ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಾರ್ಥಕ ಸ೦ಜೆ

೦೪-೧೦-೨೦೦೮
ಸ೦ಜೆ ಏನು ಮಾಡಲು ತೋಚದಿರಲು ನನ್ನ ಮನ ರವೀ೦ದ್ರ ಕಲಾ ಕ್ಷೇತ್ರದತ್ತ ಓಡಿತ್ತು.. ಅಷ್ಟೆ ಸಾಕಿತ್ತು. ರವೀ೦ದ್ರ ಕಲಾ ಕ್ಷೇತ್ರದಲ್ಲಿ ನಾನಿದ್ದೆ. ನನಗೇನೂ ನಾಟಕ ನೋಡಲು ಔತಣ ಕಳಿಸಿರಲಿಲ್ಲ. ಹಾಗು ನಾಟಕ ಇರುವ ಸೂಚನೆಯು ಇರಲಿಲ್ಲ. ಏನಾದರು ಕಾರ್ಯಕ್ರಮ ಇದ್ದರೇ ನೋಡಿ ಬರೋಣವೆ೦ದು ಹೊರಟೆ.

ಸಂಗೀತ ನವರಾತ್ರಿ - ವಿಜಯ ದಶಮಿ

ಇವತ್ತು ವಿಜಯ ದಶಮಿ.ನವರಾತ್ರಿಯ ಕಡೇ ದಿನ. ಮೈಸೂರಿನಲ್ಲಿ ಜಂಬೂಸವಾರಿಯಲ್ಲಿ  ದೇವಿ ಚಾಮುಂಡೇಶ್ವರಿಯ ಮೆರವಣಿಗೆ ಹೋಗುವ ಈ ದಿನ ಕೇಳಿಸಲು ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಬಿಲಹರಿ ರಾಗದ ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ ಎನ್ನುವ ರಚನೆ ಈ ವರ್ಷದ ಸರಣಿಗೆ ಸರಿಯಾದ ಮಂಗಳವೆಂದು ನನ್ನ ಅನಿಸಿಕೆ.

ಮೈಸೂರು ವಾಸುದೇವಾಚಾರ್ಯರು ಅವರ ಸಂಗೀತ ಪರಂಪರೆಯಂತೆ ಸಂಸ್ಕೃತ ಮತ್ತು ತೆಲುಗು ಭಾಷೆಗಳಲ್ಲೇ ಕೃತಿಗಳನ್ನು ರಚಿಸಿದವರು. ಈ ಬಿಲಹರಿ ರಾಗದ ಕೃತಿಯಂತೂ ಸೊಗಸಾದ ರಚನೆ. ವಾಸುದೇವಾಚಾರ್ಯರ ಅತೀ ಪ್ರಸಿದ್ಧ ರಚನೆಗಲ್ಲಿದೂ ಒಂದು ಎಂದು ಖಂಡಿತ ಹೇಳಬಹುದು. ಈ ಹಾಡಿನ ಸಾಹಿತ್ಯ ಹೀಗಿದೆ.

ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ ಕೃಪಾಕರಿ ಶಂಕರಿ
ಶೃತಜನಪಾಲಿನಿ ಮಹಾಬಲಾದ್ರಿವಾಸಿನಿ ಮಹಿಷಾಸುರ ಮರ್ದಿನಿ|| ಪಲ್ಲವಿ||

