ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಲ್ಲಿ ಇನ್ನೂ ದೆವ್ವ ಇದೆ !

ಅಲ್ಲಿ ಇನ್ನೂ ದೆವ್ವ ಇದೆ ! ನೀವು ನಂಬ್ತೀರೋ ಇಲ್ವೋ ಗೊತ್ತಿಲ್ಲ. ಆದ್ರೆ ನಾವು ಚಿಕ್ಕವರಿದ್ದಾಗ ಅದನ್ನು ಸಂಪೂರ್ಣ ನಂಬಿದ್ದೆವು... ಹೆದರಿಕೊಂಡಿದ್ದೆವು. ಅಂತಹದ್ದೊಂದು ಜಾಗ ಇದ್ದದ್ದು ನಮ್ಮ ಶಾಲೆಯ ಹಿಂಬದಿ ಗುಡ್ಡದಲ್ಲಿ. ನಾನು ಓದಿದ್ದು ಸುಳ್ಯ ತಾಲೂಕಿನ ಜಯನಗರ ಶಾಲೆಯಲ್ಲಿ. ಮದ್ಯಾಹ್ನ ಊಟ ಆದ ಬಳಿಕ, ಆಟದ ವೇಳೆಯಲ್ಲಿ ನಾವು ಕಳ್ಳ ಪೋಲಿಸ್ ಆಟ ಆಡುತ್ತಿದ್ದೆವು.

ಹುಡುಗಿಯರೇ ಹುಷಾರ್

ಹಿಂದೆ ಬೆಂಗಳೂರಿನ ಹೆಸರು ಬೆನ್ಧಕಾಳುರು ಈಗ ಬೆಂಗಳೂರು. ಹೆಸರು ಬದಲಾಗಿದ್ದು ಅಸ್ಟೇ ಅಲ್ಲ, ಇಲ್ಲಿಯ ಜನ ಹಾಗು ಇಲ್ಲಿಯ generation ಕೂಡ ಹಾಗೆಯೆ ಬದಲಾಗಿದೆ. ಈಗ ಬೆಂಗಳೂರು ಒಂದು popular city.ಈಗಂತು ವಾರ ಕ್ಕೆ ಒಂದು ಹೊಸ ಸಿನಿಮಾ ಬರುತ್ತದೆ. ಅದಕ್ಕಂತೂ ಕಾಲೇಜ್ ಹುಡುಗ ಹುದುಗೀಯರೇ ಫುಲ್ ಹೌಸ್ ಮಾಡಿರ್ತಾರೆ. ನಾನು ಕೂಡ ಕಾಲೇಜ್ ಹುಡುಗಿನೇ.

ಗಣಿತ ಸಾಗರದಲ್ಲೊಂದು ಅನರ್ಘ್ಯ ರತ್ನ

ಗಣಿತ ಸಾಗರದಲ್ಲೊಂದು ಅನರ್ಘ್ಯ ರತ್ನ
ನಿತ್ಯ ನೂತನ ಗಣಿತದಲ್ಲಿರುವ
ಅಗಣಿತ ವಿಚಾರಗಳ ಕಡಲೊಳು
ಮುಳುಗಿ ಮುತ್ತು ರತ್ನಗಳೆತ್ತಿ ತಂದಿರಿವ
ಗಣಿತ ತಜ್ಞರೆಲ್ಲರಿಗೂ ಶಿರಬಾಗಿ ನಮಿಪೆನು.
ವಿಸ್ತಾರವಾದ ಗಣಿತ ಸಾಗರದಲ್ಲಿ ಒಂದು ಹನಿಯಷ್ಟಾದರೂ ನನ್ನಂತಹಾ ಸಾಮಾನ್ಯರಿಗೆ ತಿಳಿದಿದೆಯೋ ಇಲ್ಲವೋ ನಾನರಿಯೆ. ಆದರೂ ಆ ವಿಷಯ ಕೊಡುವ ಆನಂದ ಮಾತ್ರ ಅಮೋಘವಾದುದು..

ಬನ್ನಿ ಕನ್ನಡದ ಸಿರಿ ಮೈಸೂರಿಗೆ.

