ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇಂಟೆಲ್‌ನಿಂದ 6 ಕೋರ್ ಸಂಸ್ಕಾರಕ

intel

ಇಂಟೆಲ್ ಕಂಪೆನಿಯು ಕ್ವಾಡ್ ಕೋರ್(4) ಪ್ರಾಸೆಸರ್‍ನಿಂದ  ಭಿನ್ನವಾದ ಸಂಸ್ಕಾರಕವನ್ನು ಅಭಿವೃದ್ಧಿ ಪಡಿಸಿದೆ. ಹೊಸ ಇಂಟೆಲ್ ಕ್ಸಿಯಾನ್ 7400 ಚಿಪ್ ಆರು ಸಂಸ್ಕಾರಕಗಳನ್ನು ಹೊಂದಿದೆ. ಇನೊಂದು ವಿಶೇಷವೆಂದರೆ,ಇದನ್ನು ಭಾರತದ ಅಭಿವೃದ್ಧಿ ಕೇಂದ್ರದಲ್ಲೇ ವಿನ್ಯಾಸಗೊಳಿಸಲಾಗಿದೆ.

ತಾಯೆ ಬಾರಾ ಮೊಗವ ತೋರ - ಸಾಹಿತ್ಯ ಸಿಗುತ್ತಾ?

ಗೋವಿಂದ ಪೈ ಅವರ "ತಾಯೆ ಬಾರಾ ಮೊಗವ ತೋರ ಕನ್ನಡಿಗರ ಮಾತೆಯೇ" ಹಾಡಿನ ಸಾಹಿತ್ಯ ನಿಮ್ಮಲ್ಲಿ ಯಾರ ಹತ್ರಾದ್ರೂ ಸಿಗುತ್ತಾ?
-ಸವಿತ

ಹಲ್ಲುಜ್ಜಿದರೆ ಹುಡುಗಿ ಸಿಕ್ತಾಳಾ?

ಕೆಲಸದ ರಗಳೆ ಮುಗಿಸಿ, ಒಂದಿಷ್ಟು ನೆಮ್ಮದಿಯಿಂದ ಕೂಡೋಣ ಎಂದು ಟಿವಿ ಹಾಕುತ್ತೀರಿ. ಥಟ್ ಎಂದು ಬರುತ್ತವೆ ಜಾಹೀರಾತುಗಳು.

ಸಿನಿಮಾ ನಟಿಯಂತಿರುವ, ಹಾಗೇ ಮೇಕಪ್ ಕೂಡಾ ಹಾಕಿರುವ ಸಂಚಾರಿ ಪೇದೆಯೊಬ್ಬಳು ಕಾರೊಂದನ್ನು ನಿಲ್ಲಿಸಿ, ಚಾಲಕ ಕುಡಿದಿದ್ದಾನೋ ಎಂದು ಪರೀಕ್ಷಿಸುವ ಯಂತ್ರವನ್ನು ಅವನ ಬಾಯಿಗಿಟ್ಟು ಉಸಿರು ಬಿಡಲು ಹೇಳುತ್ತಾಳೆ. ದನಿಯಲ್ಲಿ ದರ್ಪ. ಚಾಲಕನಿಗೆ ದಿಗಿಲು. ಹೇಳಿಕೇಳಿ ಅದು ಹಾಡಹಗಲು. ಆಗ ಕುಡಿಯುವಂಥದ್ದು ಏನಾದರೂ ಇದ್ದರೆ ಅದು ವಾತಾವರಣ ತುಂಬಿಕೊಂಡಿರುವ ಕೆಟ್ಟ ಗಾಳಿಯನ್ನು ಮಾತ್ರ. ಅದು ಒತ್ತಟ್ಟಿಗಿರಲಿ, ಉಸಿರು ಬಿಡಲು ಕೇಳುತ್ತಿರುವುದು ಹೆಣ್ಣು. ಹೆಣ್ಣಿನ ಸಮ್ಮುಖದಲ್ಲಿ ಉಸಿರಾಡುವ ಅವಕಾಶ ಎಲ್ಲರಿಗೂ ಸಿಕ್ಕೀತೆ? ಆತನಿಗೆ ನಂಬಲೇ ಕಷ್ಟ. ಆದರೂ ಪಾಪ, ಗಲಿಬಿಯಿಂದಲೇ ಆತ ಉಸಿರು ಬಿಡುತ್ತಾನೆ.

