ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಝಾಡಿಸಿ ಒದ್ದರೂ ಹೋಗದಲ್ಲ ಈ ಭೂತ...

ಝಾಡಿಸಿ ಒದ್ದರೂ ಹೋಗದಲ್ಲ,
ಮತಾಂತರದ ಭೂತ!
'ನಿನ್ನ ಬಳಿ ಬಂದರೇನು ಮತಾಂತರಕೆ?'
ಉತ್ತರವು ಗೊತ್ತಿದೆ ಮನಕೆ...
'ಬಂದರೇನು ಮಾಡುವೆ?'
ಇದೂ ಗೊತ್ತಿದೆ...
ಆದರೂ ಬಿಡದಿದು...
ಬೆನ್ನ ಹತ್ತಿದ ಬೇತಾಳನೆಂದರೆ ಇದೇ ಏನೋ...

'ಯಾರೋ, ಎಲ್ಲೋ, ನಂಬಿಕೆಯ ನಿಯತ್ತನ್ನು ಬದಲಿಸಿದರೆ,
ನಿನಗೇನು ಕುತ್ತು?'
ಗೊತ್ತಿಲ್ಲ...
ಹಲವು ಬಾರಿ ನೆಮ್ಮದಿಯ ಕಲಕಿದ್ದಂತೂ ಹೌದು...ಯಾಕೆ?
ತಿಳಿಯದು...

ಮನವಿ..

"ನನ್ನ ಮರ್ತ್ ಬಿಡೊ!" ಅಂತ ಹೇಳಿ ನೀನ್ ಹಾಗೇ ಹೊರ್ಟ್ ಬಿಟ್ಟೆ...
ತಿರುಗಿ ಸಹಾ ನೋಡ್ಲಿಲ್ಲ...
ನಂಗೊತ್ತು, ಆ ಸಣ್ಣ ಹನಿ ನಿನ್ನ್ ಕಣ್ಣಿಂದಾನೂ ಇಣುಕ್ತಿತ್ತು ಅಂತ...

ನಿನ್ ಹೇಳಿದೆಲ್ಲ ಸರಿ...

ಮುಂದೆ ಇಬ್ಬ್ರಿಗೂ ಕಷ್ಟ, ಇದು practical ಅಲ್ಲ ಅಂತಾ..
ಆದ್ರೂ.....
ಮರೆಯೋದು ಅಷ್ಟು ಸುಲಭಾನಾ ಹುಡುಗಿ?
ಸುಲಭ ಆಗಿದ್ರೆ ಎಷ್ಟೋ ಜನ ಬದುಕಿಬಿಡ್ತಿದ್ರು ಕಣೇ!

ಧೈರ್ಯ vs ಬುದ್ಧಿವಂತಿಕೆ

ಹಾಗೆ ಬರೆದ ಒಂದು ಕಥೆ...

2007 ಮಾರ್ಚ್, ಯಾವುದೋ ಒಂದು ಜಲಪಾತ
ಆ ಜಲಪಾತದ ಭೋರ್ಗೋರೆಯೋ ಸದ್ಡನ್ನು ಮೀರೋ ಹಾಗೆ ಅವ್ಳು ಹೆಳಿದ್ದು ನೆನಪು...
"ಲೊ! ಈ ಜಲಪಾತದ ಈ ಕಡೆ ಇಂದ ಆ ಕಡೆ ತನಕ ಹಗ್ಗ ಕಟ್ಟಿ ದಾಟೊದನ್ನ ಧೈರ್ಯ ಅಂತಾರೆ ..... ಆ ತರ್ಹ ಮಾಡದೇಇರೋದನ್ನ.. ಬುದ್ಧಿವಂತಿಕೆ ಅಂತಾರೆ"
"ಇದನ್ನ ಈಗ್ಯಾಕೇ ಹೆಳ್ತಿದ್ಯ?"

ಸರ್ಕಾರಿ ದುಡ್ಡು ಮತ್ತು ಬೇಕಾಬಿಟ್ಟಿ ಖರ್ಚು...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ನವೆಂಬರ್ 7, 2008 ರ ಸಂಚಿಕೆಯಲ್ಲಿನ ಲೇಖನ.)

