ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶಂಕರ್ ನಾಗ್: ಒಂದು ನೆನಪು...

ಶಂಕರನಾಗ್ ಅವರು ನಮ್ಮನ್ನು ಅಗಲಿ ಇಂದಿಗೆ ಹದಿನೆಂಟು ವರ್ಷ.

ಶಂಕರ್ ನಾಗ್ ಎಂದರೆ ಸಾಕು ಕನ್ನಡಿಗರಲ್ಲಿ ಏನೋ ಒಂದು ರೀತಿ ಹುರುಪು ಮತ್ತು ಲವಲವಿಕೆ ಮೂಡುತ್ತದೆ. ಸಾಧನೆಯ ಉತ್ತುಂಗಕ್ಕೇರುವ ತವಕದಲ್ಲಿ ಅವಿರತವಾಗಿ ಪಾದರಸದಂತೆ ಕೆಲಸಮಾಡುತ್ತಿದ್ದ ಶಂಕರ್ ಮೇಲೆ ವಿಧಿಗೆ ಅದೇನು ಮುನಿಸೋ ಏನೋ . 1990ರ ಸೆ. 30ರಂದು ತನ್ನ ಬಳಿಗೆ ಕರೆದುಕೊಂಡು ಬಿಟ್ಟಿತು.

ಕನ್ನಡ ಚಿತ್ರರಂಗವನ್ನು ಮುಂಚೂಣಿಯಲ್ಲಿ ಸಾಗುವಂತೆ ಮಾಡಿದ ನಾಗ್ ಅವರಿಗೆ ಮುಂದೊಂದು ದೊಡ್ಡ ಆಘಾತ ಕಾದ್ದಿತ್ತು. ತಮ್ಮ ಮುಂದಿನ ಚಿತ್ರ "ಜೋಕುಮಾರ ಸ್ವಾಮಿ" ಕುರಿತು ಚರ್ಚಿಸಲು ಪತ್ನಿ ಅರುಂಧತಿ ನಾಗ್ ಹಾಗೂ ಪುತ್ರಿಯೊಂದಿಗೆ ಅದು ಸೆಪ್ಟೆಂಬರ್ 30, 1990 ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ತಮ್ಮ ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದಾಗ, ದಾವಣಗೆರೆ ಹತ್ತಿರ ಅವರು ಹೋಗುತ್ತಿದ್ದ ಕಾರು ಅಪಘಾತಕ್ಕೆ ಈಡಾಯಿತು. ಅದರಲ್ಲಿ ನಾಗ್ ಅವರನ್ನು ಬಿಟ್ಟು ಎಲ್ಲರೂ ಉಳಿದರು. ಆದರೆ, ಶಂಕರ್ ನಾಗ್.... ಅಮರರಾದರು. ಶಂಕರ್ ನಮ್ಮೊಂದಿಗಿಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲು ಇಂದಿಗೂ ಕನ್ನಡ ಚಿತ್ರರಂಗಕ್ಕೆ ಕಷ್ಟವಾಗುತ್ತಿದೆ.

ಗಾಂಧಿ ಜಯಂತಿ

ಅಕ್ಟೋಬರ್ 2 ನಮ್ಮ ದೇಶಾದ್ಯಂತ ಆಚರಿಸುವ ರಾಷ್ಟ್ರಿಯ ಹಬ್ಬ ಕಾರಣ ಅಂದು ಗಾಂಧಿ ಜಯಂತಿ. ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಗಾಂಧಿಜಿಯವರ ಭಾವ ಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಂದು ಗಾಂಧಿಜಿಯವರ ಬಗ್ಗೆ ಮತ್ತು ಅವರ ಸಾದನೆಗಳ ಬಗ್ಗೆ ಜೊತೆಗೆ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಹೇಳುತ್ತಾರೆ.

ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.

ಸಂಪದ ಬಳಗದವರಿಗೆ ಇಂದಿನಿಂದ ಪ್ರಾರಂಭವಾಗುವ ನಮ್ಮ ನಾಡಹಬ್ಬ ದಸರಾ ಪ್ರಯುಕ್ತ ಹಾರ್ದಿಕ ಶುಭಾಶಯಗಳು...

ಮೈಸೂರಿನಲ್ಲಿ ಇಂದು ಬೆಳಿಗ್ಗೆ ಉದ್ಘಾಟನೆ... ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ... 

ಸ್ವಗತ

ಮೊನ್ನೆ ನಮ್ಮೂರಿಂದ ಮೂವರು ಪ್ರತಿಭಾವಂಥರು ಇತ್ತ ನ್ಯೂಯಾರ್ಕ್ ಕಡೆಗೆ ಬಂದಿದ್ದರು, ನ್ಯೂಯಾರ್ಕ್ ನಲ್ಲಿ ಅವರು ಯಾರದೋ ಮನೆಯಲ್ಲುಳಿದು ಕೊಂಡಿದ್ದರು, ನಾನು ಅವರನ್ನೆಲ್ಲ ಭೆಟ್ಟಿ ಮಾಡುವ ಇಚ್ಛೆಯಿಂದ
ಅವರನ್ನು ನಮ್ಮ ಕಡೆ ಬನ್ನಿ ಎಂದು ಆಹ್ವಾನಿಸಿದೆ.

