ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಗುವುದು ಅಷ್ಟು ಕಷ್ಟವೇ!

‘ನಗುವುದು
ಅಷ್ಟು ಕಷ್ಟವೇ?’ ಎಂಬ ಪ್ರಶ್ನಗೆ ಉತ್ತರಿಸುವ ಮೊದಲು ಬೆಂಗಳೂರಿನ ಅಷ್ಟೂ ಲಾಫಿಂಗ್
ಕ್ಲಬ್ಬುಗಳ ಪ್ರತಿದಿನ ಬೆಳಗಿನ ಸರ್ಕಸ್ಸುಗಳನ್ನು, ಟಿವಿ ಚಾನಲ್‌ಗಳಲ್ಲಿನ ಪ್ರೈಂ ಟೈಮ್

ಒಗಟುಗಳು - ೫

ಈ ಒಗಟುಗಳನ್ನು ಬಿಡಿಸಿರಿ.

೧. ನೀರು ಕಂಡಲ್ಲಿ ನಿಲ್ಲುವ ಕುದುರೆ, ಹಾದಿ ಕಂಡಲ್ಲಿ ಓಡುವ ಕುದುರೆ.
೨. ಚಿಕ್ಕಮಕ್ಕಳಿಗೆ ಚಿಕ್ಕ ಚಿಕ್ಕ ಟೋಪಿ.
೩. ಕಡಿಯಲಾಗದ ಮರಯಾವುದು?
೪. ಅಕಟಕಟ ಮರಕಟ ಚಾಟಕ ಚೂಟಕ ನಿನ್ನನ್ನು ಕಂಡರೆ ಬಲು ಸೊಗಸು.
೫. ಅಕ್ಕನಮನೆಯಲ್ಲಿ ಹಚ್ಚಿದ ದೀಪ, ತಂಗಿಯ ಮನೆಯಲ್ಲಿ ಉರಿಯುತ್ತದೆ.
೬. ಹಾಲು ಕರಿಯದ ದನ ಯಾವುದು?

ಒಗಟುಗಳ ಕೃಪೆ: ನನ್ನ ಅಜ್ಜಿ.

ನುಡಿಮುತ್ತುಗಳು

1. ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಲಿಲ್ಲ
2. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
4. ದನ್ಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಇನ್ನು ನಿನ್ನ ಗಳಗನ್ಟೆಗೆ
ಹೆದರುತ್ತೀನೇನೋ, ದಾಸಯ್ಯ ?
5. ಶುಭ ನುಡಿಯೋ ಸೋಮ ಅನ್ದರೆ ಗೂಬೆ ಕಾಣ್ತಲ್ಲೋ ಮಾಮ ಅನ್ದ ಹಾಗೆ.
6. ಹಲವು ಸಲ ಸಾಯುವನು ಹೇಡಿ ವೀರಯೋಹನಿಗೊನ್ದೆ ಸಲ ಸಾವು
7. ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?

ಒಗಟುಗಳು - ೪

ಈ ಒಗಟುಗಳನ್ನು ಬಿಡಿಸಿರಿ...

೧. ಅಂಗಿ ಬಿಚ್ಚಿದ, ಬಾವಿಗೆ ಜಾರಿದ.
೨. ಕೈಗೆ ಹಾಕದ ಬಳೆಯಾವುದು?
೩. ಕಾಲಿಲ್ಲ, ಓಡುತ್ತದೆ. ತೋಳಿಲ್ಲ, ಈಜುತ್ತದೆ.
೪. ಹಾಕಲಾಗದ ಸರ ಯಾವುದು?
೫. ತಿಳಿನೀರಿನ ಸುತ್ತು ಬಿಳಿಕಲ್ಲಿನ ಕೋಟೆ.

ಒಗಟುಗಳ ಕೃಪೆ: ನನ್ನ ಅಜ್ಜಿ.

"ಚಾಕ್", ಎಂಬ ಮಕ್ಕಳ, ’ಪ್ರೀತಿಯ-ಮನೆ’ !

