ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಗರೇಶ್ವರ ದೇವಸ್ಥಾನ - ಬಂಕಾಪುರ

ನಗರೇಶ್ವರ ದೇವಸ್ಥಾನ ತಲುಪಿದಾಗ ನನಗೆ ಕಂಡದ್ದು ಒಂದು ಭವ್ಯ ದೇವಸ್ಥಾನದ ಮುಖಮಂಟಪದಲ್ಲಿ ಕೂತು ಓದುತ್ತಿದ್ದ ಒಬ್ಬ ವಿದ್ಯಾರ್ಥಿ ಮತ್ತು ಜತನದಿಂದ ದೇವಾಲಯವನ್ನು ಕಾಯುವ ಕಾಯಕದಡಿ ಸುತ್ತಲೂ ಗುಡಿಸುತ್ತಿದ್ದ ಪುರಾತತ್ವ ಇಲಾಖೆಯ ಉದ್ಯೋಗಿ ಗುರುರಾಜ. ಆ ವಿದ್ಯಾರ್ಥಿಯೇನೋ ನನ್ನನ್ನು ನೋಡಿದ ಆದರೆ ಗುರುರಾಜ ತನ್ನ ಕೆಲಸದಲ್ಲಿ ಅದೆಷ್ಟು ಮಗ್ನರಾಗಿದ್ದರೆಂದರೆ ನಾನು ದೇವಾಲಯದ ಒಂದು ಸುತ್ತು ಹಾಕಿ ನಂತರ ದೇವಾಲಯವನ್ನು ಪ್ರವೇಶಿಸುವವರೆಗೂ ಅವರು ನನ್ನನ್ನು ಗಮನಿಸಿಯೇ ಇರಲಿಲ್ಲ.

ಅದೆಷ್ಟೋ ದಿನಗಳ ಬಳಿಕ ದೇವಾಲಯ ನೋಡಲು ಒಬ್ಬ ಪ್ರವಾಸಿಗ ಬಂದ ಎಂದು ನನ್ನನ್ನು ಕಂಡು ಗುರುರಾಜರಿಗೆ ಎಲ್ಲಿಲ್ಲದ ಸಂತೋಷ. ೧೧ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ಸಮಯದಲ್ಲಿ ಈ ದೇವಾಲಯದ ನಿರ್ಮಾಣವಾಗಿತ್ತೆಂಬ ವಿಷಯ ಬಿಟ್ಟರೆ ಇವರಿಗೆ ಈ ದೇವಾಲಯದ ಬಗ್ಗೆ ಬೇರೇನೂ ಗೊತ್ತಿಲ್ಲ.

ಸಂಪದ ಬೆಳಿಗ್ಗೆ ಸ್ವಲ್ಪ ಹೊತ್ತು ಲಭ್ಯವಿರಲಿಲ್ಲ

ಟ್ರಾಫಿಕ್ ತುಂಬಾ ಇದ್ದದ್ದರಿಂದ ಬೆಳಿಗ್ಗೆ ಸ್ವಲ್ಪ ಹೊತ್ತು ಸಂಪದ ಲಭ್ಯವಿರಲಿಲ್ಲ. ಕ್ಷಮೆಯಿರಲಿ.

ಸಂಪದ ಪುಟಗಳು ನಿಧಾನವಾಗಿ ಲೋಡ್ ಆದರೆ, ಅಥವ ಖಾಲಿಪುಟಗಳು ಬರಲು ತೊಡಗಿದರೆ ನನಗೊಂದು ಇ-ಮೇಯ್ಲ್ ಹಾಕಿ ತಿಳಿಸುತ್ತೀರಲ್ವ?
ವಿಳಾಸ: hpn at sampada dot net
(at - @, dot - .)

ಸಂಪದ ಸರ್ವರಿಗೆ ಸೋಮವಾರ, ಅದೂ ಸೋಮವಾರ ಬೆಳಿಗ್ಗೆ ಅತಿ ಹೆಚ್ಚಿನ ಟ್ರಾಫಿಕ್ ಬರುತ್ತಿದೆ.