ಪತನದ ಕತೆ


ಮೊನ್ನೆ "ಡೌನ್‌ಫಾಲ್" ಎಂಬ ಚಿತ್ರ ನೋಡಿದೆ. ಹಿಟ್ಲರನ ಕಡೆಯ ದಿನಗಳ ಬಗ್ಗೆ. ಕಳೆದ ಅರವತ್ತು ಮಿಕ್ಕ ವರ್ಷಗಳಲ್ಲಿ ಹಿಟ್ಲರನ ರಾಕ್ಷಸತೆಯ ಬಗ್ಗೆ ಸಾಕಪ್ಪ ಅನಿಸುವಷ್ಟು ಪುಸ್ತಕ, ಡಾಕ್ಯುಮೆಂಟರಿ ಎಲ್ಲಾ ಬಂದಿವೆ. ಬರುತ್ತಿವೆ. ಆದರೂ, ಹಿಟ್ಲರನ ಕಡೆಗಾಲದಲ್ಲಿ ಅವನನ್ನು ಹತ್ತಿರದಿಂದ ನೋಡುವ, ಹಲವು ಚರಿತ್ರೆ ಮತ್ತು ಆತ್ಮಚರಿತ್ರೆಯ ಪುಸ್ತಕಗಳನ್ನು ಆಧರಿಸಿದ ಈ ಚಿತ್ರಕ್ಕೆ ವಿಚಿತ್ರ ಮೋಹಕ ಶಕ್ತಿಯಿದೆ. ಹಿಟ್ಲರನ ಬಗ್ಗೆ ಹೊಸದಾಗಿ ಕಣ್ಣು ತೆರೆಸುವಂತಹ ಸಂಗತಿಗಳೇನೂ ಇಲ್ಲಿಲ್ಲ. ಆದರೆ ಸಾವಿಗೆ ಹತ್ತಿರ ನಿಂತ ಅವನ ನಡೆವಳಿಕೆ, ಉಳಿದ ಮನುಷ್ಯರಿಗಿಂತ ಹೇಗೆ ಭಿನ್ನವಾಗಿತ್ತು ಎನ್ನುವುದು ಒಂದಂಶವಾದರೆ, ಜಗತ್ತಿನ ಮಹಾಕೃತ್ಯವೊಂದಕ್ಕೆ ಕೇವಲ ಒಬ್ಬ ಮನುಷ್ಯ ಎಷ್ಟು ಮತ್ತು ಹೇಗೆ ಕಾರಣನಾಗಬಲ್ಲ ಎಂಬುದು ಇನ್ನೊಂದು.

೨೦೦೪ರಲ್ಲಿ ತಯಾರಾದ, ಜರ್ಮನ್ ಭಾಷೆಯ ಈ ಚಿತ್ರದಲ್ಲಿ ಜರ್ಮನರು ತಮಗೆ ತಾವೇ ಹಿಟ್ಲರನ ಕತೆಯನ್ನು ಹೇಳಿಕೊಂಡಂತಿದೆ. "ಡೌನಫಾಲ್" ಹಿಟ್ಲರನನ್ನು ಮಾನವೀಯ ಗೊಳಿಸಿಬಿಟ್ಟಿತೇ ಎಂಬ ಗೊಂದಲ ಹಾಗು ಅನುಮಾನದ ಬಗ್ಗೆ ಜರ್ಮನರು ಚರ್ಚೆ ನಡೆಸಿದ್ದಾರೆ. ಆರು ಮಿಲಿಯನ್ ಯಹೂದ್ಯರ ಕೊಂದ ಹಿಟ್ಲರನನ್ನು ಲೋಕಕ್ಕೆ ಕೊಟ್ಟ ಜರ್ಮನಿಯ ಜನರಿಗೆ, ಒಬ್ಬ ಸಾಮಾನ್ಯನ ಅಮಾನುಷತೆಯನ್ನು ಅರಿಯುವುದು ಎಷ್ಟು ಮುಖ್ಯ ಎಂದು ಚೆನ್ನಾಗಿ ಗೊತ್ತಿರುವಂತಿದೆ.

ಪುಷ್ಪಕ ವಿಮಾನದ ಚೆಲುವೆ

ಮುಂಜಾನೆಯ ಮಂಜಿನಲಿ, ಚುಮು ಚುಮು ಚಳಿಯಲಿ
ಕುಳಿತಿದ್ದೆ ನಾ ಕಬ್ಬನ್ ಪಾರ್ಕಿನ ಬೆಂಚುಗಲ್ಲಿನ ಮೇಲೆ
ಹಕ್ಕಿಗಳ ಕಲರವದ ಗಾನ ಕಿವಿಯಲ್ಲಿ ಗುಯ್ಯ್ ಗುಡುತ್ತಿತ್ತು
ಆ ಚಿಲಿ ಪಿಲಿ ಗಾನದ ನಡುವೆಯೂ ಅದೆಂತದೋ ದಿವ್ಯ ಮೌನ

