ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

’ಒಬಾಮ,’-ಕಪ್ಪು-ಅಮೆರಿಕನೊಬ್ಬನ ಬಿಳಿಧಾಮಕ್ಕೆ ಪಾದಾರ್ಪಣೆ !

ಅಮೆರಿಕದ ೪೪ ನೆಯ ಅಧ್ಯಕ್ಷರಾಗಿ, ಒಬಾಮ ರವರು, ಪ್ರಚಂಡ ಬಹುಮತದಿಂದ ಚುನಾಯಿತರಾಗಿ, ಒಂದು ವಿಕ್ರಮವನ್ನೇ ಸ್ಥಾಪಿಸಿದ್ದಾರೆ. ಅಮೆರಿಕಕ್ಕೆ ಒಂದು ಉಪಯುಕ್ತಬದಲಾವಣೆಯ ಅಗತ್ಯ ಅತಿಹೆಚ್ಚಾಗಿತ್ತು. ಯುದ್ಧ, ಯುದ್ಧ, ಯುದ್ಧಗಳಿಂದ ಝರ್ಝರಿತವಾಗಿದ್ದ ಅಮೆರಿಕನ್ ಸಮಾಜದಲ್ಲಿ ಹಣದುಬ್ಬರ ಬೇರೆ ತಲೆಯೆತ್ತಿ, ಸಹಸ್ರಾರು ಜನರ ಜೀವನ ನಿರ್ವಹಣೆಯ ಮಾರ್ಗಕ್ಕೆ ದಿಕ್ಕು ಕಾಣದಿದ್ದಾಗ, ಒಬಾಮ, ಒಬ್ಬ ಯುಗಪುರುರಷರಂತೆ, ಪ್ರವಾದಿಯಂತೆ, ಅಮೆರಿಕನ್ ಜನತೆಗೆ ಸಾಂತ್ವನ ನೀಡಲು ಬಂದರು.

ಈಗ ಲಭ್ಯವಾಗಿರುವ ಎಲೆಕ್ಷನ್ ತಥ್ಯಗಳು ಅಮೆರಿಕದ ಜನತೆಯ ಮನಸ್ಸಿನಲ್ಲಾಗಿರುವ ಆಘಾತ ಹಾಗೂ ಅಪಾರ ನಿರೀಕ್ಷೆಗಳ ಒಳನೋಟಗಳು ಎಲ್ಲರ ಗಮನೆಸೆಳೆಯುತ್ತಿವೆ. ಮೆಕೇನ್ ಒಬ್ಬ ಮಹಾ ಸಂಘಟಿಕ ನಿಜ. ಆದರೆ ಜಾರ್ಜ್ ಬುಷ್ ತರಹ, ಅವರೂ ಯುದ್ಧಪೀಪಾಸಿಗಳು. ಅವರ ಮಾತಿನಲ್ಲಿ ಅಮೆರಿಕನ್ ಎಕಾನಮಿ ಹೆಚ್ಚುಕಡಿಮೆ ಸರಿಯಾಗಿಯೇ ಇದೆ, ಎನ್ನುವ ಅರ್ಥ ಬರುವಂತೆ ಮಾತನಾಡುತ್ತಿದ್ದರು. ಜಾರ್ಜ್ ಬುಷ್ ರವರ ನೀತಿಗಳನ್ನು ಮುಂದುವರೆಸಿ, ಯುದ್ಧದ ನೀತಿಯನ್ನು ಸಾರುವ ಅವರ ಮಾತಿನ ಎಳೆಗಳು ಜನರಿಗೆ ರುಚಿಸಲಿಲ್ಲ.

ಗಂಟೆ ಹನ್ನೆರಡಾಗಿತ್ತು

ಕತ್ತಲೆಯ ರುದ್ರ ನರ್ತನಕ್ಕೆ ಬೆಳಕು ಸೋತು ಸುಣ್ಣವಾಗಿತ್ತು. ಬೆಳಕನ್ನು ನುಂಗಿ ನೀರು ಕುಡಿದ ಕತ್ತಲೆ ಗೆದ್ದ ಸಂಭ್ರಮದಲ್ಲಿ ಬೀಗುತ್ತಲಿತ್ತು. ಕತ್ತಲೆಯ ಆರ್ಭಟಕ್ಕೆ ತತ್ತರಿಸಿದ್ದ ಬೀದಿ ದೀಪಗಳು ತಮ್ಮ ಕೊನೆ ಉಸಿರು ಬಿಡುತ್ತಿರುವಂತೆ ಸಣ್ಣಗೆ ಉರಿಯುತ್ತಲಿದ್ದವು. ಕತ್ತಲೆಯ ವಿಕಾರ ರೂಪ ಕಂಡು ನಾಯಿಗಳು ಊಳಿಡುತ್ತಿದ್ದವು.