ಪುರಾಣದಲ್ಲಿ ಬರುವ ಮಹಿಷಾಸುರನನನ್ನು ದುರ್ಗೆಯು ಕೊ೦ದ ಊರು ಮೈಸೂರು ಎ೦ದು ದ೦ತಕಥೆಯಿದೆ.ಮೈಸೂರಿನ ಒಡೆಯರು ವಿಜಯನಗರ ಅರಸರ ಸಾಮ೦ತರಾಗಿದ್ದರು. ಕ್ರಿ.ಸ 1565 ರಲ್ಲಿ ನಡೆದ ತಾಳಿಕೋಟ ಕದನದ ನ೦ತರ ಅವರು ಸ್ವಾತ೦ತ್ರ್ಯರಾದರು. ಒಡೆಯರು ಮೈಸೂರಿನಲ್ಲಿ ಮೊದಲಿಗೆ ತಮ್ಮ ರಾಜ್ಯವನ್ನು ಸ್ಥಾಪಿಸಿ ನ೦ತರ ಶ್ರೀ ರ೦ಗ ಪಟ್ಟಣಕೆ ಸ್ಥಳಾ೦ತರಿಸಿದರು. ಮತ್ತೊಮ್ಮೆ ಬ್ರಿಟಿಷರು ಟಿಪ್ಪುವಿನ ಸೋಲಿನ ನ೦ತರ ಮೈಸೂರನ್ನೇ ರಾಜಧಾನಿಯನ್ನಾಗಿ ಮಾಡಿದರು. ಟಿಪ್ಪು ಮತ್ತು ಹೈದರಾಲಿ ಕೆಲವು ಕಾಲ ಮೈಸೂರು ಸ೦ಸ್ಥಾನವನ್ನು ಆಳಿದರು. ಟಿಪ್ಪು ಅಳಿದ ಮೇಲೆ ಮತ್ತೆ ರಾಜ್ಯಭಾರ ಮೈಸೂರು ಒಡೆಯರ ಕೈ ಸೇರಿತು.
ಏಪ್ರಿಲ್ 1927 ರಲ್ಲಿ ಗಾ೦ಧೀಜಿಯ ಆರೋಗ್ಯ ಕೆಟ್ಟಾಗ ಮೈಸೂರಿನ ದಿವಾನರು ಆರೋಗ್ಯ ಸುಧಾರಿಸಿಕೊಳ್ಳಲು ಮೈಸೂರಿಗೆ ಆಹ್ವಾನಿಸಿದರು. ಆರೋಗ್ಯ ಸುಧಾರಿಸಿದ ನ೦ತರ ಮೈಸೂರಿನ ಪ್ರಾ೦ತ್ಯ ವೆಲ್ಲಾ
ಸ೦ಚರಿಸಿ ತಮ್ಮ ಸ೦ದೇಶವನ್ನು ಸಾರಿದರು. ಮೈಸೂರಿನವರಿಗೆ ಇದನ್ನು ಕೇಳುವ ಸದಾವಕಾಶವು ಲಭಿಸಿತು. ಇದರಿ೦ದ ಯಾವುದೇ ಸಮಸ್ಯೆಗಳಿಲ್ಲದೇ ಮೈಸೂರು ಸ೦ಸ್ಥಾನ ಕರ್ನಾಟಕದ ಏಕೀಕರಣಕ್ಕೆ ಅನುವು ಮಾಡಿಕೊಟ್ಟಿತು.

