ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೀಪಾವಳಿ

ಬೆಳಕಿನ ಹಬ್ಬದ ಪಟಾಕಿಗಳ ಸಂಭ್ರಮದಲ್ಲಿ   ಮನಸಿನ ಕತ್ತಲು ಸರಿದು ಮನದಲ್ಲಿ ಸಂತೋಷದ ದೀಪ ಬೆಳಗಲಿ...ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.

ಹೀಗೆ ಒಂದು ಮಧ್ಯಾಹ್ನ

ಬೇಸಿಗೆಯ ಒಂದು ಶನಿವಾರ ಮಧ್ಯಾಹ್ನ

ಊಟಕ್ಕೆಂದು ಮನೆಗೆ ಹೊರಟ ವೇಳೆ,

ಸ್ಕೂಟರಿನ ಪೆಟ್ರೋಲು ಮುಗಿದು

ಹಸಿವೆಯ ಜೊತೆಗೇ ಸ್ಕೂಟರನ್ನೂ ತಳ್ಳುತ್ತ ಬಂದು

ಮನೆಯ ಗೇಟಿನೊಳಗೆ ನಿಲುಗಡೇ ಕೊಟ್ಟು

ಕುಕ್ಕರಿನಲ್ಲಿನ್ನೂ ಬಿಸಿ ಆರದೇ ಇದ್ದ ತರಕಾರಿ ಬೇಳೆಗಷ್ಟು

ಮಸಾಲೆ ಸುರಿದೆ, ಕುದಿಯಲಿಟ್ಟು

ನೋವಲ್ಲೂ ಸಂತಸ

ನಿನ್ನೆ (ಶನಿವಾರ) ಅದೇಕೋ ಮನಸ್ಸು ಭಾರ ಆಗಿತ್ತು. ಏನೋ ಒಂಥರ ತಳಮಳ. ಬಹುಶಃ ದೀಪಾವಳಿಗೆ ಊರಿಗೆ ಹೋಗಲಾಗದ್ದಕ್ಕೋ ಏನೋ. ಎಂಜಿನಿಯರಿಂಗ್ , ಕೆಲಸ ಅಂತ ಈ ೮ ವರ್ಷದಲ್ಲಿ ಇದೇ ಮೊದಲ ಬಾರಿಗೆ ನನಗೆ ಮನೆಯಲ್ಲಿ ಆಚರಿಸೋ ದೀಪಾವಳಿ ತಪ್ಪಿತ್ತು. ಇದನ್ನೇ ನನ್ನ ಗೆಳೆಯನಲ್ಲಿ ಹೇಳಿಕೊಂಡಾಗ ,ನಾಳೆ (ಭಾನುವಾರ) ಹಾಸನಾಂಬಾ ದೇವಸ್ಥಾನಕ್ಕೆ ಹೋಗಿ ಬರೊಣ.

ತ್ರಿಪದಿಗಳು

ಇಹಲೋಕಕ್ಕೂ ಪರಲೋಕಕ್ಕೂ ಪರಶಿವ ನೀನಾದರೇನು
ನಾ ನೆಚ್ಚಿ ನಂಬಿದ ಶಿವ ನನಗಿಂದು
ಪರನಂತಿಹನಲ್ಲ ಪ್ರಭುಶಂಕರ

ಅರಿತು ಬಾಳದವನ ಬಾಳು ಅರಿದಂತೆ
ಅರಿಸಿ ಮನ್ನಿಸಿ ಬಾಳ ಬಲ್ಲವನನ್ನು
ಹರಿಹರರೂ ಹರಸುವರಂತೆ ಪ್ರಭುಶಂಕರ

ಸಂತ ನಾನಲ್ಲ ಸ್ವಂತ ನನದೇನಿಲ್ಲ ಮಸಣದ
ಚಿಂತೆ ಎನಗಿಲ್ಲ ಮಸಣಗಾಹಿಯ ಒಲವೊಂದು
ಎನಗಿರಲಿ ಅನಂತ ಪ್ರಭುಶಂಕರ

ನಂಜನಗೂಡಿನಲ್ಲಿ ನಿಗೂಢ ರಾತ್ರಿ

(KKNC ಯ 2005 ರ ಸ್ವರ್ಣಸೇತುವಿಗೆ ಬರೆದಿದ್ದ ಲೇಖನ. ಈಗ 'ಮತ್ತೆ' ಅಂತರ್ಜಾಲಕ್ಕೆ ನನ್ನ ಬ್ಲಾಗ್ ಮೂಲಕ ಏರಿಸುತ್ತಿದ್ದೇನೆ.)

