ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹನ್ನೊಂದು ಅಡಿ ಎತ್ತರದ ತಂಬೂರಿ!

ರಾಡೆಲ್ ಎಲೆಕ್ಟ್ರಾನಿಕ್ಸ್ ದಯದಿಂದ, ಎಲ್ಲ ಸಂಗೀತಗಾರರ ಬಳಿಯಲ್ಲೂ ಎಲೆಕ್ಟ್ರಾನಿಕ್ ತಂಬೂರಿಗಳೇ ರಾರಾಜಿಸುತ್ತಿರುವ  ಈ ಕಾಲದಲ್ಲಿ, ಬೆಂಗಳೂರಿನ ಶಿವ ಮ್ಯೂಸಿಕಲ್ಸ್ ನವರು ೧೧ ಅಡಿ ಎತ್ತರದ, ೧೫೦ ಕೆಜಿ ತೂಕದ ಏಕಾಂಡ ತಂಬೂರಿಯನ್ನು ತಯಾರಿಸಿರುವುದು ಒಂದು ಸೋಜಿಗವೇ!

ಚಿತ್ರ ಹಾಗೂ ಬರಹಕ್ಕೆ ದಟ್ಸ್ ಕನ್ನಡ ದ ಈ ಕೊಂಡಿಯನ್ನು ನೋಡಿ:

ಗುರುದತ್ ಎಂಬ ದುರಂತ ನಾಯಕ

ಆತ ದುರಂತ ನಾಯಕ. ಆತನ ಜೀವನದಲ್ಲಷ್ಟೇ ಅಲ್ಲ, ನಟಿಸಿದ ಹಾಗೂ ನಿರ್ಮಿಸಿದ ಚಿತ್ರಗಳುದ್ದಕ್ಕೂ ಈ ದುರಂತ ಪ್ರತಿಫಲಿಸಿದೆ. ಕನ್ನಡಿಗನಾಗಿ ಹುಟ್ಟಿ, ಬಂಗಾಳಿಯಾಗಿ ಬೆಳೆದು, ನಟ-ನಿರ್ದೇಶಕನಾಗಿ ಅಮರನಾದ ಗುರುದತ್ ಭಾರತೀಯ ಚಿತ್ರರಂಗ ಕಂಡ ವಿಶಿಷ್ಟ ಪ್ರತಿಭೆ. ನಿದ್ದೆ ಗುಳಿಗೆ ಸೇವಿಸಿ ಆತ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ೪೪ ವರ್ಷಗಳು. ಹಿಂದಿ ಚಿತ್ರರಂಗ ಎಂದೂ ಮರೆಯದ ಈ ಮಹಾನ್ ಪ್ರತಿಭೆ ಇವತ್ತಿಗೂ ದಂತಕಥೆ.

ಗುರುದತ್ ಹುಟ್ಟಿದ್ದು ಕನ್ನಡಿಗನಾಗಿ. ಶಿವಶಂಕರರಾವ್ ಪಡುಕೋಣೆ ಹಾಗೂ ವಸಂತಿ ದಂಪತಿಗಳ ಮಗನಾಗಿ ೧೯೨೫ರ ಜುಲೈ ೯ ರಂದು ಬೆಂಗಳೂರಿನಲ್ಲಿ ಜನಿಸಿದಾಗ ಆತನ ತಾಯಿಗೆ ಕೇವಲ ೧೬ ವರ್ಷದ ಪ್ರಾಯ. ಗುರುದತ್‌ನ ಮೊದಲ ಹೆಸರು ವಸಂತ ಕುಮಾರ್. ಅಪ್ಪ ಶಿವಶಂಕರ್ ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿ ನೆಲೆಸಿದ್ದವರು. ಬ್ಯಾಂಕ್ ನೌಕರಿಗೆ ಹೋಗುವ ಮೊದಲು ಇಲ್ಲಿಯೇ ಶಿಕ್ಷಕರಾಗಿದ್ದ ಶಿವಶಂಕರರಾವ್ ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ತಮ್ಮಂದಿರಾದ ಆತ್ಮಾರಾಮ್, ದೇವಿದಾಸ್ ಹಾಗೂ ತಂಗಿ ಲಲಿತಾ ಅವರೊಂದಿಗೆ ಕಷ್ಟಕರ ಬಾಲ್ಯ ಕಳೆದ ಗುರುದತ್, ಕ್ರಮೇಣ ಆಸಕ್ತಿ ತೋರಿದ್ದು ಸಿನಿಮಾ ಪೋಸ್ಟರ್‌ಗಳ ಚಿತ್ರಗಳನ್ನು ಬಿಡಿಸುವತ್ತ.