ನಾವು ಇಲಿನಾಯ್ ರಾಜ್ಯದ ನಾರ್ಮಲ್-ಬ್ಲೂಮಿಂಗ್ಟನ್ ನಗರದ ನಮ್ಮ ಕಳ್ಳಂಬೆಳ್ಳಾ ಪರಿವಾರದಜೊತೆಯಲ್ಲಿ ವಾಸ್ತವ್ಯಹೂಡಿದ್ದೆವು. ಮೂರೂವರೆ ವರ್ಷದ ಮೊಮ್ಮಗಳು ಗೌರಿ, ಈಗ ತನ್ನ ’ಚಾಕ್,’ ಗೆ ಹೋಗುತ್ತಿದ್ದಾಳೆ. ಅವಳ ’ಮಿಸ್’ ಬಗ್ಗೆ ಅದೇನು ಹೆಮ್ಮೆ, ವಿಶ್ವಾಸಗಳೋ ಮಿಸ್ ಹೇಳಿದ್ದೇ ವೇದವಾಕ್ಯ ! ಇನ್ನೂ ಬೆಳಗಾಗುವುದೇ ತಡ, ಅವಳಿಗೆ ಶಾಲೆಗೆ ಹೋಗುವ ಆತುರ. ಪ್ರತಿದಿನ ಗೌರಿಯತಾಯಿಯೇ ಅವಳನ್ನು ಬಿಟ್ಟುಬರುವುದು ಆಮೇಲೆ, ಸಾಯಂಕಾಲ ೫ ಗಂಟೆಗೆ ಕರೆದುಕೊಂಡುಬರುವ ಪರಿಪಾಠವಿತ್ತು. ನಮ್ಮ ಪುಟಾಣಿ ’ಗೌರಿ,’ ಹೋಗುತ್ತಿದ್ದ ’ಕ್ರೆಷ್’ ನೋಡಬೇಕೆನ್ನಿಸಿತು. ನಾವು ಹೇಳಿದ್ದೇ ತಡ, "ಇವತ್ತೇ ಬನ್ನಿ ಅಜ್ಜ", ಎಂದು ಗೋಗರೆಯಲು ಪ್ರಾರಂಭ. "ಅಜ್ಜೀ; ನೀವೂ ಬನ್ನಿ, ನಮ್ ಮಿಸ್ ನಾ ತೋರಿಸ್ತೀನಿ; ನೋಡಿವಿರಂತೆ ".

ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ ಮಹಾನ್ ಹೋರಾಟಗಾರ.

ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ ಗೆ ಕುಂಬ್ಳೆ ವಿದಾಯ ಹೇಳಿದ್ದಾರೆ. ಇಂದು ಅವರು ತಮ್ಮ ಕೊನೆಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಿದರು.

ಅನಿಲ್ ಕುಂಬ್ಳೆ (ಜನನ: ಅಕ್ಟೋಬರ್ ೧೭, ೧೯೭೦)

ಕುಂಬ್ಳೆ ಲೆಗ್ ಸ್ಪಿನ್ನರ್. ಇವರ ಗೂಗ್ಲಿ ಕ್ರಿಕೆಟ್ ಜಗತ್ತಿನಲ್ಲಿ ಬಹಳ ಪ್ರಸಿದ್ಧ.

ಇವರು ಮೊದಲು ಮಧ್ಯ ವೇಗದ ಬೌಲರ್ ಆಗಿ ಕ್ರಿಕೆಟ್ ಪ್ರವೇಶಿಸಿದ್ದು. ಇದು ಅವರಿಗೆ ಕೊಡುಗೆ ಎಂಬಂತೆ ವೇಗವಾಗಿ ಬೌಲ್ ಮಾಡಲು ಸಹಾಯಕವಾಗಿದೆ.

ಸಾಧಾರಣವಾಗಿ ಸ್ಪಿನ್ ಬೌಲರ್‌ಗಳು ಬಾಲ್ ಹಾಕುವ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಬೌಲ್ ಮಾಡುವ ಅನಿಲ್ ಕುಂಬ್ಳೆ, ೬೦೦ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ.

