ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗು೦ಡ ಮತ್ತು ಕತ್ತೆ!!!!!

       ಮೊನ್ನೆ ಮೊನ್ನೆ ನಮ್ಮ ಗು೦ಡ ಸಾಕಿದ ಕತ್ತೆ ಅವನ ಮನೆ ಪಕ್ಕದ ಪಾಳು ಬಾವಿಯಲ್ಲಿ ಬಿದ್ದುಬಿಟ್ಟಿತ್ತು. ಎಷ್ಟೋ ಹೊತ್ತು ಕೂಗಿ ಅರಚಿ ಸಾಕಾದ ಮೇಲೇನೇ ಗು೦ಡನ ಕಿವಿಗೆ ಅದರ ಸದ್ದು ಬಿದ್ದದ್ದು.ಅದನ್ನು ಬಾವಿಯಿ೦ದ ಹೇಗೆ ಹೊರಗೆ ತೆಗೆಯೋದು ಅ೦ತ ಗು೦ಡ ತನ್ನಲ್ಲಿದ್ದ ಬುದ್ಧಿ-ಸಾಮರ್ಥ್ಯವನ್ನೆಲ್ಲ ಪ್ರಯೋಗಿಸಿದ್ದ.

donkey1donkey1

ಕೊನೆಗೆ ಯಾಕೋ ಆ ಪಾಳು ಬಾವಿಯಿ೦ದ ಕಷ್ಟಪಟ್ಟು ಕತ್ತೆಯನ್ನು ಉಳಿಸಿಕೊಳ್ಳೋದು ಆತನಿಗೆ ಸರಿ ಅನ್ನಿಸಲಿಲ್ಲ.ಹಾಗೆ ಅದನ್ನ ಕಾಪಾಡಿದರೂ ಆ ಬಡಕಲು ಕತ್ತೆಯಿ೦ದ ಅಷ್ಟೊ೦ದು ಉಪಯೋಗ ಆಗಲಿಕ್ಕಿಲ್ಲ ಅ೦ತಲೂ ಅನ್ನಿಸಿಬಿಟ್ಟಿತು. 

ಆ ಬಾವಿನೂ ಆಷ್ಟೇನೇ!!!! ಅದು ಪಾಳು ಬಿದ್ದು ಎಷ್ಟೋ ವರ್ಷಗಳಾಗಿ ಹೋಗಿ ಆ ಊರಿನವರೂ ಅದನ್ನು ಮುಚ್ಚಿ ಹಾಕಿಬಿಡಬೇಕು ಅ೦ತ ತೀರ್ಮಾನ ಮಾಡಿಬಿಟ್ಟಿದ್ದರು.ಆದರೆ ಅದಕ್ಕೆ ಸರಿಯಾದ ಮುಹೂರ್ತ ಈಗ ಒದಗಿ ಬ೦ದಿತ್ತು.

   ಸರಿ,ಗು೦ಡ ಅಕ್ಕಪಕ್ಕದ ಮನೆಯವರನ್ನೆಲ್ಲ ಸೇರಿಸಿದ್ದೂ ಆಯ್ತು. ಕತ್ತೇನೂ ಬಾವೀನೂ ಒ೦ದೇ ಸಲ ಮುಚ್ಚಿ ಹಾಕಿಬಿಡೋಣ ಅ೦ತ ನಿರ್ಧರಿಸಿದ್ದೂ ಆಯ್ತು.ಎಲ್ಲರೂ ಸೇರಿ ಒಬ್ಬೊಬ್ಬರಾಗಿ ಒ೦ದೊ೦ದು ಬುಟ್ಟಿ ಮಣ್ಣು ತ೦ದು ಆ ಬಾವಿಯ ಒಳಗೆ ಹಾಕಲಿಕ್ಕೆ ಶುರು ಮಾಡಿದರು.ಮದ್ಯಾಹ್ನ ಆಯ್ತು. ಗು೦ಡನಿಗೆ ಬಾವಿ ಸುಮಾರು ಮುಕ್ಕಾಲು ಭಾಗ ಮುಚ್ಚಿ ಹೋಗಿದೆ ಅ೦ತ ಅನ್ನಿಸಿತು. ಒ೦ದು ಬಾರಿ ಒಳಗೆ ಇಣುಕಿ ನೋಡಿದ.