ಗುರುದತ್ ಎಂಬ ದುರಂತ ನಾಯಕ

ಆತ ದುರಂತ ನಾಯಕ. ಆತನ ಜೀವನದಲ್ಲಷ್ಟೇ ಅಲ್ಲ, ನಟಿಸಿದ ಹಾಗೂ ನಿರ್ಮಿಸಿದ ಚಿತ್ರಗಳುದ್ದಕ್ಕೂ ಈ ದುರಂತ ಪ್ರತಿಫಲಿಸಿದೆ. ಕನ್ನಡಿಗನಾಗಿ ಹುಟ್ಟಿ, ಬಂಗಾಳಿಯಾಗಿ ಬೆಳೆದು, ನಟ-ನಿರ್ದೇಶಕನಾಗಿ ಅಮರನಾದ ಗುರುದತ್ ಭಾರತೀಯ ಚಿತ್ರರಂಗ ಕಂಡ ವಿಶಿಷ್ಟ ಪ್ರತಿಭೆ. ನಿದ್ದೆ ಗುಳಿಗೆ ಸೇವಿಸಿ ಆತ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ೪೪ ವರ್ಷಗಳು.

ಸ್ವಲ್ಪನಗಿ

ಗುಂಡ: ಪಕ್ಕದ್ಮನೆ ರಾಣಿಗೆ ಇಂಗ್ಲಿಷ್ ಬರಲ್ಲ..... ಕಣೋ ರಾಜೇಶ.
ರಾಜೇಶ: ನಿನಗೆ ಹೇಗೆ ಗೊತ್ತಾಯ್ತ?
ಗುಂಡ: ರಾಣಿಗೆ 1 ಕಿಸ್ ಕೊಡು ಅಂದೆ.....ಅದಕ್ಕೆ ಕೆನ್ನೆಗೆ ಹೊಡೆದ್ಲೂ ..... :)

ಜಿಪುಣ ಗುಂಡ ಒಮ್ಮೆ ಹಣ್ಣಿನ ಅಂಗಡಿಗೆ ಹೋಗಿ ಬಾಳೆಹಣ್ಣಿನ ಬೆಲೆ ವಿಚಾರಿಸಿದ. ಅಂಗಡಿ ಮಾಲೀಕ ಒಂದು ಬಾಳೆ ಹಣ್ಣಿಗೆ ಒಂದು ರೂಪಾಯಿ ಅಂದ.
ಗುಂಡ: 60 ಪೈಸೆಗೆ ಕೊಡ್ತಿಯಾ?

ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!

ಸದಾ ‘ಕುಣಿಯೋಣು ಬಾರ’ ಸ್ಟೈಲ್ ನಲ್ಲಿ ನನ್ನನ್ನು ದಿನವೂ ಗೋಳು ಹೊಯ್ದುಕೊಳ್ಳುವ ತಂಗಿಗೆ ಇಂದು ಬೆಳಿಗ್ಗೆ ಬರೋಬ್ಬರಿ ದೇವರು ಭೆಟ್ಟಿ ಯಾಗಿದ್ದ!

