ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಗುವುದು ಅಷ್ಟು ಕಷ್ಟವೇ?

‘ನಗುವುದು
ಅಷ್ಟು ಕಷ್ಟವೇ?’ ಎಂಬ ಪ್ರಶ್ನಗೆ ಉತ್ತರಿಸುವ ಮೊದಲು ಬೆಂಗಳೂರಿನ ಅಷ್ಟೂ ಲಾಫಿಂಗ್
ಕ್ಲಬ್ಬುಗಳ ಪ್ರತಿದಿನ ಬೆಳಗಿನ ಸರ್ಕಸ್ಸುಗಳನ್ನು, ಟಿವಿ ಚಾನಲ್‌ಗಳಲ್ಲಿನ ಪ್ರೈಂ ಟೈಮ್
ಕಾಮಿಡಿ ಕಿಲಾಡಿಗಳ ಎಲ್ಲಾ ಸಾಹಸಗಳನ್ನು ಒಮ್ಮೆ ಅವಲೋಕಿಸಬೇಕು. ಹೌದು! ನಗುವುದು
ನಿಜಕ್ಕೂ ಕಷ್ಟ ಇಲ್ಲವಾದರೆ ಮನುಷ್ಯ ಅದಕ್ಕಾಗಿ ಇಷ್ಟೋಂದು ಖರ್ಚು ಮಾಡುತ್ತಿದ್ದನೇ?

"ಚಿತ್ರನ್ನಾಕ್ಕು ಸಂಚಕಾರ ತಂದ ಲೆಹಮನ್ ಬ್ರದರ್ಸ್!!"

ಈ ತಲೆಸಾಲು ಸರಿ ಇಲ್ಲ , ಚಿತ್ರಾನ್ನಕ್ಕೆ ಯಾರು ಟೊಮೇಟೊ ಹಾಕೋದಿಲ್ಲ ಅಂತ ಗೆಳತಿ ಸವಿತಾ ಅವರು ಸಾರಿ ಸಾರಿ ಹೇಳಿದ್ರು ನಾನು ಕೇಳಿಲ್ಲ. ನಮ್ಮ ಚಿತ್ರಾನ್ನದ ವಿಶೇಷ ಅಂದ್ರೆ ಟೊಮೇಟೊ ಹಾಕೋದೆ ರೀ ಮೇಡಂ ಅಂತ ಹೇಳಿ ಬರೀತಿದ್ದೀನಿ.

ವಾಮನ ಮೂರ್ತಿಯ ಬಗ್ಗೆ ಅಸ್ಟೇ ಚಿಕ್ಕ ಡೌಟು!

ಪುರಾಣದಲ್ಲೆಲ್ಲೂ ’ಬಲಿ’ ಒಬ್ಬ ಕೆಟ್ಟ ರಾಕ್ಸಸನಾಗಿದ್ದ ಅಂತ ಕೇಳಿಲ್ಲ. ಆತನು ರಾಕ್ಸಸ ಕುಲದವ, ಆದರೆ ತುಂಬ ಒಳ್ಳೆಯ ಚಕ್ರವರ್ತಿ ಆಗಿದ್ದ, ಅಂತಾ ಇದೆ. ಹಾಗಿದ್ದರೆ, ಈತನನ್ನು ಪಾತಾಳಕ್ಕೆ ಅಟ್ಟುವ ಅವಶ್ಯಕತೆ ಏನಿತ್ತು? ಅದೂ ಕೂಡ ಅದಕ್ಕಾಗಿಯೇ ಸ್ವತ ವಿಸ್ಣು ದೇವರು ಅವತಾರ ಎತ್ತುವದೇನಿತ್ತು?

ನೀರ ನಿಶ್ಚಿಂತೆಯಲ್ಲಿ ‘ಬ್ಲಾಗೀದಾರರು’!

‘ಸಮೂಹ’ ಸಂವಹನಕ್ಕಿಂತ ‘ಸಮುದಾಯ’ ಕೇಂದ್ರಿತ ಸಂವಹನಕ್ಕೆ ಈಗ ಎಲ್ಲಿಲ್ಲದ ಬೇಡಿಕೆ. ಸಂತೆಯಲ್ಲಿ ಕಲ್ಲು ಹೊಡೆಯುವ ಬದಲು, ಜಾತ್ರೆಯಲ್ಲಿ ಗುರಿ ಇಟ್ಟು ಭಕ್ತನಿಗೇ ಬೀಸುವ ಕಲ್ಲಿದ್ದಂತೆ! ಗುರಿ ತಲುಪಿದರೆ ಒಂದೋ..ಎರಡೋ..ಹಣ್ಣು. ಗುರಿ ತಪ್ಪಿದರೆ..ಒಂದು ಕಲ್ಲು ಹೋಯಿತಷ್ಟೇ?

ಬಡವನಾರ್?