ನನ್ನ ಕತ್ತೆ ಅ೦ತೀರಾ?

 ಏನಾಶ್ಚರ್ಯ....ಆ ಕತ್ತೆ ಮುಕ್ಕಾಲು ಭಾಗ ಮುಚ್ಚಿ ಹೋದ ಬಾವಿಯ ಮೇಲ್ಭಾಗದಲ್ಲೇ ಇದೆ!!!

ಎಲ್ಲರೂ ಕತ್ತೆಯ ತಲೆ ಮೇಲೆ ಒ೦ದೊ೦ದು ಬುಟ್ಟಿ ಮಣ್ಣು ಸುರಿದಾಗಲೂ ಆ ಕತ್ತೆ ತನ್ನ ಮೈಯನ್ನು ಒ೦ದು ಸಾರಿ ಜೋರಾಗಿ ಅಲುಗಾಡಿಸಿ ಆ ಮಣ್ಣನ್ನೆಲ್ಲ ಕೆಳಗೆ ಕೆಡವುತ್ತಾ ಇತ್ತು.ನ೦ತರ ಆ ಮಣ್ಣ ಮೇಲೆ ನಿ೦ತು ಮತ್ತೊಮ್ಮೆ ಮೇಲಕ್ಕೆ ಕತ್ತೆತ್ತಿ ನೋಡುತ್ತಿತ್ತು...ಹೀಗೆ ಮು೦ದುವರಿದ ಮೇಲೆ ಆ ಪಾಳು ಬಾವಿ ಪೂರಾ ಮುಚ್ಚಿ ಹೋಯ್ತು. ಆದರೆ ಗು೦ಡನ ಕತ್ತೆಗೆ ಮಾತ್ರ ಏನೂ ಆಗಲಿಲ್ಲ!!!

ಹೊರಗೆ ಬ೦ದ ಕತ್ತೆಯ ಮೈಯನ್ನು ಗು೦ಡ ಪ್ರೀತಿಯಿ೦ದ ಸವರಿದ.

 

ಅಬ್ದುಲ್ ಕಲಾಮರಿಗೆ ಜನ್ಮ ದಿನದ ಶುಭಾಶಯಗಳು

ವಯಸ್ಸು ಯಾವುದೇ ಇರಲಿ..ಕನಸುಗಳು ಸದಾ ನಿಮ್ಮೊಂದಿಗಿರಲಿ..ಆ ಕನಸುಗಳು ಎಂದೆಂದಿಗೂ ದೊಡ್ಡದಾಗಿರಲಿ... ಅಂತ ಹೇಳಿದ ನಮ್ಮ ಅಬ್ದುಲ್ ಕಲಾಂರ ಜನ್ಮ ದಿನ ಅಕ್ಟೋಬರ್ 15ರಂದು.

ಓಪನ್ ಆಫೀಸ್ ಸರ್ವರ್ ಡೌನ್ ?

 

Open Office 3.0 ಡೌನ್‌ಲೋಡ್ ಮಾಡೋಣ ಅಂತ http://www.openoffice.org/ ಗೆ ಹೋದರೆ, ನನಗೆ ಆ ಪುಟವನ್ನು ಬಳಸಲು ನನಗೆ ಅನುಮತಿಯಿಲ್ಲ (403 Forbidden) ಎಂದು ಹೇಳಿತು. ಏನಾಯ್ತಪ್ಪಾ ಎಂದು ಗೂಗಲ್ ಗುರುವನ್ನು ಕೇಳಿದಾಗ ಈ ಕೊಂಡಿ ಸಿಕ್ಕಿತು. ಈ ತಾಣದಲ್ಲಿದ್ದ ಸಂದೇಶವನ್ನು ನೋಡಿ ಬಹಳ ಸಂತೋಷವಾಯಿತು.

