ಮೌಲ್ಯಾಧಾರಿತಜೀವನ. (ಮೌಲ್ಯಾಧಾರಿತ ಜೀವನದಲ್ಲಿ ಜೀವವಿಮೆಯ ಮಹತ್ವ ಹಾಗೂ ಅದರ ಮುಖ್ಯ ಅಂಶಗಳು ಇದನ್ನು ಓದಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ).

ಮೌಲ್ಯಾಧಾರಿತಜೀವನ. (ಮೌಲ್ಯಾಧಾರಿತ ಜೀವನದಲ್ಲಿ ಜೀವವಿಮೆಯ ಮಹತ್ವ ಹಾಗೂ ಅದರ ಮುಖ್ಯ ಅಂಶಗಳು ಇದನ್ನು ಓದಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ).

ಬರಹ

* ಜೀವವಿಮೆ ಎಂದರೇನು?*ಜೀವವಿಮೆಯನ್ನು ಯಾರು ಪಡೆಯಬಹುದು ?                                 ಜೀವವಿಮೆ ಎಂದರೇನು?  ಜೀವವಿಮೆ ಒಂದು ಬಗೆಯ ಕರಾರು. ಇದರಂತೆ ವಿಮಾದಾರನು ನಿಗದಿತ ವರ್ಷಗಳ ಕಾಲ ಕಂತನ್ನು(ಪ್ರೀಮಿಯಂ)) ಕಟ್ಟುತ್ತಾ ಹೋದರೆ ನಿಗಧಿತ  ಅವಧಿಯ ನಂತರ ವಿಮಾ ಮೂಬಲಗನ್ನು ಅವನಿಗೆ ಅಥವಾ ಅದರೊಳಗೆ ಅವನ ಮ್ರತ್ಯುವಾದರೆ ಅವನ ವಾರಸುದಾರನಿಗೆ ಕೊಡಲಾಗುವುದು .ಕರಾರು ಪ್ರಾರಂಭವಾಗುವುದಕ್ಕೆ ಮೂದಲೆ , ನಿಗಧಿತ ಅವಧಿ ವಿಮಾ ಹಣ, ಮತ್ತು ಪ್ರಿಮಿಯಂ ನಿಗಧಿ ಪಡಿಸಲಾಗುವುದು. ವಿಶ್ವದಾದ್ಯಂತ ಜೀವವಿಮೆಯನ್ನು ಒಂದು ಬಗೆಯ ದುರ್ದೈವ ವಿರುದ್ಧ ಮಾಡುವ ಒಂದು ಬಗೆಯ ಬಗೆಯ ಭದ್ರತೆ ಎಂದು ತಿಳಿಯಲಾಗಿದೆ. ಆಕಸ್ಮಿಕ ಮರಣದಿಂದ ಒಂದು ಕುಟುಂಬದ ಸದ್ಯದ ಜೀವನ ಮಟ್ಟವು ಕುಸಿಯದಂತೆ ಜಾಗ್ರತೆ ವಹಿಸಿಕೊಳ್ಳುವುದು.      ಆದ್ದರಿಂದಜೀವವಿಮೆಯು ಒಬ್ಬನ ಆಕಸ್ಮಿಕ ಮರಣದಿಂದ ಆಗುವ ಅನಾಹುತವನ್ನು  ಅಥವಾ ಮುಪ್ಪಿನ ದಿನಗಳಿಗೆ ಸಾಧ್ಯವಾದಷ್ಟು ಧನ ಸೌಲಭ್ಯವನ್ನು,ಹಾಗೂ ಆದಾಯ ಕುಂಠಿತವಾಗದಂತೆ ತಡೆಯಲು ಸಾಧ್ಯವಾಗುತ್ತದೆ.ಪ್ರತಿಯೊಂದು ಪ್ರತ್ಯಕ್ಷವಾದ ವಸ್ತುಗಳಾದ ಕಾರು ಮನೆ, ನೆಲ ಇವು ಆರ್ಥಿಕ ಮೌಲ್ಯಗಳನ್ನು ಹೊಂದಿದೆ. ಅದರಂತೆ ಮಾನವನ ಜೀವವು ಕೂಡ ಒಂದು ಬಗೆಯ ಬೆಲೆಯನ್ನು ಹೊಂದಿದೆ ಅವನ ಮರಣದಿಂದ ಅವನ ಮೇಲೆ ಅವಲಂಬಿತವಾಗಿರುವ ಕುಟುಂಬದ ಸದಸ್ಯ್ರಿಗೆ ಇದರ ಬೆಲೆ ತಿಳಿದಿರುತ್ತದೆ.         