ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಿಸುಗು

ಮಿಸುಗು=ಹೊಳೆ, ಪ್ರಕಾಶಿಸು
ಉದಾಹರಣೆ=ಅಶೋಕೆಯ ಮ್ಸಿಸುಪ ಪೊಸದಳಿರ್
ಭೂತಕೃದ್ವಾಚಿ=ಮಿಸುಗಿದ
ಭವಿಷ್ಯತ್ಕೃದ್ವಾಚಿ=ಮಿಸುಪ/ಮಿಸುಗುವ

ಮಿಸುನಿ=ಹೊಳೆಯುವ ವಸ್ತು, ಚಿನ್ನ

ಉದಾಹರಣೆ ಭರತೇಶವೈಭವದ
ನಸುನೇರವಾಗದೆ ಬೆರಳಿದ್ದರಿನ್ನೊಂದು
ಪೊಸತಂತ್ರವುಂಟೆಂದು ನೃಪತಿ
ಮಿಸುನಿಯ ಸರಪಣಿಯೊಂದನಂಗುಲಿಗೆ ಪೋ-
ಣಿಸಿ ತೂಗಿರೆಂದನೆಲ್ಲರಿಗೆ||

ಮಾತು

ಮಾತು ಬಲ್ಲಾತಂಗೆ ಮಾತೊಂದು ಮಾಣಿಕವು |
ಮಾತ ತಾನರಿಯ ದಧಮಂಗೆ ಮಾಣಿಕವು
ತೂತು ಬಿದ್ದಂತೆ ಸರ್ವಜ್ಞ ||

ವಂದಿಪೆನು ರೈತ ನಿನ್ನ ಪಾದಗಳ ನಾ ...

ನಮಗನ್ನ ನೀಡಿ ತಾ ಗಂಜಿ ಕುಡಿವನು
ಒಪ್ಪತ್ತು ಗಂಜಿಗೆ ದಿನವೆಲ್ಲಾ ದುಡಿವನು;

ಆರು ತುಂಬಿಹುದು ಮಕ್ಕಳಿಬ್ಬರಿಗೂ
ಹಣ್ಣ ಸವಿದಿಲ್ಲ, ಶಾಲೆ ಕಂಡಿಲ್ಲ;

ಹಗಲಲ್ಲಿ ಕೆಲಸ ರಾತ್ರಿಯಲಿ ಚಿಂತೆ
ಹೆಂಡತಿಯೂ ಸೋತಿಹಳು ಅವನಂತೆ;

ಸಂಕ್ರಾಂತಿ-ಯುಗಾದಿಗೊಮ್ಮೆ ಹಬ್ಬ
ಆಗ ಅಕ್ಕಿಪಾಯಸ ಸಿಕ್ಕರೆ ಅಬ್ಬಬ್ಬ !

ಪತ ಪತ ಗುಡ್ಡೆ ಮತ್ತು ಅದರ ಜತೆಗೆ ನೆನಪಾದದ್ದು.

ಹೆಸರು ಕೇಳ್ದಾಗ್ಲೇ ನಂಗೆ ನಗು ಬರುತ್ತೆ. ಯಾಕಂದ್ರೆ ಅದ್ರ ಹಿಂದಿರೋ ಕತೆ ನಂಗೆ ಗೊತ್ತಲ್ವಾ. ನಿಮ್ಗೂ ಹೇಳ್ತೀನಿ.

ನಾನು ಒಂದು-ಎರಡು ವರ್ಷದ ಚಿಕ್ಕ - ಪುಟ್ಟ - ತುಂಟ ಹುಡುಗಿಯಾಗಿದ್ದಾಗಿನ ಕತೆ. ನಂಗೆ ಇದು ನಿಜಾನಾ ಅಂತ ನೆನಪಿಲ್ಲ. ಆದ್ರೆ ಅಮ್ಮ ಕೆಲವೊಮ್ಮೆ ನೆನಪಿಸ್ತಾರೆ.

1979-80ರ ಹೊತ್ತಿಗೆ ನಾವಿದ್ದದ್ದು ಮಂಗಳೂರಿನ ಕೊಟ್ಟಾರ ಕ್ರಾಸ್ ಬಳಿ. ಅದು ನನ್ನ ದೊಡ್ಡಮ್ಮನ ಮನೆಗೂ ಹತ್ರ. ದೊಡ್ಡಮ್ಮ ಅಂದ್ರೆ ನನ್ನ ಅಜ್ಜಿ. ಯಾಕೆ ಅಜ್ಜಿಯನ್ನು ದೊಡ್ಡಮ್ಮ ಅಂತ ಕರೀತಿದ್ನೋ ಗೊತ್ತಿಲ್ಲ. ಬಹುಶಃ, ಆಕೆ ಆಗ ಅಜ್ಜಿ ತರಹ ಕಾಣಿಸ್ತಾ ಇರ್ಲಿಲ್ವೇನೋ. ದೊಡ್ಡಮ್ಮನ ಮನೆ ಕತೆಗಳೂ ಚೆನ್ನಾಗಿವೆ. ಇನ್ನೊಂದ್ಸಲ ಹೇಳ್ತೀನಿ. ಈಗ ಪತ ಪತ ಗುಡ್ಡೆ ಹತ್ತೋಣ.

