ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭಾರತ, ಹಿಂದಿ ಮತ್ತು ನಾವು

ಭಾರತದ ಸಂಸ್ಕೃತಿಯೊಂದಿಗೆ ಜೀವನದಲ್ಲಿ ನಾವು ಎಷ್ಟೊಂದು ಗುರುತಿಸಿಕೊಂಡಿದ್ದೇವೆ ಅಲ್ಲವೇ. ಬೆಳಿಗ್ಗೆಯಿಂದ ರಾತ್ರಿಯವರೆಗೆ ನಮ್ಮ ಆಚಾರ ವಿಚಾರ ಉಡುಗೆ ತೊಡುಗೆಗಳು ಆಹಾರ ಇತ್ಯಾದಿಯಾಗಿ ಎಲ್ಲವೂ ಒಂದು ನಿರ್ಧಿಶ್ಟ ಸಂಸ್ಕೃತಿಗೊಳಪಟ್ಟಿವೆ.

ಭಾಷೆಯ ಕಲಿಕೆ

(ಇಸ್ಮಾಯಿಲ್ ಅವರು ಬರೆವ ಬದುಕಿನ ತಲ್ಲಣ ದಲ್ಲಿ ಇಂಗ್ಲಿಷ್ ಕಲಿಕೆ - ಪಠ್ಯ ಪುಸ್ತಕಗಳ ಬಗ್ಗೆ ಒಂದು ಬರಹವನ್ನು ಬರೆದಿದ್ದರು. ಅಲ್ಲೊಂದು ಟಿಪ್ಪಣಿ ಹಾಕಿದಮೇಲೆ ಅದನ್ನು ಇಲ್ಲೂ ಚರ್ಚಿಸಬಹುದೆನ್ನಿಸಿ ಬರೆಯುತ್ತಿದ್ದೇನೆ - ಹಂಸಾನಂದಿ)

ಕೆಲವು ದ್ವಿಪದಿಗಳು

ಬಾಯಾರಿ ಬಂದಿಹೆನು ಬಲುದೂರದಿಂದ
ಸ್ವಲ್ಪವಾದರೂ ಪ್ರೀತಿಯ ಹನಿಸು ಕಂಗಳಿಂದ

ದಾರಿಯಲ್ಲೆಲ್ಲ ಕಲ್ಲು, ಮುಳ್ಳು, ಬಿಸಿಲು
ನೀ ನೆನಪಾದೊಡನೆ ಹೂ, ಮಕಮಲ್ಲು, ಬೆಳದಿಂಗಳು

ಮೊಗ ತುಂಬಿದ ಕೇಶರಾಶಿಯ ಸ್ವಲ್ಪ ಓಸರಿಸು
ಜಗವೆಲ್ಲ ತುಂಬಿಹುದು ಕತ್ತಲೆಯ ಮುನಿಸು

ಹೊಳೆವ ನಿನ್ನ ಮೊಗವನೆತ್ತಲು ಸಂಜೆಯಲಿ
ಸೂರ್ಯ ಕೂಡ ಮಂಕಾದ ಪಡುವಣದಲ್ಲಿ

ಸಾವು ಬಂದರೂ ನನಗೆ ಚಿಂತೆಯಿಲ್ಲ

ಪಕ್ಷಾಂತರ ಇರಲಿ! ಮತಾಂತರ ಬೇಡ!! ಯಾಕೆ?

ಮಾನವ ಹುಟ್ಟಿದಾಗಿನಿಂದ ನಡೆಯುತ್ತಿರುವ ಮತಾಂತರದ ಬಗ್ಗೆ ಈಗ “ಚರ್ಚ್ ಗಳ ಮೇಲಿನ ದಾಳಿ” ನಡೆದಾಗಿನಿಂದ ಚರ್ಚೆಯಾಗುತ್ತಿದೆ. ಇದರ ಪರ-ವಿರೋಧ ಅಭಿಪ್ರಾಯಗಳನ್ನು ಕೆಲವು ಜನಪ್ರಿಯ ಲೇಖಕರು ವ್ಯಕ್ತಪಡಿಸುತ್ತಿದ್ದಾರೆ.

ಒಂಟಿ ನಾನು ಎಂಬ ಭಾವ

ಒಂಟಿ ನಾನು ಎಂಬ ಭಾವ
ಹಿಂಡುತಿಹುದು ನನ್ನ ಜೀವ
ಬಿಕ್ಕುತಿಹುದು ನನ್ನ ಬದುಕು ಕಾರ್ಮೋಡ ಕವಿದು
ಬಿಕ್ಕುತಿಹುದು ನನ್ನ ಬದುಕು ಕಾರ್ಮೋಡ ಕವಿದು

ಸೋ ಎಂದು ಸುರಿದ ಮಳೆಯಲ್ಲಿ ನೆನೆವಾಗ
ಕಣ್ಣ ಹನಿಯು ಮಳೆಹನಿಯಾಗಿ ತುಟಿಮೇಲೆ ಬಂದಾಗ
ನಿನ್ನ ನೆನಪು ಮತ್ತೆ ಕಾಡುತಿಹುದು
ಎನ್ನ ಮನವು ಮತ್ತೆ ಕೇಳುತಿಹುದು
ನಿನ್ನ ಹೆಸರು... ತುಟಿಮೇಲೆ ಮತ್ತೆ ಬಂದಿಹುದು

ಆಕೆಗೆ ಡಿಕ್ಕಿ ಹೊಡೆದಿದ್ದೆ !

ತುಂಬಾ ದಿನ ಆಯ್ತು ನಿಮ್ಮ ಜೊತೆ ಮಾತನಾಡಿ. ಕೆಲಸದ ಒತ್ತಡಗಳು, ಹಬ್ಬದ ಗೌಜಿ ಎಲ್ಲಾ ಮುಗಿದು ಒಂದಿಷ್ಟು ನಿರುಮ್ಮಳನಾಗಿದ್ದೇನೆ. ಹಾಗಾಗಿ ಈಗ ಮತ್ತೆ ಸಂಪದದ ಅಂಗಳಕ್ಕೆ ಬಂದಿದ್ದೇನೆ. ನಾನು ಈಗ ಹೇಳ ಹೊರಟಿರುವುದು ಮತ್ತದೇ ಬಾಲ್ಯದ ಬಗ್ಗೆ. ಅದಕ್ಕೆ ಕಾರಣವೂ ಇಲ್ಲದಿಲ್ಲ.