ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆತನ ಸಾವು ಈಗ ವಿಷಾದ ಹುಟ್ಟಿಸುತ್ತಿಲ್ಲ...

ಈಗ ಸ್ವಲ್ಪ ಹೊತ್ತಿನ ಮುಂಚೆ ಫರೀದ್ ಜಕಾರಿಯರವರ "GPS" ನೋಡುತ್ತಿದ್ದೆ. ಫರೀದ್ ಜಕಾರಿಯ ಗೊತ್ತಲ್ಲ? ಭಾರತೀಯ ಸಂಜಾತ; ಅಮೇರಿಕದ ಪತ್ರಕರ್ತ. ಜಾಗತಿಕ ರಾಜಕೀಯ ಆಯಾಮಗಳ ಮೇಲೆ ವಸ್ತುನಿಷ್ಠ ಅಭಿಪ್ರಾಯ ಕೊಡುವ ಅಧ್ಯಯನಶೀಲ. ಬುದ್ಧಿಜೀವಿ. ಭಾರತೀಯ ಮುಸಲ್ಮಾನರ ಬಗ್ಗೆ ಮತ್ತು ಅವರಲ್ಲಿಯ ವೈಚಾರಿಕ-ಸಾಂಸ್ಕೃತಿಕ ನಾಯಕತ್ವದ ದಾರಿದ್ರ್ಯದ ಬಗ್ಗೆ ಯೋಚಿಸಿದಾಗೆಲ್ಲ ನೆನಪಿಗೆ ಬರುವ ಮುಂಬಯಿಯಲ್ಲಿ ಹುಟ್ಟಿ ಬೆಳೆದ ಲೇಖಕ. ಆದರೆ, ಫರೀದ್ ಈಗ ಅಮೆರಿಕನ್ ಪ್ರಜೆ!

ಇರಲಿ. ಇವತ್ತು ಫರೀದ್ ಜಕಾರಿಯ ಚೀನಾದ ಪ್ರಧಾನಿ ಮತ್ತು ಅಫ್ಘನ್ ಅಧ್ಯಕ್ಷನ ಸಂದರ್ಶನ ಮಾಡಿದ್ದ. ಕೊನೆಯಲ್ಲಿ ರೋಮನ್ ಸಾಮ್ರಾಟ ಮಾರ್ಕಸ್ ಅರಿಲಿಯಸ್‌‍ನ ಒಂದೆರಡು ಮಾತುಗಳನ್ನು ಉಲ್ಲೇಖಿಸಿದ. ಮಾರ್ಕಸ್ ಆಸೆಯ (ಬಯಕೆ) ದುಷ್ಟತನಗಳ ಬಗ್ಗೆ ಹೇಳಿದ್ದ. ಅದನ್ನು ಜಕಾರಿಯ ಅಮೆರಿಕದ ಮತ್ತು ಚೀನಾದ ಜನರಿಗೆ ನೆನಪಿಸಿದ. ಹಾಗೆಯೆ ಮಾರ್ಕಸ್ ಸಾವಿನ ಬಗ್ಗೆ ಹೇಳಿದ್ದ ಮಾತನ್ನೂ ಹೇಳಿದ; "ಸಾವನ್ನು ಬಯಸಬಹುದು. ಏಕೆಂದರೆ ಅದು ಎಲ್ಲಾ ಬಯಕೆಗಳಿಗೂ ಅಂತ್ಯ ಹಾಡುತ್ತದೆ."

ನಮ್ಮ ಉತ್ತರಕನ್ನಡದ ಪ್ರವಾಸೀ ಸ್ಥಳಗಳು.