ನಮ್ಮ ಹಳೇ ಮನೆ ಇದ್ದ ಜಾಗದಿಂದ ಸ್ವಲ್ಪವೇ ದೂರದಲ್ಲಿ ಈ ಪತ ಪತ ಗುಡ್ಡೆ ಇದ್ದದ್ದು. ಗುಡ್ಡ ಅಂದ್ರೆ ಅಂಥ ದೊಡ್ಡ ಗುಡ್ಡೆ ಏನಲ್ಲ. ಈಗ ಏನಾದ್ರೂ ಈ ಗುಡ್ಡೆ ನೋಡಿದ್ರೆ.... ಇದಾ.... ಗುಡ್ಡೆ ಅಂತ ಅನ್ನಿಸುತ್ತೆ. 25-30 ವರ್ಷಗಳ ಹಿಂದೆ ಅಲ್ಲಿ ಮನೇನೂ ಇರ್ಲಿಲ್ಲ. ರಸ್ತೆ ಕೂಡಾ ಇರ್ಲಿಲ್ಲ. ಖಾಲಿ ಜಾಗ ಇತ್ತು. ಈಗ ರಾಷ್ಟ್ರೀಯ ಹೆದ್ದಾರಿ 17 ಪಕ್ಕದಲ್ಲೇ ಇದೆ.

ಸೌಂದರ್ಯ ಖನಿಗಳಿಗೇಕೆ ಸೌಂದರ್ಯದ ಚಿಂತೆ

ಕಳೆದ ಸೋಮವಾರ ನನಗೆ ರಜೆಯಿತ್ತು. ಆದ ಕಾರಣ ಸೂರ್ಯನು ನೆತ್ತಿ ಮೇಲೆ ಬಂದಾಗ ಹಾಸಿಗೆ ಬಿಟ್ಟು ಎದ್ದೆ. ಇದಕ್ಕೆ ತಯಾರಿದ್ದಂತೆ ಮನೆಯಲ್ಲಿ ಕೆಲವು ಹಿತವಚನಗಳು ಕೇಳಿದ್ದೂ ಆಯ್ತು. ಕ್ರಮೇಣ ನಿತ್ಯ ಕೆಲಸಗಳನ್ನು ಮುಗಿಸಿ, ತಿಂಡಿ ತಿಂದು ಹಾಗೆ ಊರಿನ ಸಂಚರಣೆಗೆ ಹೊರಟೆ. ಅದು ನನ್ನ ಪ್ರೀತಿಯ ಹಳೇ ಸೈಕಲನ್ನೇರಿ. ಅದು ಸರಿ ಸುಮಾರು 5 ವರ್ಷಳಿಂದ ಬಳಸುತ್ತಿರುವ ಸೈಕಲ್. ಕಳ್ಳನು ಕೂಡ ಆ ಸೈಕಲ್‌ ಅನ್ನು ಮುಟ್ಟಲ್ಲ.

ಹೀಗೆ ಸೈಕಲ್ ಸವಾರಿ ಹೊರಟ ನಾನು ನಮ್ಮೂರು ದಾಸರಹಳ್ಳಿ, ಕೆಂಪಾಪುರ, ಅಮೃತಹಳ್ಳಿ ಹಾಗೂ ಕಾಫಿ ಬೋರ್ಡ್‌ ಲೇಔಟ್‌ ಹೀಗೆ ಹಲವು ರಾಜ ಬೀದಿ, ಗಲ್ಲಿ ಗಲ್ಲಿಗಳನ್ನು ಸುಮಾರು 3 ತಾಸು ಸುತ್ತಾಡಿದೆ. ಇಲ್ಲಿ ನನ್ನ ಗಮನ ಸೆಳೆದ ಬಹುಮುಖ್ಯ ವಿಚಾರ ಏನು ಗೊತ್ತಾ..? ಒಂದೊಂದು ಗಲ್ಲಿಗಳಲ್ಲೂ ಒಂದೊಂದು ಬ್ಯೂಟಿ ಪಾರ್ಲರ್‍ ಅಂಗಡಿಗಳು. ಅದು ಒಂದೂರಿಗೆ ಏಳೆಂಟು ಬ್ಯೂಟಿ ವರ್ಧಕ ಕೊಠಡಿಗಳು.

