದ ಕಾರ್ಯದಲ್ಲಿ ನೆರವಾದರು ಈ ಶಿವಶರಣೆ. ತಮ್ಮ ಭಾವನೆಗಳನ್ನು ವಚನಗಳ ಮೂಲಕ ತಿಳಿಗನ್ನಡದಲ್ಲಿ ತಿಳಿಸಿದರು. ಲಿಂಗಭೇದವಿಲ್ಲದೆ, ಜಾತಿಭೇದವಿಲ್ಲದೆ ಪ್ರತಿಯೊಬ್ಬರೂ ಲೋಕವಿಚಾರಗಳನ್ನು ಅರಿಯುವಂತೆ ಮಾಡಿದರು.

ದೀಪಾವಳಿ

೬ ಗಂಟೆಗೆ ಇಟ್ಟ ಅಲಾರಾಂ, ದಿಯುವಿನ ನಾಗರ ಸೇಟ್ ಹವೇಲಿಯ ಹಳೇಯ ಮನೆಯೊಂದರ ಕೋಣೆಯೊಂದರ ಮೂಲೆಯಿಂದ ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು. ಅಲಾರಾಂ ಆರಿಸಿ, ದೇವರನ್ನು ಸ್ಮರಿಸುತ್ತಾ, ಕಾಂತಾ ಬೆನ್ ತನ್ನ ದೈನಂದಿನ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಳು. ಇಂದು ದೀಪಾವಳಿಯಾದ್ದರಿಂದ, ಹಿಂದಿನ ರಾತ್ರಿಯಿಂದ ಮುಂಜಾನೆ ೪ ಗಂಟೆಯವರೆಗೂ ತಮ್ಮ ಆಪ್ತರ ಮನೆಯಾದ ಸೋಲಂಕಿಯವರ ಮನೆಯಲ್ಲಿ ವಿವಿಧ ಭಕ್ಷ್ಯಗಳನ್ನು ತಯಾರಿಸುವಲ್ಲಿ ಸಹಾಯ ಮಾಡುತ್ತಾ ನಿಂತಿದ್ದಳು. ಸುಕ್ಕು ಮುಖ, ನೆರೆತ ಉದ್ದನೆಯ ಕೂದಲು,ಇತಿಹಾಸದ ಕುರುಹೋ ಎಂಬಂತೆ ನಕ್ಕರೆ ಮಾತ್ರ ಕಾಣಿಸುವ ಮುಂದಿನ ಎರಡು ಹಲ್ಲುಗಳು, ಮಂದವಾದ ದೃಷ್ಟಿ, ಸುಮಾರು ೭೫ರ ಆಸುಪಾಸಿನ ಆಕೆಯನ್ನು ೪ ಗಂಟೆಯ ಜಾವಕ್ಕೆ ಮನೆಯಿಂದ ಹೊರಗೆ ಕಳುಹಿಸಲು ಮನಸ್ಸು ಬಾರದಿದ್ದರೂ ಆಕೆಯ ಹಟಕ್ಕೆ ಸೋಲಂಕಿಯವರ ಮನೆಯಾಕೆ ಸೋಲಬೇಕಾಗಿತ್ತು.ವೃತ್ತಿಯಿಂದ ಹೂವಾಡಿಗಳಾದ ಆಕೆಗೆ,ದಿನ ನಿತ್ಯ ಒದಗಿಸುವ ಹೂವಲ್ಲದೆ, ಹಬ್ಬದ ದಿನವಾದ ಇಂದು ಇನ್ನೂ ಹೆಚ್ಚಿನ ಬೇಡಿಕೆ ಇದ್ದುದರಿಂದ ಸೋಲಂಕಿಯವರ ಮನೆಯಲ್ಲಿ ಉಳಿಯದೆ, ಬೆಳಿಗ್ಗೆ ಬೇಗ ಏಳುವ ಉದ್ದೇಶದಿಂದ ಮನೆಗೆ ಬಂದಿದ್ದಳು. ಜನರ ಚಟುವಟಿಕೆಯಿಲ್ಲದ ಬೀದಿಯಲ್ಲಿ ಒಬ್ಬಳೇ, ದಾರಿಯಲ್ಲಿ ಬಿದ್ದಿದ್ದ ಮಾಟ ಮಾಡಿಸಿದ ನಿಂಬೆ ಹಣ್ಣನ್ನು ತುಳಿಯದೆ ಎಚ್ಚರಿಕೆಯಿಂದ ಕಾಲಿಡುತ್ತಾ ತನ್ನ ಇಷ್ಟ ದೇವತೆಯಾದ ಹನುಮನ ಜಪ ಮಾಡುತ್ತಾ ಮನೆಗೆ ತೆರಳಿ ಆಗ ತಾನೆ ನಿದ್ರಿಸಿದ್ದಳು.ನಿದ್ರಾ ಹೀನತೆಯಿಂದ ಕೆಂಪಾದ ಕಣ್ಣುಗಳು ಬಳಲಿ ಉಬ್ಬಿದ್ದವು.ಬಿಳಿಯ ಮಾಸಲು ಬಣ್ಣದ ರವಿಕೆಯ ಮೇಲೆ ಅದೇ ಬಣ್ಣದ ಸೀರೆಯನ್ನು ಗುಜರಾತಿ ಹೆಂಗಸರು ಸೀರೆ ಉಡುವ ಮಾದರಿಯಲ್ಲಿ, ಸೆರಗನ್ನು ಬಲಗಡೆಯಿಂದ ಹೊದ್ದು, ಮನೆಯ ಕದವಿಕ್ಕಿ ಮಾರುಕಟ್ಟೆಯ ಕಡೆಗೆ ಸಾಗಿದಳು.