ಪಪ್ಪು-ರೀ ಡಿಫಾಯ್ನಡ.-ಇದು jane tu ya jaane na ಚಿತ್ರದ ಹಾಡಿನ ಅನುವಾದ

ತಕದಿಮಿ ತಾನಾ, ತಕದಿಮಿತಾನ
ತಕದಿಮಿತಾನಾ ಹಾಂ ಓದಿ...

ಇವನು ರೂಪವಂತ,ಇವನು ಗುಣವಂತ
ಹಾಡುಗಾರ, ಸೊಗಸುಗಾರ,ಇವನು ಕಲೆಗಾರ

ಮಹೀಯ ಕಣ್ಣುಗಳು ಕಂದು ಬಣ್ಣ
ಮಹೀಯ ಗಲ್ಲ ಕೆಂಪು ಏಕೆ
ಮಹೀಯು ತಬಲಾ ಬಾರಿಸುತ್ತಾನೆ.
ಮಹೀಯು ಭಜನೆ ಮಾಡುತ್ತಾನೆ
ಆದರೆ ಮಹೀಗೆ ಹುಡುಗೀರು ಅಂದರೆ ಅಲರ್ಜೀ

ಸಾತ್ವಿಕ ಬದುಕಿನಲ್ಲಿ ನಂಬಿಕೆ
M.B.A.ಮುಗಿಸಿ ITCಯಲ್ಲಿ ಕೆಲಸ

ಭಾವನೆಯ ಹಕ್ಕಿ

ಭಾವನೆಯ ಹಕ್ಕಿ

ಭಾವನೆಯ ಹಕ್ಕಿಯು ಹಾಡುತ್ತಿದೆ

ಮನಸ್ಸಿನ ಮಾತನು ಹೇಳುತ್ತಿದೆ

ಬದುಕಿನ ಸುಂದರ ಪುಟಗಳಲ್ಲಿ

ಕನಸ್ಸಿನ ಸಾವಿರ ಪುಟಗಳನು

 

ಕಲ್ಲು - ಮುಳ್ಳಿನ ಬಾಳಿಗೆ

ಪ್ರೀತಿ ಮಮತೆಯ ಆಶ್ರಯವು

ನಗೆ ಚಾನೆಲ್

ಗಲಭೆ,ಬಾಂಬು,ಚಳುವಳಿ ಇವೆಲ್ಲದರ ಬಳುವಳಿ ಉದ್ವೇಗ,ಹತಾಶೆ,ಭಯ.

ಇದರಿಂದ ಮುಕ್ತಿ ನೀಡಲೋ ಏನೋ ದಿನವಿಡೀ ನಗಿಸುವ ಟಿವಿ ಚಾನೆಲ್ "ಹಾಸ್ಯ ತೆರೆ " ಬರುತ್ತಿದೆಯಂತೆ.

ಇವತ್ತೇ ಆರಂಭ.

ಸನ್ ನೆಟ್‌ವರ್ಕ್ ಕೊಡುಗೆ.

ಡಿಟಿಎಚ್ ಡಿಶ್ ಮೂಲಕ ಮಾತ್ರ ಲಭ್ಯವಂತೆ.

ಕೇಬಲ್ ಮೂಲಕ ಸದ್ಯಕ್ಕಂತೂ ಇಲ್ಲ.

ದಿನವಿಡೀ ಏನು ಪ್ರಸಾರ ಮಾಡ್ತಾರೆ?

ಓದಿದ್ದು ಕೇಳಿದ್ದು ನೋಡಿದ್ದು-26 ದಿಡೀರ್ ಜೇನು:ಇಸ್ರೇಲಿ ತಂತ್ರ

ಅಪ್ಪಿಕೋ...