ಸುಮಾರು ಒಂದೊಂದು ಊರಿನ ಜನಸಂಖ್ಯೆ 1500 ರಿಂದ 2000. ಅದರಲ್ಲಿ ಬಹುಪಾಲು ಪುರುಷರಿದ್ದರೂ ಅವರ ಸೆಲ್‌ಗಳು ಕೇವಲ 3 ಅಥವಾ ೪ ಅಂಗಡಿಗಳು ಮಾತ್ರ. ಆದರೆ ಮಹಿಳೆಯರ ಸೌಂದರ್ಯ ವರ್ಧಕ ಅಂಗಡಿಗಳು ಇದರ ಎರಡಷ್ಟು. ದೇಶದಲ್ಲೇ ಹೆಣ್ಣು ಸಂತತಿ ಗಂಡು ಸಂತತಿಗಿಂತ ಹಿಂದೆ ಇದೆ. ಸುಮಾರು 100 ಅನುಪಾತದಲ್ಲಿ ಶೇ 20 ವೆತ್ಯಾಸ ಕಾಣಬಹಹುದು. ಇದಕ್ಕೆ ಕಾರಣಗಳು ಅನೇಕ.

ಸೌಂದರ್ಯ ಖನಿಗಳಗೇಕೆ ಸೌಂದರ್ಯದ ಚಿಂತೆ...?

ಕಳೆದ ಸೋಮವಾರ ನನಗೆ ರಜೆಯಿತ್ತು. ಆದ ಕಾರಣ ಸೂರ್ಯನು ನೆತ್ತಿ ಮೇಲೆ ಬಂದಾಗ ಹಾಸಿಗೆ ಬಿಟ್ಟು ಎದ್ದೆ. ಇದಕ್ಕೆ ತಯಾರಿದ್ದಂತೆ ಮನೆಯಲ್ಲಿ ಕೆಲವು ಹಿತವಚನಗಳು ಕೇಳಿದ್ದೂ ಆಯ್ತು. ಕ್ರಮೇಣ ನಿತ್ಯ ಕೆಲಸಗಳನ್ನು ಮುಗಿಸಿ, ತಿಂಡಿ ತಿಂದು ಹಾಗೆ ಊರಿನ ಸಂಚರಣೆಗೆ ಹೊರಟೆ. ಅದು ನನ್ನ ಪ್ರೀತಿಯ ಹಳೇ ಸೈಕಲನ್ನೇರಿ. ಅದು ಸರಿ ಸುಮಾರು 5 ವರ್ಷಳಿಂದ ಬಳಸುತ್ತಿರುವ ಸೈಕಲ್.

ನಮ್ಮ ಮನೆಗೆ ಬೇಟಿ ನೀಡಿದ ಬ್ಯಾಟ್ ಮ್ಯಾನ್

ಮೊನ್ನೆ ಏನಾಯ್ತೂ ಅಂತೀರಿ, ಸಂಜೆಯ ಮಳೆ ಬಂದು ನಿಂತಿತ್ತು, ಚಳಿ ಕೊರೆಯಹತ್ತಿತ್ತು. ಹೊರ ಬಾಗಿಲು ಕೊಂಚ ವಾರೆಯಾಗಿತ್ತು. ಒಳಗಿನ ಬೆಳಕಿಗೋ ಏನೋ ಆಕರ್ಷಿತನಾಗಿ ಬ್ಯಾಟ್ ಮ್ಯಾನ್ ದಡಕ್ಕನೆ ಒಳಗೆ ನುಗ್ಗಿಬಂದ. ಬಂದವನೇ ನೇರವಾಗಿ ಫ್ಯಾನಿನ ಬ್ಲೇಡಿಗೆ ನೇತು ಹಾಕಿಕೊಳ್ಳಲು ನೋಡಿದ.

ಅಪಾರ್ಟ್ ಮೆಂಟ್ ನೊಳಗಿನ ಬೊನ್ಸಾಯ್ ಬದುಕು..

ಜನಸಂಖ್ಯೆ ವಿಪರೀತವಾಗುತಿದ್ದಂತೆ ಸ್ವಂತ ಮನೆ ಬೇಕೆಂದು ಆಸೆ ಪಡುವ ಎಲ್ಲ ವ್ಯಕ್ತಿಗಳೂ ಮುಗಿಲೆತ್ತರಕ್ಕೇರುತ್ತಿರುವ ಭೂಮಿಯ ಬೆಲೆ ಕಂಡು ಆಗಸದಲ್ಲಿ ತಮ್ಮ ಸೈಟ್ ಗಳನ್ನ ಕೊಂಡುಕೊಳ್ಳುತ್ತಿದ್ದಾರೆ. ಸ್ವಲ್ಪ ಜಾಗ ಕಂಡರೆ ಸಾಕು,ಅಲ್ಲೊಬ್ಬ ಬಿಲ್ಡರ್ ನ ಉಗಮ. ಬೆಂಕಿಪೆಟ್ಟಿಗೆಯನ್ನು ಒಂದರ ಮೇಲೊಂದು ಇಡುವಂತೆ ಮನೆಗಳು.