ಕರ್ನಾಟಕದ ಚರಿತ್ರೆಯಲ್ಲಿ ಮೈಸೂರನ್ನು ಸಾ೦ಸ್ಕೃತಿಕ ನಗರವೆ೦ದು ಕರೆದರೆ ತಪ್ಪಾಗಲಾರದು. ಮುಮ್ಮಡಿ ಕೃಷ್ಣ ರಾಜ ಒಡೆಯರು ಕನ್ನಡದಲ್ಲಿ ಮತ್ತು ಸ೦ಸ್ಕ್ರ್ತದಲ್ಲಿ ತಾವೇ ಸ್ವತ: ದೊಡ್ಡ ವಿದ್ವಾ೦ಸರಾಗಿದ್ದರು . 1794- 1868ವರೆಗೆ ಮೈಸೂರನ್ನು ಆಳಿದರು. ಅವರು ಕನ್ನಡಕ್ಕೆ ವಿಶೇಷ ಪ್ರೋತ್ಸಾಹವನ್ನು ಕೊಟ್ಟು ಯಕ್ಷಗನ ಮು೦ತಾದ ಕಲೆಗಳಿಗೆ ಆಶ್ರಯವನ್ನು ಕೊಟ್ಟರು. ಅವರ ಆಸ್ಥಾನ ನೂರಾರು ಕವಿಗಳಿ೦ದ ಅಲ೦ಕೃತವಾಗಿತ್ತು. ಇವರ ಆಸ್ಥಾನದ ಕವಿಯಾದ ಕೆ೦ಪು ನಾರಾಯಣನ "ಮುದ್ರಾ ಮ೦ಜುಷ " ಕನ್ನಡ ಗದ್ಯ ಸಾಹಿತ್ಯಕ್ಕೆ ಹೊಸ ತಿರುವನ್ನು ಕೊಟ್ಟಿತು.
ಕನ್ನಡ ನಾಟಕಗಳಿಗೆ ಅತ್ಯ೦ತ ಪ್ರೋತ್ಸಾಹವನ್ನು ಕೊಡುತ್ತಿದ್ದ ಮಹಾರಾಜರು ತಮ್ಮ ಆಸ್ಥಾನ ವಿದ್ವಾನ್ ಬಸವಪ್ಪ ಶಾಸ್ತ್ರಿಯವರಿ೦ದಾ ಸ೦ಸ್ಕೃತ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸುವ ಮಹಾತ್ಕಾರ್ಯವನ್ನು ಮಾಡಿದರು. ಈತ ವಿಕ್ರಮೋರ್ಷಿಯಾ, ಶಾಕು೦ತಲ , ಉತ್ತರ ರಾಮಚರಿತೆ ಮು೦ತಾದ ನಾಟಕಗಳನ್ನು ಬರೆದು ಆಡಿಸಿದನು. ಇ೦ದೂ ಸಹ ಕರ್ನಾಟಕದ ವಿವಿಧ ನಾಟಕಗಳನ್ನು ಆಡಿಸಿ ರ೦ಗ ಪ್ರಯೋಗ ಮತ್ತು ಸ೦ಶೋಧನೆ ಮಾಡುತ್ತಿರುವ ಹೆಮ್ಮೆಯ "ರ೦ಗಾಯಣ" ಸ೦ಸ್ಥೆ ಮೈಸೂರಿನಲ್ಲಿದೆ. 

ಮಿಂಚಿನ ಓಟ (೧೯೮೦)

ಮಿಂಚಿನ್ ಓಟ ಎಂದ ಕೂಡಲೆ ನೆನಪಿಗೆ ಬರುವುದು ೧೯೮೦ರಲ್ಲಿ ಬಿಡಿಗಡೆಯಾದ ಶಂಕರ್ ನಾಗ್ ನಿರ್ದೇಶನದ ಚಲನಚಿತ್ರ...

ಈ ಚಿತ್ರದಲ್ಲಿ ಕಟ್ಟೆ(ಶಂಕರ್ ನಾಗ್) ಮತ್ತು ಟೋನಿ(ಅನಂತ್ ನಾಗ್) ಜೈಲಿನಲ್ಲಿ ಕಂಬಿ ಕುಯ್ಯುವಾಗ ಹಿನ್ನೆಲೆಯಲ್ಲಿ ಬರುವ "ಹನ್ನೊಂದು ಘಂಟೆಯಾದಾಗ ಢಣ್ ಢಣ್ ಘಂಟೆ ಬಡಿದಾಗ..." ಪದಗಳು ಬೇಕಾಗಿತ್ತು... ಚಿತ್ರದಲ್ಲಿ ತುಂಬಾ ಮೆಲ್ಲಗೆ ಬರ್ತಾ ಇರುತ್ತೆ...

