ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೩

ಮುತ್ತುಸ್ವಾಮಿ ದೀಕ್ಷಿತರುಶ್ರೀ ಮುತ್ತುಸ್ವಾಮಿ ದೀಕ್ಷಿತರು (೧೭೭೫ - ೧೮೩೫): ತಿರುವಾರೂರಿನಲ್ಲೇ ಜನಿಸಿದ ಶ್ರೀ ಮುತ್ತುಸ್ವಾಮಿ ದೀಕ್ಷಿತರು ಸಂಗೀತ ತ್ರಿಮೂರ್ತಿಗಳಲ್ಲಿ ಕಿರಿಯರು. ಸಂಗೀತ ವಿದ್ವಾಂಸರಾದ, ವಾಗ್ಗೇಯಕಾರರಾದ ರಾಮಸ್ವಾಮಿ ದೀಕ್ಷಿತರ ಹಾಗೂ ಭಾಗಿರಥಮ್ಮನವರ ಪುತ್ರರಾಗಿ ಜನಿಸಿದರು. ತಂದೆಯಿಂದಲೇ ಸಂಗೀತವನ್ನು ಕಲಿತರು. ವೈಣಿಕರಾಗಿ, ಗಾಯಕರಾಗಿ, ಸಂಸ್ಕೃತ, ತಂತ್ರಶಾಸ್ತ್ರ, ಮಂತ್ರಶಾಸ್ತ್ರ, ಜ್ಯೋತಿಶಾಸ್ತ್ರ, ಅಲಂಕಾರ ಶಾಸ್ತ್ರಗಳಲ್ಲಿ ನಿಷ್ಣಾತರಾಗಿದ್ದರು. ಚಿದಂಬರನಾಥ ಯೋಗಿಗಳಿಂದ ಶ್ರೀವಿದ್ಯಾಮಂತ್ರೋಪದೇಶವನ್ನು ಪಡೆದರು. ಗುರುಗಳೊಡನೆ ಕಾಶಿಗೆ ತೆರಳಿ ಅಲ್ಲಿ ಐದು ವರ್ಷಗಳ ಕಾಲ ಮಂತ್ರಜಪವನ್ನು ನಡೆಸಿದರು. ಗಂಗಾನದಿಯಲ್ಲಿ ನಿಂತು ಜಪವನ್ನು ಮಾಡಿ ಮುಗಿಸಿದಾಗ ಅವರ ಕೈಗೆ ವೀಣೆಯು ತಾನಾಗಿಯೇ ಬಂದಿತ್ತು. ಕಾಶಿಯಲ್ಲಿದ್ದಾಗ ದೀಕ್ಷಿತರು ಕರ್ನಾಟಕ ಸಂಗೀತದ ಜೊತೆ ಹಿಂದೂಸ್ಥಾನಿ ಸಂಗೀತವನ್ನು ಅಭ್ಯಾಸ ಮಾಡಿದರು. ಚಿಕ್ಕಂದಿನಲ್ಲೇ ಇವರಿಗೆ ಪಾಶ್ಚಾತ್ಯ ಸಂಗೀತದ ಪರಿಚಯವಾಯಿತು. ತಂದೆಗೆ ಆಪ್ತಮಿತ್ರರಾದ ಚರ್ಚಿನ ಪಾದರಿಗಳ ಸಹವಾಸದಲ್ಲಿ ಪಾಶ್ಚಾತ್ಯ ಸಂಗೀತದ ರೂಢಮೂಲಗಳನ್ನು ಅರಿತುಕೊಂಡರು. ಹೀಗೆ ಮೂರು ಮುಖ್ಯವಾದ ಶಾಸ್ತ್ರೀಯ ಸಂಗೀತ ಪದ್ಧತಿಗಳ ಪರಿಚಯವಾಯಿತು.

ನಿಷ್ಕಲ್ಮಶ ಚಿಲುಮೆ

ನನ್ನ ಅವಳ ನಡುವೆ ಪ್ರೀತಿ ಬೆಳೆದು ಸುಮಾರು ಒಂಭತ್ತು ವರುಷಗಳೇ ಆಯಿತು. ಅವಳ ಹೆಸರು ಮಧುರಿಮ, ಖಾಸಗಿ ಶಾಲೆಯೊಂದರಲ್ಲಿ
ಪ್ರಾಧ್ಯಾಪಕಿ. ಸದಾ ಹಸನ್ಮುಖಿ ಶಾಂತ ಸ್ವಭಾವದವಳು. ಅವಳ ಈ ಗುಣಗಳನ್ನು ಉತ್ಕಟವಾಗಿ ಆರಾಧಿಸುತ್ತೇನೆ. ಈ ಪ್ರೀತಿಯೆ ಹಾಗೆ
ಯಾರನ್ನು ಬಿಡುವುದಿಲ್ಲ ಅನ್ನಿಸುತ್ತೆ ನನಗೆ.