ನಿದ್ದೆಗಣ್ಣಿನಲ್ಲಿದ್ದ ಆಕೆಯನ್ನು ಬೆಳಿಗ್ಗೆ ಎಬ್ಬಿಸಿದ್ದೆ. ನನ್ನ ಸ್ಕೂಟರ್ ರಿಪೇರಿಗೆ ತೆರಳಿ ಒಂದು ವಾರವಾಗಿದೆ. ಆಕೆಯೇ ನನಗೆ ಸದ್ಯದ ಸಾರಥಿ. ಹಾಗಾಗಿ ಅನಿವಾರ್ಯ ಪ್ರಸಂಗ ಆಕೆಗೆ. ಬಸ್ ಸ್ಟ್ಯಾಂಡ್ ವರೆಗೆ ನನ್ನನ್ನು ಆಕೆಯ ದ್ವಿಚಕ್ರವಾಹನದ ಮೇಲೆ ಬಿಡುವಂತೆ ಗೋಳು ಹೊಯ್ದುಕೊಳ್ಳುವ ಸರದಿ ನನ್ನದು!

ಎದ್ದು ಬಂದವಳೇ ಅರ್ಧ ಎಚ್ಚರ, ಇನ್ನರ್ಧ ತೂಕಡಿಕೆ ಸ್ಥಿತಿಯಲ್ಲಿ ಸ್ಕೂಟಿ ಹಿಡಿದಳು. ಸ್ಕೂಟಿ ಬದಲು ಹಾವಿನ ಬಾಲ ಅದುಮಿ ಹಿಡಿದುಕೊಂಡಂತೆ ಕಿಟಾರ್ ಎಂದು ಕಿರುಚಿ ಗಾಡಿ ಕೈಬಿಟ್ಟಳು. ನಾನು ಹೌಹಾರಿ ಒಂದೇ ಕಾಲಿಗೆ ಬೂಟು ಸಿಕ್ಕಿಸಿಕೊಂಡು ಜಿಗಿಯುತ್ತ ಬರುವಷ್ಟರಲ್ಲಿ ಆಕೆಗೆ ಕಣ್ಣೀರು ಕಪಾಳಕ್ಕೆ ಬಂದಿದ್ದವು. ‘ದಿವ್ಯಾ’ ನಿಜಕ್ಕೂ ದಿವ್ಯವಾದ ಕೆಲಸ ಮಾಡಿದ್ದಳು.

ಆಸಕ್ತಿ

ಜನರ ಬಗ್ಗೆ, ಅವರ ವೈಯಕ್ತಿಕ ಬದುಕಿನ ಬಗ್ಗೆ ನಿಮ್ಮ ಕುತೂಹಲ ಕಡಿಮೆ ಇರಲಿ, ಅವರ ವಿಚಾರಗಳನ್ನ ಕುರಿತು ನಿಮ್ಮ ಆಸಕ್ತಿ ಹೆಚ್ಚಿರಬೇಕು.

ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "

ಬೇರೆ ಭಾಶೆಯನ್ನ ಕಲಿಯುವುದು ಈಗೀಗ ಹೆಚ್ಚು ಸುಲಭ ;
ಯಾಕೆಂದರೆ ಎಲ್ಲ ಭಾಶೆಯ ಟೀವೀ ಚಾನೆಲ್ಲುಗಳು ಎಲ್ಲೆಡೆ ಬರುತ್ತವೆ !

ದೇವನಾಗರಿ ಲಿಪಿ ಗೊತ್ತಾದರೆ , ಆ ಲಿಪಿಯಲ್ಲಿರುವ ಭಾಶೆಗಳನ್ನು , ಆ ಲಿಪಿಗೆ ಹತ್ತಿರವಾದ ಭಾಶೆಗಳನ್ನು ಕಲಿಯಲು ಅನುಕೂಲ .
ಒಂದು ದ್ರಾವಿಡ ಭಾಶೆ ತಿಳಿದರೆ ಇನ್ನೊಂದು ದ್ರಾವಿಡ ಭಾಶೆ ಕಲಿಯಲು ಅನುಕೂಲ ;