ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿಜಯದಾಸರು

ಪ್ರಿಯ ಸ್ನೇಹಿತರೆ, ವಿಜಯದಾಸರ ಬಗ್ಗೆ ಒಂದು ಲೇಖನ ಹರಿದಾಸ ಸಂಪದದಲ್ಲಿ ಹಾಕಿದ್ದೇನೆ. ಅವರು ಮಹಾನ್ ವಾಗ್ಗೇಯಕಾರರು, ಪವಾಡಪುರುಷರು. ತಮ್ಮ ಪವಾಡ ಶಕ್ತಿಯನ್ನು ಲೋಕ ಕಲ್ಯಾಣಕ್ಕಾಗಿ ಉಪಯೋಗಿಸಿದರು. ಅವರ ರಚನೆಗಳೂ ಸಹಾ ದಿನನಿತ್ಯದ ಜನಜೀವನದ ಹಾದಿ ಉತ್ತಮವಾಗಿಸುವಂತಹಾ ವಿಚಾರಪೂರಿತವಾದವು. ರಾಮಾಯಣ ಮಹಾಭಾರತದ ವಿಚಾರಗಳೂ ಇವೆ.

ಕೊಪ್ಪಳಕ್ಕೆ ಬರುವವರು ದೊಣ್ಣೆ ತನ್ನಿ!

ಗೆಳೆಯನೊಬ್ಬನ ಮದುವೆಗೆಂದು ಬೆಂಗಳೂರಿನಿಂದ ಬಂದಿದ್ದ ಮಿತ್ರನೊಬ್ಬ ಮುಂಜಾನೆ ಅವಸರದಿಂದ ನನ್ನನ್ನು ಎಬ್ಬಿಸಿ, ‘ನೋಡಲ್ಲಿ, ಗಂಡಸರು, ಹೆಂಗಸರು, ಮಕ್ಕಳು ಕೋಲು ಹಿಡಿದುಕೊಂಡು ಕೋಟೆಯ ಕಡೆ ಹೋಗುತ್ತಿದ್ದಾರೆ’ ಎಂದು ಅಚ್ಚರಿಯ ಧ್ವನಿಯಲ್ಲಿ ಹೇಳಿದ.

‘ಸಂಡಾಸ್‌ಗೆ ಹೊರಟಿರಬೇಕು ಬಿಡು ಮಾರಾಯ’ ಎಂದು ಬೇಸರದಿಂದ ಹೇಳಿ ನಾನು ಮತ್ತೆ ಮುಸುಗೆಳೆದುಕೊಂಡೆ.

‘ಏನು? ಕಕ್ಕಸ್‌ಗೆ ಕೋಲು ಹಿಡಿದುಕೊಂಡು ಹೋಗ್ತಾರಾ?’ ಗೆಳೆಯ ಆಶ್ಚರ್ಯಚಕಿತನಾದ.

‘ಇನ್ನೊಂದ್ ತಾಸಿನಲ್ಲಿ ನಿನಗೇ ಗೊತ್ತಾಗುತ್ತೆ’ ಎಂದು ಹೇಳಿ ನಾನು ಸುಮ್ಮನಾದೆ.

ನಮ್ಮವರ ಗೆಳೆತನ

ಸಣ್ಣವರು ಚಿಕ್ಕವರು ಪುಟ್ಟವರು ಎಂಥವರೂ
ನಮ್ಮವರು ಎಂದಾಗ ಗೆಳೆತನವ ಬಿಡದಿರು!
ಹೊಟ್ಟನ್ನು ತೆಗೆದು ಅಕ್ಕಿಯನು ಮಾಡಿರುವ
ಬತ್ತವದು ಮೊಳೆಯದೆಂಬುದ ಮರೆಯದಿರು!!

