ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅರ್ಧಕ್ಕೇ ನಿಂತ ಪದ್ಯಗಳು

ಮುಂಜಾನೆಯಿಬ್ಬನಿಯಲ್ಲಿ ಕನಸರೂಪದಿ ಕಾಡುವ ಕವಿತೆ,

ಅಲರಾಂ ಸದ್ದಿಗೆ ಬೆದರಿ, ಹೊದ್ದ ಹೊದಿಕೆಯೊಳಗೇ ಅಡಗಿ ಬಿಡುತ್ತದೆ.

ತುಳಸಿ, ನೀರು, ರಂಗವಲ್ಲಿಗಳ ನಡುವೆ ಚಿತ್ತದಲಿ ಚಿತ್ತಾರ ಬಿಡಿಸುತ್ತಿದ್ದ ಕವಿತೆ

ಮಗಳ ನಿಲ್ಲದ ಅಳುವಿಗೆ ಹೆದರಿ ಎದೆಯೊಳಗೆಲ್ಲೋ ಮುದುಡಿ ನಿಲ್ಲುತ್ತದೆ.

ಓಶೋ ಸನ್ನಿಧಿಯ ಮೂವರು ಧ್ಯಾನಿಗಳು

ನಮಗೆಲ್ಲ ಅಂದರೆ ಶಿಬಿರಾರ್ಥಿಗಳಿಗೆ ಶಿಬಿರದ ಬಗ್ಗೆ, ಹೊಸದಾಗಿ ಕಟ್ಟಲಾಗಿರುವ ಧ್ಯಾನ ಸಭಾಂಗಣದ ಬಗ್ಗೆ ವಿವರಿಸಿದ ಮಹಾನುಭಾವರೇ ವೇಣುಗೋಪಾಲ್ ಎಂದು ತಿಳಿದದ್ದು ಅವರು ತಮ್ಮನ್ನು ಪರಿಚಯಿಸಿಕೊಂಡ ಮೇಲೆಯೇ.

ಎದೆ ಬಡಿತ ನೀನಾದೆ ಏಕೆ....?

ಪ್ರತಿ ಕ್ಷಣವು ಉಸಿರಾಗಿ ಕಾಡಿರುವೆ ಏಕೆ....?
ನೆನಪಾಗಿ ಕಣಕಣದಿ ಬೆರೆತಿರುವೆ ಏಕೆ.....?
ಹಗಲು ಕಳೆಯದು, ರಾತ್ರಿ ಕರಗದು
ಒಂದೊಂದು ಘಳಿಗೆಯು ಯುಗವಾಗಿದೆ ಏಕೆ....?

ನೀ ಮರೆತೆ, ನೀ ತೊರೆದೆ
ಬಲುದೂರ ನೀ ನಡೆದೆ....
ಮರೆತರೂ... ತೊರೆದರೂ...!
ಎದೆಬಡಿತ ನೀನಾದೆ ಏಕೆ.......? ಏಕೆ....?

ನಿಸ್ವಾರ್ಥ ಪ್ರೇಮವ ಬಯಸಿ ಸ್ವಾರ್ಥಿ ನಾನಾದೆ...
ನನ ಪ್ರೀತಿಯ ಧಿಕ್ಕರಿಸಿ ಚಿರನೋವ ನೀಡಿದೆ ಏಕೆ.....?

ನಿನ್ನ ನೋಟದಲ್ಲಿ....

ನೋಟದಲಿ... ನಿನ್ನ ನೋಟದಲಿ...
ಮನದ ಮೂಲೆಯಲಿ ಅಡಗಿಹ ಕನಸುಗಳ
ಎಲ್ಲೆ ಮೀರಿದ ಹುಚ್ಚು ಭಾವಗಳ ಕೆರಳಿಸೋ ಸೆಳೆತವಿದೆ ಗೆಳತಿ......
ಆಳದಲಿ... ನಿನ್ನ ಕಿರುನಗೆಯ ಆಳದಲಿ...
ಕ್ಷಣದಿ ಕಳೆದುಹೋಗಿ ನಿನ್ನಲ್ಲೇ ಬಂಧಿಯಾಗುವ
ತವಕದೋಕುಳಿ ರಾಚುವ ಮಾಯೆಯಿದೆ ಗೆಳತಿ...

ದೀಪಾವಳಿಗೊಂದು ಪುಟಾಣಿಯ ಚುಟುಕ!