ಉತ್ತರ ಕನ್ನಡ ಪ್ರವಾಸಿಗರ ಸ್ವರ್ಗ ಎಂದೇ ಕರೆಸಿಕೊಂಡಿದೆ. ಪೃಕೃತಿ ಪ್ರಿಯರಿಗಾಗಲಿ, ಸಮುದ್ರ ತೀರಗಳಾಗಲಿ,ದೇವಸ್ಥಾನಗಳಾಗಲೀ,
ಜಲಪಾತಗಳಾಗಲಿ ಯಾವುದೇ ಆದರೂ ಖಂಡಿತ ಪ್ರವಾಸಿಗರ ಮನತಣಿಸುವ ಜಿಲ್ಲೆ ವೈವಿದ್ಯಮಯವಾಗಿ ಗುರುತಿಸಿಕೊಂಡಿದೆ. ಇಲ್ಲಿ ಕಾಡುಗಳು
ಕಥೆ ಹೇಳುತ್ತವೆ. ಮೀನುಗಾರರು, ಹಾಲಕ್ಕಿಗಳು, ಕಲಾಕಾರರು ಎಲ್ಲವೂ ನೋಡುವಂತವೇ.

ನಾನಿಲ್ಲಿ ಜಿಲ್ಲೆಯ ಪ್ರಸಿದ್ಧ ಪ್ರವಾಸೀ ಸ್ಥಳಗಳನ್ನು ಗುರುತು ಹಾಕಿದ್ದೇನೆ. ಹತ್ತಿರದ ನಗರಗಳನ್ನೂ.
ಜಿಲ್ಲೆಗೆ ಬರುವ ಯಾರಾದರೂ ನೋಡಲೇ ಬೇಕಾದ ಸ್ಥಳಗಳು.

ಅಮೆರಿಕದ ನಾಗರೀಕ ಸಾಮಾನ್ಯವಾಗಿ ಸಾಲದಹೊರೆಯಲ್ಲೇ ಜೀವನವೀಡಿ ದುಡಿಯಬೇಕಾದ ಪ್ರಸಂಗವಿರುತ್ತದೆ !

ಮಾರ್ಕೆಟ್ ಎಕಾನಮಿ ದೇಶವಾದ ಅಮೆರಿಕದಲ್ಲಿ , ಎಲ್ಲರೂ ಒಂದಲ್ಲ ಒಂದು ಖಾಸಗೀ ಸಂಸ್ಥೆಗಳಲ್ಲಿ ಕೆಲಸಮಾಡಿದುಡಿಯುವ ವರ್ಗಕ್ಕೆ ಸೇರಿದ್ದಾರೆ. ಸರ್ಕಾರಿವಲಯದಲ್ಲೂ ನೌಕರಿ ಮಾಡುವವರೂ ಇದ್ದಾರೆ. ಅವರು ಕಡಿಮೆ. ನಮ್ಮದೇಶದ ತರಹ ಕೆಲಸದ ವೈಖರಿಯಿಲ್ಲ. ಎಲ್ಲೂ ಪೀವನ್ ಗಳಿಲ್ಲ. ಕೆಳವರ್ಗದ ನಾಲ್ಕನೇ ಶ್ರೇಣಿಯ ಕೆಲಸಗಾರರು ಇಲ್ಲ. ಬ್ಯೂರೋಕ್ರೆಸಿ, ಇಲ್ಲೂ ಇದ್ದೇ ಇದೆ.

ಭಾರತೀಯ ಭಾಷೆಗಳಲ್ಲಿ ಗ್ನು/ಲಿನಕ್ಸಿನ ಮತ್ತೊಂದು ಆವೃತ್ತಿ

[:http://www.cdac.in/|CDAC] [:http://nrcfoss.org.in/|NRCFOSSನ] ಸಹಾಯದಿಂದ ೧೮ ಭಾಷೆಗಳಲ್ಲಿ ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಹೊರತಂದಿದೆಯೆಂದು ದಿ ಹಿಂದೂ ವರದಿ ಮಾಡಿದೆ.

ಇದಕ್ಕೆ ಬೇಕಾದ ಸಪೋರ್ಟ್ ಚ್ಯಾನಲ್ ಕೂಡ ಸಿದ್ಧಪಡಿಸಿದ್ದಾರಂತೆ (3-tier ಅದೂ). ಅಲ್ಲದೆ ಈ ಸಪೋರ್ಟ್ ಚ್ಯಾನಲ್ಲನ್ನು ೨೪/೭ ಕೆಲಸಮಾಡುವಂತೆ ಹೊರತರುವ ಯೋಜನೆ ಇದೆಯಂತೆ.

