ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ರಾತ್ರಿರಾಣಿ ಹೂವು

ಕೆಲವು ತಿಂಗಳ ಹಿಂದೆ ಬ್ರಹ್ಮಕಮಲ ಹೂವಿನ ಚಿತ್ರವನ್ನು ಪ್ರಕಟಿಸಿದಾಗ, ಆ ಹೂವನ್ನು ರಾತ್ರಿರಾಣಿ ಎಂದೂ ಕರೆಯುವರು ಎಂಬ ಅಭಿಪ್ರಾಯ ಸಂಪದೋದುಗರಲ್ಲಿ ಮೂಡಿ ಬಂತು. ನಾನು ಅಂತರ್ಜಾಲವನ್ನು ಜಾಲಾಡಿದಾಗ ಅಲ್ಲಿಯೂ ಅದೇ ವಿಷಯ ತಿಳಿಯಿತು. ಆದರೆ, ನನ್ನ ಮನಸ್ಸಿನಲ್ಲಿ ನಾನು ಚಿಕ್ಕಂದಿನಿಂದ ನೋಡಿದ್ದ ರಾತ್ರಿರಾಣಿ ಹೂವು ಅಚ್ಚಳಿಯದೆ ಮೂಡಿದ್ದು, ಅದಕ್ಕೂ ಬ್ರಹ್ಮಕಮಲಕ್ಕೂ ಸಂಬಂಧವಿಲ್ಲವೆಂಬುದನ್ನು ಹೇಗೆ ವಿವರಿಸೋಣ ಎಂದು ಆಲೋಚಿಸುತ್ತಿದ್ದಾಗ, ರಾತ್ರಿರಾಣಿ ಹೂವು ಕಣ್ಣಿಗೆ ಬಿತ್ತು.
ಬ್ರಹ್ಮಕಮಲ ತಾವರೆ ಹೂವನ್ನು ಹೋಲುವುದಾದರೆ, ರಾತ್ರಿರಾಣಿ ಸುಗಂಧರಾಜ ಹೂವನ್ನು ಹೋಲುತ್ತದೆ. ರಾತ್ರಿರಾಣಿ ಪುಷ್ಪವು ಅರಳಿ, ಸಂಜೆಯಾದೊಡನೆ ತನ್ನ ಸುಗಂಧವನ್ನು ರಸ್ತೆಗೆಲ್ಲಾ ಹರಡಿರುತ್ತದೆ. ಬ್ರಹ್ಮಕಮಲ ಮಂದ ಸುಗಂಧವನ್ನು ಹೊಂದಿದ್ದರೆ, ಈ ಪುಷ್ಪ ತೀಕ್ಷ್ಣವಾದ ಸುಗಂಧವನ್ನು ಬೀರುತ್ತದೆ. ರಾತ್ರಿರಾಣಿ ಹೂವು ಎರಡು ದಿನಗಳವರೆಗೂ ಅರಳಿ ನಿಂತಿದ್ದು, ನಂತರ ಮುದುರಿ ಹೋಗುತ್ತದೆ.

ಗೆದ್ದೆತ್ತಿನ ಬಾಲ

ಗೆದ್ದೆತ್ತಿನ ಬಾಲ ಹಿಡಿಯೊದು ಅಂದ್ರೆ ಇದೇ.. ಕನ್ನಡ ಪೇಪರನವ್ರು ಕನ್ನಡಿಗ ಅಡಿಗ ಅಂದ್ರು, ಮುಂಬೈ ನವರು ಮುಂಬೈಕರ್ ಅನ್ತಾರೆ, ಚೆನೈ ನವರು ಅವನು ಹುಟ್ಟಿದು ಇಲ್ಲೇ ಅನ್ನ ಬಹುದು..:D

ಹಾಡುಹಗಲೇ

ಹಾಡುಹಗಲೇ ಎಂಬ ಶಬ್ದದಲ್ಲಿ, "ಹಾಡು" ಎಂಬುದಕ್ಕೆ ಏನರ್ಥ ?
ಮತ್ತೊಂದು ವಿಶೇಷವೆಂದರೆ, ಈ ಹಾಡುಹಗಲೇ ಎಂಬ ಶಬ್ದ ಕೊನೆಗೊಳ್ಳೂವದು ಕೇಟ್ಟ ಕೆಲಸಗಳಲ್ಲಿ,
ಉದಾ: ಹಾಡುಹಗಲೇ ದರೋಡೆ, ಹಾಡುಹಗಲೇ ಕೊಲೆ ಇತ್ಯಾದಿ,
ಯಾರಿಗಾದರೂ ಬೇರೆ ಉದಾಹರಣೆಗಳು ಗೊತ್ತಾ ?