ಪಟಾಕಿ ಡಂ ಡಂ
ಸುರ್-ಸುರ್-ಬತ್ತಿ ಸುರ್ ಸುರ್
ಭೂಚಕ್ರ ಬುರ್ ಬುರ್...

ಕಳೆದ ದೀಪಾವಳಿ ಸಮಯದಲ್ಲಿ, ಮೇಲಿನ ಮೂರು ಸಾಲುಗಳನ್ನು ನಮ್ಮ ಪುಟಾಣಿ, ಪ್ರದ್ಯುಮ್ನ ಕಟ್ಟಿದಾಗ ಎರಡೂವರೆ ವರ್ಷ...!

ಸಂಪದಿಗರಿಗೆಲ್ಲ ನಮ್ಮ ಪುಟಾಣಿಯಿಂದ ದೀಪಾವಳಿ ಹಬ್ಬದ ಹಾರೈಕೆಗಳು..."ಹುಷಾರಾಗಿ ಪಟಾಕಿ ಹೊಡಿರೀ.....ಆಯ್ತಾ?!" :)

--ಶ್ರೀ

ಶುಭಾಶಯಗಳು

ಎಲ್ಲಾ ಸಂಪದ ಬಳಗದವರಿಗೆ ಹಾಗು ಕುಟುಂಬದವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

*****ದೀಪಾವಳಿಯ ಬೆಳಕು ಸದಾ ನಿಮ್ಮ ಜೀವನದಲ್ಲಿ ಬೆಳಗುತ್ತಿರಲಿ *****

ನಿಮಗಾಗಿ ಪ್ರೀತಿಯಿಂದ ಇಲ್ಲಿ ಕ್ಲಿಕ್ಕಿಸಿ: http://cards.123greetings.com/cgi-bin/cards/showcard.pl?cardnum=ZRH81025052214150&log=dcardsus

ನಿಮಗಾಗಿ ಪ್ರೀತಿಯಿಂದ ಇಲ್ಲಿ ಕ್ಲಿಕ್ಕಿಸಿ: http://cards.123greetings.com/cgi-bin/cards/showcard.pl?cardnum=ZQT81024205951270&log=dcardsus

ನೋವು ತರುವ ನೆನಪು....

ಈ ಘಟನೆ ಕಳೆದು ವರುಷಗಳು ಉರುಳಿವೆಯಾದರೂ ನನ್ನ ನೆನಪಿನಲ್ಲಿ ಆಚ್ಚೊತ್ತಿದಂತಿದೆ.....ಅದು ರಾತ್ರಿ ೮-೮.೩೦ರ ಸಮಯ, ನಾನು ನನ್ನ ಸ್ನೇಹಿತೆ ಸೀಮಾ ಇಬ್ಬರು ಟ್ಯೂಷನ್ ಮುಗಿಸಿ ಮನೆಗೆಗೆ ಹೊರಟ್ಟಿದ್ದೆವು. ನಾನು ಆಗ ಡಿಗ್ರಿ ಮಾಡುತ್ತಿದೆ..... ನಮ್ಮ ಊರು ಉಡುಪಿ, ಅಲ್ಲಿ ಆವಾಗೆಲ್ಲಾ, ೮ ಘಂಟೆ ಹೊತ್ತಿಗೆಲ್ಲಾ ಜನ ಅಷ್ಟಾಗಿ ಓಡಾಡೋದು ಕಡಿಮೆಯಾಗಿ ಬಿಟ್ಟಿರುತ್ತಿತ್ತು.

