ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶಬ್ದಗಳ ಮೋಡಿಗಾರ- ಜಯಂತ ಕಾಯ್ಕಿಣಿ

"ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು", "ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ", "ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ", "ಮಧುವನ ಕರೆದರೆ ತನು ಮನ ಸೆಳೆದರೆ", "ನಿಂತಲ್ಲೆ ಹಾಳಾದೆ ನಿನ್ನಿಂದಲೇ", ಎನ್ನುತ್ತಾ ೨೦೦೬ರ ವರುಷದಿಂದೀಚಿಗೆ, ಕನ್ನಡ ಚಿತ್ರ ಪ್ರೇಮಿಗಳ ಹೃದಯಕ್ಕೆ ಲಗ್ಗೆ ಇಟ್ಟು, ಅವರನ್ನು ತನ್ನ ಅಕ್ಷರಗಳ ಮೋಹಕ ಬಲೆಯಲ್ಲಿ ಸಿಲುಕಿಸಿದ, ನನ್ನ ಮೆಚ್ಚಿನ ಬರಹಗಾರ, ಜಯಂತಣ್ಣನ ಬಗ್ಗೆ ಒಂದು ಪರಿಚಯ ಲೇಖನ ಬರೆಯಬೇಕೆಂದು ಬಹಳ ದಿನಗಳಿಂದ ಯೋಚಿಸುತ್ತಿದ್ದೆ. ಬೆಂಗಳೂರಿನ ಜಯನಗರದ ರೋಟರ್‍ಯಾಕ್ಟ್ ಸಂಸ್ಥೆಯವರು ೨೦೦೮ರ ನವೆಂಬರ್ ತಿಂಗಳಲ್ಲಿ, ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಸಲುವಾಗಿ ಪ್ರಕಟಿಸುವ ನೆನಪಿನ ಹೊತ್ತಗೆಗಾಗಿ, ಲೇಖನ ಬರೆದು ಕೊಡಲು, ನನ್ನ ಸ್ನೇಹಿತ ಸೋಮ ತಿಳಿಸಿದ. ಯಾವ ವಿಷಯದ ಬಗ್ಗೆ ಬರೆಯೋಣವೆಂದು ಚರ್ಚಿಸಿದಾಗ, ಅವನು ಕನ್ನಡ ಸಾಹಿತ್ಯದಲ್ಲಿ ಜನಸಾಮಾನ್ಯರು ಅಭಿಮಾನದಿಂದ ಯಾವಾಗಲೂ ನೆನಪಿಸಿಕೊಳ್ಳುವ ಮೂರು ಕನ್ನಡ ಸಾಹಿತಿಗಳ ಬಗ್ಗೆ ಬರೆದು ಕೊಡಿ, ಎನ್ನುವಷ್ಟರಲ್ಲಿ, ಅವನ ಬಾಯಿಂದ ಮೊದಲು ಬಂದ ಹೆಸರೇ ಜಯಂತ ಕಾಯ್ಕಿಣಿಯವರದ್ದು. ಅದೇನೋ ಅಂತರಲ್ಲ "ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ", ಹಾಗೆಯೇ ನನ್ನ ಮನಸ್ಸಿನಲ್ಲಿ ಬಹಳ ದಿನಗಳಿಂದ ಜಯಂತಣ್ಣನವರ ಬಗ್ಗೆ ಲೇಖನರೂಪ ತಳೆಯುತ್ತಿದ್ದ ಅಕ್ಷರಗಳಿಗೆ ಹೊರ ಹೊಮ್ಮಲು ಒಂದು ಕಾರಣ ಈಗ ಸಿಕ್ಕಿತು.
