ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಧಾರವಾಡದಲ್ಲಿ ಧ್ಯಾನ

ನಾನು ಧಾರವಾಡಕ್ಕೆ ಹೋದಾಗಲೆಲ್ಲ ಪುರ್ಸೊತ್ತು ಮಾಡ್ಕೊಂಡು ಅಲ್ಲೆ ಕರ್ನಾಟಕ ಯುನಿವರ್ಸಿಟಿಗೆ ಹೋಗ್ತೇನಿ . ಕೈ ಕಾಲು ತಾಕಿಸಿಕೊಂಡು ಓಡಾಡುವ, ಬಗೆಬಗೆಯ ಸದ್ದಿನಲ್ಲಿ ಮಾತು ಕೇಳಿಸದ ಈ ಮುಂಬೈ ಎಲ್ಲಿ , ಅಲ್ಲಿ ಹೆಚ್ಚುಕಡಿಮೆ ನೀರವ ನಿರ್ಜನ ಜಾಗವೆಲ್ಲಿ ... ಅಲ್ಲಿ ಎತ್ತರೆತ್ತರ ಮರಗಳು ಮೌನದಲ್ಲಿ ಬಿಸಿಲು/ಮಳೆ /ಗಾಳಿಯಲ್ಲಿ ಗಪ್ಪ ನಿಂತಿರ್ತಾವ .

ಬಿಹಾರದಲ್ಲಿ ಪ್ರವಾಹ

ನೇಪಾಳ ಗಡಿಭಾಗದ ಕುಶಾದಲ್ಲಿ ಕೋಸಿ ನದಿಗೆ ಕಟ್ಟಿದ ಒಡ್ಡು ಒಡೆದ ಪರಿಣಾಮ ಕೆಲವೇ ಗಂಟೆಗಳಲ್ಲಿ ಉತ್ತರ ಬಿಹಾರದ ಐದು ಜಿಲ್ಲೆಗಳಾದ ಸುಪೌಲ್, ಅರಾರಿಯ, ಸಹರ್ಸಾ, ಮಾಧೇಪುರ ಮತ್ತು ಪುರ್ನಿಯಾ ಅಸ್ತಿತ್ವವೇ ಇಲ್ಲದಂತೆ ಜಲಾವೃತಗೊಂಡವು. ಈ ಪ್ರಾಂತಗಳು ಪ್ರತಿ ವರ್ಷ ಎದುರಿಸುತ್ತಿದ್ದ ಪ್ರವಾಹಕ್ಕಿಂತ ದುಪ್ಪಟ್ಟು ನಷ್ಟವನ್ನು ಈ ಬಾರಿಯ ವಿಪತ್ತು ತಂದೊಡ್ಡಿದೆ. ಬಿಹಾರದ ಕಣ್ಣೀರ ನದಿಯೆಂದೆ ಜನಜನಿತವಾಗಿರುವ ಕೋಸಿ ನದಿಯ ಪ್ರವಾಹದಿಂದಾಗಿ ಬಿಹಾರದ ಜನತೆ ಅಕ್ಷರಶಃ ತಮ್ಮ ಜೀವನದೊಂದಿಗೆ ಹೋರಾಟಕ್ಕಿಳಿದಿದ್ದಾರೆ. ಲಕ್ಷಾಂತರ ಮಂದಿ ಪ್ರವಾಹದಿಂದಾಗಿ ತಮ್ಮ ಮನೆಮಠ, ಕುಟುಂಬಿಕರು, ಸಂಬಂಧಿಗಳು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಭೀಕರ ಪ್ರವಾಹದ ಪರಿಣಾಮ ಬಿಹಾರದ ಜನತೆ ತುಂಬಲಾರದ ನಷ್ಟಕ್ಕೀಡಾಗಿದ್ದಾರೆ; ಎಲ್ಲವನ್ನೂ ನೆರೆ ಕೊಚ್ಚಿಕೊಂಡು ಹೋಗಿದೆ. ಪ್ರವಾಹದ ಬಲಿಪಶುಗಳಲ್ಲಿ ಹೆಚ್ಚಿನವರು ಮಕ್ಕಳು. ಸಾವಿರಾರು ಮಕ್ಕಳು ನಿರ್ಗತಿಕರಾಗಿದ್ದಾರೆ. ನೇಪಾಳದಲ್ಲಿ ಪ್ರವಾಹ ತಡೆಗಾಗಿ ನಿರ್ಮಿಸಿದ್ದ ಮೊರಿಯು ಒಡೆದ ಕಾರಣ ಕೋಸಿ ನದಿ ಉಕ್ಕಿ ಹರಿಯುತ್ತಿದ್ದು, ಬಿಹಾರದ 16 ಜಿಲ್ಲೆಗಳು ಸಂಕಷ್ಟಕ್ಕೀಡಾಗಿವೆ.