ನಮ್ಮ ಕನ್ನಡ ನಾಡು

ನಮ್ಮ ಕನ್ನಡ ನಾಡು

ಕನ್ನಡ ನಾಡಿನ ಅಂದವ ನೋಡ

ಸಾಹಿತ್ಯ ಸಂಸ್ಕೃತಿಯ ಕಲೆ ಬೀಡ

ಮನ ತಣಿಸುವ ಹಚ್ಚ ಹಸಿರು

ಮಲೆನಾಡಿನ ಸೌಂದರ್ಯದುಸಿರು

 

ಜೋಗಿನ ಜಲಪಾತದ ಸೊಬಗಿನ ಇಂಪು

ಪಂಚ ಕೋಟಿ ಜನರಾಡುವ ಕನ್ನಡದ ಕಂಪು

ಬೇಲೂರು ಹಳೇಬೀಡು ಮೈಸೂರು

ಮಹಾತ್ಮಾ ಗಾಂಧಿ ಅಂತರ್ಜಾಲವನ್ನು ಹೇಗೆ ಬಳಸುತ್ತಿದ್ದರು?

(ಸೂಚನೆ:ಗಾಂಧೀಜಿಯವರ ಬಗೆಗಿನ ಊಹಾತ್ಮಕ ಬರಹವಿದು. ಇದಕ್ಕೆ ತಪ್ಪು ಅರ್ಥ ಕಲ್ಪಿಸದಿರಿ)
gandhi

ಗಾಂಧೀಜಿಯ ಹಂತಕ-ಪಡೆ ವಿಶ್ರಮಿಸುವುದಿಲ್ಲ. ಭಾರತವೂ...

ಕರ್ನಾಟಕದ ಇವತ್ತಿನ ದೊಡ್ಡ ಸಮಸ್ಯೆ ಕೋಮುವಾದ ಎನ್ನುವುದು ನನ್ನ ನಂಬಿಕೆ. ಕಳೆದ ಹಲವಾರು ದಶಕಗಳಲ್ಲಿ ಕರ್ನಾಟಕ ಕಂಡ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಪ್ರಗತಿಯನ್ನೆಲ್ಲ ಇವತ್ತಿನ ಕೋಮುವಾದ ನಾಶ ಮಾಡುತ್ತಿದೆ.

ಆಧುನಿಕ ಶಿಕ್ಷಣ, ಪ್ರಜಾಪ್ರಭುತ್ವ ಮತ್ತು ಇತ್ತೀಚಿನ ಆರ್ಥಿಕ ಬೆಳವಣಿಗೆ ನಮ್ಮ ನೆಲದ ಅನೇಕ ಸಮಸ್ಯೆಗಳನ್ನು ಇಲ್ಲವಾಗಿಸುತ್ತಿದೆ. ಜನ, ಅವರ ಮನಸ್ಸು, ಅಭಿಪ್ರಾಯಗಳು ಹೆಚ್ಚುಹೆಚ್ಚು ಚಲನಶೀಲವೂ ಸಹನಶೀಲವೂ ಆಗುತ್ತಿದೆ. ದುಡಿದೇ ಬದುಕಬೇಕಾದ ಯುವಕ-ಯುವತಿಯರು ಸಂಕೋಲೆಗಳನ್ನು ಮತ್ತು ಸಂಕುಚಿತತೆಗಳನ್ನು ಕಳೆದುಕೊಳ್ಳುತ್ತಾ ನಡೆದಿದ್ದಾರೆ. ಆದರೆ ಹಳೆಯ ವ್ಯವಸ್ಥೆಯಿಂದ ಯಾರು ಯಾರು ಲಾಭ ಮಾಡಿಕೊಳ್ಳುತ್ತಿದ್ದರೊ ಅವರು ಇದನ್ನು ಪರಿಭಾವಿಸುವ ರೀತಿಯೆ ಬೇರೆ. ಹಿಂದೂ-ಕೋಮುವಾದವನ್ನು ಪ್ರಚೋದಿಸುವವರು ಮತ್ತು ಅದರ ಹಿಂಭಾಗದ ಇಂಜಿನ್‌ಗಳು ಇವರೆ. (ಮುಸಲ್ಮಾನ/ಕ್ರಿಶ್ಚಿಯನ್ ಕೋಮುವಾದಕ್ಕೆ ಕಾರಣಗಳು ಬೇರೆಯೆ ಇವೆ.)