ಮೊನ್ನೆ (2005 ರ) ಜೂನ್‌ನಲ್ಲಿ ಹೆಂಡತಿ ಮತ್ತು ಮಗುವಿನೊಂದಿಗೆ ಭಾರತದ ಪ್ರವಾಸ ಹೋಗಿದ್ದಾಗ ಸುಮಾರು ನಾಲ್ಕು ವಾರಗಳನ್ನು ನನ್ನದೇ ತರಲೆ ತಾಪತ್ರಯಗಳಲ್ಲಿ, ಬರಬಾರದ, ಬಯಸಬಾರದ ಅನುಭವ ಮತ್ತು ಕಷ್ಟಗಳಲ್ಲಿ ಕಳೆದೆ. ಒಳ್ಳೆಯ ಸಮಯ ಇರಲೇ ಇಲ್ಲ ಅಂತಲ್ಲ; ಬೆಲ್ಲಕ್ಕಿಂತ ಬೇವೇ ಹೆಚ್ಚಿತ್ತು. ಹಾಗಾಗಿ, ಉಳಿದ ಒಂದು ವಾರದಲ್ಲಾದರೂ ಒಂದೆರಡು ದಿನ ಮನೆಯವರೆಲ್ಲರ ಜೊತೆ ಎಲ್ಲಾದರೂ ಹೋಗಿಬರೋಣ ಎಂದು ಶನಿವಾರ ಮಧ್ಯಾಹ್ನ ನಮ್ಮ Scorpio ವ್ಯಾನಿನಲ್ಲಿ ಅಮ್ಮ, ಅಣ್ಣ, ಅತ್ತಿಗೆ, ಅಣ್ಣನ ಇಬ್ಬರು ಮಕ್ಕಳು, ನನ್ನ ಹೆಂಡತಿ ಮತ್ತು ನನ್ನ ಒಂಬತ್ತು ತಿಂಗಳ ಮಗುವಿನೊಂದಿಗೆ ಮೈಸೂರಿನತ್ತ ಹೊರಟೆವು; ಯಾವುದೇ ಪೂರ್ವಸಿದ್ದತೆಗಳಿಲ್ಲದೆ. ಬೆಂಗಳೂರು ಹೊಸೂರು ರಸ್ತೆಯಲ್ಲಿರುವ ನನ್ನ ಊರಾದ ಬೊಮ್ಮಸಂದ್ರದಿಂದ ಹೊರಟು ಬೆಂಗಳೂರಿನ ಟ್ರಾಫಿಕ್ ಅನ್ನು ಭೇದಿಸಿಕೊಂಡು ಮೈಸೂರು ರಸ್ತೆ ಸೇರುವಷ್ಟರಲ್ಲಿ ನಮಗೆಲ್ಲಾ ಸಾಕುಸಾಕಾಗಿತ್ತು. ಡಬಲ್ ರೋಡ್ ಆಗುತ್ತಿರುವ ಆ ರಸ್ತೆಯಲ್ಲಿ ವೇಗ ನಿಧಾನಗಳನ್ನು ಅರ್ಥಮಾಡಿಕೊಳ್ಳುತ್ತ ರಾಮನಗರ ದಾಟಿ, ನಾಗೇಗೌಡರ ಪ್ರಸಿದ್ಧ ಜಾನಪದ ಲೋಕದ ಬಳಿಯ ಕಾಮತ್ ಲೋಕರುಚಿಯಲ್ಲಿ ಊಟಕ್ಕೆ ನಿಲ್ಲಿಸಿದೆವು. ಶುಚಿರುಚಿಯ ಜೋಳದ ರೊಟ್ಟಿ ಊಟ. ಮೈತೂಕ ಒಂದೆರಡು ಕೇಜಿ ಹೆಚ್ಚಾಯಿತೇನೋ! ಭಾರವಾದ ಮೈಯಿಂದಲೇ ನಿಧಾನಕ್ಕೆ ಜಾನಪದ ಲೋಕ ಸಂದರ್ಶಿಸಿದೆವು. ನೆನ್ನೆ ಮೊನ್ನೆಯ ಜೀವನ ಶೈಲಿ, ದಿನಬಳಕೆಯ ವಸ್ತುಗಳು ವಸ್ತು ಸಂಗ್ರಹಾಲಯ ಸೇರುತ್ತಿರುವ ವೇಗ ಹಾಗೂ ಬದಲಾಗುತ್ತಿರುವ ಪ್ರಪಂಚದ ದೃಷ್ಟಾಂತ ಈ ಜಾನಪದ ಲೋಕ ಎನ್ನಿಸಿತು.

