ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಓ ದೇವರೇ...

ಓ ದೇವರೇ,
ಕತ್ತಲೆಗೆ ತುಸು ದೈರ್ಯ ಕೊಡು,
ಮುಂಜಾವಿನ ಬೆಳಕ ಹಿಮ್ಮೆಟ್ಟಿಸಲಿ.
ನನ್ನವಳು ನನ್ನೆದೆಯ ಮೇಲೆ
ಇನ್ನೆರಡು ತಾಸು ನಿದ್ರಿಸಲಿ.

ಸಚಿನ್ ಸುಳ್ಳು ಸಾಕ್ಷ್ಯ ಹೇಳಿದ್ದರೆ?

ಗಿಲ್ಕ್ರಿಸ್ಟ್ ಅವರ ಆರೋಪಗಳ ಬಗ್ಗೆ ಸಚಿನ್ ಸಂದರ್ಶನದಲ್ಲಿ ಸಮಜಾಯಿಷಿಕೆ ನೀಡಿದ್ದಾರೆ. ಇದು ಮುಗಿದ ಅಧ್ಯಾಯ ಎಂದವರ ಕೊನೆ ಮಾತು.
http://www.ndtv.com/convergence/ndtv/video/video.aspx?id=42468

ಮುಚ್ಚಿಟ್ಟ ಸತ್ಯ

ಕನಕನತ್ತಲೇ ತಿರುಗಿ ನಿಂತ ಕೃಷ್ಣ

ಶಬರಿಯತ್ತ ನಡೆಯುತ್ತಲೇ ಬಂದ ರಾಮ

ಅಂತ್ಯಜನ ಜೊತೆಗೆ ಇರಬಯಸುವ ಮೋಹ;

 

ಕತೆ ಕೇಳುತ್ತ ದುಃಖ ಉಮ್ಮಳಿಸಿ

ಪರಮಾತ್ಮನ ಸಮಾನತೆಗೆ ಕೈ ಮುಗಿಯುವವರಿಗೆ

ಒಳಗೇ ಮುಚ್ಚಿಟ್ಟ ಸತ್ಯ ಅರ್ಥವಾಗುವುದಿಲ್ಲ:

 

ಇದೆಲ್ಲ ಈ ವ್ಯವಸ್ಥೆಯ ಮತ್ತೊಂದು ಮುಖ-

 