ಈ ಕೋಮುವಾದದ ನಿಜವಾದ ಅಪಾಯ ಇರುವುದು ಅದು ತರಲಿರುವ status-quo ನಲ್ಲಿ, ನಿಲ್ಲಿಸಲಿರುವ ಎಲ್ಲಾ ತರಹದ ಸಂವಾದದಲ್ಲಿ ಮತ್ತು ಒಂದು ವರ್ಗ ಇನ್ನೊಂದು ವರ್ಗವನ್ನು ಶೋಷಿಸುವುದು ಸರಿ ಎನ್ನುವ ಪ್ರಚೋದನೆಯಲ್ಲಿ.

ಗಾಂಧೀಜಿ ಕೇವಲ ಬ್ರಿಟಿಷರ ವಿರುದ್ಧ ಹೋರಾಡಲಿಲ್ಲ. ಆತ ನಮ್ಮದೇ ದೇಶದ ದುಷ್ಟಶಕ್ತಿಗಳ ವಿರುದ್ಧವೂ ಹೋರಾಡಿದ. ಸಮಾಜದ ದುಷ್ಟತೆಯ ವಿರುದ್ಧ ಹೋರಾಡುತ್ತಲೆ ವ್ಯಕ್ತಿಯ ದುಷ್ಟತೆಯ ವಿರುದ್ಧವೂ ಹೋರಾಡಿದ. ಅದು ಅನೇಕ ರಣಾಂಗಣಗಳಲ್ಲಿ ಏಕಕಾಲದಲ್ಲಿ ಮಾಡುತ್ತಿದ್ದ ಯುದ್ಧ. ಆದರೆ "ಅಂತರಂಗ ಶುದ್ಧಿ"ಗಿಂತ "ಬಹಿರಂಗ ಶುದ್ಧಿ"ಗೇ ಮಹತ್ವ ಕೊಟ್ಟ ಸಂಕುಚಿತ ಮನೋಭಾವದ ಕೋಮುವಾದಿಗಳು ಗಾಂಧೀಜಿಯ ಹತ್ಯೆ ಮಾಡುತ್ತಾರೆ. ಆ ಹಂತಕ ಪಡೆ ಇನ್ನೂ ವಿಶ್ರಮಿಸಿಲ್ಲ.

ಆದರೆ, ಗಾಂಧೀಜಿ ಭಾರತದಲ್ಲಿ ಹುಟ್ಟಿದ ಒಬ್ಬ ವ್ಯಕ್ತಿ ಮಾತ್ರವಲ್ಲ. ಭಾರತದ ಅಂತಃಸತ್ವವೆ, ಭಾರತದ ನೈಜರೂಪವೆ ಗಾಂಧೀಜಿ. ದುಷ್ಟತೆಯ ವಿರುದ್ಧ ಭರತಭೂಮಿಯಲ್ಲಿ ನಡೆದ ಶತಶತಮಾನಗಳ ಹೊರಾಟ ಕಳೆದ ಶತಮಾನದಲ್ಲಿ

ಧೂಮಪಾನ ನಿಷೇಧ

ಕೇಂದ್ರ ಸರಕಾರವೇನೋ ಇವತ್ತಿನಿಂದ ಸಾರ್ವಜನಿಕ ಸ್ಥಳಗಳಾಲ್ಲಿ ಧೂಮಪಾನ ನಿಷೇಧವನ್ನು ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆ ಪ್ರಯುಕ್ತ ಜಾರಿಗೆ ತಂದಿದೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ಸನ್ನು ಪಡಿಯುತ್ತೇ ಕಾದು ನೋಡಬೇಕು. ಧೂಮಪಾನ ಪ್ರಿಯರಿಗೆ ಶಾಪವಾದರೂ ಈ ಧೂಮಪಾನದ ಕಾಟದಿಂದ ಮುಕ್ತಿ ಪಡೆದವರ ಸಂಖ್ಯೆ ಅಧಿಕ.