ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೀರ ದನಿ

ನೀರಿನ ಬಳಕೆ, ಸಮಸ್ಯೆಗಳು ಮುಂತಾದವುಗಳ ಸುತ್ತ ಒಂದು ವಿಶಿಷ್ಟವಾದ ಚಲನಚಿತ್ರೋತ್ಸವ ನಮ್ಮ ಬೆಂಗಳೂರಿನಲ್ಲಿ ಇನ್ನು ಕೆಲವೇ ಘಂಟೆಗಳಲ್ಲಿ ಪ್ರಾರಂಭವಾಗಲಿದೆ ಈಗ ಪ್ರಾರಂಭವಾಗಿದೆ.
ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಚಾಲನೆ ನೀಡಿದ ಈ ಕಾರ್ಯಕ್ರಮದ ವಿವರ ಕೆಳಗಿನಂತೆ:

ಚಲನಚಿತ್ರೋತ್ಸವ ನಡೆಯುವ ದಿನಗಳು : ಶನಿವಾರ ೧೩ ರಿಂದ ೧೮ ಸೆಪ್ಟೆಂಬರ್ ೨೦೦೮ (ಒಟ್ಟು ಐದು ದಿನ)
ಸಮಯ: ಬೆಳಿಗ್ಗೆ ಹತ್ತರಿಂದ ರಾತ್ರಿ ಒಂಬತ್ತು.

ಸ್ಥಳ:
ಜ್ಞಾನ ಜ್ಯೋತಿ ಆಡಿಟೋರಿಯಮ್
ಸೆಂಟ್ರಲ್ ಕಾಲೇಜು,
ಮೈಸೂರು ಬ್ಯಾಂಕ್ ಸರ್ಕಲ್,
ಬೆಂಗಳೂರು - ೫೬೦೦೦೧

ಪ್ರವೇಶ ಉಚಿತ.

ಗ್ಲೋಬಲ್ ವಾರ್ಮಿಂಗ್, ಜಗತ್ತಿನಾದ್ಯಂತ ನೀರಿನ ಬಳಕೆ, ತೊಂದರೆಗಳು, ಅಣೆಕಟ್ಟುಗಳು, ನೆರೆ, ತಾಪಮಾನದ ಬದಲಾವಣೆ ಮುಂತಾದ ಪ್ರಮುಖ ವಿಷಯಗಳನ್ನು ದೃಶ್ಯಮಾಧ್ಯಮದ ಮೂಲಕ ಮುಟ್ಟುವ, ಮುಟ್ಟಿಸುವ ಪ್ರಯತ್ನ ಈ ಕಾರ್ಯಕ್ರಮ.
(ಅರ್ಘ್ಯಂ, ಬೆಂಗಳೂರು ಫಿಲ್ಮ್ ಸೊಸೈಟಿ, ಸ್ವರಾಜ್, Goethe-Institut/Max Mueller Bhavan ಹಾಗೂ ಇನ್ನೂ ಹಲವು ಹಲವು ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಮೂಡಿಬರಲಿದೆ).

ಹುಡುಗರಿಗೆ ಮಣ್ಣೆತ್ತಿನ ಅಮವಾಸಿ ಆದ್ರ ಹುಡಿಗ್ಯಾರಿಗೆ ಗುಳ್ಳವ್ವ ಹಬ್ಬ

ನನ್ನ ಬ್ಲಾಗಿನ ಮದಲನೇ ಬರಹದೊಳಗ ನಾ ಎರಡು ಮಣ್ಣು ಅಥವಾ ಭೂತಾಯಿಗೆ ಇರು ಹಬ್ಬದ ಬಗ್ಗೆ ಹೇಳಿದ್ದೆ. ಅವುಗಳ ಬಗ್ಗೆ ಇಲ್ಲಿ ವಿಸ್ತಾರವಾಗಿ ಬರ್ದೀನಿ.