ಅಪ್ಪಿಕೋ ಚಳುವಳಿಗೀಗ ಇಪ್ಪತ್ತೈದು ವರ್ಷ. ಮರಗಳನ್ನು ಕಟುಕರಿಂದ ಉಳಿಸಲು ಜನರು ಹಿಡಿದ ಈ ಹಾದಿ ವಿನೂತನವಾಗಿತ್ತು.ಉಳಿಸಿ,ಬೆಳೆಸಿ,ಬಳಸಿ ಎನ್ನುವುದು ಚಳುವಳಿಯ ಧ್ಯೇಯ ವಾಕ್ಯವಾಗಿತ್ತು.

ಹಿಂದು

ಭಾನುವಾರದ ಹಬ್ಬ

ಸರಿಯಾಗಿ ನಿದ್ರೆಯಿಲ್ಲದೆ, ಕಣ್ಣು ಸ್ಟ್ರೇಯ್ನ್ ಮಾಡಿಕೊಂಡು - ಇನ್ನು ಗ್ನು/ಲಿನಕ್ಸ್ ಹಬ್ಬ ಮಾಡೋದೇನೆ ಎಂದುಕೊಂಡು ಕುಳಿತಿದ್ದೆ. ಮುಂಜಾನೆ ನಾಲಕ್ಕಾಗಿತ್ತು. ಇನ್ನು ನಿದ್ರೆ ಮಾಡಲಾಗದೆಂದು LHC shutdown ಆದದ್ದರ ಬಗ್ಗೆ ಓದುತ್ತ ಕುಳಿತಿದ್ದೆ. ಒರಿಸ್ಸಾ ಪ್ರವಾಹದ ಬಗ್ಗೆ ಓದುತ್ತ ಕುಳಿತಿದ್ದೆ. ಸರಿಯಾಗಿ ಐದಕ್ಕೆ ಫೋನು ಬಂತು:
"ಎದ್ದಿದೀಯಾ ಹರಿ?"
"ಹೂಂ ಕಣೋ"
"ಸರಿ, ಈಗ ಹೊರಟೆ. ಕಾರು ತಗೊಂಡು ಇನರ್ಧ ಗಂಟೆಯಲ್ಲಿ ಅಲ್ಲಿರ್ತೀನಿ"

ಸರಿ, ರೆಡಿಯಾಗಿ ಬ್ಯಾನರ್ ಕೆಳಗಿಳಿಸಿ ಲ್ಯಾಪ್ಟಾಪ್ ಪ್ಯಾಕ್ ಮಾಡಿ ಹೊರಟೆ. ಕಾರಿನ ಸ್ಪೀಡು, ಡೆಕ್ ನ ವೂಫರ್ ಸದ್ದು ನಿದ್ರೆಯಿಲ್ಲದ ಮನಸ್ಸಿಗೆ ಸವಾಲೆಸೆದಿತ್ತು. ಈ ನಡುವೆ ಮುಂಜಾನೆಯ ಮಂಜಿನಲ್ಲಿ ರೋಡು ಮಿಸ್ ಆಗಿ ಕಳಕೊಂಡ ಕೆಲವು ಘಳಿಗೆಗಳು. ಅಂಕುಡೊಂಕಿನ ಮೈಸೂರು ರಸ್ತೆಯಲ್ಲಿ ರಾಮನಗರದ ಲೋಕರುಚಿ ತಲುಪುವಷ್ಟರಲ್ಲಿ ಎಂಟಾಗಿತ್ತು. ಸುತ್ತ ಹುಸಿ ಜನಪದ ಓಡಾಡಿಕೊಂಡಿದ್ದ ಹೋಟೆಲಿನಲ್ಲಿ ಕಡುಬು, ರಾಗಿ ರೊಟ್ಟಿ (ಅಷ್ಟೊತ್ತಿಗೇ) ನಮ್ಮ ತಿಂಡಿ. ಅತ್ತಿತ್ತ ಕಂಡ ಮೈಸೂರು-ಬೆಂಗಳೂರು ಹುಡುಗಿಯರ ಮುಖಗಳು ನಮ್ಮ ದಂಡಯಾತ್ರೆಯ ಸಿಪಾಯಿಗಳ ಕಣ್ಣುಗಳನ್ನು busy ಇಟ್ಟಿತ್ತು.