ತಂಗಾಳಿಯು ನನ್ನೆಡೆಗೆ ತೇಲಿ ಬಂದ ಅನುಭವ
ಕಣ್ಣೆತ್ತಿ ನೋಡಿದರೆ ಎದುರಿಗೆ ನಿಂತಿದ್ದಳು
ಮುಂಜಾನೆಯ ಮಂಜಿನಂತೆ ಕಂಗೊಳಿಸುತಿದ್ದಳು

ಮಹಾತ್ಮ ಗಾಂಧೀಜಿಯವರ ಮಾಹಿತಿಗಳು

ಮಹಾತ್ಮ ಗಾಂಧೀಜಿಯವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಚಿಟಕಿಸಿ.
www.mkgandhi.org

ತಿಳಿದುಕೊಳ್ಳಲು ಸಾಕಷ್ಟು ವಿಚಾರಗಳು, ಅವರು ಮತ್ತು ಅವರ ಬಗ್ಗೆ ಬರೆದಿರುವ ಆನ್ಲೈನ್ ಪುಸ್ತಕಗಳು, ಉಪನ್ಯಾಸಗಳು, ಅವರ ನೆಚ್ಚಿನ ಭಜನೆಗಳು, ಫೋಟೋಗಳು ಮುಂತಾದ ಅನೇಕ ಉಪಯುಕ್ತ ಮಾಹಿತಿಗಳಿವೆ.

-ಸವಿತ

ಬದುಕೇ, ನಿನಗೊಂದು ಥ್ಯಾಂಕ್ಸ್‌

ಎರಡು ದಿನ ಯೋಗಾಸನ, ವ್ಯಾಯಾಮ ಬಿಟ್ಟರೆ ಮನಸ್ಸಿಗೆ ಏನೋ ತಹತಹ. ಛೇ, ಹೀಗಾದರೆ, ಕ್ರಮೇಣ ನಾನು ಸೋಮಾರಿಯಾಗುತ್ತೇನೆ. ನಸುಕಿನಲ್ಲಿ ಏಳಲು ಆಗುವುದಿಲ್ಲ. ಆರೋಗ್ಯ ಕೆಡುತ್ತದೆ. ತಿಂದು ತಿಂದು ಡುಮ್ಮಣ್ಣನಾಗುತ್ತೇನೆ ಎಂದು ಅಂದುಕೊಂಡು, ಹೆದರಿಸಿ, ಹದ ಮೀರಿದ ದಿನಚರಿಯನ್ನು ಮತ್ತೆ ಹಳಿಗೆ ಹತ್ತಿಸುತ್ತೇನೆ. ಊಟ ಮಾಡುವಾಗಲೂ ಅಷ್ಟೇ. ಮೊದಲಿನಿಂದ ಸರಳ ಆಹಾರ ಇಷ್ಟ.

ಬಾಗಲವಾಡದ ಗಿರಿಯೊಡೆಯ ಸ್ವಯಂವ್ಯಕ್ತ ಶ್ರೀ ಲಕ್ಷ್ಮೀ ವೆಂಕಟರಮಣ...

ಸುಕ್ಷೇತ್ರ ಬಾಗಲವಾಡವು ಕರ್ನಾಟಕದಲ್ಲಿ ಹರಿದಾಸರ ನೆಲೆವೀಡಾದ ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಒಂದು ಪುಟ್ಟ ಗ್ರಾಮ. ಹರಿಕಥಾಮೃತಸಾರವನ್ನು ರಚಿಸಿದ ಶ್ರೀ ಜಗನ್ನಾಥದಾಸರಾಯರ ಜನ್ಮಸ್ಥಳವಾದ ಬ್ಯಾಗವಾಟ ಎಂಬ ಹಳ್ಳಿಯೂ ಇಲ್ಲೇ ಹತ್ತಿರದಲ್ಲಿದೆ.