ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೊಂಕಣಿಯಲ್ಲೂ ಲೇಖನ, ದೇವರ ಹಾಡು, ಕಥೆ, ಸಂಭಾಷಣಾ ರೂಪ ಇದನ್ನು ಬರೆಯಬಹುದೇ?

ನಮ್ಮ ಕೊಂಕಣಿಯಲ್ಲೂ ಈಗ ತುಂಬಾ ಪುಸ್ತಕಗಳು ಪ್ರಕಟವಾಗುತ್ತವೆ. ನಮ್ಮ ಕೊಂಕಣಿ ಭಾಷೆ ಮಾತನಾಡುವವರು ಎಲ್ಲಾ ಧರ್ಮದಲ್ಲೂ ಇದ್ದಾರೆ. ಕೊಂಕಣಿಗರು- ಗೌಡ ಸಾರಸ್ವತ ಬ್ರಾಹ್ಮಣರು, ಸಾರಸ್ವತರು, ಕ್ರೈಸ್ತರು, ಮುಸ್ಲಿಮರು, ಕುಡುಬಿಗಳು, ಗೋವಾದಲ್ಲಿರುವ ಎಲ್ಲರೂ ಹೀಗೆ ಕೊಂಕಣಿ ಭಾಷೆ ತುಂಬಾ ಜನಮಾತನಾಡುತ್ತಾರೆಂದು ಅದಕ್ಕೆ ಸಂವಿಧಾನದಲ್ಲೂ ಸ್ಥಾನ ಸಿಕ್ಕಿದೆ.

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೧

ಶ್ಯಾಮಶಾಸ್ತ್ರಿಗಳು
ಶ್ಯಾಮಶಾಸ್ತ್ರಿಗಳು (ಕ್ರಿ.ಶ. ೧೭೬೨ - ೧೮೨೭): ಸಂಗೀತ ತ್ರಿಮೂರ್ತಿಗಳಲ್ಲಿ ಹಿರಿಯವರಾದ ಶ್ಯಾಮಶಾಸ್ತ್ರಿಗಳು ಕಾಮಾಕ್ಷಿದೇವಿಯ ಉಪಾಸನೆಯನ್ನು ಮಾಡಿ ದೇವಿಯನ್ನು ಒಲಿಸಿಕೊಂಡು, ಅವಳೊಡನೆ ಮಾತನಾಡಿದ್ದರು. ಬಂಗಾರು ಕಾಮಾಕ್ಷಿಯನ್ನು ಎಡೆಬಿಡದೆ ಆರಾಧಿಸಿದ್ದರು. ಅವಳನ್ನು ತಮ್ಮ ಕೃತಿಗಳ ಮೂಲಕ ನಾನಾ ವಿಧದಲ್ಲಿ ಬೇಡಿದ್ದರು. ಅದರಲ್ಲೂ ದೇವಿಯನ್ನು ತಾಯಿಯೆಂದೇ ಸಂಭೋದಿಸಿ ಆನಂದ ಪಟ್ಟಿದ್ದರು.

ಶ್ಯಾಮಶಾಸ್ತ್ರಿಗಳು ತಿರುವಾರೂರಿನಲ್ಲಿ ಜನಿಸಿದರು. ತಂದೆ ವಿಶ್ವನಾಥ ಅಯ್ಯರ್‍. ವೆಂಕಟಸುಬ್ರಹ್ಮಣ್ಯನೆಂದು ಮಗುವಿಗೆ ನಾಮಕರಣ ಮಾಡಿದರು. ಮುದ್ದಿನಿಂದ ಶ್ಯಾಮಕೃಷ್ಣನೆಂದು ಮಗುವನ್ನು ಕರೆಯುತ್ತಿದ್ದರು. ಮುಂದೆ ಶ್ಯಾಮಶಾಸ್ತ್ರಿಗಳೆಂಬ ಹೆಸರೇ ಜನಜನಿತವಾಗಿ ಉಳಿಯಿತು. ಶ್ಯಾಮಶಾಸ್ತ್ರಿಗಳು ವೇದಾಧ್ಯಯನ, ವ್ಯಾಕರಣ, ಛಂದಸ್ಸು, ಸಾಹಿತ್ಯ ಮುಂತಾದ ಶಾಸ್ತ್ರಗಳಲ್ಲಿ ಪಾರಂಗತರು. ಸಂಗೀತವನ್ನು ತಮ್ಮ ಸೋದರಮಾವನಿಂದ ಕಲಿತರು.