ಬಡವನಾರ್? ಮಡದಿಯೊಲವಿನ ಸವಿಯನರಿಯದವನು |
ಹುಡುಗರಾಟದಿ ಬೆರೆತು ನಗಲರಿಯದವನು ||
ಉಡುರಾಜನೋಲಗದಿ ಕುಳಿತು ಮೈಮರೆಯದವನು |
ಬಡಮನಸೆ ಬಡತನವೊ | ಮರುಳಮುನಿಯ ||

ನಿರ್ಧಾರ

ಅಂಗೈಗೆ ಅಂಗೈಯ ಮಸೆದು

ಹುಟ್ಟಿದ ಶಾಖವ ಕಣ್ಣಿಗೊತ್ತಿಕೊಳ್ಳುವ ಅಪ್ಪ

ಬೆರಳಿಗೆ ಬೆರಳ ಹೊಸೆದು

ಉರಿಯುವ ಸೂರ್ಯನನೂ ದಿಟ್ಟಿಸುತ್ತಾನೆ.......

ಐವತ್ತನೆ ಕಥೆ

ರಾತ್ರಿಯ ನೀರವತೆಯನ್ನೂ ಮೀರಿ ಕೇಳುವ ಸಮುದ್ರದ ಬೋರ್ಗರೆತದ ಸದ್ದು, ಟಾರಸಿಯ ಮೇಲೆ ಕುಳಿರ್ಗಾಳಿಗೆ ಮೈ ಚೆಲ್ಲಿ ಕುಳಿತಿದ್ದವನನ್ನು ಎತ್ತಿ ಒಗೆದಂತಾಯಿತು. ಗೋಧಿ ಹಿಟ್ಟಿನ ಬಣ್ಣದ ಮರಳ ದಂಡೆಯ ಮೇಲೆ ಕಣ್ಣುಗಳು ಏಕಾಏಕಿ ಸರಿದಾಡಿ ಗಾಳಿಮರದ ತೋಪಿನ ಕಡೆಗೆ ಅಚಲವಾಗಿ ನಿಂತಿತು.
ಕುರ್ಚಿಯ ಅಂಚಿಗೆ ಹಿಡಿದಿದ್ದ ಅಟ್ಟೆಯ ಜೊತೆಗಿದ್ದ ಕಾಗದಗಳು ಹಾರಿ ಟಾರಸಿಯ ಮೇಲೆ ಬಿದ್ದಾಗ, ಪೆನ್ನು ಜೇಬಿಗೆ ಸೇರಿಸಿ ಎದ್ದ. ಖಾಲಿ ಹಾಳೆಗಳು ಗಾಳಿಯ ಜೊತೆಗೆ ಬೆರೆತು ಅಣಕಿಸಿದಂತಾಯಿತು.
ಮುಂಬೈನ ಕಪ್ಪು ಮರಳ ತೀರ, ಕಲುಷಿತ ನೀರಿನ ಸಮುದ್ರ, ಬರೆಯುವ ಉತ್ಸಾಹವನ್ನು ಜರ್ರನೆ ಇಳಿಸಿತ್ತು. ಬಂಡೆಯ ಮೇಲೆ ಕುಳಿತು ನೀರಿಗೆ ಕಾಲು ಇಳಿಸಿದ್ದ ತನುಹಾ ಚೀರಿದ್ದಳು.
"ನನ್ನಂತ ಒಂದು ಹೆಣ್ಣನ್ನು ಅರ್ಥ ಮಾಡಿಕೊಳ್ಳದ ನೀನು ಒಂದಲ್ಲ ಒಂದು ದಿನ ಯಾರಿಗೂ ಗೊತ್ತಾಗದ ಹಾಗೆ ಸತ್ತು ಹೋಗ್ತೀಯಾ. ಆಗ ನಿಂಗಾಗಿ ಅಳೋರು ಯಾರು ಇರೋದಿಲ್ಲ ಸಮೀರ. ಬರಿ... ಇಡೀ ದಿನ ಬರಿತಾನೆ ಇರು... ನಿನ್ನ ಕಥೆ"

ಎಲ್ಲಿಂದಲೋ ಹಾರಿ ಬಂದ ದೈತ್ಯ ಅಲೆಯೊಂದು ಬಂಡೆಯ ಮೇಲಿದ್ದವಳನ್ನು ಸೆಳೆದೊಯ್ದಿತ್ತು!
"ಆ ಕಥೆಗಾರನ ಜೊತೆಗೆ ಸುತ್ತಾಡ್ತಾ ಇದ್ಲು. ಅವಳ ಸಾವು ಅಸಹಜಾಂತ್ಲೆ ಬರ್ದು ಬಿಡಿ"
ಪತ್ರಿಕೆಯ ಪ್ರತಿನಿಧಿಗಳ ಮುಂದೆ ತೋಡಿಕೊಂಡಿದ್ದ ತನುಹಾಳ ಚಿಕ್ಕಪ್ಪ ಬಿಷನ್‍ಲಾಲ್.