ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವರ್ಗಾವಣೆಗೊಂದು ನೀತಿ ಯಾಕಿಲ್ಲ....!

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸ್ವತಂತ್ರವಾಗಿ ಸರಕಾರದ ಆಡಳಿತ ಚುಕ್ಕಾಣಿ ಹಿಡಿದಿದೆ. ಹೊಸ ಹೊಸ ಕಾರ್ಯಕ್ರಮ... ಹೊಸ ಹೊಸ ಯೋಜನೆ... ಒಟ್ಟಿನಲ್ಲಿ ಏನೋ ಒಂಥರಾ... ಥರಾ... !

’ಚಿಕಾಗೋನಗರದ, ಸಿಯರ್ಸ್ ಟವರ್’ !

’ಅಕ್ಕ ವಿಶ್ವಕನ್ನಡ ಸಮ್ಮೇಳನ’, ಮುಗಿಸಿ, ನಡೆದೇ ಚಿಕಾಗೋ ನಗರದ ಲೋಕಲ್ ರೈಲು ನಿಲ್ದಾಣ ತಲುಪಿದೆವು. ಅಲ್ಲಿಂದ ಡೌನ್ ಟೌನ್ ಗೆ ಹೋಗಿ, ಕ್ಯಾಬ್ ತೆಗೆದುಕೊಂಡು ಸಿಯರ್ಸ್ ಟವರ್ ಹತ್ತಿರ ಇಳಿದೆವು. ನನ್ನ ತಮ್ಮನಮಗಳು ಆಗಲೇ ಅಲ್ಲಿ ನಮಗಾಗಿಕಾದಿದ್ದಳು. ಅವಳು ಚಿಕಾಗೋ ನಗರದ ಪ್ರಖ್ಯಾತ ’ನಾರ್ತ್ ವೆಸ್ಟ್ ಯೂನಿವರ್ಸಿಟಿ’ ಯಲ್ಲಿ ’ಜರ್ನಲಿಸಂ’ ಅಭ್ಯಾಸಮಾಡುತ್ತಿದ್ದಾಳೆ.

ಸುವರ್ಣಕ್ಕೆ ಕಿಡಿಗೇಡಿಗಳ ಲಗ್ಗೆ

ಎಂದಿನಂತೆ ಆಫೀಸ್ಗೆ ಬರ್ತಾ ಇದ್ದೆ. ಆಫೀಸ್ ಮುಂದೆ ಪೋಲಿಸ್ ನಿಂತಿದ್ರು, ಗೇಟ್ ಹಾಕಲಾಗಿತ್ತು. ಒಳಗೆ ಬಂದು ನೋಡಿದ್ರೆ, ಗಲಾಟೆ ನಡೀತಾ ಇದೆ.... ಹೌದು, ಪತ್ರಿಕಾ ಸ್ವಾತಂತ್ರ್ಯದ ಮೇಲೆ ಅಲ್ಲಿ ದಾಳಿ ನಡೆಯುತ್ತಿತ್ತು. ಸುವರ್ಣ ಚಾನೆಲ್ ನವರು ಕ್ಷಮೆ ಕೇಳಬೇಕು ಅಂತ ಬಂದಿದ್ದವರು ಒತ್ತಾಯಿಸ್ತಾ ಇದ್ರು.

ಕರ್ನಾಟಕಟೂರಿಸಂ.org ಸುರಕ್ಷಿತ ಅಲ್ವಂತೆ .... ಹೀಗೀಕೆ?

ಗೂಗಲ್-ನಲ್ಲಿ ಕರ್ನಾಟಕ ಪ್ರವಾಸೋಧ್ಯಮದ ಬಗ್ಗೆ ಹುಡುಕುತ್ತಿರುವಾಗ ಕರ್ನಾಟಕಟೂರಿಸಂ.org (www.karnatakatourism.org/) ಅಸುರಕ್ಷಿತ ತಾಣ ಎಂದು ಗೂಗಲ್ ವರದಿ ಮಾಡಿತು. ಕುತೂಹಲದಿಂದ ಕ್ಲಿಕ್ ಮಾಡಿ ನೋಡಿದೆ. ಕ್ರೋಮ್-ನಲ್ಲಿ ಸೈಟ್ ತೆರೆಯಲಿಲ್ಲ.
ಹೀಗೆಕೆಂದು ತಿಳಿಯಲಿಲ್ಲ.
ಸಂಪದದ ಸದಸ್ಯರಲ್ಲಿ ಇದನ್ನು ಸರಿ ಪಡಿಸುವ ಏನಾದರೂ ಮಾರ್ಗ ತಿಳಿದಿದೆಯೇ?

ಓದಿದ್ದು ಕೇಳಿದ್ದು ನೋಡಿದ್ದು-18 ಇಟ್ಟಿಗೆಯಿಂದಲೇ ಬಾಂಬು ನಿಷ್ಕ್ರಿಯಗೊಳಿಸಬಹುದು!

ಇಟ್ಟಿಗೆಯಿಂದಲೇ ಬಾಂಬು ನಿಷ್ಕ್ರಿಯಗೊಳಿಸಬಹುದು!

 

ನಿನ್ನೆ ದೆಹಲಿಯಲ್ಲಿ ಕನಾಟ್ ಪ್ಲೇಸ್ ಬಳಿ ಬಾಂಬು ಕಸದ ತೊಟ್ಟಿಯಲ್ಲಿ ಸಿಕ್ಕಿತಂತೆ. ಸಮೀಪಲ್ಲಿದ್ದ ಪೋಲೀಸ್ ಕಾನ್‌ಸ್ಟೇಬಲ್ ಸುರೇಶ್ ಕುಮಾರ್ ಇಟ್ಟಿಗೆಯಿಂದ ಬಾಂಬಿನ ಗಡಿಯಾರವನ್ನು ಗುದ್ದಿ ಒಡೆದು ತನ್ಮೂಲಕ ಬಾಂಬು ನಿಷ್ಕ್ರಿಯಗೊಳಿಸಿದರಂತೆ.