ಆದ್ದರಿಂದ  ಮನುಷ್ಯನ್ ಆಕಸ್ಮಿಕ ಮರಣದಿಂದ ಮ್ರತನ ಮನೆಯವರ ಮೇಲೆ ಬೀರುವ ಆರ್ಥಿಕ ಪರಿಣಾಮ ತಗ್ಗಿಸಲು ಒಂದು ಬಗೆಯ ಭದ್ರತೆ ಅವಶ್ಯಕ ಇರಬೇಕಗುವುದು . ಜೀವ ವಿಮೆ ಒಂದೇ ಇಂತ ಸಮಯದಲ್ಲಿ ಆರ್ಥಿಕ ನೆರವು ನೀಡುವುದು. ವಿಮಾ ಕಂತುಗಳು ನಿಯಮಿತ ಅವಧಿಗಳಿಗೆ  ಮಾತ್ರ ಸಿಮಿತವಾಗಿರುವದಲ್ಲದೆ ನಮಗೆ ಅನುಕೂಲವಾದ ಅವಧಿಯನ್ನು ಆರಿಸಿಕೊಳ್ಳಬಹುದು.ವಿಮಾಕಂತನ್ನುಕಟ್ಟುವ ಮೂಲಕ ವಿಮಾದಾರನು ಆದಾಯ ತೆರಿಗೆ ಮತ್ತು ಆಸ್ತಿ ತೆರಿಗೆಯ ವಿನಾಯಿತಿಗೆ ಅರ್ಹನಾಗುತ್ತಾನೆ.ವಿಮೆಯನ್ನು ಬಯಸುವವರು ತಮಗೆ  ಬೇಕಾದ ಯೋಜನೆ  ಆರಿಸಬಹುದು  ಮಕ್ಕಳವಿಮೆ  ವಿಧ್ಯಾಭ್ಯಾಸದ ಸೌಲಭ್ಯದ ಯೋಜನೆ . ಮುಂದಿನಭವಿಷ್ಯದ ನಿಧಿಗಾಗಿ ವಿಮೆ ಮಾಡಿಸಬಹುದು  ಮನೆ ಕಟ್ಟಲು ಇತರೆ ಬಂಡವಾಳಗಳಿಗೆ  ವಿಮೆಯಿಂದಬರುವ ಹಣವು ಅನುಕೂಲವಾಗುವುದು..            *ಇಂದಿನ ಅನಿಶ್ಚಿತತೆಯ ಜೀವನದಲ್ಲಿ ಜೀವವಿಮೆ ಅತಿಮುಖ್ಯ ಪಾತ್ರವನ್ನು ವಹಿಸುತ್ತದೆ...                        *ಜೀವವಿಮಾ ಪಾಲಿಸಿಯನ್ನು ಯಾರು ಪಡೆಯಬಹುದು?-             ಪಾಲಿಸಿಯನ್ನು ಮಾಡಲು ಅರ್ಹನಾಗಿದ್ದಲ್ಲಿ ತನ್ನ ಮೇಲೆ  ಅಥವಾ ತನ್ನ ಹೆಂಡತಿ ಮತ್ತು ಮಕ್ಕಳ ಮೇಲೆ ವಿಮೆ ಮಾಡಿಸಬಹುದು.  ಇತಂಹ ವಿಮೆಯನ್ನು ಕೆಲವು ನಿಯಮಗಳನ್ನು  ಪೊರೈಸಿದಲ್ಲಿ ಮತ್ರ ಪಡೇಯಬಹುದು. ವಿಮಾದಾರನು ಆರೋಗ್ಯಸ್ತನಾಗಿದ್ದು ಸಂಪಾದನೆ ಹೊಂದಿರಬೇಕು. ಈ ನಿಯಮಗಳಿಗನುಸಾರವಾಗಿ ವಿಮೆಯನ್ನು ಕೊಡಲಾಗುವುದು.            