ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಏಶ್ಯಾದ ಮೊದಲ ಮಹಿಳಾ ಸ್ಕೈ ಡೈವರ್

 

ಪಾಕಿಸ್ಥಾನದ ಮೊದಲ ಗಗನ ಯಾತ್ರಿಯಾಗಲು ತರಬೇತಿ ಪಡೆಯುತ್ತಿರುವ ನಮೀರಾ ಸಲೀಂ, ಮೌಂಟ್ ಎವರೆಸ್ಟ್‌ಗಿಂತಲೂ ಎತ್ತರಿದಿಂದ ಆಕಾಶದಿಂದ ಧುಮುಕಿದ ಮೊದಲ ಮಹಿಳಾ ಸ್ಕೈ ಡೈವರ್. ಇಂದು ನಮೀರಾ ೨೯,೪೮೦ ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿದರು.

ಕಾಣದ ದಾರಿಯಲ್ಲಿ ನಕ್ಷತ್ರಗಳ ಹುಡುಕುತ್ತಾ...

ಕತ್ತಲೆಯಲ್ಲಿ ಹೀಗೆ ನಡೆಯುವಾಗಲೆಲ್ಲಾ ದಾರಿ ತೋರಿಸುತ್ತಿದ್ದ ಕಿರು ದೀಪಗಳ ಸಾಲುಗಳಲ್ಲದ ಸಾಲುಗಳನ್ನು ಎಣಿಸುತ್ತಾ ಸಾಗುವ ಬದುಕಿನ ಅಂತ್ಯ, ಆದಿಯನ್ನೂ ತಿಳಿಯದೆ ಮುಖವೆತ್ತಿದರೆ ಕಾಣುವ, ಕಾಡುವ ನಕ್ಷತ್ರಗಳ ಬೆಳಕೇ ದೊಡ್ಡದೆನಿಸುತ್ತದೆ.

ಕಿಱುನಾಲಿಗೆ, ಕುಞ್ಞಾಲಿಗೆ

ಕಿಱುನಾಲಿಗೆ, ಕುಞ್ಞಾಲಿಗೆ= ನಾಲಿಗೆಯ ಹಿಂಬದಿಯಲ್ಲಿರುವ ನಾಲಿಗೆಯ ಭಾಗವೇ ಆದ ಮಾಂಸಖಂಡ (tonsils).
ಕುಞ್ಞಾಲಿಗೆ ಎಂದು ಸಾಮಾನ್ಯವಾಗಿ ಕುಂದಾಪುರದ ಕಂದಾವರ ಬ್ರಾಹ್ಮಣರು ಬೞಸುವುದನ್ನು ಕೇಳಿದ್ದೇನೆ.
ಉೞಿದ ಕನ್ನಡಿಗರು ಕಿಱುನಾಲಿಗೆ ಎನ್ನುತ್ತಾರೆ.

ಯಾಹೂ! ಕ್ರಿಕೆಟ್

ಇವತ್ತು ಭಾರತದ ಸ್ಕೋರ್ ಎಷ್ಟಾಯ್ತು ಎಂದು ನೋಡಲು ಯಹೂ! ಗೆ ಹೋದೆ. ಅವರ ಹೊಸ ಕ್ರಿಕೆಟ್ ತಾಣ ಬಹಳ ಚೆನ್ನಾಗಿ ಮೂಡಿ ಬಂದಿದೆ. ಈ ತಾಣ Auto refresh ಆಗುವುದಲ್ಲದೇ ಲೈವ್ ಕಾಮೆಂಟ್ರಿ ಕೂಡಾ ಇದೆ. ಸ್ಕೋರ್ ಕಾರ್ಡ್‌ನ ಸ್ವಲ್ಪ ಮೇಲೆ ಇತ್ತೀಚಿನ ಓವರ್‌ಗಳ ಪ್ರತಿ ಬಾಲ್‌ನಲ್ಲಿ ಏನಾಯ್ತು ಅನ್ನೋದನ್ನೂ ತೋರಿಸುತ್ತೆ. ನನಗೆ ಇಷ್ಟವಾಯಿತು. ನೀವೂ ನೋಡಿ.

ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್

ಭಾರತೀಯ ಕ್ರಿಶ್ಚಿಯನ್ನರ ಪಾಲಿಗೆ ಇಂದು ಸಾಮಾನ್ಯ ಭಾನುವಾರವಲ್ಲ. ಶುಭ ದಿನ ಎಂದರೆ ತಪ್ಪಲ್ಲ. ವ್ಯಾಟಿಕನ್‌ ಸಿಟಿಯಲ್ಲಿ ಎರಡನೇ ಭಾರತೀಯರೊಬ್ಬರಿಗೆ ಸಂತ ಪದವಿ ಪ್ರಾಪ್ತವಾಗಿದೆ. ಈ ಸಂತಸ ಕ್ರಿಶ್ಚಿಯನ್ನರದ್ದು. ಈ ಸಂತಸಕ್ಕೆ ಇನ್ನೊಂದು ಕಾರಣವೂ ಇದೆ. ಇದೇ ಮೊದಲ ಬಾರಿಗೆ ಸಿಸ್ಟರ್ ಒಬ್ಬರಿಗೆ ಸಂತಪದವಿ ಪ್ರಾಪ್ತವಾಗಿರುವುದು.