 ಮಣ್ಮೆತ್ತಿನ ಅಮವಾಸಿ :
 ಮಣ್ಮೆತ್ತಿನ ಅಮವಾಸಿ ಏನದ ಜೇಷ್ಠ ಮಾಸದ ಅಮವಾಸ್ಯದ ದಿನ ಮಾಡತಾರ. ಇದು ಗಣಪತಿ ಹಬ್ಬದಶ್ಚೇ ಜೋರಾಗಿ ನಡಿತದ. ಗಣಪತಿನ ಹೆಂಗ ಎಲ್ಲಾ ಓಣಿವಳಗ ಕೂಡಸ್ತಾರ ಹಂಗೇ ಮಣ್ಣೆತ್ತನ್ನೂ ಕೂಡಸ್ತೀವಿ. ಇದು ಬರುಕಿಂತ ಸ್ವಲ್ಪ ದಿನದ ಮೊದಲಿಂದೇ ಪಟ್ಟಿ ಕೇಳುದು ಚಾಲು ಆಗತದ. ಆ ಅಮವಾಸಿ ದಿನ ಮುಂಜಾನೆ ಕುಂಬಾರ ಮಂದಿ ಮಣ್ಣೆತ್ತು ಮಾಡಕೊಡಂಡು ಮಾರಲಿಕ್ಕೆ ಬರ್ತಾರ. ಎತ್ತು ಯಾವಾಗ್ಲೂ ಜೋಡಿ ಆಗೇ ಮಾಡತಾರ. ಇದು ಬಹುಶ ಯಾಕ ಹಿಂಗಂದ್ರ ಹೊಲದಾಗ ಎತ್ತಿನ ಗಾಡಿ, ನೇಗಲಿ, ಕುಂಟಿ ವಟ್ಟ ಎಲ್ಲಾದಕ್ಕೂ ಜಾಸ್ತಿ ಜೋಡಿ ಎತ್ತೇ ಉಪಯೋಗಸ್ತೀವಿ. ಅದಕ್ಕೇ ಇಲ್ಲೂ ಜೋಡಿ ಎತ್ತಿನ ಮೂರ್ತಿ ಮಾರತಾರ. ಅದರ ಜೂಡಿ ಒಂದಿಷ್ಟು ಹಶಿ ಮಣ್ಣೂ ಕೊಡತಾರ. ಅ ಮಣ್ಣಿಂದ ನಾವು ನಮ್ಮ ಕಲೆ ತೋರಸ್ಬೇಕು. ಎತ್ತಿಗೇ ದನದ ಮನಿ ಮಾಡುದು, ಅದು ಹುಲ್ಲು ತಿನ್ನು ಗ್ವಾದ್ಲಿ ಮಾಡುದು ಮತ್ತ ಸ್ವಲ್ಪ ಮನಿ, ಮನಷಾರು, ಅದು ಇದು ಮಾಡಿ ಹಳ್ಳಿಗತೇ ಮಾಡತೀವಿ. ಕೆಲವೊಮ್ಮೆ ಎತ್ತಿಗೆ ಬಣ್ಣಾ ಸುದೇಕ್ ಹಚ್ಚತೀವಿ. ಇಷ್ಟೆಲ್ಲಾ ಮಾಡಿದ್ಮ್ಯಾಲೇ ಇದನ್ನೆಲ್ಲಾ ತೊಗೊಂಡು ದೇವರ ಕಟ್ಟಿ ಮ್ಯಾಲೇ ಪೂಜಾಕ್ಕಿಡುದು. ಇದರ ಜೂಡಿನೇ ಸಸಿ ಆಡುದು ಅಂತ ಮಾಡತೀವಿ. ಎರಡು ಸಣ್ಣ ವಾಟಗಾದಾಗ (ಗ್ಲಾಸ್ನಲ್ಲಿ)  ಮಣ್ಮು ತುಂಬಸಿ ಗೋದಿ ಹಾಕತೀವಿ. ಒಂದು ದಿನದಾಗ ಸಸಿ ಬರ್ತಾವ. ಮರುದಿನ ಆ ಸಸಿ ತೋಗೊಂಡು ಒಂದು ಗುಡ್ಡ ಅಥವಾ ಯಾವುದರೇ ತೋಟಕ್ಕ ಊಟ ತೋಗೊಂಡು ಹೋಗ್ತೀವಿ. ಅಲ್ಲಿ ಊಟಾ ಮಾಡಿ ಆ ಸಸಿ ಅಲ್ಲೇ ಛಲ್ಲಿ ಬರ್ತೀವಿ. ಕೆಲವೊಬ್ಬರು ಮಣ್ಣೆತ್ತೂ ಛಲ್ಲತಾರ. ಅ ಮಣ್ಣು ಹೊಲದಾಗ ಕಾಕೀದ್ರ ಹೊಲ ಫಲವತ್ತಾಗತದ ಅಂತ ನದಬಿಕೆ ಅದ.