ಪ್ರಾಜೆಕ್ಟ್ ಟೆನ್ ಟು ದ ಹಂಡ್ರೆಡ್ತ್

ಪ್ರತಿನಿತ್ಯ ಆಗೊಮ್ಮೆ ಈಗೊಮ್ಮೆ, ಅದ್ಯಾವುದೋ ಬಾಂಬ್ ಬ್ಲಾಸ್ಟ್ ಆದಾಗ, ಮತ್ತೇನೋ ಆದಾಗ, "ಛೆ, ಈ ಜಗತ್ತು ಬದಲಾಗಬೇಕು, ನಾವುಗಳು ಇದನ್ನು ಬದಲಾಯಿಸಬೇಕು" ಅನ್ನಿಸಿದ್ದಿದೆಯೋ?
ಅಂತರ್ಜಾಲ ಜಗತ್ತನ್ನು ಸಂಪೂರ್ಣ ಬದಲಾಯಿಸಿಬಿಟ್ಟಿರುವ ಗೂಗಲ್ ಕಂಪೆನಿ ಈಗ ಹೀಗೆ ಅನ್ನಿಸುವವರಿಗೆ ಮಣೆ ಹಾಕಲಿದೆಯಂತೆ.

ಹಿನ್ನೆಲೆ:
ಗೂಗಲ್ ತನ್ನ ಹತ್ತನೇ ವರ್ಷದ ಹುಟ್ಟು ಹಬ್ಬ ಆಚರಿಸುತ್ತಿದೆ. ಈ ಸಮಯದಲ್ಲಿ "Don't be evil" ಎಂದು ಹೊರಟ ಇದೇ ಕಂಪೆನಿ ಖಳನಾಯಕನಂತೆ ನಡೆದುಕೊಂಡು ಸ್ವತಃ evil ಆದ ಇತ್ತೀಚೆಗಿನ ಹಲವು ದೃಷ್ಟಾಂತಗಳ ನಡುವೆ ದುಡ್ಡು ಮಾಡಿತು, ಸಮಾಜ ಸೇವೆ ಮಾಡಿಲ್ಲ ಎಂಬ ಟೀಕೆ ಕೇಳಿಬಂದಿರುವುದು ಇವರ ಕಿವಿಗೂ ಬಿದ್ದಂತಿದೆ ಎಂಬುದು ಹಲವು ವರದಿಗಳ ಅಂಬೋಣ.
ಅದೇನೆ ಇರಲಿ, ಗೂಗಲ್ ಎಂದಿನಂತೆ ಹೆಚ್ಚಿನ ಕೆಲಸ ತಾನು ಮಾಡದೆ ಉಳಿದವರಿಗೆ ಮಾಡಲು ಬಿಟ್ಟು ಅದಕ್ಕೆ ಹಣಕಾಸಿನ ಸಹಾಯ ಮಾಡುವ ಜವಾಬ್ದಾರಿ ಹೊತ್ತಿಕೊಂಡಿದೆ. ಇದೇ ಪ್ರಾಜೆಕ್ಟ್ ಟೆನ್ ಟು ದ ಹಂಡ್ರೆಡ್ತ್ (Project 10100).

ಮತ್ತೊಂದು ಭಾನುವಾರ

ಬೆಂಗಳೂರಲ್ಲಿ ಎಂತಹ ಒಳ್ಳೇ ಹೋಟೆಲಿನಲ್ಲಿ ಚ್ಯಾಟ್ಸ್ ತಿಂದರೂ ಸ್ವಲ್ಪ ದಿನಗಳಲ್ಲೇ sore throat ಗ್ಯಾರಂಟಿ. ಈ ವಾರ ಎರಡು ಮೂರು ಬಾರಿ ಸ್ನೇಹಿತರೊಂದಿಗೆ ಚ್ಯಾಟ್ಸ್ ಪ್ರೋಗ್ರಾಮ್ ಇಟ್ಟುಕೊಂಡದ್ದರಿಂದ ವಾರಾಂತ್ಯ ಬರುವಷ್ಟರಲ್ಲೇ ನೆಗಡಿ, ಜ್ವರ ಶುರು. ಮೊನ್ನೆ ರಾತ್ರಿಯೇ ಅನಿಸಿತ್ತು... ಮುಂದೆರಡು ದಿನ ಕಷ್ಟ ಆಗಬಹುದೆಂದು.