ದೀಪಾವಳಿಯಲ್ಲಿ ಮರ ಹಾಕುವುದು: ತುಳುನಾಡ ವಿಶೇಷ ಆಚರಣೆ

ದೀಪಾವಳಿ ಹಬ್ವವನ್ನು ಮಾತ್ರ ಜನ ಹಬ್ಬ (ಪರ್ಬ)ಎಂದು ಕರೆಯುವುದು. ಅದರಲ್ಲಿ ಬಲಿ ಪಾಡ್ಯಮಿಯು ಜನಪದರ ಪ್ರಮುಖ ಆಚರಣೆ. ಅಮಾವಾಸ್ಯೆ ಮರುದಿನ ಪಾಡ್ಯದಂದು ಮನೆಯ ಮುಖ್ಯಸ್ಥನು ಪಕ್ಕದ ಕಾಡಿಗೆ ಹೋಗಿ ಹಾಲೆ ಮರದ ಕವಲಿರುವ ಕಂಬವನ್ನು ಕಡಿದು ತಂದು ನೆಟ್ಟು ಅಲಂಕರಿಸುವುದನ್ನೆ ಮರ ಹಾಕುವುದು ಎನ್ನುತ್ತಾರೆ. ಇದು ಹೆಚ್ಚಾಗಿ ಕೃಷಿಪ್ರಧಾನ ಜನಾಂಗದಲ್ಲಿ ಮಾತ್ರ ಕಂಡು ಬರುತ್ತದೆ. ಸಂಜೆಯಾಗುತ್ತಲೆ ಕೆಲವರು ಒಂದೇ ಮರ ಹಾಕಿದರೆ ಇನ್ನು ಕೆಲವರು ಮೂರು ಕವಲಿರುವ ಮರ ಹಾಕುತ್ತಾರೆ. ಅದರಲ್ಲಿ ಒಂದಾದರೂ ಹಾಲೆಮರ (ಸಪ್ತಪರ್ಣ)ಇರಬೇಕು. ಉಳಿದದ್ದು ಶೇರೆಮರವಾದರೂ ನಡೆಯುತ್ತದೆ. ತುಳಸಿ ಕಟ್ಟೆಯ ಬಳಿ ಮರ ನೆಟ್ಟು ಅದಕ್ಕೆ ಬಾಳೆ ದಿಂದಿನ ಅಂಕಣ ಹಾಕುತ್ತಾರೆ. ಹಿಂದಿನ ದಿನಗಳಲ್ಲಿ ಮರ ಕಡಿದರೆ ಆಗುವುದಿಲ್ಲ. ಅದೇ ದಿವಸ ಕಡಿದು ತರಬೇಕು. ಇದು ಹೆಚ್ಚಾಗಿ ಪುತ್ತೂರು, ಬೆಳ್ತಂಗಡಿ ತಾಲೂಕಿನ ಗ್ರಾಮಗಳಲ್ಲಿ ದೇವಸ್ಥಾನದಲ್ಲಿ ಅಮಾವಾಸ್ಯೆಯಂದು ಮರ ಹಾಕಿದರೆ ಊರಿನಲ್ಲಿ ಮರುದಿನ ಹಾಕುತ್ತಾರೆ. ಈ ಆಚರಣೆಯ ಬಳಿಕವೇ ಭೂತಾರಾಧನೆ ಶುರು. ಪತ್ತನಾಜೆಯಂದು ಭೂತಸ್ಥಾನಗಳಲ್ಲಿ ಹಾಕಿದ ಬಾಗಿಲು ದೀಪಾವಳಿ ಬಳಿಕವೇ ತೆರೆಯುತ್ತಾರೆ. ಮರ ಹಾಕಲು ಶುದ್ಧಾಚಾರ ಅಗತ್ಯ. ಸೂತಕ ಬಂದರೆ ಹಬ್ಬವನ್ನು ಮುಂದಿನ ಹುಣ್ಣಿಮೆಗೆ ಆಚರಿಸಲಾಗುವುದು.

ಆ ಹುಡುಗಿಯ ಮನಸ್ಸು

ಧೂಳು ಹಿಡಿದು
ಕರ್ಕಷ ದನಿಯಲಿ ಕೂಗುತ್ತ
ರೀಡ್ ಮಾಡಲು ಪ್ರಯಾಸಪಡುತ್ತಿರುವ
ಫ್ಲಾಪಿ ಡ್ರೈವು
ಫ್ಲಾಪಿ ಓದಿದಂತೆಯೇ ಆಯಿತು
ಅವಳ ಮನದಲ್ಲಿರುವುದನ್ನರಿಯಲು ಪ್ರಯತ್ನಿಸಿದ್ದು.

(ಓದುಗರ ಗಮನಕ್ಕೆ:

ದೀಪಾವಳಿಯ ಹಾರ್ದಿಕ ಶುಭಾಶಯಗಳು !

ನಮ್ಮೆಲ್ಲ ಸಂಪದೀಯರಿಗೂ ಹಾಗೂ ನಮ್ಮ ಕನ್ನಡನಾಡಿನಒಳಗೆ, ಹಾಗೂ ಹೊರದೇಶಗಳಲ್ಲಿ ದುಡಿಯುತ್ತಿರುವ ಕನ್ನಡ ಮಿತ್ರರಿಗೆಲ್ಲಾ ದೀಪಾವಳಿಯ ಶುಭ ಹಾರೈಕೆಗಳು. ಅಜ್ಞಾನದ ಕತ್ತಲಿನಿಂದ ಹೊರಬಂದು, ನಮ್ಮ ಜೀವನದ ಸುಖ-ದುಖಃಗಳನ್ನು ನಮ್ಮ ಮಿತ್ರರೊಡನೆ ಹಂಚಿಕೊಳ್ಳೋಣ. ಒಬ್ಬರಿಗೊಬ್ಬರಿಗೆ ನೆರವಾಗಿ ಬಾಳೋಣ. ಜೀವನಕ್ಕೆ ಒಂದು ಹೊಸ ಅರ್ಥವನ್ನು ತರೋಣ.