ಋಷಿ ಪಂಚಮಿ -- ಯಾಕ, ಏನು, ಎಂತ -- ಇವತ್ತೇನಾಗೇದ

ಈ ಋಷಿ ಪಂಚಮಿ ಅನ್ನು ಹಬ್ಬ ಅತವಾ ಪದ್ದತಿ ಎಷ್ಟು ಮಂದಿಗೆ ಗೊತ್ತದ ಅಂತ ಗೊತ್ತಿಲ್ಲ. ಅದಕ್ಕೆ ಸುಮ್ಮ ರಿಸ್ಕ ಬ್ಯಾಡಂತ ಹೇಳಿ ಲೈಟಾಗಿ ಇದರ ಬಗ್ಗೆ ಬರಿಲಿಕತ್ತೀನಿ.

ಹಿಂದಿ ಹೇರುತ್ತ ಬಂದ ಕೇಂದ್ರ ಸರ್ಕಾರ

ಹಿಂದಿಯನ್ನು ಕೇಂದ್ರ ಸರ್ಕಾರ, ರಾಷ್ಟ್ರ ಭಾಷೆ ಎಂದು ಕಿರುಚಿಕೊಂಡು ಹೇಳಲಾಗದೆ, ರಾಜಭಾಷೆ ಎಂಬ ಹೆಸರಿನಲ್ಲಿ, ಕನ್ನಡಿಗರ ಮೇಲೆ ಹೇರುತ್ತ ಬಂದಿದೆ. ಅದು ಹಿಂದಿಯನ್ನು ಕನ್ನಡಿಗರ ಮೇಲೆ ಹೇರಲು, ಉಪಯೋಗಿಸುತ್ತಿರುವುದು ೩ ತಂತ್ರ

ಭಾಮೆಯ ನೋಡಲು ತಾ ಬಂದ

ಎಷ್ಟೋ ದಿನಗಳಿಂದ ಯಾವುದಾದರೂ ರಾಗದ ವಿಷಯ ಬರೆಯಬೇಕೆಂದುಕೊಳ್ಳುತ್ತಲೇ ಇದ್ದೆ. ಆದರೆ ಯಾಕೋ ಮುಂದೆ ಹೋಗುತ್ತಲೇ ಹೋಗುತ್ತಿತ್ತು. ಇವತ್ತು ಗೆಳೆಯರೊಬ್ಬರ ಜೊತೆ ಮಾತಾಡುತ್ತ ಇದ್ದಕ್ಕಿದ್ದ ಹಾಗೆ ಸ್ಕೂಲ್ ಮಾಸ್ಟರ್ ಚಿತ್ರದ ಭಾಮೆಯ ನೋಡಲು ತಾ ಬಂದ ಅನ್ನುವ ಹಾಡು ನೆನಪಿಗೆ ಬಂತು.