ಮೈಲಾರ ಮಲ್ಲಣ್ಣ

ಅಂದಹಾಗೇ ಅದ್ಯಾವಾಗ್ಲೋ ಮೈಲಾರಲಿಂಗನ ಬಗ್ಗೆ ಬರೆದುಕೊಂಡಿದ್ದೆ. ಇತ್ತೀಚೆಗೆ ಬೀದರಿಗೆ ಹೋಗಿದ್ದಾಗ ಗೆಳತಿ ಉಮಾ ಅಲ್ಲೇ ಧನ್ನೂರು ಅನ್ತ ಇದೆ, ನಮ್ಮ ತಾತನ ಊರು, ಹೋಗ್ಬನ್ನಿ ಅಂದಿದ್ರು. ಧನ್ನೂರು, ಹಲಬರ್ಗಾ, ಭಾಲ್ಕಿ ಇತ್ಯಾದಿಗಳನ್ನು ನೋಡಿಬರೋಣವೆಂದು ಹೊರಟವನು ದಾರಿ ಮಧ್ಯೆ ಖಾನಾಪುರ ಎಂಬಲ್ಲಿ "ಮೈಲಾರ ಮಲ್ಲಣ್ಣಾ (ಖಂಡೋಬ) ಗುಡಿ" ಅನ್ತ ಬೋರ್ಡು ಕಂಡು ಫಕ್ಕನೇ ಅಚ್ಚರಿ ಮೂಡಿ ಅಲ್ಲೇ ಗಾಡಿ ತಿರುಗಿಸಿದೆ. ಬೀದರ್‍ ಹುಮನಾಬಾದ್ ರಸ್ತೇಲಿ ಅಯ್ ಟೆನ್ ಓಡಿಸೋ ಮಜಾನೇ ಬೇರೆ, ಈ ಕಿತ್ತು ಕೆರ ಹಿಡಿದಿದ್ದ ಹಳ್ಳಿ ರಸ್ತೇಲಿ ಅದೇ ತರ ಕಿತ್ತು ಕೆರ ಹಿಡಿದಿರೋ ಟಾಟಾ ಇಂಡಿಕಾ ಒಡ್ಸೋ ಮಜಾನೇ ಬೇರೆ. ಅಂದು ಭಾನುವಾರ, ರಸ್ತೆಯ ಎರಡೂ ಬದಿ ಜಾನುವಾರು ಸಂತೆ ನೆರೆದಿತ್ತು. ಮೈಲಾರ ಎಷ್ಟು ದೂರ ಅನ್ತ ಯಾರನ್ನೋ ಕೇಳಿದೆ. ಒಂದಿಬ್ಬರು ಓಡಿಬಂದರು ಬಕ್ರಾ ಬೇಕೇನ್ರೀ ಅನ್ತ. ನಾನು ಅವರಿಗೆ ಬೇಕಾದ ಗಿರಾಕಿ ಅಲ್ಲ ಅನ್ನೋದು ಖಾತ್ರಿಯಾಗಿ ಸುಮ್ಮನೇ ನೋಡುತ್ತಾ ನಿಂತರು. “ಮೈಲಾರಕ್ ನಡದೀನ್ರೀ, ಏಸು ದೂರ ಅದರೀ?” ಅಂದೆ. “ಮೈಲೂರನ್ನೋ ಊರು ಇರಾಂಗಿಲ್ರೀ, ಅಲ್ಲಿ ಬರೀ ಮಲ್ಲಣ್ಣಾಗುಡಿ ಅದರೀ, ನೀವ್ ಹಿಂಗಾ ಹೋಗರೀ, ಕಣ್ಣಿಗ್ ಕಾಣ್ತಾವ್ರೀ" ಅಂದರು. “ಅಲ್ರೀಯಪಾ, ಮೈಲಾರ ಅನ್ನೋ ಊರು ಇಲ್ಲೇನ್ರೀ? ಬೋರ್ಡು ಹಾಕ್ಯಾರಲ್ರೀ" ಅಂದಿದ್ದಕ್ಕೆ "ಅದ ಒಂದು ದೊಡ್ ಕತಿರೀ, ಅವರವ್ವನ ಶಾಪಾರೀ, ಕಾ ಅನ್ನೋ ಕಾಗಿ ಇರಂಗಿಲ್ಲ, ಗೂ ಅನ್ನೋ ಗೂಗಿ ಇರಂಗಿಲ್ಲ, ಅಂದಿದ್ಲಲ್ಲರೀ, ಅಲ್ಲೊಂದು ಕಾಗೀನೂ ಇಲ್ಲ, ಗೂಗೀನೂ ಇಲ್ಲ, ಮನುಷ್ಯಾರ್‍ ಭೀ ಮನಿ ಮಾಡಂಗಿಲ್ಲರೀ" ಅಂತ ಉತ್ತರ ಬಂತು. ಯಾಕೋ ತುಂಬಾ ಕುತೂಹಲ ಮೂಡಿತಾದರೂ ಆ ಕತೆಯನ್ನು ಮುಂದುವರಿಸುವ ಉಮೇದು ಅವರಿಗಿರಲಿಲ್ಲ.