ಮುಂಬಯಿ, ಠಾಕರೆ ಮತ್ತು ಕಿಡಿಗೇಡಿ ಮಾಧ್ಯಮಗಳು... ಬಾಗ ೧...

ಸಂಜೆ ಮನೆಗೆ ಬಂದವನೆ ರಿಮೋಟ್ ಮೇಲೆ ಕೈ ಇಟ್ಟು ನ್ಯೂಸ್ ಚಾನೆಲ್ಲುಗಳನ್ನು ಹುಡುಕತೊಡಗಿದೆ. ಇತ್ತೀಚೆಗೆ ರಾಜ್ ಠಾಕರೆಯನ್ನು, ಓಸಾಮಾ ಬಿನ್ ಲಾದೆನ್ ನ ಅಪ್ಪನಂತೆ ಚಿತ್ರಿಸುವುದರ ಮೂಲಕ ಈ ’ಆಜ್ ತಕ್’ ನಂಥ ಚಾನೆಲ್ಲುಗಳು ತಮ್ಮ ಟಿ.ಆರ್.ಪಿ ಯನ್ನು ಹೆಚ್ಚಿಸಿಕೊಳ್ಳುವ ಕ್ಷುದ್ರ ಪ್ರಯತ್ನದಲ್ಲಿ ತೊಡಗಿವೆ. ಲೋಕಲ್ ಟ್ರೇನಿನಲ್ಲಿ ಬರುವಾಗ, ಮುಂಬಯಿಯ ಒಂದು ಜನನಿಬಿಡ ಭಾಗದಲ್ಲಿ ೨೩ ವರ್ಷದ ಯುವಕನೊಬ್ಬನನ್ನು ’ಎನ್ ಕೌಂಟರ್’ನಲ್ಲಿ ಪೋಲೀಸರು ಕೊಂದು ಹಾಕಿದರು ಎಂಬ ಚರ್ಚೆ ಕೇಳಿ ಬರುತ್ತಿತ್ತು. ನ್ಯೂಸು ನೋಡಿದರೆ, ಅಂತಹ ಒಂದು ಘಟನೆಗೂ ರಾಜಕೀಯ ಬಣ್ಣ ಹಚ್ಚಿ ಮಜ ನೋಡುತ್ತಿದೆ ಈ ಸಬ್ ಸೆ ತೇಜ್ ಚಾನೆಲ್ಲು. ಸಾವಿರಾರು ಜನ ಓಡಾಡಿಕೊಂಡಿರುವ ಒಂದು ಮಾರುಕಟ್ಟೆಯಲ್ಲಿ, ಹಲವಾರು ಜನ ಪಯಣಿಸುತ್ತಿರುವ ಒಂದು ಬಸ್ಸಿನಲ್ಲಿ, ಯುವಕನೊಬ್ಬ ರಿವಾಲ್ವರ್ ಹಿಡಿದು ’ನನಗೆ ರಾಜ್ ಠಾಕರೆ ಬೇಕು’ ಅಂತ ಕೂಗಾಡುತ್ತ ಬಸ್ಸಿನಲ್ಲಿದ್ದ ಜನರನ್ನು ಬೆದರಿಸುತ್ತಿದ್ದರೆ, ಅಂತಹ ಯುವಕನಿಗೆ ಸಾಕಷ್ಟು ಬಾರಿ ಎಚ್ಚರಿಕೆಯನ್ನು ಕೊಟ್ಟಾಗಲೂ ಆತ ಶರಣಾಗಲು ಒಪ್ಪದಿದ್ದರೆ, ಪೋಲೀಸರು ಆತನನ್ನು ಕ್ಷಮಿಸಿ, ’ಆಯ್ತಪ್ಪ, ಇಲ್ಲೇ ಕುಂತಿರು, ನಿನಗೋಸ್ಕರ ರಾಜ್ ಠಾಕರೆಯನ್ನ ಹುಡುಕಿ ತರ್ತೀವಿ, ನೀನು ಮನಸಾರೆ ಗುಂಡು ಹೊಡೆದು ಆರಾಮವಾಗಿ ಬಿಹಾರಿಗೆ ಹೋಗು, ಆದ್ರೆ ಅಲ್ಲಿವರೆಗೆ ನೀನು ಇಲ್ಲೇ ಕುಂತು, ಪಿಜ್ಜಾ ತಿನ್ನಪ್ಪ ನನ್ನಪ್ಪ’ ಅನ್ನೋಕೆ ಇದು ಬಿಹಾರ ಅಥವಾ ಅಫಘಾನಿಸ್ತಾನ ಅಲ್ವಲ್ಲ ಸ್ವಾಮಿ. ಸಹಜವಾಗಿಯೇ ಆತನನ್ನು ಪೋಲೀಸರು ಹೊಡೆದು ಹಾಕಿದ್ದಾರೆ. ಇಷ್ಟಾಯಿತೆ... ಲಾಲೂ, ನಿತೀಶ್ ಹಾಗೂ ಪಾಸ್ವಾನ್ ರಂಥ ಅನಕ್ಷರಸ್ತ ನೇತಾರರು ’ಇದು ಮುಂಬಯಿ ಪೋಲೀಸರು ಮಾಡಿದ ಹತ್ಯೆ’ ಎಂದು ದೊಡ್ಡದಾಗಿ ಮಾಧ್ಯಮದ ಎದುರು ಹೇಳಿಕೆಯನ್ನು ನೀಡುತ್ತಾರೆ. ಸಾಕಲ್ಲವೇ ಬಿಹಾರ ಹೊತ್ತಿ ಉರಿಯಲು? ಈ ನೇತಾರರಿಗೆ ಕಣ್ಣು ಕಾಣುವುದಿಲ್ಲವೆ? ಆ ಹುಡುಗ ಬಸ್ಸಿನಲ್ಲಿ ಕುಳಿತು ಸಾರಾಸಗಟಾಗಿ ತನ್ನ ಗನ್ನಿನ ಪ್ರದರ್ಶನ ಮಾಡಿ ಜನರನ್ನು ಬೆದರಿಸುತ್ತಿದ್ದರೆ, ಪೋಲೀಸರು ಆ ಹುಡುಗನಿಗೋಸ್ಕರ ಕೂಲ್ ಡ್ರಿಂಕ್ ತರಬೇಕಿತ್ತೆ?