ಕ್ಯಾಲಿಫೋರ್ನಿಯ ಜನಸಂಖ್ಯೆಯ ದೃಷ್ಟಿಯಲ್ಲಿ ಅಮೆರಿಕದ ಅತಿದೊಡ್ಡ ರಾಜ್ಯ. ಹಾಗೆಯೆ, ಉದಾರವಾದಿ, ಪ್ರಭಾವಶಾಲಿ, ಶ್ರೀಮಂತ ರಾಜ್ಯ ಸಹ. ಸಾಫ್ಟ್‌ವೇರ್ ಮತ್ತು ಇಂಟರ್ನೆಟ್ ತಂತ್ರಜ್ಞಾನ ಉತ್ತುಂಗಕ್ಕೆ ಏರುತ್ತಿದ್ದ 1999 ರ ಕಾಲದಲ್ಲಿ ಸಿಲಿಕಾನ್ ಕಣಿವೆಯ ಈ ರಾಜ್ಯವನ್ನು ಒಂದು ಸ್ವತಂತ್ರ ದೇಶವಾಗಿ ಪರಿಗಣಿಸಿದ್ದರೆ ಅದು ಪ್ರಪಂಚದ ಆರನೆಯ ಅಥವ ಏಳನೆಯ ಅತಿದೊಡ್ಡ ಆರ್ಥಿಕ ಶಕ್ತಿಯಾಗುತ್ತಿತ್ತು. ಆಗ 125 ಕೋಟಿ ಜನಸಂಖ್ಯೆಯ ಚೀನಾಕ್ಕಿಂತ ಕೇವಲ 3 ಚಿಲ್ಲರೆ ಕೋಟಿ ಜನಸಂಖ್ಯೆಯ ಈ ರಾಜ್ಯವೆ ಆರ್ಥಿಕವಾಗಿ ದೊಡ್ಡದು! ಆ ದಿನಗಳಲ್ಲಿ ಕ್ಯಾಲಿಫೋರ್ನಿಯಾದ ಗವರ್ನರ್ ಆದವನು ಗ್ರೇ ಡೇವಿಸ್. ಆತ ಅಧಿಕಾರಕ್ಕೆ ಬಂದ ಸಮಯದಲ್ಲಿ ಖರ್ಚು ಮಾಡಲಾಗದಷ್ಟು ದುಡ್ಡು ರಾಜ್ಯದ ಬೊಕ್ಕಸಕ್ಕೆ ಬಂದು ಬೀಳುತ್ತಿತ್ತು. ಯಾವಾಗಲೂ ಉಳಿತಾಯದ ಬಜೆಟ್ಟೆ.

"ಆಹಾ! ಹಾಲು-ತುಪ್ಪದ ಹೊಳೆ ಎಲ್ಲೆಲ್ಲೂ!" ಎಂದು ಹಾಡುತ್ತ ಕುಣಿಯುತ್ತ ಇರುವಾಗಲೆ

ನಮಗೊಬ್ಬ ಅಳಿಯನುಬೇಕು

ನಾವು ಬಡವರು
ನಮಗೊಬ್ಬ ಅಳಿಯನುಬೇಕು
ಅಳಿಯನು ಬಡವನಾಗಿರಬೇಕು

ಅಪ್ಪ:
S/W Engineer ಆಗಿರಬೇಕು
Foreign ಗೆ ಹೋಗಿ ಬರುತ್ತಿರಬೇಕು
30x40 ರ ಮನೆ ಎರಡಿರಬೇಕು
ಊರಲಿ ತೋಟ ಗದ್ದೆಯಿರಬೇಕು
ಅಕೌಂಟಲಿ 20 ಲಕ್ಷ ದುಡ್ಡಿರಬೇಕು
ದುಡ್ಡು ಡಾಲರದಾಗಿರಬೇಕು

ನಮಗೊಬ್ಬ ಅಳಿಯನುಬೇಕು ಅಳಿಯನು ಬಡವನಾಗಿರಬೇಕು...