ಈ ಚಿತ್ರವನ್ನು ನಾನು ನೋಡಿರಲಿಲ್ಲ. ಆದರೆ ಬರೀ ಹಾಡುಗಳನ್ನ ಕೇಳಿದ್ದೆ. ಆ ಕಾಲಕ್ಕೆ ತಕ್ಕ ಹಾಗೆ ಒಳ್ಳೇ ಶಾಸ್ತ್ರೀಯ ಧಾಟಿಯ ಹಾಡುಗಳಿವೆ ಅಂತ ಗೊತ್ತಿತ್ತು. ಆದರೆ ಈಗ ಬೇಕಾದ್ದು ತೋರಿಸಲು ಸಪ್ತಾಕ್ಷರೀ ಮಂತ್ರವಿದೆಯಲ್ಲ ;) (youtube), ಅದನ್ನೇ ಜಪಿಸಿಸಿದೆ. ಸಿಕ್ಕೇಬಿಡ್ತು ಬೇಕಾದ್ದ ಹಾಡು. ಮೊದಲಿಗೆ ಹಾಡು ಕೇಳಿ, ಮತ್ತೆ ಈ ಹಾಡನ್ನು ಏಕೆ ತೆಗೆದುಕೊಂಡೆ ಅಂತ ಹೇಳುವೆ.

ಸೂಲಮಂಗಲಂ ರಾಜಲಕ್ಷ್ಮಿ ಅವರು ಹಾಡಿರೋ ಈ ಹಾಡು ಹಿಂದೋಳ ರಾಗದಲ್ಲಿದೆ. ಈ ಹಿಂದೆ ಕಲ್ಯಾಣಿ, ಮೋಹನ, ಸಿಂಧೂಬೈರವಿ ಮೊದಲಾದ ರಾಗಗಳ ಬಗ್ಗೆ ಬರೆದಿದ್ದೆ. ಹೀಗಾಗಿ, ಇನ್ನೊಂದು ಒಳ್ಳೇ ರಾಗದ ಬಗ್ಗೆ ಬರೀಬೇಕು ಅನ್ನಿಸಿದಾಗ ಹಿಂದೋಳ ರಾಗ ಸಹಜವಾದ ಒಂದು ಆಯ್ಕೆ.

೯/೧೧ ಕರುಳು ಹಿಂಡುವ ಸ್ಮಾರಕ ಭವನ

 ಕಳೆದ ತಿಂಗಳು ನಾನು ವಿಶ್ವ ವಾಣಿಜ್ಯ ಕೇಂದ್ರವನ್ನು ನೋಡಲು ಹೋಗಿದ್ದೆ. ಸನಿಹದಲ್ಲಿಯೇ ಒಂದು ಶ್ರದ್ಧಾಂಜಲಿ ಭವನವನ್ನು ರೂಪಿಸಿರುವರು. ಅದೊಂದು ಪುಟ್ಟ ವಸ್ತು ಸಂಗ್ರಹಾಲಯವೂ ಆಗಿದೆ. ಒಳಗೆ ಹೋಗುತ್ತಿದ್ದ ಹಾಗೆ, ಬಲಗಡೆ ವಿಶ್ವ ವಾಣಿಜ್ಯ ಕೇಂದ್ರದ ಮಹತ್ವವನ್ನು ಸಾರುವ ಒಂದು ಡಾಕ್ಯುಮೆಂಟರಿ ಪ್ರದರ್ಶಿತವಾಗುತ್ತಿರುತ್ತದೆ. ನಂತರ ವಾಣಿಜ್ಯ ಕೇಂದ್ರದ ವಿವಿಧ ಗೋಡೆಯೆತ್ತರದ ಛಾಯಾಚಿತ್ರಗಳು. ಮುಂದುಗಡೆ ವಿ.ವಾ.ಕೇಂ ದ ಒಂದು ಮಾದರಿ. ಒಳ ಹೋಗುತ್ತಲೇ, ಕಟ್ಟಡ ಅವಶೇಷಗಳಿಂದ ಹೊರತೆಗೆದ ಮೊಬೈಲ್, ಟೋಪಿ, ಪರ್ಸ್, ಮಗುವಿನ ಆಟದ ಬೊಂಬೆ, ಐ.ಡಿ.ಕಾರ್ಡ್, ಕ್ರೆಡಿಟ್ ಕಾರ್ಡ್, ಸುಟ್ಟ ಬಟ್ಟೆಗಳು, ಕರಗಿರುವ ಲೋಹಗಳು, ಮುದ್ದೆಯಾಗಿರುವ ವಿಮಾನದ ಅವಶೇಷಗಳು....ನಂತರ ಒಂದು ಸಾಕ್ಷ್ಯ ಚಿತ್ರ. ಕುಸಿದ ಕೇಂದ್ರಗಳ ಅವಶೇಷಗಳನ್ನು ಹೊರತೆಗೆಯುವ ಕರುಳು ಕಲಕುವ ಭೀಕರ ದೃಶ್ಯಗಳು.

