ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡದ ವಿಜಯ ಪತಾಕೆ

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತದೆ ...(ರಾಷ್ಟ್ರ ಕವಿ ಕುವೆಂಪು )
ಕನ್ನಡವೆಂದರೆ ಕುನಿದಾಡುವುದ್ ಎನ್ನೆದೆ ..ಕನ್ನಡವೆಂದರೆ ಕಿವಿ ನಿಮಿರುವುದು ..
ಸಿರಿ ಗನ್ನಡಂ ಗೆಲ್ಗೆ , ಸಿರಿ ಗನ್ನಡಂ ಬಾಳ್ಗೆ ....

ಕೇಂದ್ರ ಸಕಾಱರ ವು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ. ಲಭಿಸುವುದರ ಬಗ್ಗೆ......!

ಅಬ್ಬಾ ಅಂತೂ ನಮ್ಮ ಕನ್ನಡ ಭಾಷೆಗೆ ಕಾಡಿ ಬೇಡಿ "ಶಾಸ್ತ್ರೀಯ ಸ್ಥಾನಮಾನ" ಸಿಕ್ಕಿತು. ಸಿಕ್ಕಿತು. ಮುಂದೆ??? ಕಳೆದ ಬಾರಿಯ ಭರವಸೆಗಳು ಈಡೇರಿಲ್ಲ,

ಪಕ್ಷಾಂತರ ಇರಲಿ! ಮತಾಂತರ ಬೇಡ!! ಯಾಕೆ?

ಮಾನವ ಹುಟ್ಟಿದಾಗಿನಿಂದ ನಡೆಯುತ್ತಿರುವ ಮತಾಂತರದ ಬಗ್ಗೆ ಈಗ “ಚರ್ಚ್ ಗಳ ಮೇಲಿನ ದಾಳಿ” ನಡೆದಾಗಿನಿಂದ ಚರ್ಚೆಯಾಗುತ್ತಿದೆ. ಇದರ ಪರ-ವಿರೋಧ ಅಭಿಪ್ರಾಯಗಳನ್ನು ಕೆಲವು ಜನಪ್ರಿಯ ಲೇಖಕರು ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡವೇ ಸತ್ಯ ಕನ್ನಡವೇ ನಿತ್ಯ

ರಾಷ್ಟ್ರ ಕವಿ ಕುವೆಂಪುರವರ ಈ ಕವಿತೆಯಲ್ಲಿ ಕನ್ನಡ ಕಂಪು ಎಷ್ಟು ಚೆನ್ನಾಗಿ ಮೂಡಿಬಂದಿದೆ.  ಕನ್ನಡ ನಾಡಿನ ಸೊಗಸನ್ನು ಕವಿ ಕುವೆಂಪುರವರು ಕನ್ನಡಿಗರ ಮನ ತಲುಪಿ ಕನ್ನಡದ ಅಭಿಮಾನ ಮೊಳಗಲಿ ಎಂಬುದು ಅವರ ಆಶಯ..

ಕನ್ನಡ ಶಾಸ್ತ್ರೀಯ ಸ್ಥಾನಕ್ಕೆ ಅರ್ಹವೇ? ಎಳ್ಳಷ್ಟೂ ಸಂಶಯ ಬೇಡ!

ಕಳೆದ ಕೆಲವು ವರ್ಷಗಳಿಂದ ಕನ್ನಡ ಶಾಸ್ತ್ರೀಯ ಸ್ಥಾನಮಾನಕ್ಕೆ ಅರ್ಹವಲ್ಲ ಎಂಬ ಕಿಡಿಗೇಡಿಗಳ ಮಾತಿನಿಂದ ಎಷ್ಟೋ ಕನ್ನಡಿಗರ ಮನಸ್ಸು ನೊಂದುಕೊಂಡಿತ್ತು. ನೊಂದ ಮನಸ್ಸು ಹೋರಾಟದ ಹಾದಿ ಹಿಡಿಯಿತು. ಹೋರಾಟದ ಹಾದಿ ಶಾಸ್ತ್ರೀಯ ಸ್ಥಾನವನ್ನು ಮತ್ತಷ್ಟು ಹತ್ತಿರಗೊಳಿಸಿತು. ಕೊನೆಗೂ ಕೇಂದ್ರ ಸರಕಾರ ತಲೆದೂಗಿ, ತೆಲೆಬಾಗಿ ಕನ್ನಡಿಗರ ಬೇಡಿಕೆಯನ್ನು ಈಡೇರಿಸಿತು. ಕರ್ನಾಟಕದ ಹುಟ್ಟುಹಬ್ಬದ ದಿನ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಬಂದದ್ದು ಕನ್ನಡಿಗರಿಗೆಲ್ಲ ಒಂದು ಅಪೂರ್ವ ಸಂಗಮದಂತೆ ತೋರುತ್ತಿದೆ.

