ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

B-A-D ಹಾಗೂ ರಾಜಕಾರಣ

ದೆಹಲಿಯಲ್ಲಿ ಮೊನ್ನೆ ಬಾಂಬ್ ಬ್ಲಾಸ್ಟ್ ಆಗಿರೋದು ನಮ್ಮೆಲ್ಲರಿಗೂ ಗೊತ್ತೇ ಇದೆ.... ಆದರೆ ನನಗ್ಯಾಕೋ ಕೆಲವರು ಇದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಅಂತ ಅನಿಸ್ತಿದೆ...

ಭಾವನೆಗಳಿಗೆ:

ಮರೆವೆಂಬ ಸಮುದ್ರದ ನೊರೆ ನೀನಲ್ಲ ಗೆಳತಿ,
ನನ್ನ ಒಡಲೆಂಬ ಸಮುದ್ರದ ಒಡಲಾಳದ ಮುತ್ತು ನೀನು,
ಈ ಅಮೂಲ್ಯವಾದ ಮುತ್ತನ್ನು ನಾನೆಂದಿಗೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ...
ನಿನ್ನ "ಸ್ನೇಹ"ವೆಂಬ "ಹೂದೋಟ"ದಲ್ಲಿ ಬಾಡದ "ಸುಮ"ವು ನಾನಾಗಿರಲಿ ಎಂದು ಬಯಸುವ
ನೀ ಮರೆಯದ ಗೆಳೆಯ - ನಾ ಮರೆಯದ ಗೆಳತಿ..
ನಿನ್ನ ನಗು ಪ್ರಿಯದರ್ಶಿ ಮಂಜುನಾಥ

ಕರ್ನಾಟಕ ಸರ್ಕಾರದ ನೂರು ದಿನದ ಸಾಧನೆ

ಯಾವ ಸರ್ಕಾರ ಬಂದರೂ ಅಷ್ಟೇ ಅವರು ಚುನಾವಣೆಯಲ್ಲಿ ಹೇಳಿದ ಭರವಸೆಗಳು ಬರೀ ಗಾಳಿಗೋಪುರವಷ್ಟೇ, ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿ.ಜೆ.ಪಿ ಸರ್ಕಾರ ಮಾಡಿರುವ ಸಾಧನೆಯಾದರೂ ಏನೂ ಬರೀ ಬೇರೆ ಪಕ್ಷಗಳಿಂದ ಶಾಸಕರನ್ನು ಖರೀದಿಸಿ ತಮ್ಮ ಸರ್ಕಾರ ಭದ್ರ ಪಡಿಸಿವುದೇ ಆಗಿದೆ.

ಇಂಜಿನಿಯರ್‌ಗಳ ದಿನದ ಶುಭಾಶಯಗಳು

ಇವತ್ತು ಭಾರತ ರತ್ನ ಎಂ.ವಿಶ್ವೇಶ್ವರಯ್ಯ ಅವರ ಹುಟ್ಟಿದ ದಿನ.ಇಂಜಿನಿಯರುಗಳ ದಿನವಾಗಿ ಆಚರಿಸಲಾಗುತ್ತಿದೆ. ಸಂಪದದ ಇಂಜಿನಿಯರುಗಳಿಗೆಲ್ಲಾ ಶುಭ ಹಾರೈಕೆಗಳು. ವಿಶ್ವೇಶ್ವರಯ್ಯನಂತಹ ಇಂಜಿನಿಯರುಗಳಾಗಿ. ಜನರಿಗೆ ಒಳಿತನ್ನು ಮಾಡಿ.

ವಚನ ಮಾಲಿಕೆ 01

ಚಿತ್ರ ನವಿಲೊಳು ವಿ|ಚಿತ್ರವನು ಗಗನದೊಳು |
ಪತ್ರ ಪುಷ್ಪಗಳ ವಿವಿಧ ವರ್ಣಗಳಿಂದ |
ಚಿತ್ರಿಸಿದರಾರು ? ಸರ್ವಜ್ಞ |

ಅಲ್ಲಿಪ್ಪನಿಲ್ಲಿಪ್ಪ | ನೆಲ್ಲಿಪ್ಪನೆನಬೇಡ |
ಕಲ್ಲಿನಂತಿಪ್ಪ ಮಾನವನ ಮನ ಕರಗೆ |
ಅಲ್ಲಿಪ್ಪ ನೋಡ! ಸರ್ವಜ್ಞ |

ಕಲ್ಲು ಕಲ್ಲೆಂಬುವಿರಿ | ಕಲ್ಲೊಳಿಪ್ಪುದೆ ದೈವ ? |
ಕಲ್ಲಲ್ಲಿ ಕಳೆಯನಿಲಿಸಿದ ಗುರುವಿನ |
ಸೊಲ್ಲಲ್ಲೆ ದೈವ ಸರ್ವಜ್ಞ |

(Technical article ಭಾಗ - ೧) ಇಂಟರ್ನೆಟ್ ತಂತ್ರಜ್ಞಾನ, ಒಂದು ನೋಟ

 

ಈ ಲೇಖನವನ್ನು ೩ ಭಾಗಗಳಲ್ಲಿ ಬರೆಯಲಾಗಿದೆ:

೧. ಮಾಹಿತಿ ಶೇಖರಣ ಉಪಕರಣಗಳು (Information Storage devices) ಮತ್ತು ಸರ್ವರ್ ಗಳು (Servers).

೨. ಮಾಹಿತಿ ಕೇಂದ್ರಗಳು (Datacenters) ಮತ್ತು ಇಂಟರ್ನೆಟ್ (Internet).

೩. ಆನ್-ಲೈನ್ (Online) ಎಂದರೆ ಏನು? ಮತ್ತು ಒಂದು ಉದಾಹರಣೆ: ಸಾರಿಗೆ ಸಂಸ್ಥೆಯ ಬಸ್ ಚೀಟಿಯನ್ನು ಇಂಟರ್ನೆಟ್ ಮೂಲಕ ಕಾದಿರಿಸುವುದು ಹೇಗೆ?

 

ಕತ್ತಲ ಕನ್ನಿಕೆ

ನೇಸರ ಕೂಡೇನೆ ಬೆಳಕು ಅಡಗಿ
ಜಗವೆಲ್ಲ ಕತ್ತಲಿಗೆ ಶರಣು ಹೋಗಿ
ಚುಕ್ಕಿ ಚಿತ್ತಾರ ಬಿಡಿಸ್ಯಾವೆ ಮುಗಿಲಾಗೆ
ಈ ಹಕ್ಕಿ ಹೆಕ್ಕಿ ಹಾಡ್ಯಾವೆ ಮನದಾಗೆ

ಹಾಡಿಗೆ ರೂಪುಗೊಂಡ ಕಾವ್ಯ ಕನ್ನಿಕೆ
ನರ್ತಿಸತೊಡಗ್ಯಾಳೋ
ಪಕ್ಕವಾದ್ಯಗಳಿಲ್ಲದೆಯೂ
ಹಕ್ಕು ಬಾದ್ಯಗಳಿಲ್ಲದೆಯೂ...

ಈ ನರ್ತನ ಕಂಡ
ನಿಶೆ ಜಗದ ಗಂಡ
ನಿದ್ರಾಪುರುಷ ಬಂದೊಂದು ನಿಮಿಷ
ಈ ಕನ್ನಿಕೆಗಿನಿಲ್ಲದ ಹರುಷ

ಮೋಡಾ..ಇಲ್ಲಿ ನೋಡಾ

ಆ ಬಾನ ನೀಲಂಗಳದ ಕೆಳಗಾss
ಬಣ್ಣ ಬಣ್ಣದಾ ಮೋಡಗಳ ಬಳಗಾss
ಓಡುತ್ತಿವೆ ಓಡುತ್ತಿವೆ ಒಂದೊಂದು ಒಂದೊಂದರ ಒಳಗಾss

ಅಪ್ಪಿಕೊಳ್ಳಲವು ತಬ್ಬಿಕೊಳ್ಳಲವು
ಎಂಬ ತವಕ ಪುಳಕ ಈ ರೈತಗಾss
ಅದಕ್ಕೆಂದೆ ಮಾಡವ್ನೆ ಮುಗಿಲತ್ತ ಮೊಗss

ಹೇ ಮೋಡ ಇಲ್ಲಿ ನೋಡ
ನಾವಾಗುವಾ ಬಾರ ಗೆಳೆಯಾ
ನಿನ್ನ ಕರೆತಂದು ನಮ್ಮಟ್ಟಿಗೆ
ಹಸಿರಾಗಿಸಿಕೊಳ್ತೀನಿ ಇಳೆಯಾ

ನಮ್ಮಪ್ಪ ಸೂರ್ಯಪ್ಪ

ಕನ್ನಡ ಗಜಲ್

ಒಂದು ಗಜಲ್

ನೀ ನಡೆದು ಬಂದೆ ಇಬ್ಬನಿಗಳೆಲ್ಲ ನಕ್ಕವು ನೀನಿರುವುದೇ ಹಾಗೆ
ಸವಿಮುತ್ತ ನೀಡಿದೆ ಚಿಕ್ಕೆಗಳೆಲ್ಲ ಮಿನುಗಿದವು ನೀನಿರುವುದೇ ಹಾಗೆ

ಮುಂಜಾವಿನ ಹೊಂಗಿರಣದಿ ತೊಯ್ದ ಗಿಡಗಂಟೆಬಳ್ಳಿಗಳೆಲ್ಲ
ಚಿಗುರ ಬೆರಳಿಂದ ಸವರಿದೆ ಮೊಗ್ಗೆಲ್ಲ ಅರಳಿದವು ನೀನಿರುವುದೇ ಹಾಗೆ

ಸುಳಿವ ತಂಗಾಳಿಯಲ್ಲಿ ನೀರವ ಮೌನದಲ್ಲಿ ಪಿಸುಮಾತಿನ ಹೊನಲ