ನಿನ್ನೆಡೆಗೆ ,,,

ಬೇಕು ಬದುಕಲಿ ಸಾಕು ಅನಿಸುವಷ್ಟು ಮೌನ
ಬೇಕು ಅನಿಸುವಷ್ಟು ಮಾತು
ಹಿಡಿ ಮುಡಿಯಲಿ ಹಿಡಿಯಲಾರದಷ್ಟು ಪ್ರೀತಿ.

ಆದರೆ ಏಷ್ಟು ಜನರಿಗೆ ಸಿಗುತ್ತೆ? ಇವೆಲ್ಲಾ , ಮೌನ ಬೇಕಾದವರಿಗೆ ಮಾತು ಹೆಚ್ಚು, ಮಾತು ಬೇಕಾದವರಿಗೆ ಉಸಿರು ಗಟ್ಟಿಸುವ ಮೌನ, ಇನ್ನು ಪ್ರೀತಿ ಹಿಡಿಯೂ ಇಲ್ಲ, ಮುಡಿಯೂ ಇಲ್ಲ.

ಕರ್ನಾಟಕ ಸಂಗೀತದಲ್ಲಿ ಪಿಟೀಲು

ಕರ್ನಾಟಕ ಸಂಗೀತದಲ್ಲಿ ಪಿಟೀಲು
ಪಿಟೀಲು ವಾದ್ಯವನ್ನು ಕರ್ನಾಟಕ ಸಂಗೀತಕ್ಕೆ ತಂದ ಕೀರ್ತಿ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಕಿರಿಯ ಸೋದರರಾದ ಶ್ರೀ ಬಾಲುಸ್ವಾಮಿಯವರದ್ದು ಎಂದು ಹಂಸಾನಂದಿಯವರು ತಿಳಿಸಿದಾಗ ಅನಿಲ್ ಅವರು ಈ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿ ಕೊಡಲು ಸಾಧ್ಯವೇ ಎಂದು ಕೇಳಿದ್ದರು. ಅದಕ್ಕೆ ಹಂಸಾನಂದಿಯವರು ಶ್ರೀ ಬಾಲುಸ್ವಾಮಿಯವರ ಬಗ್ಗೆ ವಿವರವಾಗಿ ಬರೆಯಬಹುದೇನೋ ಎಂದು ನಾನೂ ಸಹಾ ಆಸೆಯಿಂದ ಕಾಯುತ್ತಿದ್ದೆ. ಆದರೆ ಅವರ ಕೆಲಸಗಳ ಹೆಚ್ಚಳದಲ್ಲಿ ಅವರಿಗೆ ಸಮಯವಾಗಲಿಲ್ಲವೋ ಏನೋ ಅವರು ಈವರೆಗೂ ಬರೆದಿಲ್ಲ. ಸಧ್ಯಕ್ಕೆ ಅನಿಲ್ ಅವರ ಕುತೂಹಲ ತಣಿಸಲು ನನಗೆ ತಿಳಿದಿರುವಷ್ಟು ತಿಳಿಸೋಣ ಎನ್ನಿಸಿತು. ನಂತರ ಹಂಸಾನಂದಿಯವರಿಂದ ವಿವರವಾಗಿ ಇನ್ನಷ್ಟು ವಿಚಾರ ತಿಳಿದುಕೊಳ್ಳೋಣ.
ಹಂಸಧ್ವನಿ ರಾಗವನ್ನು ಸಂಗೀತ ಜಗತ್ತಿಗೆ ಕೊಟ್ಟ ರಾಮಸ್ವಾಮಿ ದೀಕ್ಷಿತರಿಗೆ ಮುತ್ತುಸ್ವಾಮಿ ದೀಕ್ಷಿತರು, ಚಿನ್ನಸ್ವಾಮಿ ದೀಕ್ಷಿತರು ಹಾಗೂ ಬಾಲುಸ್ವಾಮಿ ದೀಕ್ಷಿತರು ಎಂಬ ಮುತ್ತಿನಂತ ಮೂರು ಗಂಡು ಮಕ್ಕಳೂ ಬಾಲಾಂಬಿಕೆ ಎಂಬ ಮುದ್ದಿನ ಮಗಳೂ ಇದ್ದರು. ಅವರಲ್ಲಿ ತನ್ನ ತಂದೆಯ ಕೀರ್ತಿಯನ್ನೇ ಮರೆಮಾಚುವಷ್ಟು ಕೀರ್ತಿ ಸಂಪಾದಿಸಿದವರು ಮುತ್ತುಸ್ವಾಮಿ ದೀಕ್ಷಿತರು. ಅವರ ಕಿರಿಯ ಸೋದರರೂ ಸಹಾ ಪ್ರತಿಭಾವಂತರೇ.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ‘ಸ್ವರಾಧಿರಾಜ್’ ಭೀಮಸೇನರಿಗೆ ‘ಭಾರತರತ್ನ’ ಗೌರವ.