ಅದಿರಲಿ, ಕನ್ನಡ ಭಾಷೆ ಶಾಸ್ತ್ರೀಯ ಸ್ಥಾನಕ್ಕೆ ಅರ್ಹವೇ? ಶಾಸ್ತ್ರೀಯ ಸ್ಥಾನದಿಂದ ಕನ್ನಡಕ್ಕಾಗುವ ಲಾಭಗಳೇನು? ಇಂತಹ ಕಿಡಿಗೇಡಿ ಪ್ರಶ್ನೆಗಳನ್ನು ಬೇರು ಸಹಿತ ಕಿತ್ತು ಹಾಕಲು ನನ್ನದೊಂದು ಸಣ್ಣ ಪ್ರಯತ್ನ ಇಲ್ಲಿದೆ.

ಪಿಳ್ಳಾರಿ ಗೀತೆಗಳು

ಹರಿದಾಸ ಸಂಪದದಲ್ಲಿ ಪುರಂದರದಾಸರ ಪಿಳ್ಳಾರಿಗೀತೆಗಳ ಬಗ್ಗೆ ನನ್ನ ಒಂದು ಲೇಖನ ಇದೆ. ಅದನ್ನು ಈ ಕೆಳಗಿನ ಕೊಂಡಿ ಉಪಯೋಗಿಸಿ ಓದಿರಿ.

http://haridasa.in/forum/101/%E0%B2%AA%E0%B2%BF%E0%B2%B3%E0%B3%8D%E0%B2%B3%E0%B2%BE%E0%B2%B0%E0%B2%BF-%E0%B2%97%E0%B3%80%E0%B2%A4%E0%B3%86%E0%B2%97%E0%B2%B3%E0%B3%81

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ:: ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಹೋರಾಟ

ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತಿದೆ. ನಾಡಿನ ಕನ್ನಡಿಗರಿಗೆಲ್ಲಾ ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಭಿನಂದನೆಗಳು.

ಮತಾಂತರ ಚರ್ಚೆ

ವಿಜಯಕರ್ನಾಟಕದಲ್ಲಿ ಬೈರಪ್ಪನವರ ಲೇಖನದೊಂದಿಗೆ ಮತಾಂತರದ ಬಗ್ಗೆ ಪರವಿರೋಧ ಚರ್ಚೆಗಳು ನಡೆಯುತ್ತಿದ್ದು ಬಹುಶ: ಪತ್ರಿಕಾರಂಗದಲ್ಲಿ ಒಂದು ಇತಿಹಾಸ  ನಿರ್ಮಾಣವಾಗಬಹುದೇನೋ!ನಮ್ಮದೇಶದಲ್ಲಿ ಪರಕೀಯರ ಆಕ್ರಮಣಕಾಲದಿಂದಲೇ ಹಿಂದುಗಳನ್ನು ಇಸ್ಲಾಮ್ ಮತಕ್ಕೆ ಮತಾಂತರಿಸುವ ಕೆಟ್ಟ ಪರಂಪರೆ ನಡೆದು ಬಂತು.

