ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡ ಡಿಂಡಿಮ

ಕನ್ನಡ ನಾಡಿನಲ್ಲಿನ ಎಲ್ಲರ ಮನಗಳಲ್ಲಿ ಮೊಳಗಲಿ ಕಸ್ತೂರಿ ಕನ್ನಡದ ಡಿಂಡಿಮ. ಕುವೆಂಪುರವರ ಈ ಕವಿತೆಯಲ್ಲಿ ಅಡಗಿರುವ ಕನ್ನಡಾಭಿಮಾನ ಎಲ್ಲರಲ್ಲೂ ತುಂಬಲಿ. ಕನ್ನಡ ನಾಡು ಉದಯವಾಗಿ ೫೩ ವರ್ಷಕ್ಕೆ ಕಾಲಿಟ್ಟಿದೆ.ಇಂತಹ ಶುಭ ಸಮಯದಲ್ಲಿ ಕನ್ನಡದ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

* ಸಿರಿಗನ್ನಡಂ ಗೆಲ್ಗೆ   ಸಿರಿಗನ್ನಡಂ ಬಾಳ್ಗೆ*

ಮಿಥುನ ಕವಿತೆ

ಬೇಕೆನ್ನಿಸಿದ ಕೂಡಲೇ ಸಿಕ್ಕದ್ದನ್ನಪ್ಪಿಕೊಂಡು

ತಿದ್ದುವ ಮೊದಲೇ ಕಳೆದು ಹೋಗಿದ್ದ ಮೂಲಪ್ರತಿ

ಮತ್ತೇನನ್ನೋ ಧ್ಯಾನಿಸುತ್ತಿದ್ದಾಗ ಸಿಕ್ಕು

ತಟ್ತನೆ ಮತ್ತೆಲ್ಲಿಗೋ ಒಯ್ದ ಪರಿಜು.

 

ಇಷ್ಟೂ ದಿನ ತಲೆಮರೆಸಿಕೊಂಡಿದ್ದ ಭಾವಗಳು

ಎದ್ದು ಬಂದು ಎದೆಗೊರಗಿದ ಚಣ

ಶಿರಸ್ತ್ರಾಣ, ಭುಜಕೀರ್ತಿ,ಕರ್ಣಕುಂಡಲಗಳಲುಗಿ

ಕನ್ನಡ ನಾಡಿನ ಜನ್ಮದಿನದ ಶುಭಾಶಯಗಳು

ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಈ ಕನ್ನಡದ ಹಬ್ಬವು ನವೆಂಬರ್ ತಿಂಗಳಿಗೆ ಮಾತ್ರ ಸಿಮೀತವಾಗಿರದೇ ಸದಾ ಕಾಲ ಕನ್ನಡದ ಕಂಪು ತುಂಬಿರಲಿ ಎಂದು ಹಾರೈಸುತ್ತೇನೆ. ಈ ದಿನ ಕನ್ನಡಿಗರು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ. ಸಪ್ತ ಜ್ಞಾನಪೀಠ ಪಡೆದ ಏಕೈಕ ಭಾಷೆಗೆ ಈಗ ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಗರಿ ಸೇರಿದೆ.

ಓದಿದ್ದು ಕೇಳಿದ್ದು ನೋಡಿದ್ದು-66 ಚೆಲುವ ಕನ್ನಡನಾಡು

 

ವಿಜಯೋತ್ಸವದ ಸುದ್ದಿಗೆ ವಿಜಯ ಕರ್ನಾಟಕ ಪತ್ರಿಕೆಯಿಂದ ಶಾಸ್ತ್ರೀಯ ಸಮ್ಮಾನ

vijayakarnataka

ಏನು ಲಾಭ?ಇತ್ಯಾದಿ ಇತ್ಯಾದಿ

----------------------------------------------------------------------

ರಾಜ್ಯೋತ್ಸವದಂದು ನೆನಪಾದ ಗೀತೆ

ರಾಜ್ಯೋತ್ಸವದಂದು ಬಹುಶಃ ಸಹಜವಾಗಿ ನೆನಪು ಮಾಡಿಕೊಳ್ಳಲು ಹೊರಡುವುದು ಕನ್ನಡ ತಾಯಿಯ ಕುರಿತಾದ ಗೀತೆ. ನಮ್ಮ ಭಾಷೆಯ ಕುರಿತು ನಮಗಿರುವ ಹೆಮ್ಮೆ, ಗೌರವ ನೆನಪು ಮಾಡಿಕೊಳ್ಳುವಂತೆ ಮಾಡುತ್ತದೆ, ನಮ್ಮ ಮನಸ್ಸಿನಲ್ಲಿ ಆ ಗೀತೆಯನ್ನು ಹಾಡಿಸುತ್ತದೆ, ಕೆಲವೊಮ್ಮೆ ಜೋರಾಗಿ ಧನಿಯಿಟ್ಟು ಕೂಡ ಹಾಡಿಸುತ್ತದೆ. ಈ ದಿನದ ಸಡಗರ ನಮ್ಮಲ್ಲಿ ಹಲವರಿಗೆ ಮೊದಲಾಗಿ ಕನ್ನಡ ಪೇಪರು ಓದುವುದು ಎಂದುಕೊಳ್ಳುತ್ತೇನೆ. ಎಲ್ಲರಿಗೂ ಸಂತಸ ಕೊಡುವ ಸುದ್ದಿ ಇವತ್ತಂತೂ ಇದ್ದೇ‌ ಇದೆ. ಆದರೆ ಈ ದಿನ ಕೆಳಗಿನ ಸಾಲುಗಳೊಂದಿಗೆ ಪ್ರಾರಂಭವಾದರೆ? ನಿಜವಾದ ಕನ್ನಡದ ಮನದಿಂದ ಬಂದ ಈ ಹಾಡು ನೋಡಿ - ಆಪ್ತ ಸ್ನೇಹಿತರೊಬ್ಬರು ಹೇಳುವಂತೆ ಇದು "ವಿಶ್ವಮಾನವ ಸಂದೇಶದ ಆಶಯ ಹೊತ್ತ ಗೀತೆ":

ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು |
ನಾನು ನಿನ್ನವನೆಂಬ ಹೆಮ್ಮೆಯ
ಋಣವು ಮಾತ್ರವೇ ನನ್ನದು ||

ನೀನು ಹೊಳೆದರೆ ನಾನು ಹೊಳೆವೆನು
ನೀನು ಬೆಳೆದರೆ ನಾನು ಬೆಳೆವೆನು |
ನನ್ನ ಹರಣದ ಹರಣ ನೀನು
ನನ್ನ ಮರಣದ ಮರಣವು ||

ಹಾಳೂರಿಗುಳಿದವನೇ ...

ಅರಿತವರೇ ಇರದೂರಿನಲಿ
ಗೌರವ ದೊರೆತೀತು ಮಡೆಯನಿಗೂ!
ಮರಗಳೇ ಕಾಣದ ದೇಶದಲಿ
ಹರಳು ಗಿಡವನೇ ಮರವೆಂದಾರು!!

ಸಂಸ್ಕೃತ ಮೂಲ:

ಯತ್ರ ವಿದ್ವದ್ಜನೋ ನಾಸ್ತಿ ಶ್ಲಾಘ್ಯಸ್ತತ್ರಾಲ್ಪಧೀರಪಿ |
ನಿರಸ್ತ ಪಾದಪೇ ದೇಶೇ ಏರಂಡೋಪಿ ದ್ರುಮಾಯತೇ||

-ಹಂಸಾನಂದಿ

 

ಗೌರತ್ತೆ

ಗೌರತ್ತೆ ಯಾಕೋ ಇವತ್ತು ನಮ್ಮ ಗೌರತ್ತೆ ನೆನಪು ತುಂಬಾ ಕಾಡ್ತಾ ಇದೆ. ಮನುಷ್ಯನ ಸ್ವಭಾವವೇ ಹಾಗೆ.ಮನೆಯಲ್ಲಿ ಮನೆಮಂದಿಯೆಲ್ಲಾ ಆರೋಗ್ಯವಾಗಿ ಸುಖವಾಗಿದ್ದಾಗ , ಕೈತುಂಬಾ ಕಾಸು ಓಡಾಡ್ತಾ ಇದ್ದಾಗ , ಯಾರ ನೆನಪೂ ಆಗುಲ್ಲಾ. ಅರೆ ನಾನು ಕಷ್ಟಪಟ್ಟು ಕೆಲಸ ಮಾಡ್ತೀನಿ, ಕೈತುಂಬಾ ದುಡೀತೀನಿ, ಯಾರ ಮುಲಾಜು ಏನು? ಸೋಮಾರಿಗಳಾದ್ರೆ ಅವರಿಗೆ ಬದುಕು ಕಷ್ಟ, ಕಷ್ಟ ಪಟ್ಟು ಕೆಲಸ ಮಾಡೋರು ಯಾಕೆ ಹೆದರಬೇಕು? ನಮ್ಮ ಮೂಗಿನ ನೇರಕ್ಕೆ ಎಷ್ಟೆಲ್ಲಾ ಮಾತನಾಡ್ತೀವಿ ರೀ. ಏನೋ ಆ ಭಗವಂತ ಎಲ್ಲವನ್ನೂ ಚೆನ್ನಾಗಿ ಕೊಟ್ಟಾಗ ಹೀಗೆ ನಾವು ಅವನನ್ನೂ ಮರೆತು ಮಾತನಾಡ್ತೀವಿ. ಆದರೆ ಒಂದು ಚಿಕ್ಕ ಕಷ್ಟ ಬಂತೂ ಅಂದ್ರೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಆಡ್ತೀವಿ. ಆಲ್ವಾ?

ಹುಚ್ಚರ ಸಂತೆ

ಹುಚ್ಚರ ಸಂತೆ:

ಏನಾದರೇನಂತೆ
ಇದು ಒಂದು ಸಂತೆ
ಚಿಂತೆ ಇಲ್ಲದೆ ವ್ಯಾಪಾರ
ಇಲ್ಲಿ ನಡೆದಿದೆಯ೦ತೆ
ಸತ್ಯಕ್ಕೆ ಸ೦ತೆಯಲಿ
ಬೆಲೆಇಲ್ಲವಂತೆ
ಸುಳ್ಳನ್ನೇ ಹೇಳಿದವ
ಶ್ರೀಮಂತ ನಂತೆ!!

ಪ್ರೀತಿ ಪ್ರೇಮಗಳಿಲ್ಲಿ
ವ್ಯಾಪಾರವಂತೆ
ನೀತಿ ನ್ಯಾಯಗಳ
ಹೆಸರಿಲ್ಲವಂತೆ
ಬಣ್ಣವಿಲ್ಲದೇ ನಾಟಕ
ಆಡುತಿಹರಂತೆ
ನೋಡುವಾ ನಾವೆಲ್ಲ
ಕುರಿಮಂದೆಯಂತೆ

ಜಗವೊ೦ದು ,