ಸಂಸ್ಕೃತ ಮೂಲ (ಹಿತೋಪದೇಶದ ಮಿತ್ರಲಾಭ ಭಾಗದಿಂದ) :

ದೂರದ ಬೆಟ್ಟ

ನಾನು ೧೩ ವರ್ಷದಿಂದ ಪರ ದೇಶದಲ್ಲಿದ್ದು ಸಾಕಾಗಿದೆ. ವಾಪಸ್ಸು ಹೋಗುವ ಹಾಗಿಲ್ಲ. ಇಲ್ಲಿಗೆ ಬಂದು degree ಗಳ ಪಡೆದು, ಇಲ್ಲಿಯವರ ಜೊತೆ compete ಮಾಡಿ ಕೆಲಸದಲ್ಲಿ ಮುಂದೆ ಬರಲು ಪ್ರಯತ್ನಿಸುತ್ತಾ ತಾಯಿಯೂ ಆಗಿ ನನ್ನ ಮಗುವನ್ನು ನಾನೆ ಬೆಳೆಸಿ... ರಾಮ ರಾಮ ..
ಈ ವನವಾಸ ಸಾಕಪ್ಪಾ.

ಭೈರಪ್ಪ, ಫ್ರೊ. ರಾಮದಾಸ್, ಮತ್ತು ಒಬಾಮ.

ಅಮೆರಿಕದಲ್ಲಿನ ಅಧ್ಯಕ್ಷೀಯ ಚುನಾವಣೆಗೆ ಕೇವಲ ಒಂದು ದಿನ ಮಾತ್ರ ಬಾಕಿಯಿದೆ. ಒಬಾಮ ಅಧ್ಯಕ್ಷನಾಗಿ ಚುನಾಯಿತನಾಗುವುದು ಈಗ a foregone conclusion. ಈ ಸಮಯದಲ್ಲಿ ಒಬಾಮ ಗೆಲ್ಲದಿದ್ದರೆ ಅದು ಅಮೆರಿಕದ ರಾಜಕೀಯ ಚರಿತ್ರೆಯಲ್ಲಿ ಒಂದು ಅತಿದೊಡ್ಡ upset ಆಗಲಿದೆ. ಅದು ಆಗುವ ಸಂಭವ ಕಮ್ಮಿ. ಹಾಗಾಗಿಯೇ, ಬಹಳಷ್ಟು ಪತ್ರಕರ್ತರು ಈಗಾಗಲೆ ಒಬಾಮ ಗೆದ್ದಿದ್ದಾನೆ ಎಂದೇ ಭಾವಿಸಿಬಿಟ್ಟಿದ್ದಾರೆ.

ಕಳೆದ ವರ್ಷದ ಮಾರ್ಚ್‌ನಲ್ಲಿ ಗೆಳೆಯ ಪ್ರೊ. ಪೃಥ್ವಿ ದತ್ತ ಚಂದ್ರ ಶೋಭಿ ಮತ್ತು ನಾನು ಓಕ್‌ಲ್ಯಾಂಡ್‌ನಲ್ಲಿ ಬರಾಕ್ ಒಬಾಮನ ಭಾಷಣ ಕೇಳಲು ಹೋಗಿದ್ದೆವು. ಅವನ ಮಾತು ಕೇಳಿಕೊಂಡು ಬಂದ ನಂತರ ನನಗಿದ್ದ ಒಂದು ಸಂಶಯ, "ಈ ದೇಶದ ಜನ ಒಬ್ಬ ಕಪ್ಪು ಮನುಷ್ಯನನ್ನು ಅಧ್ಯಕ್ಷನನ್ನಾಗಿ ಆರಿಸಲು ಸಿದ್ಧವಾಗಿದ್ದಾರೆಯೇ?" ಅಂತ. ಹಾಗಾಗಿಯೆ ನನಗೆ ಮೊದಲಿನಿಂದಲೂ ಒಬಾಮಾನ ಗೆಲ್ಲುವಿಕೆ ಬಗ್ಗೆ ಸ್ವಲ್ಪ ಸಂಶಯ ಇತ್ತು. ಏನೇ ಹೇಳಿ, ಸದ್ಯದ ಸವಾಲಿಗೆ ಸನ್ನದ್ಧವಾಗುವ ಈ ದೇಶದ ಜನರ ತಾಕತ್ತು ನಿಜಕ್ಕೂ ಬೆರಗು ಮೂಡಿಸುತ್ತದೆ. ಅಮೆರಿಕ ಯಾವ ಮಟ್ಟದಲ್ಲಿ Transform ಆಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಕೆಳಗಿನ ಲೇಖನ ಸಹಕಾರಿಯಾಗುತ್ತದೆ ಎಂದು ಭಾವಿಸುತ್ತೇನೆ.