           ನನಗೆ ಪುಸ್ತಕಗಳನ್ನು ಓದುವ, ಅದರಲ್ಲೂ ಕನ್ನಡ ಸಾಹಿತ್ಯ ಪ್ರಕಾರದ ಪುಸ್ತಕಗಳನ್ನು ಓದುವ ಗೀಳು ಬಹಳ ಹಳೆಯದ್ದು. ನಾನು ಚಿಕ್ಕವಳಿರುವಾಗ ದೀಪಾವಳಿ ಮತ್ತು ಯುಗಾದಿ ಹಬ್ಬದ ಸಲುವಾಗಿ ಹೊರಬರುವ ವಿಶೇಷ ಸಂಚಿಕೆಗಳಲ್ಲಿ, ತುಷಾರದಲ್ಲಿ ಪ್ರಕಟವಾಗುತ್ತಿದ್ದ ಜಯಂತಣ್ಣನ ಬರಹಗಳೆಂದರೆ ನನಗೆ ಅಚ್ಚುಮೆಚ್ಚು, ಒಂದೇ ಮಾತಿನಲ್ಲಿ ಹೇಳುವುದಾದರೆ, ನನ್ನ ಸಾಹಿತ್ಯ ಅಲ್ಪ-ಸ್ವಲ್ಪ ಕೃಷಿಗೆ ಆದರ್ಶ, ಗುರು ಅವರೇ. ಮುಂಗಾರುಮಳೆಯ ಯೋಗರಾಜ್ ಭಟ್ಟರು ಕನ್ನಡ ಸಿನೆಮಾರಂಗದಲ್ಲಿರುವ ನನ್ನ ಪತಿ ಸುಬ್ರಹ್ಮಣ್ಯ.ಎಂ.ಕೆ.ಯವರಿಗೆ ಸ್ನೇಹಿತ. ಹಾಗಾಗಿ ಅವರ ಮೂಲಕ ಜಯಂತಣ್ಣ ನನ್ನ ಪತಿಗೆ ಪರಿಚಯ. ನನಗೆ ಅವರ ಮುಖಾಮುಖಿ ಪರಿಚಯವಾಗಿದ್ದು ನನ್ನ ಪತಿಯಿಂದ. ದ್ರೋಣಾಚಾರ್ಯ ಏಕಲವ್ಯನೆದುರು ಪ್ರತ್ಯಕ್ಷವಾದಂತೆ,  ಬಾಲ್ಯದ ಆರೇಳು ತರಗತಿಯಿಂದಲೂ ಆದರ್ಶವಾಗಿ ನಾನು ಆರಾಧಿಸುತ್ತಿದ್ದ, ನನ್ನ ಸಾಹಿತ್ಯ ಗುರು, ಕಾಯ್ಕಿಣಿಯವರು, ನಮ್ಮ ಮನೆಗೆ ಬಂದಾಗ ನಾನು ನಿಜವಾಗಿಯೂ, "ಕನಸೋ ಇದು, ನನಸೋ ಇದು" ಎಂದು ಸಾವಿರಾರು ಸಲ ನನ್ನನ್ನೇ ಪ್ರಶ್ನಿಸಿಕೊಂಡಿದ್ದೇನೆ. ಜಯಂತ ಕಾಯ್ಕಿಣಿರವರು ನಮ್ಮ ಮನೆಗೆ ಬಂದ ಮೊದಲ ದಿನವೇ, ನನಗಿರುವ ಸಾಹಿತ್ಯಾಸಕ್ತಿಯನ್ನು ಕೇಳಿ ತುಂಬಾ ಪ್ರಶಂಸಿದರು, ಮುಂದೆಯೂ ಬರೆಯುತ್ತಿರಬೇಕೆಂದು ಪ್ರೋತ್ಸಾಹಿಸಿದರು. ಅಷ್ಟು ಸರಳ ಸಜ್ಜನಿಕೆ ಅವರದು. ಹಾಗಾಗಿಯೇ ನಮ್ಮ ಟೋಳಿಯವರಿಗೆಲ್ಲಾ ಅವರು ಮೆಚ್ಚಿನ ಜಯಂತಣ್ಣ. ಇವಿಷ್ಟು ಕಾರಣಗಳು ಈ ಲೇಖನ ಬರೆಯಲು.