ಫ್ಯೂಶನ್, ಭಾವಗೀತೆ, ಹಿಂದಿ ಸಿನೆಮಾ ಹಾಡು, ಮೆಟಲ್, ರಾಕ್ - ಹೀಗೆ ಎಲ್ಲ ಹಾಡುಗಳ ಕಲಸುಮೇಲೋಗರದೊಡನೆ ಮೈಸೂರು ವಿ.ವಿ. ತಲುಪಿದ್ದು ಸರಿಯಾಗಿ ೧೦ಕ್ಕೆ. ಆಡಿಟೋರಿಯಮ್ ಆಗಲೇ ಭರ್ತಿಯಾಗಿತ್ತು!
ಹಲವರು ನಿಂತುಕೊಂಡು ಕೇಳುತ್ತಿದ್ದದ್ದು ಕಾಣಿಸಿತು.

ಗ್ನು/ಲಿನಕ್ಸ್ ಟಿ-ಶರ್ಟ್ ಹಾಕಿಕೊಂಡು ಒಂದೆರಡು ಕೆಲಸಗಳನ್ನು ಕೈಗೆತ್ತಿಕೊಂಡು ಮೈಸೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ (Physics) ಡಿಪಾರ್ಟ್ಮೆಂಟ್ ಲ್ಯಾಬಿಗೆ ಹೋದಾಗ ಅಲ್ಲಿರುವ ಹಲವು ಸಿಸ್ಟಮುಗಳಲ್ಲಿ ಗ್ನು/ಲಿನಕ್ಸ್ ಇದ್ದದ್ದು, ಜೊತೆಗೆ ಕನ್ನಡಕ್ಕೆ ಬೇಕಾದ ಸಕಲ ತಂತ್ರಾಂಶಗಳೂ ಅದರಲ್ಲಿದ್ದದ್ದು ನೋಡಿ ಖುಷಿಯಾಯ್ತು.

ಅತ್ತ ಗ್ನು/ಲಿನಕ್ಸ್ ಪರಿಚಯ ಜೋರಾಗಿ ನಡೆದಿತ್ತು. ದಣಿವಾಗಿದ್ದ ಕಾರಣ ಸ್ಟೇಜು ಬಿಟ್ಟು ಸ್ವಲ್ಪ ದೂರ ಉಳಿದೆ. ಒಂದೆರಡು ಬಾರಿ ಮಾತ್ರ ಇಂಗ್ಲಿಷ್ ಬಳಕೆ ಜೋರಾದಾಗ "ಸಂಪೂರ್ಣ ಇಂಗ್ಲೀಷ್ ಬೇಡ, ಕನ್ನಡ ಹೆಚ್ಚಾಗಿ ಇರಲಿ" ಎಂದು ಹೇಳಿ ಬಂದೆ. ಮೈಸೂರಿಗರಲ್ಲಿ ಸ್ವಚ್ಛ ಭಾರತೀಯ ಇಂಗ್ಲೀಷಿಗಿರುವ ಒಲವು ಅಚ್ಚರಿ ಮೂಡಿಸಿತು. ಈ ಬಾರಿ ಮೈಸೂರಿನ ತಂಡದವರ ಬಯಕೆಯಂತೆ ಗ್ನು/ಲಿನಕ್ಸ್ ಹಬ್ಬದ ನಕ್ಷೆ ಸ್ವಲ್ಪ ಬದಲಾಗಿತ್ತು. ಮೊದಲರ್ಧ ದಿನ ಗ್ನು/ಲಿನಕ್ಸಿನಲ್ಲಿರುವ ದಿನನಿತ್ಯದ ಬಳಕೆಯ ತಂತ್ರಾಂಶಗಳನ್ನು ಬಳಸುವುದು ಹೇಗೆ ಎಂಬುದರ ದೃಶ್ಯಾವಳಿ, ಮಾತುಕತೆ. ಉಳಿದರ್ಧ ದಿನ ಗ್ನು/ಲಿನಕ್ಸ್ installationಉ - ಗ್ನು/ಲಿನಕ್ಸ್ ಹಾಕಿಕೊಂಡು ಪ್ರಯತ್ನಿಸುವಲ್ಲಿ ಸಹಾಯ ಮಾಡುವ ಸಮಯ.