ನಾನು ಕಂಡಂತೆ ’ಜುಗಾರಿ ಕ್ರಾಸ್’

ಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಅವರ ಪ್ರತಿಯೊಂದು ಕೃತಿಗಳು ವಿಶಿಷ್ಟವಾದವುಗಳು. ನಾನು ಅವರ ಜುಗಾರಿ ಕ್ರಾಸ್ ಕಾದಂಬರಿಯನ್ನು ಇತ್ತೀಚಿಗೆ ಪುನಃ ಓದಿದೆ. ಈ ಕಾದಂಬರಿ ಕಾಣಬರುವ ವಿಚಾರಗಳನ್ನು ನನಗೆ ಅನಿಸಿದ ಮಟ್ಟಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ.

ನಾನು ಕಂಡಂತೆ ’ಜುಗಾರಿ ಕ್ರಾಸ್’

ಪುಸ್ತಕದ ಲೇಖಕ/ಕವಿಯ ಹೆಸರು
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು
ಪುಸ್ತಕ ಪ್ರಕಾಶನ

ಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಅವರ ಪ್ರತಿಯೊಂದು ಕೃತಿಗಳು ವಿಶಿಷ್ಟವಾದವುಗಳು. ನಾನು ಅವರ ಜುಗಾರಿ ಕ್ರಾಸ್ ಕಾದಂಬರಿಯನ್ನು ಇತ್ತೀಚಿಗೆ ಪುನಃ ಓದಿದೆ. ಈ ಕಾದಂಬರಿ ಕಾಣಬರುವ ವಿಚಾರಗಳನ್ನು ನನಗೆ ಅನಿಸಿದ ಮಟ್ಟಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ.

ವಿಜಯಕರ್ನಾಟಕ ಇ-ಪೇಪರ್

ಇತ್ತೀಚೆಗೆ ವಿಜಯಕರ್ನಾಟಕ ಇ-ಪೇಪರ್ ಏಕೆ ತೆರೆದುಕೊಳ್ಳುತ್ತಿಲ್ಲ? ವೆಬ್ ವಿಳಾಸ ಬದಲಾಗಿದೆಯೇ?
ನಾನು ಪ್ರಯತ್ನಿಸಿದ್ದು : www.vijaykarnatakaepaper.com

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೨

ತ್ಯಾಗರಾಜರುಶ್ರೀ ತ್ಯಾಗರಾಜರು (೧೭೬೭ - ೧೮೪೭): ಕರ್ನಾಟಕ ಸಂಗೀತ ಚರಿತ್ರೆಯಲ್ಲಿ ವಾಗ್ಗೇಯಕಾರ ಸಾರ್ವಭೌಮ ಎನಿಸಿಕೊಂಡ ತ್ಯಾಗರಾಜರು ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರು. ತಿರುವಾರೂರಿನಲ್ಲಿ ರಾಮಬ್ರಹ್ಮ ಮತ್ತು ಸೀತಮ್ಮ ದಂಪತಿಗಳಿಗೆ ಜನಿಸಿದ ಇವರು ಬಾಲ್ಯದಲ್ಲಿಯೇ ಸಂಗೀತ, ಸಾಹಿತ್ಯ, ವೇದ, ಪುರಾಣ, ಉಪನಿಷತ್ತು, ಅಲಂಕಾರ ಶಾಸ್ತ್ರಗಳ ಅಧ್ಯಯನ ಮಾಡಿದ್ದರು. ತಮ್ಮ ಐದನೇ ವಯಸ್ಸಿನಲ್ಲೇ ವಾಲ್ಮೀಕಿ ರಾಮಾಯಣದ ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳನ್ನು ಕಂಠಪಾಠ ಮಾಡಿ ಶ್ರೀ ತ್ಯಾಗರಾಜರು ಸುಮಧುರವಾಗಿ ಹಾಡುತ್ತಿದ್ದರು. ತಂದೆ ರಾಮಬ್ರಹ್ಮರ ರಾಮಾಯಣದ ವ್ಯಾಖ್ಯಾನಕ್ಕೆ ಶ್ಲೋಕಗಳನ್ನು ಹಾಡುತ್ತಿದ್ದರು.