ಅಂಗುಲಹುಳು

ಕ್ರಿಸ್ತಪೂರ್ವ ಒಂದನೇ ಶತಮಾನದಿಂದ ಮೊದಲುಗೊಂಡು ಇಂದಿನವರೆಗೆ ಕನ್ನಡ ನಾಡು ನುಡಿ ಸಂಸ್ಕೃತಿ ನಿಂತನೀರಾಗದೆ ಉಚ್ಛ್ರಾಯಸ್ಥಿತಿಯಲ್ಲಿ ಸಾಗುತ್ತಿವೆ. ಪಂಪರನ್ನಾದಿಗಳ ಜೈನಯುಗವಾಗಿರಬಹುದು, ಕುಮಾರವ್ಯಾಸ ಪುರಂದರರ ಭಾಗವತಯುಗವಾಗಿರಬಹುದು, ರೈಸ್ ಕಿಟೆಲ್ಲರ ಕ್ರೈಸ್ತಯುಗವಾಗಿರಬಹುದು, ಕುವೆಂಪುಕಾರಂತರ ಜ್ಞಾನಪೀಠಯುಗವಾಗಿರಬಹುದು ಎಲ್ಲಿಯೂ ಕನ್ನಡಕ್ಕೆ ಸೋಲಿಲ್ಲ, ಕನ್ನಡಕ್ಕೆ ಕುಂದಿಲ್ಲ.
ಒಂದಲ್ಲ ಒಂದು ಸಂದರ್ಭದಲ್ಲಿ ಇಡೀ ದಕ್ಷಿಣ ಇಂಡಿಯಾವನ್ನು ತನ್ನ ತೆಕ್ಕೆಯಲ್ಲಿಟ್ಟು ಆಳಿದ ರಾಜಪರಂಪರೆ ಕನ್ನಡಿಗರದು. ದಕ್ಷಿಣಾದಿ ಸಂಗೀತ ಪ್ರಕಾರಕ್ಕೆ ಕರ್ನಾಟಕ ಸಂಗೀತ ಎನ್ನುವ ಹೆಮ್ಮೆಯ ನಾಮಾಂಕಿತದ ಗೌರವಭಾಜನರು ಕನ್ನಡಿಗರು, ರಾಷ್ಟ್ರಕ್ಕೆ ಬಂಗಾರ ನೀಡುವ ಪರುಷದ ಶಕ್ತಿಯಿದೆ ಕನ್ನಡದ ನೆಲಕ್ಕೆ, ಸುಗಂಧಸೌರಭ ಸೂಸುವ ಚಂದನ ಮಲ್ಲಿಗೆಗಳ ನಾಡಲ್ಲವೇ ನಮ್ಮದು!
ಭಾರತ, ರಾಮಾಯಣಗಳ ಖಳರಿಗೆ ಉದಾತ್ತತೆಯ ಬಣ್ಣ ಲೇಪಿಸಿ ಕಾವ್ಯದಲ್ಲಿ ನೆಲದ ಸೊಗಡಿನ ಕಂಪು ಪಸರಿಸಿದ ಕವಿಗಳು ನಮ್ಮವರು. ನವರಸಗಳ ಸಿದ್ಧಿಯಲ್ಲ ನವರಸಗಳ ಅಭಿವ್ಯಕ್ತಿಯಲ್ಲಿನ ಎಣೆಯಿಲ್ಲದ ಸಾಮರ್ಥ್ಯಕ್ಕಲ್ಲವೆ ಸಂದಿವೆ ಜ್ಞಾನಪೀಠಗಳು. ಕನ್ನಡದಲ್ಲಿ ಏನುಂಟು ಏನಿಲ್ಲ? ಕನ್ನಡವ ಕಾಣಬಲ್ಲ ಕಣ್ಣುಬೇಕು, ಮನಸು ಬೇಕು.
ಕನ್ನಡದಲ್ಲಿ ಏನೆಲ್ಲ ಇದೆ ಎಂದು ನಮಗೆ ತೋರಿಸಿಕೊಟ್ಟವರು ವಿದೇಶೀಯರು ಎಂಬುದನ್ನು ಕನ್ನಡದ ಕವಿ ಎ ಕೆ ರಾಮಾನುಜನ್ ಅವರು ತಮ್ಮ ಕವನವೊಂದರಲ್ಲಿ ಧ್ವನ್ಯಾತ್ಮಕವಾಗಿ ಹೇಳಿದ್ದಾರೆ. ನಾನು ಬಹಳ ವರ್ಷಗಳ ಹಿಂದೆ ಆ ಕವನ ಓದಿದ್ದು. ಈಗಲೂ ಅದರ ಹೂರಣ ಕಾಡುತ್ತದೆ.