ಜೀವ ವಿಮಾ ಕಂಪನಿಯು ಪ್ರತಿಯೊಬ್ಬ ವ್ಯಕ್ತಿಗೂ ಆರ್ಥಿಕ ಭದ್ರತೆಯನ್ನು ನೀಡುವಂತಹ ಒಂದು ಬ್ರಹದಕಾರದ ಕಂಪನಿ ನಾವು ಹೂಡಿಟ್ಟ ಹಣಕ್ಕೆ ಯಾವುದೇ,ರಿತಿಯ ವಂಚನೆ, ಮೋಸವಿಲ್ಲದೆ ಸಂಪೂರ್ಣ ಲಾಭಾಂಶದೊಂದಿಗೆ ಪುನ:ಹ ನಮಗೆ ಹಣವನ್ನು ನೀಡುವಂತಹ ಒಂದು ಕಂಪನಿ ದುಡಿಯಲು ಆರಂಭಿಸಿದಾಕ್ಷಣ ಯಾರು ಶ್ರೀಮಂತರಗುವುದಿಲ್ಲ್. ತಾವು ದುಡಿದಂತಹ ಹಣವನ್ನು ಉತ್ತಮ ಲಭಾಂಶ ನೀಡುವಂತಹ ಭಾರತೀಯ ಜೀವವಿಮಾ ಕಂಪನಿಗೆ ತೊಡಗಿಸುವುದರಿಂದ ಉತ್ತಮ ಲಭಾಂಶ ಸೀಗುತ್ತದೆ,ಹಾಗೂ ಜೀವ ರಕ್ಷಣೆಯೂ ದೊರಕುತ್ತದೆ.ಇದರಿಂದ ನಮ್ಮ ಕುಟುಂಬಕ್ಕೂ ಆರ್ಥಿಕ ನೆರವಾಗುತ್ತದೆ.--ಸರ್ಕಾರದ 5 ಕೋಟಿ ಹಣಕಾಸಿನ ನೆರವಿನಿಂದ ಆರಂಭವಾದ ಈ ಕಂಪನಿ ಇಂದು ಸರಕಾರಕ್ಕೆ 733 ಕೋಟಿ ಹಣವನ್ನು ನಿಡುತ್ತಿದೆ ಹಾಗೂ ಇಂದು ಭಾರತೀಯ ಜೀವ ವಿಮಾನಿಗಮವು 800000ಕೋಟಿ(ಎಂಟು ಲಕ್ಷ ಕೋಟಿ ) ಬಂಡವಾಳವನ್ನು ಹೊಂದಿದೆ.                            ಪ್ರತಿಯೊಂದು ಹಳ್ಳಿ ಪ್ರದೇಶಗಳಲ್ಲಿ ಸಹಭಾರತೀಯಜೀವವಿಮಾ ನಿಗಮ ತನ್ನ ಪ್ರತ್ಯೆಕ    ಶಾಖೆಗಳನ್ನು ಹೊಂದಿದೆ.ಜೀವವಿಮಾ ಕಂತುಗಳನ್ನು ದೇಶದ ಯಾವ ಶಾಖೆಗಳಲ್ಲಾದರು  ಕಟ್ಟಬಹುದು.ಇತಂಹ ಉತ್ತಮ ನೇರವನ್ನು ಈ  ಕಂಪನಿ ನಮಗೆ ನೀಡಿದೆ.**ದುಡಿಯುವ ಶಕ್ತಿ ಇರುವಾಗಲೇ ಗಳಿಸಿದ ಹಣದಲ್ಲಿ ಸ್ವಲ್ಪ ಹಣವನ್ನು ಭಾರತೀಯ ಜೀವ ವಿಮಾ ನಿಗಮಕ್ಕೆ ತೊಡಗಿಸಿದರೆ  ಅದೇ ಹಣ ದುಡಿಯಲು ಶಕ್ತಿ ಇಲ್ಲದಕಾಲದಲ್ಲಿ ನಮಗೆ ನೆರವಾಗುತ್ತದೆ. ನಾವು ಯಾರ ಹಂಗಿನಲ್ಲಿ ಬದುಕ ಬೇಕೆಂಬ ಭಾವನೆ ನಮಗೆ ಇರುವದಿಲ್ಲ  ಯಾರ ಹತ್ತಿರ ಹಣ ಕೇಳುವ ಪರಿಸ್ಥಿತಿ ನಮಗೆ ಓದಗಿ ಬರುವುದಿಲ್ಲ                       * ಜೀವ ವಿಮೆ  ಹಣಜನತೆಯಕಲ್ಯಾಣಕ್ಕೆ. *---------------                                  ಜೀವ ವಿಮಾ ನಿಗಮವು ಸಪ್ಟೆಂಬರ 1, 1956 ರಂದು ಅಸ್ಥಿತ್ವಕ್ಕೆ ಬಂದಿತು .