ರಸ ಪ್ರಶ್ನೆಗಳು ಭಾಗ - ೨

ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ. ನನ್ನ ಈ ಪ್ರಯತ್ನ ಸ್ಪರ್ಧತ್ಮಕ ಪರೀಕ್ಷೆ ಬರೆಯುವವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ಜ್ಞಾನ ದೀವಿಗೆಯ ವರ್ಗದಡಿಯಲಿ ಲೇಖನಗಳನ್ನು ತರುತ್ತಿದ್ದೇನೆ.

ಚಿಕಾಗೋ ನಗರದ, ’ಗ್ಲೋಬಲ್ ಮಾರುಕಟ್ಟೆ,’ ಯಲ್ಲಿ, ತರಕಾರಿ ಹಣ್ಣು-ಹೂಗಳ ಜೊತೆಯಲ್ಲಿ, ತೆಂಗಿನ ಕಡ್ಡಿಯ ಕಸಬರಿಗೆ ಲಭ್ಯ !

ಹಾಗೇ ಚಿಕಾಗೊನಗರದಲ್ಲಿ ಅಲ್ಲಿ-ಇಲ್ಲಿ ಸುತ್ತಿದಮೇಲೆ, ಮನೆಗೆ ವಾಪಸ್ಸಾಗುವ ಮೊದಲು, ’ಗ್ಲೋಬಲ್ ಮಾರ್ಕೆಟ್ ’, ಗೆ ಹೋಗುವ ವಾಡಿಕೆ. ಇಲ್ಲಿ ಚಕ್ಕಲಿ ತುಂಬಾಚೆನ್ನಾಗಿರುತ್ತೆ. ಸೀಮೆಬದನೆಕಾಯಿಯನ್ನು ಹೋಲುವ ತರಕಾರಿ ಅತಿ-ರುಚಿಕರ ! ನಮ್ಮ ಭಾರತೀಯಗೆಳೆಯರು ತಮ್ಮ ಸ್ನೇಹಿತರಿಗೂ ತರಕಾರಿ, ಸಾಮಾನುಗಳನ್ನು ಖರೀದಿಸುತ್ತಾರೆ.

ಆ ಬಿಂದು ಎಲೆಯಲ್ಲೇ ಕುಣಿದಾಡುತಿರಲು ....

ಆ ಮಂಜು ಗಿರಿಯನ್ನು
ಚುಂಬಿಸುತಲಿರಲು

ಆ ಮೋಡ ಬಾನನ್ನು
ಬಿಡಲೊಲ್ಲೆನೆನಲು

ಆ ಬಿಂದು ಎಲೆಯಲ್ಲೇ
ಕುಣಿದಾಡುತಿರಲು

ನಿನ್ನ ನೆನಪೇ ಸುಳಿಯುವುದು
ಮನದಲ್ಲಿ ಮೊದಲು ...


ಅನುಪ್ ಮಲೆನಾಡು

ಱೞೋಪಾಖ್ಯಾನ ಓದಿ

ನನ್ನ "ೞ ಮತ್ತು ಳ ಹಾಗೂ ಱ ಮತ್ತು ರ ಉಚ್ಚಾರವ್ಯತ್ಯಾಸ" ಲೇಖನದಡಿ ಱೞ(ೞಕಾರ)ದ ಶಬ್ದಗಳನ್ನು ಶೃಂಗಾರ ಕವಿ ಕೊಟ್ಟಂತೆ ಉದಾಹರಿಸಿರುವುದನ್ನು ದಯವಿಟ್ಟು ನೋಡಿ.

ಲಿನಕ್ಸಾಯಣ - ೨೦ - ನೆಟ್ವರ್ಕ್ ನಲ್ಲಿ ಇಣುಕಿ ನೋಡು

ನೆಟ್ವರ್ಕ್ ಗೆ ನನ್ನ ಲಿನಕ್ಸ್ ಅನ್ನ ಕನೆಕ್ಟ್ ಮಾಡ್ಕೊಂಡ್ರೆ, ಇತರೆ ಕಂಪ್ಯೂಟರ್ಗಳನ್ನ ನಾನು ನನ್ನ ಡೆಸ್ಕ್ಟಾಪ್ ನಿಂದಲೇ ಸಂಪರ್ಕಿಸ ಬಹುದೇ? ಆ ಕಂಪ್ಯೂಟರ್ ನ ಫೈಲ್ ಗಳನ್ನ ಹೆಕ್ಕಿ ತೆಗೆಯ ಬಹುದೇ ಅನ್ನೋ ಪ್ರಶ್ನೆಗಳು ನಿಮ್ಮಲ್ಲಿರ ಬೇಕಲ್ವಾ?