ಇಲ್ಲಿಂದ ಹೊರಟ ನಮ್ಮ ವಾಹನ ಮುಂದೆ ನಿಂತದ್ದು ಶ್ರೀರಂಗಪಟ್ಟಣದ ಶ್ರೀರಂಗನ ದೇವಸ್ಥಾನದ ಪಕ್ಕದಲ್ಲಿಯೇ ಟಿಪ್ಪು ಕಟ್ಟಿಸಿರುವ ಬಂದೀಖಾನೆಯ ಮುಂದೆ, ಕಾವೇರಿಯ ದಡದಲ್ಲಿ. ಅಲ್ಲಿಂದ ಕಾವೇರಿ ನದಿ, ಅದರ ಮೇಲೆ ಕಟ್ಟಿರುವ ಬಸ್ಸು ರೈಲುಗಳ ಸೇತುವೆಗಳು, ಬೆಂಗಳೂರಿನತ್ತ ಹೊರಟಿದ್ದ ಉದ್ದದ ರೈಲು ವೀಕ್ಷಿಸಿ, ಕೆಂಡದ ಮೇಲೆ ಸುಟ್ಟು, ನಿಂಬೆ ರಸ, ಉಪ್ಪುಮೆಣಸು ಸವರಿದ ಜೋಳವನ್ನು ಮೆಲ್ಲುತ್ತಾ

ಪತ್ತೇದಾರಿ ಕಾದಂಬರಿಕಾರ ನರಸಿಂಹಯ್ಯನವರು

ಇವತ್ತು ಬೆಳೆಗ್ಗೆ ದೂರದರ್ಶನದ ಚಂದನದಲ್ಲಿ ಪತ್ತೇದಾರಿ ಕಾದಂಬರಿಕಾರರಾದ ನರದಿಂಹಯ್ಯನವರ ಸಂದರ್ಶನ ಇತ್ತು. ಮೊದಲು ತಿಳಿದುಕೊಂಡ ವಿಷಯವೆಂದರೆ ಅವರು ೮೩ ವರ್ಷದ ವೃದ್ಧರು. ಎರಡನೆ ವಿಷಯ ಅಂದರೆ ಅವರ ವಿದ್ಯಾಭ್ಯಾಸ ಕನ್ನಡ ನಾಲ್ಕನೆಯ ತರಗತಿಯವರೆಗಷ್ಟೆ.

ಎರಡು ಹದಿನಾಲ್ಕಱ ಮಹತ್ವವೇನು?

ಫೆಬ್ರುವರಿ ೧೪ (Valentine's day) ಮತ್ತು ನವಂಬರ್ ೧೪ (ಮಕ್ಕಳ ದಿನಾಚರಣೆ).
ನೀವೇನಾದರೂ ನಿಮ್ಮ ಪ್ರೇಯಸಿಗೆ ಹೂ ಕೊಟ್ಟು ಪ್ರೇಮ ಫೆಬ್ರುವರಿ ೧೪ಕ್ಕೆ ಪ್ರೇಮ ಕುದುರಿದರೆ ನವಂಬರ್ ೧೪ಱಷ್ಟು ಹೊತ್ತಿಗೆ ಮಕ್ಕಳ ದಿನಾಚರಣೆಗೆ ತಯಾರಾಗಿರಿ. ಇವೆರಡಱ ನಡುವೆ ಸರಿಯಾಗಿ ೯ ತಿಂಗಳ ಅಂತರವಿದೆ. :) :D