ಯನಿಕೋಡ್ ಸಂಶಯ

ಸಂಪದದ ಅಕ್ಷರ ವಿನ್ಯಾಸಕ್ಕೂ ಕನ್ನಡಪ್ರಭ ಮೊದಲಾದ ಪತ್ರಿಕೆ ಗಳ ಅಂತರ್ ಜಾಲ ಪುಟದ ಅಕ್ಷರ ವಿನ್ಯಾಸಕ್ಕೂ ವ್ಯತ್ಯಾಸ ಏನಿದೆ?... ನನಗೆ ಕನ್ನಡಪ್ರಭ ಮೊದಲಾದ ಪತ್ರಿಕೆ ಗಳ ಅಂತರ್ ಜಾಲ ಪುಟವನ್ನು Firefox ನಲ್ಲಿ ನೋಡಲಾಗುತ್ತಿಲ್ಲ.

ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ

ದೃಶ್ಯಾವಳಿಗಳಿಗೆ ಕನ್ನಡದಲ್ಲಿ ಶೀರ್ಷಿಕೆಗಳನ್ನ (Captions/SubTitles) ಹಾಕಬಹುದೇ?

ಈ ಪ್ರಶ್ನೆ ನಿಮ್ಮಲ್ಲಿರ ಬೇಕಲ್ಲ? ಹೌದು ಇದನ್ನ ಸುಲಭವಾಗಿ ಮಾಡ ಬಹುದು. ಅದನ್ನ ಸುಲಭ ಸಾಧ್ಯವಾಗಿಸಿರೋದು ಲಿನಕ್ಸ್ ನಲ್ಲಿರೋ "Gnome Subtitles" ಅನ್ನೋ ತಂತ್ರಾಂಶ. ಇದರೊಡನೆ ನಿಮಗೆ ಬೇಕಾಗೋದು ಲಿನಕ್ಸ್ ನಲ್ಲಿ ಕನ್ನಡ ಟೈಪಿಸಲಿಕ್ಕೆ ಉಪಯೋಗಿಸುವ SCIM . 

ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?

ಸಾರಿಗೂಗಲ್ ಸೀರೆ. ಸೀರೆಯ ವಿನ್ಯಾಸದಲ್ಲಿ ಗೂಗಲ್ ಅಂತರ್ಜಾಲ ಪುಟವನ್ನೆ ಪ್ರಮುಖವಾಗಿ ಬಳಸಿದ ಗೂಗಲ್ ಸೀರೆ ದಸರಾ ವಿಶೇಷವೇ? ಅಲ್ಲ ಇದು ಈಗಲೇ ಇದೆಯೇ? ಯಾರಾರೂ ಕೊಂಡಿದ್ದೀರಾ?

ಸು೦ದರ ಕಾರವಾರ

ಪಡುವಣ ಬಾನಲಿ ಸಾಗುತ ಮೊಡ,
ತು೦ತುರ ಹನಿಗಳ ಸುರಿದವು ಚೂರ;
ನಮ್ಮೂರ ಮು೦ಗಾರು ಬಾರಣ್ಣ ನೊಡ,
ಆರಬ್ಬಿ ಸಾಗರ ದ೦ಡೆಯ ತೀರ

ಹಸಿರು ಹಾಸಿದೆ ಬಾಡ,ಚೆ೦ಡಿಯೆ;
ಮುಗಿಲು ಮುಟ್ಟುವ ಆ ಗುಡ್ಡೆ ಬ೦ಡೆ,
ವಿರಮಿಸುತ್ತ ಸಹ್ಯಾದ್ರಿಯ ಮೆಲೆ
ಕೈ ಬೀಸಿ ಕರೆಯುತಿದೆ ನೀ ಇಲ್ಲಿ ಬಾರ

ಮುಗ್ದ ಜನತೆಯ ಕರಾವಳಿ ನಾಡ,
ಪಸ್ಚಿಮ ಮಲೆಯ ಹಸಿರು ನೋಡ
ಸಾಗರದಾಳದ ಆ ದಾರಿ ದ್ವೀಪ,

ಸಾರ್ಥಕ ಸ೦ಜೆ

೦೪-೧೦-೨೦೦೮
ಸ೦ಜೆ ಏನು ಮಾಡಲು ತೋಚದಿರಲು ನನ್ನ ಮನ ರವೀ೦ದ್ರ ಕಲಾ ಕ್ಷೇತ್ರದತ್ತ ಓಡಿತ್ತು.. ಅಷ್ಟೆ ಸಾಕಿತ್ತು. ರವೀ೦ದ್ರ ಕಲಾ ಕ್ಷೇತ್ರದಲ್ಲಿ ನಾನಿದ್ದೆ. ನನಗೇನೂ ನಾಟಕ ನೋಡಲು ಔತಣ ಕಳಿಸಿರಲಿಲ್ಲ. ಹಾಗು ನಾಟಕ ಇರುವ ಸೂಚನೆಯು ಇರಲಿಲ್ಲ. ಏನಾದರು ಕಾರ್ಯಕ್ರಮ ಇದ್ದರೇ ನೋಡಿ ಬರೋಣವೆ೦ದು ಹೊರಟೆ.