ದೀವಳಿಗೆಯ ದಿನಕ್ಕೊಂದು ನೆನಪು

ದೀಪಾವಳಿಯ ನರಕ ಚತುರ್ದಶಿಯ ದಿನವೇ ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರ ಪುಣ್ಯದಿನ.

ಅವರ ನೆನಪಿನಲ್ಲಿ ನಾನು ಬರೆದ ಒಂದು ಬರಹ ಇಂದು ದಟ್ಸ್ ಕನ್ನಡ ದಲ್ಲಿ ಪ್ರಕಟವಾಗಿದೆ - ಓದಲು ಕೆಳಗಿನ ಕೊಂಡಿಯನ್ನು ಚಿಟಕಿಸಿ:

ಮೀನ ಲೋಚನಿ ಪಾಶ ಮೋಚನಿ

ನೇರ ವಿಷಯಗಳಿಗಿಂತ ಟೀಕಿಸಿದಾಗ ಇತರರ ಗಮನ ಸೆಳೆದಿದ್ದೇನೆ ಏಕೆ?

ನಾನು ನೇರವಾಗಿ ಸಹಜವಾಗಿ ಬರೆದ ಲೇಖನಗಳಿಂದ ಗಮನ ಸೆಳೆದಕ್ಕಿಂತ ಯಾರನ್ನಾದರೂ ಟೀಕಿಸಿ ಬರೆದಾಗ ಬೇಱೆಯವರ ಗಮನ ಸೆಳೆದಿದ್ದು ಹೆಚ್ಚು. ಇದು ಸಂಪದದಲ್ಲಿ ಏಕೆ ಹೀಗೆ?