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಪಾಡ್ಯ

ಮೊನ್ನೆ ಶನಿವಾರ ಒಂದು ಸೊಗಸಾದ ಸಂಗೀತ ಕಚೇರಿಗೆ ಹೋಗುವ ಅವಕಾಶ ದೊರೆತಿತ್ತು. ಒಂದು ಒಳ್ಳೇ ಉದ್ದೇಶಕ್ಕಾಗಿ ಆಯೋಜಿತವಾಗಿದ್ದ ಕಾರ್ಯಕ್ರಮ ಅದು. ಹಾಡುಗಾರ್ತಿ ಹಾಡಲು ಕರ್ನಾಟಕದ ವಾಗ್ಗೇಯಕಾರ ರಚನೆಗಳನ್ನೇ ಆಯ್ದಿದ್ದರು. ಮೈಸೂರು ಸಂಗೀತದ ಒಂದು ಪ್ರಮುಖ ಕೇಂದ್ರವಾದ್ದರಿಂದ ಮೈಸೂರಿನ ವಾಗ್ಗೇಯಕಾರರ ರಚನೆಗಳೇ ಅದರಲ್ಲಿ ಹೆಚ್ಚಾಗಿದ್ದರಲ್ಲಿ ಆಶ್ಚರ್ಯವೇನಿಲ್ಲ.

ಅವರು ಹಾಡಿದ ರಚನೆಗಳಲ್ಲಿ ಮೊದಲ ರಚನೆಯನ್ನು ನವರಾತ್ರಿಯ ಮೊದಲ ದಿನವಾದ ಇಂದು ನಿಮಗೆ ಕೇಳಿಸೋಣ ಎನ್ನಿಸಿತು. ಅದಕ್ಕೆ ಎರಡು ಮೂರು ಕಾರಣಗಳಿವೆ. ಒಂದು ದಸರ ಅಂದರೆ ಮೈಸೂರು, ಮೈಸೂರು ಅಂದರೆ ದಸರಾ ಅನ್ನಿಸುವ ಈ ನವರಾತ್ರಿ ಹಬ್ಬದಲ್ಲಿ, ಮೈಸೂರಿನಲ್ಲಿ ರಚನೆಯಾದ ಇದು ಒಳ್ಳೇ ಆರಂಭವನ್ನು ತರುತ್ತೆ ಎನ್ನುವುದು. ಎರಡನೆಯದು, ಸಂಗೀತ ಕಚೇರಿಯನ್ನು ವರ್ಣದೊಂದಿಗೆ ಆರಂಭಿಸಿದಾಗ ಅದು ಸೊಗಸುತ್ತೆಂಬ ನಂಬಿಕೆಯಂತೆ, ಈ ಹಾಡನ್ನು ಕೇಳುತ್ತ ನವರಾತ್ರಿ ಹಬ್ಬವೂ ಎಲ್ಲರಿಗೂ ಸೊಗಸಲಿ ಎನ್ನುವುದು ನನ್ನ ಆಸೆ. ಮೂರನೆಯ ವಿಷಯಕ್ಕೆ
ಮತ್ತೆ ಬರುವೆ.

ಅಮೆರಿಕದಲ್ಲಿನ ಸಾರ್ವಜನಿಕ ಸೇವಾಸಂಸ್ಥೆಗಳು-೨

ದಿನದಲ್ಲಿ ಹಿರಿಯರ ಯೋಗಕ್ಷೇಮ ವಿಚಾರಣೆ ! (Adult Day Connection) (Day care Home for the Old) ಹೇಗೆ ಪುಟ್ಟ ಮಕ್ಕಳಿಗೆ ಬೇಬಿಸಿಟಿಂಗ್ ಅನುಕೂಲಗಳು ದೊರೆಯುತ್ತಿವೆಯೋ, ಅದೇರೀತಿ ಹಿರಿಯನಾಗರಿಕರಿಗೂ ಒಂದು ಹಂತದಲ್ಲಿ ಹಲವಾರು ಸೌಲಭ್ಯಗಳ ಆವಶ್ಯಕತೆಗಳಿವೆ.

ಹೃದಯ ಸಮುದ್ರ

ಯುವತಿಯೊಬ್ಬಳು ತನ್ನ ಪ್ರೀತಿ,ಪ್ರೇಮ ಭಾವನೆಗಳು ಸುಳ್ಳೆಂದು ತಿಳಿದಾಗ ಅವಳ ಮನದಲ್ಲಿ ಮುಡೂವ ಮೌನರಾಗ,ನಾನು ಚಿಕ್ಕಂದಿನಲ್ಲಿ ಕೇಳಿದ,ನಮ್ಮ ನಿಮ್ಮ್ಮ ನೆಚ್ಚಿನ ಅಂದಿನ ಮಾತನಾಡುವ ಗೆಳೆಯ/ಗೆಳತಿಯಾಗಿದ್ದ ಬಾನುಲಿಯಲ್ಲಿ ನುಲಿದಾಗ,ಹಾಗೆ ಒಂದು ಪುಸ್ತಕದಲ್ಲಿ ಬರೆದಿದ್ದೆ,ಅದನ್ನು ನಿಮಗೂ ಪರಿಚಯಿಸುವ ಇರಾದೆ ನನ್ನದು..ಹಾಗೂ ಈ ಕವನ ರಚಿಸಿದ ವ್ಯಕ್ತಿಗೂ ನನ್ನ ನಮನಗಳು.....