ಏನಾಶ್ಚರ್ಯ? ಪುಳಕಗೊಳಿಸುವಂಥ ಪರಿಮಳ ಆತನ ಬಾಯಿಂದ ಬಂದು, ಯಂತ್ರದ ಶೋಧಕ ಹಾಯ್ದು, ಕೆರಳಿದಾಗ ಮಾತ್ರ ಅರಳುವ ಆ ಹೆಣ್ಣಿನ ನಾಸಿಕದ ಮೂಲಕ ಮೆದುಳಿನ ಅದ್ಯಾವುದೋ ವಾಸನೆ ಪತ್ತೆ ಹಚ್ಚುವ ಭಾಗ ಪ್ರವೇಶಿಸಿ ಆಕೆಯನ್ನು ಪುಳಕಗೊಳಿಸಿಬಿಡುತ್ತದೆ. ಮುನಿದ ಹೆಣ್ಣಿನಿಂದ ಬಚಾವಾಗಬಹುದು, ಆದರೆ, ಪುಳಕಗೊಂಡವಳಿಂದ ಪಾರಾಗುವುದು ಕರ ಕಷ್ಟ. ಚಾಲಕನ ಬಾಯಿಂದ ಅದೆಂಥ ಪರಿಮಳ ಬಂತೋ, ಅದ್ಹೇಗೆ ಆಕೆಗೆ ರೋಮಾಂಚನವಾಯಿತೋ ಗೊತ್ತಾಗುವುದಿಲ್ಲ. ಮೊದಲು ದರ್ಪದಿಂದ ಆಜ್ಞೆ ಮಾಡಿದ್ದ ಆಕೆ, ಈಗ ಇದ್ದಕ್ಕಿದ್ದಂತೆ ಬದಲಾಗುತ್ತಾಳೆ. ಇನ್ನೊಮ್ಮೆ ಉಸಿರಾಡುವಂತೆ ಮಾದಕವಾಗಿ ವಿನಂತಿಸುತ್ತಾಳೆ.

ಕನ್ನಡ ನಾಡು

ಕನ್ನಡ ನಾಡಿನ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಿದಾಗ ನಮಗೆ ಸಿಗುವುದು.  ಶಾಂತಿಯ ನೆಲೆಯಾಗಿದ್ದ ಕನ್ನಡನಾಡು ಇಂದು ಯಾವ ಸ್ಥಿತಿಯಲ್ಲಿದೇ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇತ್ತಿಚಿನ ಘಟನೆಯಲ್ಲಿ ಅಶಾಂತಿಯೇ ತಾಂಡವಾಡುತ್ತಿದೆ. ನೆಮ್ಮದಿ ಬದುಕು ಇಲ್ಲವಾಗಿದೆ.

ಅಂದು

ಅಂದದ ನಾಡು

ಮರೆಯಲಾಗದ ನೋವು

ಮರೆಯಲಾಗದ ನೋವು
ಹಂಸಾನಂದಿಯವರು ಬರೆದ ಬ್ಲಾಗ್ ‘ದೊಡ್ಡವರ ಸಣ್ಣತನ’ ಓದಿದಾಗ ನನ್ನ ಕಹಿ ಅನುಭವವೊಂದು ನೆನಪಾಗಿ ನನ್ನ ಕಣ್ಣಂಚಿನಲ್ಲಿ ಒಂದೆರಡು ಹನಿಗಳು ಉದುರಿದವು. ಇಲ್ಲೂ ಹಾಗೇ ದೊಡ್ಡವರ ಕಾಟದಿಂದಲೇ ನಾನು ನೋವನುಭವಿಸಬೇಕಾಗಿ ಬಂತು. ಅದನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು.

ಬೇರೆ ಭಾಷೆಯವರಿಗೆ ಕನ್ನಡ ಕಲಿಯಲು ತರಗತಿಗಳ ಬಗ್ಗೆ ಮಾಹಿತಿ ಬೇಕಾಗಿದೆ.

ನನ್ನ ಜೊತೆ ಕೆಲಸ ಮಾಡುವವರಿಗೆ (ತಮಿಳು ಭಾಷಿಗರು)ಕನ್ನಡವನ್ನು ಕಲಿಯುವ ಆಸೆ. ಇಂತವರಿಗೆ ಕನ್ನಡ ಓದಲು ಮತ್ತೆ ಮಾತಾಡಲು ಕಲಿಸುವ ತರಗತಿ ನಡೆಸುವವರ ಮಾಹಿತಿ ಇದ್ದರೆ ತಿಳಿಸುತ್ತೀರಾ? ಅವರ ಮನೆ ಇರುವುದು ಬೆಂಗಳೂರಿನ ಇಂದಿರಾ ನಗರದ ಬಳಿ. ಆ ಪ್ರದೇಶದ ಸುತ್ತ ಮುತ್ತ ಯಾರಾದ್ರೂ ಇದ್ದರೆ ತಿಳಿಸಿ.