ಬಸುರಿಯ ಮಗು ಮಾಯ... !

ಎಂದಿನಂತೆ ನಾನು ಅತ್ಯುತ್ಸಾಹದಿಂದ ಆಫೀಸ್ ಗೆ ಬಂದೆ. ಯಾಕೆಂದರೆ ನಾನು ಮಾಡುವ ಕೆಲಸದ ಬಗ್ಗೆ ಅದಮ್ಯ ಪ್ರೀತಿ. ಅಂದು ಶುಕ್ರವಾರ. ನನಗೊಂದು ಅಚ್ಚರಿಯ ಸುದ್ದಿ ಕಾದಿತ್ತು. ಬುಲಿಟೆನ್ ಪ್ರೋಡುಸರ್‍ ಅಂತಾ ನನ್ನ ಕೂರಿಸಿದ ಮೇಲೆ ಹೆಚ್ಚಿಗೆ ಸ್ಕೀಪ್ಟ್ ಗಳನ್ನು ಬರೆಯಲಿಕ್ಕೆ ಅದರಲ್ಲೂ ವಿಶೇಷ ವರದಿಗಳನ್ನು ಬರೆಯಲಿಕ್ಕೆ ನನಗೆ ಅವಕಾಶ ಸಿಕ್ಕಿದ್ದು ಕಡಿಮೆ.

ಎದೆಯೊಳಗೆ ಶೂನ್ಯ ಹೊಕ್ಕಾಗ...

ನೆನಪುಗಳಷ್ಟೇ ಕಾಡುತ್ತೇವೆಂದುಕೊಂಡಿದ್ದೆ

ಕನಸುಗಳೂ ಕಾಡುತ್ತವೆ
ಸೋತ ಕನಸಿನ ವಿಷಾದ ಕೂಡ

ಮರೆತೆ ಅಂದುಕೊಂಡಿದ್ದು
ಊರಾಚೆ ಬಿಟ್ಟು ಬಂದ ಬೆಕ್ಕಿನಂತೆ
ವಾಪಸ್‌ ಬರುತ್ತದೆ
ಹಾಸಿಗೆಯಂಚಿನಲ್ಲಿ ಕೂತು ಒರಲುತ್ತದೆ

ಅಪರಿಚಿತ ಊರಿನ ಪೇಟೆಬೀದಿಯಲ್ಲಿ
ಆಕೆ ಗಕ್ಕನೇ ಎದುರಾಗುತ್ತಾಳೆ
ಸುಮ್ಮನೇ ನಿಂತವಳ ಮುಖದಲ್ಲೇನಿತ್ತು?
ಗೊಂದಲ? ವಿಷಾದ?