ಇವರು ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು ಎಪ್ರಿಲ್ ೨೫, ೧೯೯೦ ರಂದು, ಶ್ರೀಲಂಕಾ ಮೇಲಿನ ಪಂದ್ಯದಲ್ಲಿ.

ಅದೇ ವರ್ಷ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರು.

ದಾರಿ ಸಿಕ್ಕ ಮಾತ್ರಕ್ಕೆ ಊರು ಸಿಗಲ್ಲಾ!

ಕೃಷ್ಣಶಾಸ್ತ್ರಿಗಳು ಶಾಲೆಯಲ್ಲಿ ಪಾಠ ಮಾಡ್ತಾ ಇರ್ತಾರೆ.ಇದ್ದಕ್ಕಿದ್ದಂತೆ ಮುಕುಂದೂರು ಸ್ವಾಮಿಗಳು ಶಾಲೆಗೆ ಬಂದುಬಿಡ್ತಾರೆ."ನಾನೂ ಒಂದಿಷ್ಟು ಪಾಠ ಕೇಳ್ತೀನಿ ಮಗಾ!" ಸ್ವಾಮಿಗಳ ಮಾತು ಕೇಳಿದ ಶಾಸ್ತ್ರಿಗಳಿಗೆ ಏನೂ ಹೇಳಲು ತೋಚಲೇ ಇಲ್ಲ. ಕೊನೆಯ ಬೆಂಚ್ ಮೇಲೆ ಸ್ವಾಮಿಗಳು ಕುಳಿತಿದ್ದು ಆಯ್ತು.

ನವಂಬರ್ ೧- ವಿಶ್ವ ವೇಗನ್ ದಿವಸ

ವೇಗನ್ ಅಂದರೆ ಏನು? ಸಸ್ಯಾಹಾರವೆಂದರೆ ಏನು ಎಂಬುದು ಎಲ್ಲರಿಗೂ ಗೊತ್ತು. ಸಸ್ಯಮೂಲಗಳಿಂದ ಬರುವ ಆಹಾರವೇ ಸಸ್ಯಾಹಾರ.ಆದರೆ ಬಹುತೇಕ ಭಾರತೀಯರು ಸಸ್ಯಾಹಾರದಲ್ಲಿ ಪ್ರಾಣಿಗಳಿಂದ ಸಿಗುವ ಉತ್ಪನ್ನಗಳಾದ ಹಾಲು ಮತ್ತು ಅದರ ಉತ್ಪನ್ನಗಳಾದ ಮೊಸರು, ತುಪ್ಪಗಳನ್ನು ಸೇರಿಸುತ್ತಾರೆ.

ಒಗಟುಗಳು - ೩

ಈ ಒಗಟುಗಳನ್ನು ಬಿಡಿಸಿರಿ...

೧. ಗೂಡಿನಲ್ಲಿರುವ ಹಕ್ಕಿ ಊರನ್ನೆಲ್ಲಾ ನೋಡುತ್ತದೆ.
೨. ತಲೆಯುಂಟು, ಕೂದಲಿಲ್ಲ. ಮರವುಂಟು, ಎಲೆಯಿಲ್ಲ. ಮನೆಯುಂಟು, ಕಿಟಕಿಯಿಲ್ಲ. ನಾನ್ಯಾರು?
೩. ನೀರಿನಲ್ಲಿ ಹುಟ್ಟಿ ನೀರಿನಲ್ಲಿ ಕರಗುವೆನು. ನಾನ್ಯಾರು?
೪. ನಡೆಯುತ್ತಾನೆ ಜೀವವಿಲ್ಲ.
೫. ಚಿನ್ನದ ಹಕ್ಕಿ ಬಾಲದಲ್ಲಿ ನೀರು ಕುಡಿಯುತ್ತೆ.

ಒಗಟುಗಳ ಕೃಪೆ: ನನ್ನ ಅಜ್ಜಿ.