ಒಳಕೋಣೆಯಲ್ಲಿ ಒಂದು ಕಡೆ ದುರಂತದಲ್ಲಿ ಮಡಿದ ವೈಮಾನಿಕ ಸಿಬ್ಬಂದಿ, ವಿಮಾನ ಪ್ರಯಾಣಿಕರು, ಕಟ್ಟಡಗಳಲ್ಲಿದ್ದ, ಕೆಳಗಿದ್ದ ನಾಗರಿಕರು, ರಕ್ಷಿಸಲು ಹೋಗಿ ಜೀವ ತೆತ್ತ ಅಗ್ನಿಶಾಮಕದವರು, ಪೋಲೀಸರು...ಎಲ್ಲರ ಹೆಸರುಗಳು. ಮುಂದೆ ಭಾವಚಿತ್ರಗಳು...ಇಡೀ ಗೋಡೆಯ ತುಂಬಾ.....

ನೆಲಮಾಳಿಗೆಗೆ ಹೋಗುವ ಹಾದಿಯಲ್ಲಿ ಜಪಾನೀ ಮಕ್ಕಳು ಕಳುಹಿಸಿ ಕೊಟ್ಟಿರುವ ಕಾಗದದ ಕೊಕ್ಕರೆಗಳು ಗೊಂಚಲು ಗೊಂಚಲಾಗಿ ತೂಗುಬಿದ್ದಿದ್ದವು.

ನೂತನ ಸರ್ಕಾರದ ನೂರು ದಿನ

ನೂತನ ಸರ್ಕಾರದ ನೂರು ದಿನ ಪೂರ್ಣಗೊಳಿಸಿದ ಸಂತೋಷದಲ್ಲಿ ಬಿ.ಜೆ. ಪಿ. ಸರಕಾರ ಇರುವಾಗ, ಪ್ರತಿಪಕ್ಷದ ನಾಯಕರು ಬಿ.ಜೆ. ಪಿ. ಸರಕಾರಕ್ಕೆ ಹೇಳಿದ್ದೆನು,''100 ದಿನದ ಇವರ ಸಾಧನೆ ನೂರರಲ್ಲಿ ಒಂದನ್ನು ತೆಗೆದಾಗ ಇರುವ ಎರಡು ಸೊನ್ನೆಗಳು ಮಾತ್ರ.'' ಎಂದು ಟೀಕಿಸಿದರು. ಆದರೆ ಉಳಿದ ಸರಕಾರಗಳಾದ ಕಾಂಗ್ರೆಸ್, ಜೆ.ಡಿ.ಎಸ್, ಜನತಾದಳ ಆಡಳಿತವನ್ನು ನಡೆಸಿ ಮಾಡಿದ ಸಾಧನೆಯಾದರು ಏನು?

ನೊಬೆಲ್ ಸಮತಿಯು ಭಾರತೀಯರನ್ನು ಪುರಸ್ಕರಿಸಿರುವುದಕ್ಕಿಂತ ತಿರಸ್ಕರಿಸಿರುವುದೇ ಹೆಚ್ಚು!