೧೯೩೩, ಆಗಸ್ಟ್ ೧೫ ರಿಂದ ೨೦ ಹನ್ನೆರಡು ವರ್ಷದ ಬಾಲಕ ಗದುಗಿನ ಹೊಂಬಳದಿಂದ ಮನೆ ಬಿಟ್ಟು ಓಡಿಹೋದ.

ಮೈಸೂರಿನಲ್ಲಿ ಎಂ.ಎ. ಪದವಿ ಕಲೀಲಿಕ್ಕಿದ್ದ ತಂದೆ ಗುರುರಾಜರಿಗೆ ತಾರು ಹೋಯಿತು. ಅವರ ಸಹೋದರ ಗೋವಿಂದ ಈ ಟೆಲಿಗ್ರಾಂ ಕೊಟ್ಟಿದ್ದರು. ಇದೆ ಟೆಲಿಗ್ರಾಂ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೇಕಬ್ ಅವರಿಗೆ ತೋರಿಸಿ ರಜೆ ಪಡೆದು ಊರಿಗೆ ಓಡಿದರು ತಂದೆ.

ಇವರನ್ನು ನೋಡುತ್ತಲೇ ದು:ಖದ ಕಟ್ಟೆ ಒಡೆಯಿತು ತಾಯಿಗೆ. ‘ಊಟ, ತಿನಿಸಿನ ಮ್ಯಾಲೆ ಸಿಟ್ಟು ಮಾಡಿಕೊಂಡು, ಅನ್ನಕ್ಕ ತುಪ್ಪ ಬಡಿಸಲಿಲ್ಲ ಅನ್ನೋದನ್ನ ನೆವಾ ಮಾಡಿಕೊಂಡು ಊರು ಬಿಟ್ಟು ಹೋಗ್ಯಾನ’ ಗಳಗಳನೇ ಅಳುತ್ತ ತಾಯಿ ಅಲವತ್ತುಕೊಂಡರು.

ಒಳ್ಳೆಯ ಪೌಷ್ಠಿಕ ಆಹಾರದ ರೂಢಿಯಿದ್ದ ಹುಡುಗನಿಗೆ ಮೊದಲ ಪಲಾಯನ ಬಹಳ ತೊಂದರೆದಾಯಕ ಆಗಿತ್ತು. ಮುಂಬೈ ತಲುಪಿದಾಗ ಅವನ ಕಿಸೆಯಲ್ಲಿ ಒಂದು ದುಡ್ಡು ಇರಲಿಲ್ಲ! ಕನ್ನಡ ಭಾಷೆ ಬಿಟ್ಟರೆ ಬೇರೆ ಭಾಷೆ ಬರುತ್ತಿರಲಿಲ್ಲ. ಮುಂಬೈ ಅಂತಹ ಮಹಾನಗರಿಯಲ್ಲಿ ರಸ್ತೆಯ ಬದಿಗೆ ನಿಂತು ಅವನ ಹಾಡು ಕೇಳುವಷ್ಟು ಪುರುಸೊತ್ತು ಅಂದು ಕೂಡ ಯಾರಿಗೂ ಇರಲಿಲ್ಲ.

ಉತ್ತರ ಧ್ರುವದಲ್ಲಿ ಇರುವ ಮನೆಯಲ್ಲಿ ಕರಡಿ.

ಈ ವಾರದ ತರಂಗದಲ್ಲಿ ಒಂದು ಮೋಜಿನ ಪ್ರಶ್ನೆ ಬಂದಿದೆ. ಅದು ಹೀಗಿದೆ.