ಸೊಂಠಿ ವೆಂಕಟರಮಣ ಭಾಗವತರ ಶಿಷ್ಯರಾಗಿ, ತಮ್ಮ ಎಂಟನೇ ವಯಸ್ಸಿನಲ್ಲಿ ಶಿಷ್ಯವೃತ್ತಿಯನ್ನು ಆರಂಭಿಸಿ, ಎರಡು ವರ್ಷಗಳ ಕಾಲಾವಧಿಯಲ್ಲಿ ಸಂಗೀತದಲ್ಲಿ ಪಾರಂಗತರಾದರು. ಗುರುಗಳು ಹೆಮ್ಮೆಯಿಂದ "ದೊರಕುನಾ ಇಟುವಂಟಿ ಶಿಷ್ಯುಡು" ಅಂದರೆ "ಇಂತಹ ಶಿಷ್ಯನು ದೊರಕುವನೇ" ಎಂದು ಸಭಿಕರ ಮುಂದೆ ತ್ಯಾಗರಾಜರನ್ನು ಹೊಗಳಿದರು.

ದೀಪಾವಳಿಯ "ದೇವೀರಮ್ಮ" ಯಾರು?

ಹಬ್ಬ ಒಂದೇ ಆದರೂ ಆಚರಣೆಗಳಲ್ಲಿ ಬೇರೆ ಇರುತ್ತವೆ.

ಈ ದೀಪಾವಳಿಯ ದಿನ ಕೆಲವರು "ದೇವೀರಮ್ಮ" ಅನ್ನೋ ಆಕೆಯನ್ನ ನೆನೆಯುತ್ತಾರೆ. ಈಕೆ ಯಾರು ಅನ್ನುವುದರ ಬಗ್ಗೆ ಯಾರಾದರೂ ಬೆಳಕು ಚೆಲ್ಲುವಿರ?!

ಗೆಳತಿಯ ಭೂತ

ಗೆಳತಿಯ ನೋಡಲು ಹೋದರೆ
ಸಿಕ್ಕಿದ್ದು ಅವಳನ್ನು ಕೊಂದೆನೆನ್ನುವ ಭೂತ

ಕುಸಿವ ಜೀವಕೆ ಉಸಿರ ತುಂಬುತಲೆ
ಕೊಂದೆಯೇಕೆ ಎಂದರೆ-"ನಾನು ಬದುಕಲು"
ಎನ್ನಬೇಕೆ ಭಂಡ ಭೂತ!

ಗಂಗೆತ್ತು !

ಈ ಎತ್ತುಗಳನ್ನು ಮನೆ-ಮನೆಗೂ ಹೊಡೆದುಕೊಂಡು ಬಂದು, ಹಣಬೇಡಿ ಜೀವಿಸುವರಲ್ಲಿ ಒಬ್ಬ ವ್ಯಕ್ತಿಯನ್ನು ನಾನು ಘಾಟ್ಕೋಪರಿನಲ್ಲಿನ ನಮ್ಮಮನೆಯ ಬಳಿ ಕಂಡಿದ್ದೆ. ಕೆಲವು ಪದ್ಧತಿಗಳು, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಒಂದೇ. ಉದಾಹರಣೆಗೆ, ಮದುವೆಯಾದ ಹೊಸದರಲ್ಲಿ ಮದುಮಗಳು ಹಸಿರುಬಳೆ ಧರಿಸಿರುತ್ತಾಳೆ.

ನರಕ ಚತುರ್ದಶಿ ಮತ್ತು ದೀಪಾವಳಿ

ನರಕಚತುರ್ದಶಿ ಲೋಕ ಕಂಟಕನಾಗಿದ್ದ ನರಕಾಸುರ ಹತನಾದ ದಿನ.ಶ್ರೀಮನ್ ಮಹಾವಿಷ್ಣುವಿನ ಅವತಾರವೆಂದೇ ನಂಬಿರುವ ಶ್ರೀಕೃಷ್ಣ ನರಕಾಸುರನನ್ನು ವಧಿಸಿದ ದಿನ.ನರಕಾಸುರ ಬಂಧಿಸಿಟ್ಟಿದ್ದ ಹದಿನಾರು ಸಾವಿರದ ನೂರ ಎಂಟು ಸ್ತೀಯರನ್ನು ಬಂಧಮುಕ್ತಗೊಳಿಸಿ ತಾನೇ ಅವರೆಲ್ಲರನ್ನೂ ಶ್ರೀ ಕೃಷ್ಣ ವರಿಸುತ್ತಾನೆ.ಇದು ಲೀಲಾಮಯ ಶ್ರೀಕೃಷ್ಣನ ಭಾಗವತದ ಕತೆಗಳಲ್ಲಿ ಒಂದು.