ನೂರಾರು ಜನ ಭಾಗವಹಿಸಿ ಗ್ನು/ಲಿನಕ್ಸ್ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ತೋರಿದ್ದು ಖುಷಿ ತಂದಿತು. ಕನ್ನಡದ ಸುತ್ತ ಕೆಲಸ ಮಾಡುತ್ತಿರುವ ಕೆಲವು ಹಿರಿಯರ ಪರಿಚಯ ಮುಖತಃ ಆದದ್ದು ಮತ್ತಷ್ಟು ಖುಷಿ ಕೊಟ್ಟಿತು.
ಪರಿಸರದ ಸುತ್ತ ಕಾಳಜಿವಹಿಸಿ ಕೆಲವು ಚಿಕ್ಕಪುಟ್ಟ ಸಂಶೋಧನೆಗಳನ್ನು ಮಾಡುತ್ತಿರುವ ಹಿರಿಯರೊಬ್ಬರು ಸ್ವತಃ ಮಾತನಾಡಿಸಲೆಂದು ಬಂದು ತಾವು ಮಾಡುತ್ತಿರುವ ಕೆಲಸದ ಬಗ್ಗೆ ತಿಳಿಸಿದರು. ಆಸಕ್ತಿ ಹುಟ್ಟಿಸಿತು.
ಬಂದವರಲ್ಲೊಬ್ಬರು ನನ್ನ ಮುಖ ಗುರುತಿಸಿ ನೀನು ಮೈಸೂರಿನಲ್ಲಿ ನಮ್ಮ ಸ್ಕೂಲಿನಲ್ಲೇ ಓದ್ತಾ ಇದ್ದಿ, ನಮ್ಮ ಜೂನಿಯರ್. ನಾವೆಲ್ಲ ಒಟ್ಟಿಗೇ ಕ್ರಿಕೆಟ್ ಆಡ್ತಾ ಇದ್ವಿ, ನೆನಪಿದೆಯಾ ಎಂದು ಕೇಳಿದ್ದು ನೆನಪಿನ ಪುಟಗಳನ್ನು ಮತ್ತೊಮ್ಮೆ ತಿರುವಿ ಹಾಕುವಂತೆ ಮಾಡಿತು. ನೆನಪು ಮಾತ್ರ ಆಗಲಿಲ್ಲ!

ನಗು (ಕವಿತೆ)

ಮೊಗ್ಗು ಹೂ ಅರಳುವಂತೆ
ತುದಿ ಚಿಗುರು ಮುಂಚಾಚುವಂತೆ
ಕಂದನಾ ನಗು
ಧರೆಯೊಡಲು ಹಸಿರಾಗುವಂತೆ.

ಮೋಡ ತುಂಬಿದ ಬಾನಲ್ಲಿ
ಸುಳಿ ಮಿಂಚು ಸುಳಿದಂತೆ
ಹರೆಯಾದ ನಗು
ಹೂ ಬಿಸಿಲ ತುಂತುರು ಮಳೆಯಂತೆ

ಸಾಗರದ ಅಲೆಯಂತೆ
ಮರಳಿನಾ ದಿನ್ನೆಯಂತೆ
ಮೈ ಮನದ ಹುಚ್ಚು ಮನಸಿನಾ ನಗು
ಸಂಜೆಯಾ ರಂಗತೆ

ಸೆರೆ ಕುಡಿಯದಿದ್ದರೂ ನಿಶೆ ಏರುವಂತೆ
ಬಾಯಾರಿ ನೀರಿಲ್ಲದ ಬಾವಿಗೆ ಧುಮುಕಿದಂತೆ