ಸ್ನೇಹ ಬ೦ಧನ

ಸ್ನೇಹವೆ೦ಬುದು ಬ೦ಧನವಾದರು ಅದರಲ್ಲಿ ಬ೦ಧಿತನಾಗ ಬಯಸುವೆ ನಾ
ತಾಳ್ಮೆಯ೦ಬುದು ಕಹಿಮರವಾದರು ಅದನ್ನು ಏರಲು ಬಯಸುವೆ ನಾ
ಮೌನವೆ೦ಬುದು ಮುತ್ತಾದರು ಅದನ್ನು ಒಡೆದು ಚೂರಾಗಿಸಲು ಬಯಸುವೆ ನಾ
ನಾನು ಎ೦ಬುದು ಸ್ವಾರ್ಥವಾದರು ನಿನ್ನ ಸ್ನೇಹಕೋಸ್ಕರ ಸ್ವಾರ್ಥಿಯಾಗ ಬಯಸುವೆ ನಾ

ಓದಿದ್ದು ಕೇಳಿದ್ದು ನೋಡಿದ್ದು-51 (kann)ADIGA

 

Booker for KannAdiga

ಅಡಿಗರಿಗೆ ಬೂಕರ್ ಪ್ರಸಸ್ತಿ:ಡೆಕ್ಕನ್ ಹೆರಾಲ್ಡ್ ತಲೆಬರಹ

--------------------------------------------------------------

dna

---------------------------------------------------------------

ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ

ಬುಧವಾರ, 15 ಅಕ್ಟೋಬರ್ 2008, 10:56 Hrs (IST)

aravind wins booker prizeಲಂಡನ್, ಅ. 15 :

-(ದಟ್ಸ್ ಕನ್ನಡ ವಾರ್ತೆ) ಯ ಕ್ಷಮೆ ಕೋರಿ, ಹೇಗಿದೆಯೋ ಹಾಗೆ ಪ್ರಕಟಿತ.

"ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

ಮುಂಬೈಯಲ್ಲಿರುವ ವಲಸಿಗರು ಥ್ಯಾಕ್ರೆಯ ಸಿಂಹಗರ್ಜೆನೆಗೆ ಬೆಚ್ಚಿಬಿದ್ದರು. ಸ್ಥಳೀಯ ನೆಲ, ಸಂಸ್ಕೃತಿ, ಭಾಷೆ, ಭಾವನೆಗಳನ್ನು ಗೌರವಿಸುವ ಪಾಠ ಕಲಿತರು. ಆದರೆ ಕನ್ನಡಿಗರು ಬೆಂಗಳೂರಿಗೆ ಬಂದ ವಲಸಿಗರಿಗೆ ಎಲ್ಲರೂ ನಮ್ಮ ಜನರಲ್ಲವೇ ಎಂದು ಸಹಿಷ್ಣುತೆ ತೋರಿಸಿದರು. ಸಿಕ್ಕಿದ್ದೇನು? "www.leavingbangalore.com" ಅಭಿಯಾನ! ಸ್ಥಳೀಯ ನೆಲ, ಸಂಸ್ಕೃತಿ, ಭಾಷೆ, ಭಾವನೆಗಳ ಅವಹೇಳನ. ಎಷ್ಟೋ ಜನರಿಗೆ ಬೆಂಗಳೂರು ಕಲ್ಪವೃಕ್ಷವಿದ್ದಂತೆ; ಮೊದಲ ನೌಕರಿ, ಮೊದಲ ಸಂಬಳ, ಮೊದಲ ಕಾರು, ಮೊದಲ ಮನೆ, ಎಲ್ಲಕ್ಕಿಂತ ಮಿಗಿಲಾಗಿ ತಾಳ್ಮೆಯುಳ್ಳ ಕನ್ನಡಿಗರ ಸ್ನೇಹ-ವಿಶ್ವಾಸಗಳೆಲ್ಲ ದೊರೆತದ್ದು ವಲಸಿಗರ ಸೌಭಾಗ್ಯವಲ್ಲವೇ? ಇದನ್ನು ಮರೆತ ಕೆಲ ಕಿಡಿಗೇಡಿ ವಲಸಿಗರು ಬೆಂಗಳೂರಿನ ಮೂಲಭೂತ ಸೌಕರ್ಯಗಳನ್ನು ತಿರಸ್ಕೃತ ಮನೋಭಾವನೆಯಿಂದ ನೋಡುತ್ತಿರುವುದು ಅವರ ಸಂಕುಚಿತ ಸ್ವಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ದೊಡ್ಡವರ ದೊಡ್ಡತನ