ಬ್ರಹ್ಮಾಂಡ ರಹಸ್ಯವನ್ನು ಅರಿಯಲು ವಿಜ್ಞಾನಿಗಳು ಫ್ರಾನ್ಸ್-ಸ್ವಿಸ್ ಗಡಿಯಲ್ಲಿ ನ ಭೂತೋ...ಎಂಬಂತಹ ಪ್ರಯೋಗವನ್ನು ನಡೆಸುತ್ತಿರುವುದು ನಮಗೆಲ್ಲ ತಿಳಿದಿದೆ. ಪ್ರಸ್ತುತ ಬಿಸಿ ಬಿಸಿ ಚರ್ಚೆಯ ವಿಷಯವೂ ಆಗಿದೆ. ಇಂತಹ ಒಂದು ಪ್ರಯೋಗ ಇಂದು ನಡೆಯುವುದಕ್ಕೆ ಕಾರಣ, ಪಶ್ಚಿಮ ಬಂಗಾಳದ ಭೌತಶಾಸ್ತ್ರಜ್ಞ ಹಾಗೂ ಗಣಿತ ಶಾಸ್ತ್ರಜ್ಞರಾಗಿದ್ದ ಶ್ರೀಸತ್ಯೇಂದ್ರನಾಥ್ ಬೋಸ್ ಅವರೂ ಪ್ರಮುಖ ಕಾರಣ ಎಂದು ಜಗತ್ತು ತಿಳಿದಿದೆ.  ಬೋಸ್ ಅವರ ಈ ಸಂಶೋಧನೆಗಾಗಿ ಅವರಿಗೆ ನೊಬೆಲ್ ಪ್ರಶಸ್ತಿ ಬರಬೇಕಿತ್ತು. ಆದರೆ ಅವರಿಗೆ ಬರಲೇ ಇಲ್ಲ. ಅದಕ್ಕೆ ಪ್ರಮುಖ ಕಾರಣ ಅವರು ಭಾರತೀಯರು ಎಂಬುದು. ಬಹುಶಃ ಬೋಸ್ ಅವರ ಕಾಣಿಕೆಯ ಬಗ್ಗೆ ಪೂರ್ಣ ತಿಳಿದಿದ್ದ ಐನ್‍ಸ್ಟೀನ್ ಅವರಾದರೂ ನೊಬೆಲ್ ಸಮಿತಿಗೆ ಬೋಸ್ ಅವರ ಹೆಸರನ್ನು ಶಿಫಾರಸನ್ನು ಮಾಡಬಹುದಿತ್ತು ಎಂದು ನನ್ನ ಅನಿಸಿಕೆ.

ನೊಬೆಲ್ ಸಮಿತಿ ಸದಾ ಕಾಲಕ್ಕೂ ಭಾರತೀಯರನ್ನು ಕನಿಷ್ಟವಾಗಿ ಕಂಡಿದೆ. ನಮಗೆ ಅನ್ಯಾಯ ಮಾಡುತ್ತಲೇ ಬಂದಿದೆ. ಮಹಾತ್ಮ ಗಾಂಧಿಯವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಬರಬೇಕಿತ್ತು. ಅದನ್ನು ಪ್ರಜ್ಞಾಪೂರ್ವಕವಾಗಿ ತಡೆಹಿಡಿಯುತ್ತಲೇ ಬಂದಿತು. ಭಾರತದಿಂದ ನೊಬೆಲ್ ಪ್ರಶಸ್ತಿಗೆ ಅತ್ಯಂತ ಹೆಚ್ಚಿನ ನಾಮ ನಿರ್ದೇಶಿತರಾದವರು ಪಂಡಿತ್ ನೆಹರು ಅವರು. ಅವರಿಗೂ ಪ್ರಶಸ್ತಿ ಬರಲಿಲ್ಲ. ಟೆಟ್ರಾಸೈಕ್ಲಿನ್ ನಂತಹ ಪ್ರತಿಜೈವಿಕಗಳನ್ನು ನೀಡಿದ ಯಲ್ಲಾಪ್ರಗಡ ಸುಬ್ಬರಾವ್ ಯಾರ ಕಣ್ಣಿಗೂ ಬೀಳಲಿಲ್ಲ. ಬೆಳಗಿಕಿಗಿಂತ ವೇಗವಾದ ಕಣಗಳಿವೆ ಎಂದಿರುವ ಇಸಿಜಿ ಸುದರ್ಶನ್ ಅವರಿಗೆ, ಅವರ ಜೀವಮಾನ ಕಾಲದಲ್ಲಿ ನೊಬೆಲ್ ಪ್ರಶಸ್ತಿ ಬರಬಹುದೆಂಬ ನಿರೀಕ್ಷೆ ನಮ್ಮದಾಗಿದೆ. ನೋಡೋಣ....