ಅಮ್ಮ:
TV Fridge ಮನೆತುಂಬಿರಬೇಕು
Grinder woven ಅಡುಗೆಮನೆ ಸೇರಿರಬೇಕು

ಛಲಗಾರ ಅನಿಲ್ ಕುಂಬ್ಳೆ

ಭಾರತದ ಟೆಸ್ಟ್ ಕ್ರಿಕೆಟಿಗ ನಂಬರ್ ೧೯೨. ಇನ್ನೆಂದೂ ಈ ಮಹಾನ್ ಆಟಗಾರನನ್ನು ನಾವು ಭಾರತಕ್ಕಾಗಿ ಅಥವಾ ಕರ್ನಾಟಕಕ್ಕಾಗಿ ಆಡುವುದನ್ನು ಕಾಣೆವು. ನಿನ್ನೆ ನಿವೃತ್ತಿ ಘೋಷಿಸಿದ ಅನಿಲ್ ಕುಂಬ್ಳೆ, ಭಾರತ ಕಂಡ ಅಪ್ರತಿಮ ಸ್ಪಿನ್ ಬೌಲರ್. ಆ ಮಾಸಿದ ೧೯೨ ನಂಬರಿನ ಕ್ಯಾಪ್ ಇನ್ನು ಅನಿಲ್ ಮನೆಯಲ್ಲಿ ಗೌರವದ ಸ್ಥಾನ ಪಡೆದು ವಿಶ್ರಮಿಸಲಿದೆ. ೧೯೯೦ ಅಗೋಸ್ಟ್ ೯ ರಂದು ಮ್ಯಾಂಚೆಸ್ಟರ್-ನಲ್ಲಿ ತನ್ನ ಪ್ರಥಮ ಟೆಸ್ಟ್ ಪಂದ್ಯದ ಪ್ರಥಮ ದಿನದಿಂದ, ೨೦೦೮ ನವೆಂಬರ್ ೨ ರವರೆಗೆ ತನ್ನ ಕೊನೆಯ ಅಂದರೆ ೧೩೨ನೇ ಟೆಸ್ಟ್ ಪಂದ್ಯದ ಕೊನೆಯ ದಿನದವರೆಗೆ ಆ ೧೯೨ನೇ ಸಂಖ್ಯೆಯ ಕ್ಯಾಪ್-ನ್ನು ಹೆಮ್ಮೆಯಿಂದಲೇ ಧರಿಸಿ ದೇಶಕ್ಕಾಗಿ ಆಡಿದ ಛಲಗಾರ ಅನಿಲ್.