ಮೊನ್ನೆ ಒಂದು ಒಳ್ಳೇ ಅವಕಾಶ ಸಿಕ್ಕಿತು. ಇಲ್ಲಿ ಕಚೇರಿಯೊಂದಕ್ಕೆ ಬಂದಿದ್ದ ಒಬ್ಬ ಸಂಗೀತಗಾರರು ನಮ್ಮ ಗೆಳೆಯರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದರು. ಆ ನೆವದಲ್ಲಿ ನಾವು ಕೆಲವು ಸಂಗೀತಾಸಕ್ತ ಕುಟುಂಬಗಳು ನಮ್ಮ ಗೆಳೆಯರ ಮನೆಯಲ್ಲಿ ಒಟ್ಟು ಸೇರಿ ಅವರೊಡನೆ ಹರಟೆ ಹೊಡೆಯುತ್ತಾ - ಊಟ ಮಾಡುವ ಅವಕಾಶ ಸಿಕ್ಕಿತು.

ಕೈ ಕೊಟ್ಟ ಜೆಟ್ ಏರ್

ಒಂದಾದ ಮೇಲೆ ಒಂದು ದೇಶೀಯ ಖಾಸಗಿ ಹಾಗು MNC ಗಳ ಬಣ್ಣ ಬಯಲಾಗೊ ಕಾಲ ಈಗ ಬರ್ತಾ ಇದೆ.
ಮೊದಲನೇ ಕಂತು ಜೆಟ್ ಏರ್ !!

೧೯೦೦ ಜನರನ್ನ ಮನೆಗೆ ಕಳಿಸಿ ಕೈ ತೊಳೆದುಕೊಂಡು ಕೂತಿದೆ.
ಜೆಟ್ ನ ಕತೆ ಏನೇ ಇರಲಿ...ದೂರಾಲೋಚನೆ ಇಲ್ಲದೆ ಸಾವಿರಾರು ಜನರನ್ನ ಕೆಲಸಕ್ಕೆ ತೆಗೆದುಕೊಂಡು ಈಗ ಒಂದು ದಿನದ ನೋಟೀಸೂ ಕೊಡದೆ ಹೀನಾಯವಾಗಿ ತೆಗೆದಿದ್ದು ಬೇಜವಾಬ್ದಾರಿಯ ಪರಮಾವಧಿ.

ಆಶ್ವಯುಜ ಶುದ್ಧ ಮಹಾನವಮಿ ಬರಲಂದು - ಪೂರ್ಣ ಸಾಹಿತ್ಯ ಬೇಕು

ನಮ್ಮಮ್ಮಂಗೆ ಈ ಪದ್ಯದ ಪೂರ್ಣ ಪಾಠ ಬೇಕಂತೆ...

ಆಶ್ವಯುಜ ಶುದ್ಧ ಮಹಾನವಮಿ ಬರಲಂದು
ಲೇಸಾಗಿ ಹರಸಿದರು ಬಾಲಕರು ಬಂದು
ಈಶ ನಿಮಗತ್ಯಧಿಕ ಸುಖವ ಕೊಡಲೆಂದು
ಲೇಸಾಗಿ ಹರಸಿದರು ಬಾಲಕರು ಬಂದು....(ಮುಂದೆ ಏನು?)

ಗೊತ್ತಿದ್ದವರು ತಿಳಿಸ್ತೀರ...ಮೇಲಿನ ಸಾಲುಗಳಲ್ಲಿ ತಪ್ಪಿದ್ದರೆ ತಿದ್ದಿ...

--ಶ್ರೀ