ದೀಪಾವಳಿ ಹಬ್ಬ

ದೀಪಾವಳಿ ಹಬ್ಬ ಎಂಬುದು ಹಿಂದು ಧರ್ಮದವರಿಗೆ ದೀಪ ಬೆಳಗಿಸುವ ಒಂದು ಮಹತ್ವದ ಹಬ್ಬವಾದರು. ಈಗಿನ ಸಮಾಜದವರಿಗೆ ಪಟಾಕಿಯನ್ನು ಸಿಡಿಸುವ ಮಹತ್ವದ ಹಬ್ಬವಾಗಿದೆ.

ಗೆಳತಿ ಪತ್ರ

ಹೂಗಳ ಮಧ್ಯೆ ಇತ್ತಾ ಒಂದೊಂದು ಹೆಜ್ಜೆ
ತುಂತುರಿನ ಸ್ಪರ್ಶ ತಾಕಿದ ಘಳಿಗೆ
ಹರಿಯುವ ನೀರು ಪಾದ ತಾಕಿದ ವೇಳೆ
ನಿನ್ನ ನೆನಪೇ ಗೆಳೆಯಾ....ನಿನ್ನ ನೆನಪೇ....

ಕಾಲ ಮುಂದೆ ಹೋಗುತ್ತಿಲ್ಲಾ..?
ಸೂರ್ಯ ಕಣ್ಣಿಗೆ ಕಾಣುತ್ತಿಲ್ಲಾ..?
ಚಂದಿರನ ಕಾಯೋ ತಾಳ್ಮೆ ನನಗಿಲ್ಲಾ..?
ಹಸಿರಿನ ಮೈ ಮುಟ್ಟೋ ಮಳೆ ಹನಿ
ನನ್ನ ಕೈಯಲ್ಲಿಲ್ಲ...
ಮೋಡದಲ್ಲಿರೋ ಅಕಲ್ಮಶ ಪ್ರೀತಿ

ಶಾಸ್ತ್ರೀಯ ಭಾಷೆಗಳು ಹಾಗೂ ಕನ್ನಡ

ಕಳೆದ ಮೂರ್ನಾಲ್ಕು ವರ್ಷಗಳಿಂದ ಈ "ಕ್ಲಾಸಿಕಲ್" ಭಾಷೆ ಕುರಿತು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಭಾರೀ ಚರ್ಚೆಯೇ ನಡೆದಿದೆ. UNESCO(ಯುನೆಸ್ಕೊ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ) ಬಹಳ ವರ್ಷಗಳ ಹಿಂದೆಯೇ ಭಾರತದ ಅತ್ಯಂತ ಪ್ರಾಚೀನ ಭಾಷೆಯೆಂದು ಸಾಮಾನ್ಯವಾಗಿ ಪರಿಗಣಿಸಲ್ಪಟ್ಟಿರುವ ಸಂಸ್ಕೃತವನ್ನು ಒಳಗೊಂಡಂತೆ ಕ್ಲಾಸಿಕಲ್ ಗ್ರೀಕ್, ಲ್ಯಾಟಿನ್ ಮತ್ತು ಕ್ಲಾಸಿಕಲ್ ಪರ್ಶಿಯನ್ (ಇಂಡೋ-ಯುರೋಪಿಯನ್ ಭಾಷೆಗಳು) ಕ್ಲಾಸಿಕಲ್ ಚೈನೀಸ್ (ಸೈನೊ-ಟಿಬೆಟಿಯನ್ ಭಾಷೆ) ಭಾಷೆಗಳನ್ನು "ಕ್ಲಾಸಿಕಲ್" ಭಾಷೆಗಳೆಂದು ಗುರುತಿಸಿತ್ತು. ನಮ್ಮ ದೇಶದಲ್ಲಿ ಈ ಶಾಸ್ರೀಯ ಭಾಷೆ ಎಂಬುದರ ಕುರಿತು ಚರ್ಚೆ ನಡೆಯಲಾರಂಭಿಸಿದ್ದು ನಮ್ಮ ನೆರೆಯ ಭಾಷೆ, ದ್ರಾವಿಡ ಭಾಷೆಗಳಲ್ಲಿಯೇ ಅತ್ಯಂತ ಪ್ರಾಚೀನ ಭಾಷೆಯೆಂದು ಹೇಳಲಾಗುವ ತಮಿಳನ್ನು ಭಾರತ ಸರಕಾರ "ಕ್ಲಾಸಿಕಲ್" ಭಾಷೆ ಎಂದು ಘೋಷಿಸಿದ ನಂತರವೇ. 2004 ನೇ ಇಸವಿ ಅಕ್ಟೋಬರ್ 12 ರಂದು ಕೇಂದ್ರ ಸರಕಾರ ಈ ಕುರಿತು ಅಧಿಸೂಚನೆ ಹೊರಡಿಸುವ ಮೂಲಕ ತಮಿಳನ್ನು ಅಧಿಕೃತವಾಗಿ "ಕ್ಲಾಸಿಕಲ್" ಭಾಷೆ ಎಂದು ಘೋಷಿಸಿತು. ಆನಂತರವಷ್ಟೇ ಕರ್ನಾಟಕದಲ್ಲಿ ಕ್ಲಾಸಿಕಲ್ ಭಾಷೆಯ ಕುರಿತು ಚರ್ಚೆ ನಡೆಯಲಾರಂಭಿಸಿದ್ದು. ಒಂದು ವೇಳೆ ತಮಿಳಿಗೆ ಕ್ಲಾಸಿಕಲ್ ಭಾಷೆ ಸ್ಥಾನಮಾನ ಸಿಗದಿದ್ದಲ್ಲಿ ಈ ಚರ್ಚೆಯೇ ಹುಟ್ಟುತ್ತಿರಲಿಲ್ಲವೇನೋ. ಅಂದು ಆರಂಭವಾದ ಚರ್ಚೆ ಇಲ್ಲಿಯವರೆಗೂ ಮುಂದುವರಿಯುತ್ತಲೇ ಬಂದಿದೆ.