ಹಾಗೆಯೆ, ನನ್ನ ಯುವಮಿತ್ರರು ಒಂದು ಆದರ್ಶದ ಕನಸನ್ನು ಧೈರ್ಯದಿಂದ ಕಾಣಲು, ತಮಗಿಷ್ಟವಾದ ಯುವಕ-ಯುವತಿಯನ್ನು ಭವಿಷ್ಯ ಮತ್ತು ಭೂತದ ಯಾವೊಂದು ಅಂಜಿಕೆ ಮತ್ತು ಭಯ ಇಲ್ಲದೆ ಉತ್ಕಟವಾಗಿ ಪ್ರೇಮಿಸಲು ಮತ್ತು ಮದುವೆಯಾಗಲು, ಜನಾಂಗೀಯ ದ್ವೇಷವನ್ನು ಪ್ರೇರೇಪಿಸುವ ಸಮಾಜದ್ರೋಹಿಗಳ ಚಿಂತನೆಗಳನ್ನು ಭಸ್ಮ ಮಾಡಲು, ಈ ಕೆಳಗಿನ ಲೇಖನ ಪ್ರೇರೇಪಿಸಲಿ ಎಂದು ಆಶಿಸುತ್ತೇನೆ. ಒಬಾಮಾನ ಯಶಸ್ಸು ಅಂತರ್ಜಾತಿ ವಿವಾಹಕ್ಕೆ ಸ್ಫೂರ್ತಿಯಾಗಲೆಂದೂ ಬಯಸುತ್ತೇನೆ.

ಕನ್ನಡ ಚಲನಚಿತ್ರಗಳು

ಕಳೆದ ರಾಜ್ಯೋತ್ಸವದಂದು ಕನ್ನಡದ ಚಲನಚಿತ್ರಗಳಿಗೆ ಕನ್ನಡದ ಹೆಸರಿದ್ದರೆ ಮಾತ್ರ ಚಿತ್ರವನ್ನು ನೋಡುತ್ತೇನೆ ಎಂದು ನಿರ್ಧರಿಸಿದ್ದೆ. ಅದರಂತೆ ನಡೆದುಕೊಳ್ಳುತ್ತಿದ್ದೇನೆ. ಆದರೆ ಕಳೆದ ಶನಿವಾರ ಬುದ್ದಿವಂತ ಚಲನ ಚಿತ್ರವನ್ನು ನೋಡಿದೆ. ಈ ಚಿತ್ರದ ಕಾಲು ಭಾಗ ತೆಲುಗಿನಲ್ಲಿದೆ. ಒಂದು ಹಾಡು ಕೂಡ ತೆಲುಗಿನಲ್ಲಿದೆ. ನನಗೆ ಕನ್ನಡ ಬಿಟ್ಟರೆ ಬೇರೆ ಭಾಷೆ ಬರದು.

ಮತಾಂತರವೇ??? ಹೌದಲ್ಲ!

’ಸನಾತನ ಧರ್ಮ’ವಿದು,
ಸಂತರ ಲೆಕ್ಕವಿಲ್ಲ,
ಸಿದ್ಧಾಂತಗಳೇ ಹಲವು...
ಇದಕೆ ’ಸತ್ಯ’ವ
ಜೀರ್ಣಿಸಿಕೊಳ್ಳಲಾಗದೇನು?
ಇನ್ನು ಮುಂದೆ, ದೇವರುಗಳ ಸಂಖ್ಯೆ
ಮುಕ್ಕೋಟಿ ಮತ್ತು ಒಂದು...

~~~*~~~

ಆರತಿಯ ಮಾಡಿದರು,
ರಾಜ-ಪೋಷಾಕ ಹಾಕಿ
ರಥವ ಎಳೆದರು...

’ಸತ್ಯ’ವನರುಹಲು,

ಮುದ್ರಿತ ಪ್ರತಿಗೆ ವಿದಾಯ ಹೇಳಲಿರುವ ಪತ್ರಿಕೆ

ಕ್ರಿಶ್ಚಿಯನ್ ಸಯನ್ಸ್ ಮಾನಿಟರ್ ಪತ್ರಿಕೆ ಮುಂದಿನ ಎಪ್ರಿಲ್ ನಂತರ ಅಂತರ್ಜಾಲದ ಮೂಲಕ