---------------------

ನನ್ನ ಪುಟ್ಟ ಗೂಡು

ಹಲೋ !!! ನಮಸ್ಕಾರ ಮೇಡಂ, ನಾನು ಪ್ರಶಾಂತ್, ನೆನ್ನೆ ಮನೆವಿಚಾರಕ್ಕೆ ಫೋನ್ ಮಾಡಿದ್ನಲ್ಲ....

ಇಲ್ಲ, ಅದನ್ನ ಕೊಟ್ಟಾಯ್ತು, ನೀವು ಲೇಟ್ ಮಾಡ್ಬಿಟ್ರಿ... ಹಾಗಂತ ಅತ್ತಕಡೆಯಿಂದ ಬಂದ ಧ್ವನಿ ನನ್ನ ಕನಸುಗಳಿಗೆ ಕತ್ತರಿಹಾಕಿತ್ತು.

ಮಲೆನಾಡಿನಲ್ಲಿ ಎರಡು ದಿನಗಳು...

ಮಲೆನಾಡು ಪ್ರವಾಸ

ಹೋದ ಜಾಗಗಳು: ಶಿವಮೊಗ್ಗ, ತೀರ್ಥಹಳ್ಳಿ, ಕವಲೇದುರ್ಗ ಕೋಟೆ, ಹಿಡ್ಲೆಮನೆ ಜಲಪಾತ, ಕುಪ್ಪಳ್ಳಿ, ಆಗುಂಬೆ ಮತ್ತು ಸುತ್ತ ಮುತ್ತಲಿನ ಜಾಗಗಳು.

ಒಟ್ಟು ಮಂದಿ: ೬+೧ (ವಾಹನ ಚಾಲಕ ಸತೀಶ)

ಪ್ರಯಾಣಕ್ಕೆ ಬಳಸಿದ ವಾಹನ: ಟೋಯೋಟಾ ಕ್ವಾಲಿಸ್.

ಮಾರ್ಗ:

ಮೈಸೂರಿನ ಓಶೋ ಸನ್ನಿಧಿಯಲ್ಲಿ "ಧ್ಯಾನಸ್ಥ" 3 ದಿನಗಳು

ಸೆಪ್ಟಂಬರ್ ತಿಂಗಳಲ್ಲೊಂದು ದಿನ ಎಂದೂ ಇಲ್ಲದವನು ಪುಸ್ತಕ ಮಳಿಗೆಯೊಂದರಲ್ಲಿ ಓಶೋ ವಚನ ಮಾಸಪತ್ರಿಕೆ ನೋಡಿದೆ. ಯಾಕೋ ಬಹಳ ದಿನಗಳ ನಂತರ ಓಶೋವನ್ನು ಓದುವ (ಅದೂ ಕನ್ನಡದಲ್ಲಿ) ಮನಸ್ಸಾಯಿತು. ಮನೆಗೆ ತಂದವನೇ ಕೆಲ ಪುಟಗಳನ್ನು ತಿರುವಿ ಹಾಕಿದೆ. Interesting ಅನ್ನಿಸ್ತು. Of course, ಓಶೋ ಬಗ್ಗೆ ಎಲ್ಲವೂ Interesting ಅಂತ ಅನ್ನಿಸಿಯೇ ಅನ್ನಿಸುತ್ತೆ. ಅಂಥಾ Interesting ವ್ಯಕ್ತಿ ಅವರು.

ಗಾಂಧೀಸ್ಮರಣೆ - 2

ಗಾಂಧೀ ಕುರಿತ ನನ್ನ ಮೊದಲ ಲೇಖನಕ್ಕೆ ಸಂಪದಿಗರು ಒಳ್ಳೆಯ ರೀತಿಯಲ್ಲಿ ಸ್ಪಂದಿಸಿರುವುದು ನಿಜಕ್ಕೂ ಗಾಂಧಿ ನಮ್ಮಲ್ಲಿ ಕೆಲವರಲ್ಲಾದರೂ ಜೀವಂತವಾಗಿರುವುದನ್ನು ನಿಜವಾಗಿಸಿದೆ.