ಇಲಿ ಕೊಲ್ಲುವುದು ಹೇಗೆ?

ಇಲಿಗಳ ಕಾಟ ಎಲ್ಲಿ ಇರೋಲ್ಲ ಹೇಳಿ? ಯಾರ ಮನೇಲಿ ಇರೋಲ್ಲ ಹೇಳಿ? ಮನೆ ಇಂದ ಹಿಡಿದು ವಿಧಾನ ಸೌಧ ತನಕ ಎಲ್ಲ ಕಡೆ ನು ಇವುಗಳದ್ದೇ ಕಾಟ. ( ವಿಧಾನ ಸೌಧ ದಲ್ಲಿ ಭಾರಿ ಹೆಗ್ಗಣ ಗಳೆ ಇವೆ). ಇಲಿ ಗಳನ್ನ ಸಾಯಿಸಲಿಕ್ಕೆ ಹಲವಾರು ಮಾರ್ಗ ಗಳು ಇವೆ. ಆದರೆ ಬೋನು , ವಿಷ.. ಇವೆಲ್ಲ ಬಹಳ ಹಳೆಯ ವಿಧಾನ. ಹೊಸ ಕೊಲ್ಲುವ ತಂತ್ರ ಗಳಿಗೆ ನಾನು ಸಂಶೋದನೆ ನಡೆಸಿ , ಈ ಕೆಳಕಂಡ ವರದಿ ತಯಾರಿಸಿರುವೆ.

ದೀಪಾವಳಿ

ಕಾಲ ಚಕ್ರ ಉರುಳಿ ಹೊರಳಿ
ಬಂದಿದೆ ದೀಪಾವಳಿ
ನೋವ ಮರೆತು ನಲಿವ ಕಲಿತು
ಜಗವು ಸುಖವ ಕಾಣಲಿ

ಚಂದ್ರನಿರದ ಬಾನ(ಳ) ತುಂಬ
ಕತ್ತಲೆ ಸಾಮ್ರಾಜ್ಯವು
ಕಳೆಯುತಿರಲಿ ,ಬೆಳಗುತಿರಲಿ
ಭರವಸೆಗಳ ಹಣತೆಯು

ಬಾಣ ಬಿರುಸು ಪಟಾಕಿಗಳ
ಆನಂದದ ಸಿಂಚನ
ದಣಿದ ಮನಕೆ ಆನಂದವ
ನೀಡಲಿ ಅಭ್ಯಂಜನ

ಬಲಿಯ ತ್ಯಾಗ ಹರಿಯ ಪ್ರೀತಿ
ಎಂದೂ ನಮ್ಮದಾಗಲಿ
ಕೋಪ ದ್ವೇಶ ಅಸೂಯೆಗಳು

ಕಲ್ಲೊಳಡಗಿದ ಜೀವ

ನಾನು ಆರ್ಕುಟ್ಟಿನಲ್ಲಿ ಈ ಫೋಟೋ ಹಾಕಿದ್ದೆ. ಸಾವನದುರ್ಗಕ್ಕೆ ಹೋದಾಗ ತೆಗೆದದ್ದು. ಇದಕ್ಕೆ [:user/savithasr|ಸವಿತಾರವರು] ನಿನ್ನೆ ಬರೆದ ಪ್ರತಿಕ್ರಿಯೆ ಈ ಚಿತ್ರಕ್ಕೆ ಒಂದು ಚೆಂದದ ಶೀರ್ಷಿಕೆ ಕೊಟ್ಟಿತು!
ಆ ಶೀರ್ಷಿಕೆಯೊಂದಿಗೆ ಚಿತ್ರ ಮತ್ತೆ ಹಾಕುತ್ತಿದ್ದೇನೆ ಇಲ್ಲಿ: