ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

Attitude

ಹುಡುಗನೊಬ್ಬ ಕೊಕಾ ಕೊಲಾದ್ ಪ್ಲಾಸ್ಟೀಕ್ ಡಬ್ಬವನ್ನ ಕೆಳಗಿಟ್ಟುಕೊ೦ಡು, ಅದರ ಮೇಲೆ ಹತ್ತಿನಿ೦ತು, ರಿಸಿವರ್ ಕಿವಿಗಿಟ್ಟುಕೊ೦ಡು ಯಾವುದೋ ನ೦ಬರ್ ಒತ್ತಿದ.

ಹುಡುಗ:"ಅಮ್ಮ ನಿಮ್ಮ ಮನೆಯ ತೋಟದಲ್ಲಿ ನನಗೆ ಮಾಲಿಯಾಗಿ ಕೆಲಸ ಕೊಡುತ್ತೀರ?"

ಹೆ೦ಗಸು:"ಇಲ್ಲ ಮಗು ಈಗಾಗಲೇ ಒಬ್ಬ ಹುಡುಗ ಇರುವನು"

ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?

ಗಾಂಧಿ, ನೆಹರೂರನ್ನು ಅನುಸರಿಸುತ್ತಿದ್ದರೋ ಅಥವಾ ನೆಹರೂ, ಗಾಂಧೀಜಿ ಅನುಯಾಯಿಯಾಗಿದ್ದರೋ ಎಂಬ ಕುರಿತು ದೇಶದಲ್ಲಿ ದೊಡ್ಡ ಚರ್ಚೆಯೇ ಆಗುತ್ತದೆ. ದೇಶ ವಿಭಜನೆಯಲ್ಲಿ ಗಾಂಧೀಜಿ ಕೈವಾಡವೂ ಇತ್ತು ಎಂದು ಹಲವರು ಆರೋಪಿಸುತ್ತಾರೆ!

ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು


ಮೊದಲನೆಯದ್ದು!

ಮೊಹನ್

-------------------------------------------------

ಗದ್ದೆಯಲ್ಲಿ ಬೆಳೆದ ಕಬ್ಬನ್ನು ಅಪರಿಚಿತರಿಗೆ ಕೇಳದೆಯೇ ತಂದು ಕೊಡುವ ರೈತ ಈಗ ಅಪರೂಪವಾಗುತ್ತಿದ್ದಾನೆಯೇ?

----------------------------------------------------

’ರಾಕ್ ಬ್ರಿಡ್ಜ್ ಮೆಮೋರಿಯಲ್ ಸ್ಟೇಟ್ ಪಾರ್ಕ್”

’Rock Bridge Memorial State Park”

ಮಿಸ್ಸೂರಿ ರಾಜ್ಯದ ಅಗಾಧ ಪ್ರಕೃತಿ-ರಮಣೀಯವಾದ ಪರಿಸರಗಳನ್ನು ಹುಡುಕಿಕೊಂಡು ಅಲೆಯುವುದು ಒಂದು ಸುಯೋಗವೇ ಸರಿ. ಅದೆಷ್ಟು ಪಿಕ್ನಿಕ್ ಸ್ಪಾಟ್ ಗಳಿವೆ ! ಪ್ರತಿದಿನದ ಜಂಜಾಟದ ಜೀವನದ ಕಷ್ಟಕೋಟಲೆಗಳಿಂದ ಸ್ವಲ್ಪ ಸಮಯ ದೂರವಿದ್ದು. ಪ್ರಕೃತಿಯ ಜೊತೆ ಆಟವಾಡಲು ವಿಶೇಷವಾಗಿ ಹೇಳಿಮಾಡಿಸಿದ ಸರಿಯಾದ ತಾಣವಿದು.

ದಾಸರೆಲ್ಲರ 'ವಸ್ತು' ಒಂದೇ ಆಗಿದ್ದರೂ, ಸಮಾಜಿಕ ದೃಷ್ಟಿಕೋನ ಅಪೂರ್ವವಾದದ್ದು

ಹಬ್ಬ ಹರಿದಿನಗಳಿದ್ದಾಗ ನಮ್ಮೂರಲ್ಲಿ ಭಜನೆ-ಕೀರ್ತನೆಗಳ ಮಹಾಪೂರವೇ ಹರಿಯುತ್ತದೆ. ಊರಿನ
ಜನ ಧರ್ಮ-ತತ್ವ-ನೀತಿಗಳನ್ನೊಳಗೊಂಡ ಭಜನೆ-ಕೀರ್ತನೆಗಳನ್ನು ಮನದಣಿಯುವತನಕ ಹಾಡಿ
ಮೈಮರೆಯುತ್ತಾರೆ.ಕೆಲವೊಮ್ಮೆ ನಾನು ಸಹ ಆ ಕೀರ್ತನೆಗಳನ್ನು ಕೇಳಿದ್ದುಂಟು. "ಅಂಬಿಗ ನಾ
ನಿನ್ನ ನಂಬಿದೆ", "ಎನ್ನ ಮನದ ಡೊಂಕು ತಿದ್ದೇಯಾ...", "ಗಿಳಿಯು
ಪಂಜರದೊಳಿಲ್ಲ..", "ಮಾನವ ಜನ್ಮ ದೊಡ್ಡದೊ.." ಹಾಗು ಅನೇಕ ಹಾಡುಗಳು ಪದೇ ಪದೇ ಕಿವಿಯ
ಮೇಲೆ ಬೀಳುತ್ತಲೇ ಇರುತ್ತವೆ. ಬಹಳ ದಿನಗಳಿಂದ ಕನ್ನಡ ಸಾಹಿತ್ಯದಲ್ಲಿ ಹಚ್ಚ
ಹಸುರಾಗುಳಿದ ಕೀರ್ತನಕಾರರ ಬಗ್ಗೆ
ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಆಸೆ ಇದ್ದರೂ ಸೋಮಾರಿತನದಿಂದ ಅದರ ಗೊಡವೆಗೆ
ಹೋಗಿರಲಿಲ್ಲ. ಕೊನೆಗೂ ಆ ಸಾಹಸ ಮಾಡಿದೆ.

ಇಡೀ ದಾಸ ಸಾಹಿತ್ಯವನ್ನು ಅವಲೋಕಿಸಿದರೆ, ದಾಸರೆಲ್ಲಾ ಹಾಡಿದ್ದನ್ನೆ ಹಾಡಿದ್ದಾರಲ್ಲ ಎನಿಸಿಬಿಡುತ್ತದೆ. ಯಾವುದೇ
ಕೀರ್ತನೆಯನ್ನು ತೆಗೆದುಕೊಳ್ಳಿ ಅದರ ಉದ್ದೇಶ ಇಷ್ಟೆ, "ಆತ್ಮವಿಮರ್ಶೆ, ಆತ್ಮನಿಂದನೆ, ಮೋಕ್ಷ,
ಮುಕ್ತಿ, ತತ್ವ ಮತ್ತು ನೀತಿ." ಆಧುನಿಕ ಕನ್ನಡ ಸಾಹಿತ್ಯವನ್ನು ಹೊರತುಪಡಿಸಿದರೆ, ಇಡೀ
ಕನ್ನಡ ಸಾಹಿತ್ಯದಲ್ಲಿ ಕಾಣುವ ಸಾಹಿತ್ತಿಕ ವಸ್ತು ಬರೀ "ಧರ್ಮ-ತತ್ವ-ನೀತಿ" ಮಾತ್ರ.
೧೨ನೇ ಶತಮಾನದ ವಚನಕಾರರಿಗಿಂತ ಮುಂಚೆ ಪಂಪನ ಕಾಲದಲ್ಲಿ (ಪಂಪಯುಗದಲ್ಲಿ) ಕವಿಗಳು
ಹೇಳಿದ್ದಿಷ್ಟೆ, "ಸಾಹಿತ್ಯ ಇರುವುದು ಜನರ ಶ್ರೇಯಸ್ಸನ್ನು ಸಾಧಿಸಲು. ಇದು ಪಾಪ, ಇದು
ಪುಣ್ಯ, ಇದು ಹಿತ, ಇದು ಅಹಿತ, - ಎನ್ನುವುದನ್ನು ತಿಳಿಯ ಹೇಳಲು. ಒಟ್ಟಿನಲ್ಲಿ
ಪುರುಷಾರ್ಥ ಪ್ರಾಪ್ತಿಗೋಸ್ಕರ [ಜಿ. ಎಸ್. ಶಿವರುದ್ರಪ್ಪ, ಸಾಮಾನ್ಯನಿಗೆ ಸಾಹಿತ್ಯ
ಚರಿತ್ರೆ]." ಕೆಲವೊಮ್ಮೆ ಧರ್ಮದ ಉದ್ದೇಶವೇ ಕಾವ್ಯದ ಉದ್ದೇಶವಾಗಿದ್ದುಂಟು. ಪಂಪನ ನಂತರ
೧೨ನೇ ಶತಮಾನದಲ್ಲಿ ಬಂದ ವಚನಕಾರರು ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದರು. ಆದರೆ ಅವರ
ಸಾಹಿತ್ಯದ ವಸ್ತು ಮಾತ್ರ ಮತ್ತೆ ಅದೇ, "ಧರ್ಮ-ತತ್ವ-ನೀತಿ". ೧೫ನೇ ಶತಮಾನದಲ್ಲಿ ಬಂದ
ಕುಮಾರವ್ಯಾಸನು ಕೂಡ ಸಾಹಿತ್ಯದ ವಸ್ತುವಿನ ಆಯ್ಕೆಯಲ್ಲಿ ಪಂಪನ ಹಾದಿಯನ್ನೇ ಹಿಡಿದನು.
ವಚನಕಾರರ ನಂತರ ಬಂದ ವ್ಯಾಸರಾಯರು, ಪುರಂದರದಾಸರು, ಕನಕದಾಸರು ಕೂಡ ತಮ್ಮ ಕೀರ್ತನೆಗಳ
ವಸ್ತುವಿನ ಆಯ್ಕೆಯಲ್ಲಿ ಹೆಚ್ಚು ಕಮ್ಮಿ ವಚನಕಾರರ ಹಾದಿಯನ್ನೇ ಹಿಡಿದರು.
’ಪಂಪ-ಕುಮಾರವ್ಯಾಸರು’ ಮತ್ತು ’ವಚನಕಾರರು-ದಾಸರಲ್ಲಿರುವ’ ವ್ಯತ್ಯಾಸ ಇಷ್ಟೆ,
"ಪಂಪ-ಕುಮಾರವ್ಯಾಸರು ಸಂಸಾರಿಕ ಜೀವನದ ನಶ್ವರತೆಯನ್ನು ಎತ್ತಿಹಿಡಿದು, ಮೋಕ್ಷವೇ
ಜೀವನದ ಅಂತಿಮ ಗುರಿ ಎಂದರು. ಆದರೆ ವಚನಕಾರರು-ದಾಸರು ಸಂಸಾರಿಕ ಜೀವನವನ್ನು ಅತ್ಯಂತ
ಸಹಾನುಭೂತಿಯಿಂದ ನೋಡಿ, ಸಂಸಾರದಲ್ಲಿದ್ದುಕೊಂಡೇ ಭಗವಂತನ ಸಹಾಯದಿಂದ ಮುಕ್ತಿಯನ್ನು
ಪಡೆಯಬಹುದೆಂದರು." ನಂತರ ಬಂದ ಹರಿಹರ ಕೂಡ ರಗಳೆಗಳ ರೂಪದಲ್ಲಿ ಭಕ್ತಿಯ ಮಾರ್ಗವನ್ನೇ
ಹಿಡಿದ, ರಾಘವಾಂಕ ಮತ್ತೆ ಪಂಪ-ಕುಮಾರವ್ಯಾಸರ ಹಾದಿಯನ್ನು ತುಳಿದ. ಇಡೀ ಕನ್ನಡ
ಸಾಹಿತ್ಯದಲ್ಲಿ ಆಧುನಿಕ ಕನ್ನಡ ಸಾಹಿತ್ಯ ಮಾತ್ರ ವೈವಿಧ್ಯತೆಯಿಂದ ಕೂಡಿದೆ
ಅನಿಸುತ್ತದೆ. ಸಾಹಿತ್ತಿಕ ವಸ್ತುವಿನ ದೃಷ್ಟಿಯಿಂದ ಅದೇನೆ ಇದ್ದರೂ, ಸಾಮಾಜಿಕ ಮತ್ತು
ಸಂಗೀತದ ದೃಷ್ಟಿಯಿಂದ ವಚನಕಾರರ ಮತ್ತು ದಾಸರ ಕೊಡುಗೆ ಅಪೂರ್ವವಾದುದು. ಬಸವಾದಿ ಶರಣರು
ಕನ್ನಡ ಸಾಹಿತ್ಯಕ್ಕೆ ವಚನಗಳೆಂಬ ಅಪೂರ್ವ ಕಾಣಿಕೆ ಕೊಟ್ಟಂತೆ ಪುರಂದರಾದಿ ದಾಸರು
ಕೀರ್ತನೆಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

ವಾಪಾಸ್ ಬಂದುಬಿಟ್ಟೆ...!

ಸುಮಾರು ಐದಾರು ವರ್ಷದ ಹಿಂದೆ ವೈದೇಹಿಯವರು ಬರೆದ ಪುಸ್ತಕ ನನ್ನನ್ನು ಅಲ್ಲಿಗೆ ಹೋಗುವಂತೆ ಮಾಡಿತ್ತು. ಸಂಗೀತ ನಿರ್ದೇಶಕ ಭಾಸ್ಕರ್‍ ಚಂದಾವರ್‌ಕರ್‍ ಅವರು ನಡೆಸಿದ ರಸಗ್ರಹಣ ಶಿಬಿರದ ಸಂವಾದವನ್ನು ವೈದೇಹಿಯವರು ಸರಳವಾಗಿ, ಮನಮುಟ್ಟುವಂತೆ ಆ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದೇ ನಾನು ಹೆಗ್ಗೋಡಿಗೆ ಹೋಗಲು ಕಾರಣ.

ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....

ಬ್ಲಾಗ್‌ಗಳ ಬಗ್ಗೆ ಎಷ್ಟು ಜನ ಕೇಳಿದ್ದಾರೆ... ನಮ್ಮಲ್ಲಿ ಬಹುತೇಕರಿಗೆ ಬ್ಲಾಗ್‌ ಬಗ್ಗೆ ಏನೂ ಗೊತ್ತೇ ಇಲ್ಲ. ಬೆಂಗಳೂರಿನಂತಹ ಮಹಾನಗರದಲ್ಲೇ ಇದರ ಬಗ್ಗೆ ತಿಳಿವಳಿಕೆ ಕಡಿಮೆ ಇರೋವಾಗ ಜಿಲ್ಲಾ ಕೇಂದ್ರದಲ್ಲಿರುವವರಿಗೆ ಹೇಗೆ ಗೊತ್ತಿರೋದು ಸಾಧ್ಯ ಹೇಳಿ...

ಕನಸು ಕದ್ದ ಹುಡುಗಿ...

Hi ಕೋತಿ,
ಏನು ಕೋತಿ ಅಂದದ್ದಕ್ಕೆ ಬೇಜರಾಯಿತಾ. ಆದ್ರೂ ನೀನು ಕೋತಿನೇ ಕಣೋ. ನೀ ಮಾಡುವ ಚೇಷ್ಟೆ, ನಿನ್ನ ತುಂಟಾಟ ಯಾವ ಕೋತಿಗೂ ಕಡಿಮೆಯಿಲ್ಲ. ಅದಕ್ಕೆ ಕೋತಿ ಅಂದೆ. ಹೌದು ತಾನೆ. ಆದರೂ ನೀನಂದ್ರೆ ನಂಗೀಷ್ಟ ಕಣೋ.

ಸುಮ್ಮನೆ ಸುಮ್ಮನೆ
ಇದ್ದರೂ ಸುಮ್ಮನೆ
ಪ್ರಾಣ ತಿಂತಾನೇ
ನನ್ನ ಪ್ರೀತಿ ಗೆಲ್ತಾನೆ...

ಚೌರದವನ ಕಷ್ಟ ಸುಖ

ಮೊನ್ನೆ ಚೌರ (ಕ್ಷೌರ)ಕ್ಕೆ ಹೋಗಿದ್ದೆ. ಅನೇಕ ವರ್ಷಗಳಿಂದ ಅಲ್ಲೇ ಹೋಗುತ್ತಿರುವುದರಿಂದ ಗುರುತಿದೆ.

ಚೌರದಂಗಡಿಯಲ್ಲಿ ಯಾರೂ ಗಿರಾಕಿ ಇರದೆ ಖಾಲಿ ಹೊಡೆಯುತ್ತಿತ್ತು. ಚೌರದವ ತನ್ನ ಅಸಿಸ್ಟೆಂಟ್ ,ಬಿಹಾರಿ, ಜೊತೆಗೆ ಹರಟೆ ಹೊಡೀತಾ ಕೂತಿದ್ದ.

ನಾನು ಹೋಗುತ್ತಿದ್ದಂತೆ, "ಬನ್ನಿ ಸಾರ್‍" ಎಂದು ಕರೆದು ಕುರ್ಚೀಲಿ ಕೂರಿಸಿದ.

ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ

ನಿವೇದನೆ
ಸಾಕಪ್ಪಾ ಸಾಕು ಕಾ೦ಕ್ರೀಟು
ಕಟ್ಟೋಣ ಮಾನವ ಧರ್ಮ
ವಿಶ್ವ ಧರ್ಮ ಸ೦ಕುಚಿತಗೊ೦ಡುದು
ನಮ್ಮ ಕರ್ಮ
ಎಚ್ಚರಾಗೋಣ
ಸ೦ಕುಚಿತ ಭಾವನೆಗಳಿ೦ದ
ಪ್ರೀತಿ ಮಮತೆ-ಸಮಾನತೆಗಳ
ಬಾಳ ಕಟ್ಟೋಣ
ಸರ್ವರೆದೆಯಲಿ ವಿಶ್ವ ಮಾನವತೆಯ
ಕದವ ತೆರೆಯೋಣ
***