ತನ್ನಲ್ಲಿಯ ಹಣವನ್ನು  ದೇಶದ ಯೋಜಿತ ಆರ್ಥಿಕ ಬೆಳವಣಿಗೆಗೆ ಉಪಯೋಗಿಸುವ ಉದ್ದೇಶ ಧ್ರಡವಾಗಿತ್ತು.  ತನ್ನಲ್ಲಿರುವ ಹಣವನ್ನು ಸಮುದಾಯದ ಸಮಗ್ರ ಏಳಿಗೆಗಾಗಿ ಉಪಯೋಗಿಸುವುದು ಜೀವವಿಮಾನಿಗಮದ ರಾಷ್ಟೀಕರಣದ ಉದ್ದೇಶವಾಗಿತ್ತು. ಈ ಉದ್ದೇಶಗಳ ಈಡೇರಿಕೆಗಾಗಿ ಜೀವ ವಿಮಾನಿಗಮವು ತನ್ನಲ್ಲಿಯ ಬಹುಪಾಲು ಹಣವನ್ನು ಪ್ರಧಾನವಾಗಿ ಸಾಮಾಜಿಕ ಕ್ಷೇತ್ರಕ್ಕಾಗಿಯೆ ಮೀಸಲಿದುತ್ತಿದೆ. ಸಾಮಾಜಿಕ ಕಲ್ಯಾಣಕ್ಕಾಗಿ ಸಾಮಾಜಿಕ ವಲಯದಲ್ಲಿ ಹಣ ಹೂಡಿಕೆಯ ಮೂಲಕ ನಿಗಮವು ಸಮಾಜಿಕ ಏಳಿಗೆಗಾಗಿ ಸಹಕಾರ ನೀಡುತ್ತಿದೆ. 31 ಮಾರ್ಚ 1996ರ ಅಂತ್ಯದಲ್ಲಿ  ನಿಗಮವು ಪ್ರತಿಶತ 84.63 ರಷ್ಟು ಹಣವನ್ನು ಸಾರ್ವಜನಿಕ ವಲಯದಲ್ಲೂ   ಪ್ರತಿಶತ 2.90 ರಷ್ಟು ಸಹಕಾರ ವಲಯದಲ್ಲಿಯೂ ಹಾಗೂ ಪ್ರತಿಶತ 12.47 ರಷ್ಟು ಖಾಸಗಿ ವಲಯದಲ್ಲಿಯೂ ಹಣತೊಡಗಿಸಿತು. ಅದರಂತೆ ವಿದ್ಯುತ್ ವಲಯದಲ್ಲಿ 31 ಮಾರ್ಚ1996ರವರೆಗೆ ರೂ7580ಕೋಟಿ. ದೇಶದ ವಿದ್ಯುತ್ ಯೋಜನೆಗೆ ಧನ ಸಹಾಯ ನೀಡುವಲ್ಲಿ ನಿಗಮವೇ ದೊಡ್ಡದು.    ತಲೆಯಮೇಲೊಂದು ಸೂರು' ಮಾನವನ ಮೂಲಭೂತ  ಅವಶ್ಯಕತೆಗಳಲ್ಲಿ ಒಂದು ಆದ್ದರಿಂಣ್ದ ಗ್ರಹ ನಿರ್ಮಾಣಸಾಲವು ನಿಗಮದ ಪ್ರಮುಖ ಯೋಜನೆಗಳಲ್ಲಿ   ಒಂದಾಗಿದೆ. ಈ ರೀತಿ ಹಲವು ಕ್ಷೇತ್ರದಲ್ಲಿ ಭಾರತೀಯ ಜೀವ ವಿಮಾ ನಿಗಮವು  ಹಣಕಾಸಿನ ನೆರವನ್ನು ನೀಡುತ್ತಿದೆ.     ಶಾಂತಾ ಪಿ ಕೊಲ್ಲೆ. ಇದನ್ನು ಓದಿ ನಿಮ್ಮ ಅನಿಸಿಕೆಗಳನ್ನು ನಿಮ್ಮಪ್ರತಿಕ್ರಿಯೆ ಮೂಲಕ ತಿಳಿಸಿ (ಜೀವವಿಮೆ ಮಾಡಬೇಕೆಂದು ಬಯಸಿದ್ದಲ್ಲಿ ನಮ್ಮ,ದೂರವಾಣಿ ಸಂಖ್ಯೆ. 9980054020 (ಪ್ರವೀಣ) 26671179(080) ಶಾಂತ ಪಿ ಕೊಲ್ಲೆ        or email spkolle@gmail.com.        ಸಂಪರ್ಕಿಸಿ.