ಎಂದೂ ಬೇಗ ಏಳದವ ಇವತ್ತು ಮುಂಜಾನೆ ಎದ್ದು ಅತ್ತ ದೆಹಲಿಯಲ್ಲಾದ ಬಾಂಬ್ ಸ್ಪೋಟದ ಬಗ್ಗೆ ವಿವಿಧ ಸುದ್ದಿ ಮಾಧ್ಯಮಗಳ ವರದಿ ಓದುತ್ತಿದ್ದೆ. ನಡುನಡುವೆ ಉಪ್ಪುನೀರು gargle ಮಾಡೋದು, pillsಉ ಟಾನಿಕ್ಕು ಪಕ್ಕದಲ್ಲಿಟ್ಟುಕೊಂಡ ಕಂಪ್ಯೂಟರಿನ ಮುಂದೆ ಕುಳಿತುಕೊಳ್ಳಲು ಬೇಸರವಾದಾಗ ಸ್ವತಃ ಧೂಳು ಹಿಡಿದುಕೊಂಡಿದ್ದ ವ್ಯಾಕ್ಯೂಮ್ ಹಿಡಿದು ಕಸ ಹೊಡೆದದ್ದು. ಹೊರಗೆ ಹೋಟೆಲಿನಲ್ಲಿ ತಿಂದದ್ದಕ್ಕೆ ಇವೆಲ್ಲದರ ನಡುವೆ ನನಗೇ ನಾನೇ ಬೈದುಕೊಂಡದ್ದು.

ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ’ಮಾನೋ ರೇಲ್ ” ನ ಅಗತ್ಯತೆ !

ಮೊದ-ಮೊದಲು ಫ್ರಾಂಕ್ಫರ್ಟ್ ವಿಮಾನ ನಿಲ್ದಾಣವನ್ನು ಕಂಡಾಗ ಆಗುವ ಅನುಭವ, ಅದೆಷ್ಟು ಪುಟಾಣಿ ನಿಲ್ದಾಣ ಎಂಬ ಭಾವನೆಬರುತ್ತದೆ. ಅಮೆರಿಕದ ಭಾರಿ-ಭಾರಿ ನಿಲ್ದಾಣಗಳನ್ನು ಕಂಡಾಗ, ಫ್ರಾಂಕ್ಫರ್ಟ್ ವಿಮಾನ ನಿಲ್ದಾಣ, ಹಾಗೆ ಅನ್ನಿಸುವುದು ಸಹಜ. ನಿಜವಾಗಿ ನಮ್ಮ ಮುಂಬೈ ಮುಂತಾದ ನಿಲ್ದಾಣಗಳಿಗಿಂತ ಅದು ದೊಡ್ಡದೇ. ಸೌಕರ್ಯಗಳಿಗೆ ಹೇಳಿಮಾಡಿಸಿದಂತಿದೆ.

ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು .... ಹಾಡು ಬರೆದದ್ದು ಯಾರು ? ಪೂರ್ಣಪಾಠ ಗೊತ್ತಿದೆಯೇ?

ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು ....
ನನಗೆ ನೆನಪಿರುವ ಲೈನುಗಳು ಹೀಗಿವೆ

ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು
ಮರಳು ಮನೆಗಳ ಕಟ್ಟಿ ಆಟವಾಡಿದ ದಿವಸ
ನೆನಪಿದೆಯೇ?
ನೆನಪಿದೆಯೇ ನಿನಗೆ , ಗೆಳತಿ ನೆನಪಿದೆಯೇ ನಿನಗೇ?
.

.
.
.
.
ಅಂದು ಹರಿದಾ ಹೊಳೆ ಇಂದು ಕೂಡ ಹರಿಯುತಿದೆ.
ನಾನಿಲ್ಲಿ ನೀನಲ್ಲಿ ..........