ಸಿಸ್ಟರ್ ಅಲ್ಫೋನ್ಸಾ ಈ ಮೇರು ಪದವಿಯನ್ನು ಮುಡಿಗೇರಿಸಿಕೊಂಡವರು. ಕೇರಳದ ಕೊಟ್ಟಾಯಂನವರಾದ ಸಿಸ್ಟರ್ ಅಲ್ಫೋನ್ಸಾ ಪವಾಡಗಳ ಬಗ್ಗೆ ಭರನಂಗನಮ್ ಸಾಕಷ್ಟು ಐತಿಹ್ಯಗಳಿವೆ. ಇತ್ತೀಚಿನ ವರ್ಷಗಳಲ್ಲಿ ಭರನಂಗನಮ್‌ನ ಚರ್ಚ್ನನಲ್ಲಿ ಪ್ರಾರ್ಥನೆ ನಡೆಸಿ ರೋಗ ವಾಸಿ ಮಾಡಿಕೊಂಡವರಂತೂ ಸಿಸ್ಟರ್ ಅಲ್ಫೋನ್ಸಾ ಪವಾಡವನ್ನು ಕೊಂಡಾಡುವವರೇ...!

ಅನ್ನಕುಟ್ಟಿ ಸಿಸ್ಟರ್ ಆದುದು ಹೀಗೆ

ವ್ಯಾಟಿಕನ್ ಕ್ಯಾಥೋಲಿಕ್ ಚರ್ಚ್‌‌ನಿಂದ ಸಂತ ಪದವಿ ಪಡೆಯೋದು ಸುಲಭದ ಮಾತಲ್ಲ. ಭಾರತದ ಕ್ರಿಶ್ಚಿಯನ್ನರ ಪಾಲಿಗೆ ಇದು ಎರಡನೇ ಸಂತ ಪದವಿ. ಇಂದು ಸಂತಪದವಿಗೇರಿದ ಸಿಸ್ಟರ್‍ ಅಲ್ಫೋನ್ಸಾ ಹುಟ್ಟಿದ್ದು ೧೯೧೦ರ ಆಗಸ್ಟ್ ೧೯ರಂದು. ಸ್ವಂತ ಊರು ಕೇರಳದ ಕೊಟ್ಟಾಯಂ ಜಿಲ್ಲೆಯ ಕುಡುಮಲೂರು. ತಂದೆ ಜೋಸೆಫ್. ತಾಯಿ ಮೇರಿ ಮುಟ್ಟತ್‌ಪಾಡತ್. ಬಾಲ್ಯದ ಹೆಸರು ಅನ್ನಾ. ಮನೆಮಂದಿಗೆಲ್ಲ ಪ್ರೀತಿಯ ಅನ್ನಕುಟ್ಟಿ. ಈ ಅನ್ನಕುಟ್ಟಿ ಹುಟ್ಟಿದ ೩ ತಿಂಗಳ ಅಂತರದಲ್ಲೇ ತಾಯಿ ಮೇರಿ ಮುಟ್ಟತ್‌ಪಾಡತ್ ಕೊನೆಯುಸಿರೆಳೆದರು.

ಪರಂಪರೆ-ಪ್ರವಾಹ-ಪ್ರತಿರೋಧ

ನೆರೆಯ ಕೆನ್ನೀರಿನ ಮಧ್ಯೆ ಸುಕ್ಕುಗಟ್ಟಿದ ದೇಹ
ಕೈಚಾಚಿ ಕೂಗುತಿದೆ - "ಪ್ರವಾಹ-ಪ್ರವಾಹ"!
ಇಲ್ಲ ಕರನೀಡಿ ಮರುಕ ತೋರುವವರಾರೂ!
ಹರಿದು ಹೋಗುತಿಹರೆಲ್ಲ, ಜಲಧಿಯತ್ತ - ಜಲಸಮಾಧಿಗೆ!

ಸಹಾಯ ಬೇಕಾಗಿದೆ

ನಮಸ್ಕಾರ ಗೆಳೆಯರೇ,
ನಾನು ಒಂದು HTML ಪೇಜ್ ಅನ್ನು ಕನ್ನಡದಲ್ಲಿ ಮಾಡಿದೆ. ಆದ್ರೆ ಆ ಹಾಳೆಯನ್ನು render ಮಾಡಿದಾಗ ಅದು ನಾನು ಬರೆದ ಅಕ್ಷರದ ಬದಲು ??? ಈ ತರಹದ ಚಿಹ್ನೆ ಗಳನ್ನ ತೋರಿಸುತ್ತಿದೆ.
ನಾನು ಕನ್ನಡವನ್ನ unicode format ನಲ್ಲೆ ಉಪಯೋಗಿಸುತ್ತಿದ್ದೇನೆ.
ನಿಮ್ಮ ಸಹಾಯ ಬೇಕಾಗಿದೆ.

ಹೂವು ಗಿಡದಲ್ಲಿದ್ದರೆ ಹೇಗನಿಸುತ್ತದೆ

ಹೂವು ಎಂದರೆ ಎಲ್ಲರ ಮುಖ್ಯವಾಗಿ ಹೆಂಗಸ ಮುಖ ಅರಳುತ್ತದೆ. ಅದನ್ನು ಮುಡಿದು ಆನಂದ ಪಡಿಯುದರ ಜೊತೆಗೆ ಗಂಡಸರ ಮುಂದೆ ಬೀಗಲು, ಮೆಚ್ಚಿಗೆ ನಿರೀಕ್ಷಿಸುತ್ತ ಆಶಾ ಪ್ರಪಂಚದಲ್ಲಿ ತೇಲಾಡುತ್ತಿರುತಾರೆ.