ಒಂದು ಮನೆಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಬಾಗಿಲುಗಳಿವೆ. ಈ ಎಲ್ಲಾ ಬಾಗಿಲುಗಳೂ ದಕ್ಷಿಣ ದಿಕ್ಕಿಗೇ ತೆರೆಯುತ್ತದೆ. ಆ ಮನೆಯ ಒಳಗೆ ಒಂದು ಕರಡಿ ಇದೆ. ಅದರ ಬಣ್ಣ ಯಾವುದು?

ವಾಡೆಯ ನೆನಪಲ್ಲಿ.....

ಎಲ್ಲರ ಬಾಲ್ಯಕ್ಕೂ ಒಂದೊಂದು ಕಥೆ ಇರುತ್ತದೆ. ನಾ ನಮ್ಮ ವಾಡೆಯಲ್ಲಿ ಕಳೆದ ಆ ಗಳಿಗೆಗಳು ಚಿರನೂತನ ನೆನಪುಗಳು.

ಎಲ್ಲಕ್ಕೂ ಮೊದಲು ನೆನಪಿಗೆ ಬರುವುದು ಹಣಮುಕಾಕಾನ ಕಥೆಗಳು... ಹಾಗೆಂದು ಆ ಕಥೆಗಳಲ್ಲಿ ನೀತಿ ಇರಲಿಲ್ಲ , ಉಪದೇಶ ಇರಲಿಲ್ಲ. ಬದಲು ಅವುಗಳಲ್ಲಿ ಇದ್ಡಿದ್ದು ಭರಪೂರ ಮನರಂಜನೆ. ನಾವು ಗಂಡು ಹೆಣ್ಣು ಸೇರಿ ಸುಮಾರು ಹತ್ಟು ಜನರ ಗುಂಪು
ಸಂಜೆಯಾಯಿತೆಂದರೆ ಅಂಗಳದಲ್ಲಿ ಚಾಪೆ ಹಾಸಿ ಒಂದು ಟಕ್ಕೆ ಇಟ್ಟು ಕೊಂಡು ಅದಕ್ಕೆ ಒರಗಿ ಅವ ಕುಳಿತನೆಂದರೆ ಅವನ ಸುತ್ತ್ ನಾವು
ಮುಕುರುತ್ತಿದ್ದೆವು. ಆ ಸಂಜೆಗಳಲ್ಲಿ ಏನೆಲ್ಲ ಇತ್ತು ಕಾಂಚನ ಳ ಧ್ವನಿಯೊಳಗಿಂದ " ಜೋಗಿ ಮನೆಗೆ ಬಂದ " ಈ ಹಾಡು ದಿನವೂ ಕೇಳಿದರೂ ತ್ರುಪ್ತಿ ಇರುತ್ತಿರಲಿಲ್ಲ.... ಕಾಂಚನಳ ಧ್ವನಿ ಇನ್ನೂ ಗುಂಯ್ ಗುಡುತಿದೆ.

"ಬದುಕೋ ಆಸೇನೆ ಹೊರಟು ಹೋಗಿದೆ"

"ಬದುಕೋ ಆಸೇನೆ ಹೊರಟು ಹೋಗಿದೆ"

ಹಾಗಂತ ಆ ಹುಡುಗ ನನ್ನ ಮುಂದೆ ಕಣ್ಣೀರಿಡುತ್ತಿದ್ದರೆ ನನಗೆ ನನ್ನ ಸಾಯಬೇಕೆನಿಸಿದ ಕ್ಷಣದ ಹಳೆಯ ನೆನಪು.

ಆತ ನಮ್ಮ ವಿದ್ಯಾರ್ಥಿ ನಮ್ಮಲ್ಲ್ಲಿ ಬಿಸಿಎ ಮಾಡುತ್ತಿದ್ದಾನೆ ಕೊನೆಯ ವರ್ಷದಲ್ಲಿದ್ದಾನೆ.

ಬರಾಕ್ ಒಬಾಮಗೆ ಐತಿಹಾಸಿಕ ವಿಜಯ

ಮೊಟ್ಟ ಮೊದಲ ಬಾರಿಗೆ ಅಮೇರಿಕಾ ಜನತೆ ಅಫ್ರಿಕನ್ ಅಮೇರಿಕನೊಬ್ಬರನ್ನ ತಮ್ಮ ಅಧ್ಯಕ್ಷರನ್ನಾಗಿ ಮಾಡಿ ಹೊಸ ಇತಿಹಾಸವನ್ನ ಬರೆದಿದ್ದಾರೆ. 

ಬರಾಕ್ ಒಬಾಮ ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನೀಡಿದ ಈ ಭಾಷಣ ಬಹಳಷ್ಟನ್ನ ಹೇಳತ್ತೆ.