ನನ್ನ ಫೇವರಿಟ್ ಕ್ರಿಕೆಟಿಗ ಅಂದರೆ ಅನಿಲ್ ಕುಂಬ್ಳೆ ಮಾತ್ರ. ಕುಂಬ್ಳೆಯನ್ನು ಮೆಚ್ಚಲು ಹಲವಾರು ಕಾರಣಗಳಿವೆ. ಯಾವ ಸನ್ನಿವೇಶದಲ್ಲೂ ಬೌಲಿಂಗ್ ಮಾಡಲು ಅನಿಲ್ ತಯಾರು. ಎಷ್ಟೇ ಹೊತ್ತಿನ ತನಕ ಬೇಕಾದರೂ ಬೌಲ್ ಮಾಡಬಲ್ಲರು. ಈ ಪಿಚ್-ನಲ್ಲಿ ತನಗೆ ಯಾವುದೇ ವಿಕೆಟ್ ದೊರೆಯದು ಎಂದು ಗೊತ್ತಿದ್ದೂ, ಆ ಒಂದು ವಿಕೆಟಿಗಾಗಿ ದಿನಕ್ಕೆ ೪೦ರಷ್ಟು ಓವರುಗಳನ್ನು ಬೌಲ್ ಮಾಡಲು ಸದಾ ತಯಾರಿರುವ ಅಪ್ರತಿಮ ಎಸೆಗಾರ ಅನಿಲ್. ಒಂದು ವಿಕೆಟ್ ದೊರಕಿದ ಕೂಡಲೆ ವಿಶ್ರಮಿಸದೇ ಇನ್ನೊಂದನ್ನು ಯಾವ ರೀತಿಯಲ್ಲಿ ಗಳಿಸಬಹುದು ಎಂಬ ತಯಾರಿಯಲ್ಲಿ ಅನಿಲ್ ತನ್ನನ್ನು ತೊಡಗಿಸಿಕೊಳ್ಳುತ್ತಾರೆ. ತನ್ನ ಇತಿಮಿತಿಗಳ ಅರಿವು ಚೆನ್ನಾಗಿ ಇದ್ದಿದ್ದರಿಂದ ಅನಿಲ್ ೬೧೯ ಟೆಸ್ಟ್ ಹುದ್ದರಿಗಳನ್ನು ಗಳಿಸಲು ಸಾಧ್ಯವಾಯಿತು. ಕ್ರೀಡೆಯ ವಿದ್ಯಾರ್ಥಿ ಎಂದೇ ತನ್ನನ್ನು ಅನಿಲ್ ಪರಿಗಣಿಸಿದ್ದರಿಂದ ಕೊನೆಯವರೆಗೂ ಅನಿಲ್ ಹುದ್ದರಿಗಳನ್ನು ಗಳಿಸುತ್ತಲೇ ಇದ್ದರು. ಮೊದಲ ಹುದ್ದರಿ ಅಲನ್ ಲ್ಯಾಂಬ್ ಮತ್ತು ಕೊನೆಯ ಹುದ್ದರಿ ಮಿಷೆಲ್ ಜಾನ್ಸನ್.

ನೀವು ಕನ್ನಡ ರಾಜ್ಯೋತ್ಸವವನ್ನು ಆಚರಿಸಿದಿರಾ??

ಸ೦ಭ್ರಮದ ಸಡಗರದ ಕನ್ನಡ ವಿಜಯೋತ್ಸವವನ್ನು ಆಚರಿಸುತ್ತಿರುವ ಸಮಸ್ತ ಕನ್ನಡ ಭಾ೦ದವರಿಗೆ ಹೃತ್ಪೂರ್ವಕ ಧನ್ಯವಾದಗಳು. ಶಾಸ್ತ್ರೀಯ ಸ್ಥಾನಮಾನ ಸಿಕ್ಕಮೇಲೆ ಕನ್ನಡಿಗರಾದ ನಮಗೆ ನಮ್ಮ ನುಡಿಯನ್ನು ಉಳಿಸಿ ಬೆಳೆಸುವ ಮಹತ್ವದ ಜವಾಬ್ದಾರಿಯ ಅರಿವಾಗಿದೆ.

ಪಯಣ

ಸ್ವಲ್ಪ ದಿನಗಳ ಹಿಂದೆ ಕೆಲಸದಮೇಲೆ ನಾನು ಉತ್ತರ ಕರ್ನಾಟಕದ ಹೊಸಪೇಟೆಗೆ ಹೋಗಬೇಕಾಯಿತು. ಒಂದು ಹೊಸಾ ತಂತ್ರಾಂಶವನ್ನ ಅಲ್ಲಿಯ ಕಂಪನಿಯಲ್ಲಿ ಅಳವಡಿಸಿಕೊಡಬೇಕಾಗಿತ್ತು. ನಾನು ನಮ್ಮ ಕಾರ್ಯಾಲಯದಲ್ಲಿ ಅದನ್ನು ಒಮ್ಮೆ ಪರೀಕ್ಷಿಸಿದ್ದರೂ ಆ ವಾತಾವರಣಕ್ಕೆ, ಆ ಕಂಪನಿಯವರ ಬೇಡಿಕೆಗೆ ಈ ತಂತ್ರಾಂಶ ಹೊಂದಿಕೆಯಾಗುತ್ತದೋ ಇಲ್ಲವೋ ಅನ್ನುವ ಅನುಮಾನ...