ನನ್ನ ಕವನ

ಹನಿ ಹನಿ ಮಳೆಹನಿ
ಮೋಡದಿ ಜಾರಿ ಧರೆಯನು ತಣಿಸಿ
ಎಲ್ಲಿಯೂ ನಿಲ್ಲದೇ ಓಡುತ್ತಿದೆ ನೋಡು.......

ಇಂತಿ ನಿಮ್ಮ ಪ್ರೀತಿಯ
ಯತೀಶ್

ನಗುವಿನ ಮುಖವಾಡ

ಬಾಳಸಂತೆಯಲಿ ನಗುವಿನ ಮುಖವಾಡ ಹೊತ್ತ ಜನ ನಾವೆಲ್ಲ
ನಗು ಬಂದಾಗ ಅತ್ತು ಅಳು ಬಂದಾಗ ನಕ್ಕು
ಸಂತೆಯಲಿ ದಿಕ್ಕು ತಪ್ಪಿದ ಜನ ನಾವೆಲ್ಲ

ಹೃದಯ ಮಂದಿರದೊಳಗೆ ರಕ್ಕಸರನು ರಕ್ಷಿಸುವ ಜನ ನಾವೆಲ್ಲ
ಮನದ ಮನೆಯೊಳಗೆ ಪ್ರೀತಿಯೊಡಿಸಿ ದ್ವೇಷ ತುಂಬುವ ಜನ ನಾವೆಲ್ಲ
ಮೋಸವನೆ ಮೈಯೊಳಗಿಸಿ ಪಳಗಿದ ಜನ ನಾವೆಲ್ಲ
ಹಾವುಏಣಿ ಆಟದಲಿ ಮೇಲೆರುವವರಿಗೆ ಹಾವು ಕಚ್ಚಿಸುವ ಜನ ನಾವೆಲ್ಲ

ಕನ್ನಡಿಗರಿಲ್ಲದ ಭಾರತ ಕ್ರಿಕೆಟ್ ಪಡೆ

ಭಾರತದ ಏಕದಿನ ಕ್ರಿಕೆಟ್ ತಂಡದಲ್ಲಿ ಕನ್ನಡಿಗರಿಗೆ ಒಂದು ಸ್ಥಾನವನ್ನು ನೀಡದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡವೆಂದರೆ ಕನ್ನಡಿಗರಿಂದಲೇ ತುಂಬಿ ಹೋಗಿತ್ತು. ಭಾರತ ಕ್ರಿಕೆಟ್ ತಂಡವೆಂದರೆ ಕರ್ನಾಟಕ ತಂಡವೆನ್ನುವಂತ್ತಿತ್ತು.

ಕನ್ನಡಮ್ಮನುತ್ಸವ

ಭಾರತಿಯ ಮಗಳಿಗಿಂದು ಶುಭ ಪರ್ವದ ಉತ್ಸವ
ಕನ್ನಡದ ಮನಸುಗಳಲಿ ದಿಬ್ಬಣ ಮಹೋತ್ಸವ
ಅಲ್ಲಿ ನೋಡು ಆಕೆ ತೊಟ್ಟ ಅರಿಸಿನ ಕುಂಕುಮದ ಕೇತನ
ಮೊಳಗಲಿ ಬೆಳಗಲಿ ನಮ್ಮ ತಾಯಿಯ ಚೇತನ

ಭಾವದಲೆ ತುಂಬಿದೆ ಕಸ್ತೂರಿಯ ಕಂಪು
ನುಡಿಯಲ್ಲಿ ಆಲಿಸು ನೀ ಕೋಗಿಲೆಯ ಇಂಪು
ನಲಿದಿದೆ ಮನ ಕನ್ನಡವನಾಡುತಲಿ
ಧನ್ಯವಾಗಿದೆ ಜೀವ ತಾಯಿಯ ಸೇವೆ ಮಾಡುತಲಿ

ಕಲೆಗಾರ ಜಕ್ಕಣ್ಣನ ಆಡಿಸಿದ ತವರೂರು