’ಸೇಂಟ್ ವರ್ಜಿನ್ ಮೇರಿ ಚರ್ಚ್', ಫುಲ್ಟನ್ !

ಕ್ರಿಸ್ಟೋಫರ್ ರೆನ್ ಎಂಬುವರು, ವಿಶ್ವಯುದ್ಧದಲ್ಲಿ ವಿನಾಶದಹಂತದಲ್ಲಿದ್ದ ೧೭ನೇ ಶತಮಾನದ, ’ಸೇಂಟ್ ವರ್ಜಿನ್ ಮೇರಿ ಚರ್ಚ್ ನ್ನು’, ಲಂಡನ್ ನಲ್ಲಿ ಮರು-ಸ್ಥಾಪಿಸಿದರು. ರೆನ್ ಗ್ರೇಟ್ ಬ್ರಿಟನ್ ನಲ್ಲಿ ಸುಮಾರು ೫೩ ಚರ್ಚ್ ಗಳನ್ನು ನಿರ್ಮಿಸಿ ಎಲ್ಲರ ಪ್ರಸಂಶೆಗೆಪಾತ್ರರಾಗಿದ್ದರು.

ಗುಲಾಬಿ ಟಾಕೀಸ್!!!

ಹಲವಾರು ದಿನಗಳ ನಂತರ ಒಂದು ಉತ್ತಮ ಚಿತ್ರ ನೋಡಿದ ಖುಷಿ ಇವತ್ತು. ನಾವು ಚಿಕ್ಕಂದಿನಲ್ಲಿದ್ದಾಗ ನೋಡಿದ, ಮಾಡಿದ, ಕೇಳಿದ್ದನ್ನು ತೆರೆಯ ಮೇಲೆ ನೋಡಿ ಮನಸ್ಸು ತುಂಬಿ ಬಂತು. ನಮ್ಮ ಬಾಲ್ಯದ ನೆನಪನ್ನು ಮೆಲಕು ಹಾಕುವಂತೆ ಮಾಡಿದೆ ಗಿರೀಶ್ ಕಾಸರವಳ್ಳಿಯವರಿಗೆ ಅನಂತ ಧನ್ಯವಾದಗಳು. ಮದ್ಯಂತರದವರೆಗೂ ತಿಳಿಹಾಸ್ಯ ಬೆರೆತ ಸಂಭಾಷಣೆ ಮನಸ್ಸಿಗೆ ಮುದ ಕೊಟ್ಟಿತು.

'ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ '

ಕಡೆಯ ನಿಲ್ದಾಣಕ್ಕಿಂತ ಹಿಂದಿನ ಸ್ಟಾಪ್ನಲ್ಲಿ ಬಸ್ಸಿಗಾಗಿ ಬಹಳ ಹೊತ್ತಿನಿಂದ ನಿಂತಿದ್ದೆ. ದೂರದಲ್ಲೊಂದು ವೋಲ್ವೋ ಬಸ್ ಕಾಣಿಸಿಕೊಂಡಿತು. ತಡವಾಗುತ್ತಿರುವುದರಿಂದ ಬೇಗ ಹೋಗೇಬಿಡೋಣ ಎಂದುಕೊಳ್ಳುತ್ತಾ ಇತರ ಕೆಲವರೊಂದಿಗೆ ನಾನೂ ಕೈ ತೋರಿಸಿದೆ. ಬಸ್ಸಿನಲ್ಲಿದ್ದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಬಸ್ ರೊಂಯ್ಯನೆ ಸಾಗಿ ಹೋದದ್ದನ್ನು ನೋಡಿದ ನನ್ನ ಜೊತೆಯಲ್ಲಿದ್ದವರು "ಒಂದು ರುಪಾಯಿ ವ್ಯಾಪಾರ ಮಾಡಿ ಇವರಿಗೆ ಸಾಕಾಗಿ ಹೋಗಿದೆ ಅನ್ಸುತ್ತೆ " ಎಂದರು.
ಈ ಒಂದು ರುಪಾಯಿ ವ್ಯಾಪಾರದ ಬಗ್ಗೆ ಯೋಚಿಸುತ್ತಾ ಕೆಲವು ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಿದವು.

ಬಾರಾ ಗೆಳೆಯಾ...

ಆ ಬಾನ ನೀಲಂಗಳದ ಕೆಳಗಾss
ಬಣ್ಣ ಬಣ್ಣದಾ ಮೋಡಗಳ ಬಳಗಾss
ಓಡುತ್ತಿವೆ ಓಡುತ್ತಿವೆ
ಒಂದೊಂದು ಒಂದೊಂದರ ಒಳಗಾss//ಪ//

ಹೇ ಮೋಡ..ಇಲ್ಲಿ ನೋಡ
ನಾವಾಗುವಾ ಬಾರ ಗೆಳೆಯಾss

ನಿನ್ನ ಕರೆತಂದು ನಮ್ಮಟ್ಟಿಗೆ
ಹಸಿರಾಗಿಸ್ಕೊಳ್ತೀನಿ ಇಳೆಯಾsss

ನಮ್ಮಪ್ಪ ಸೂರ್ಯಪ್ಪ
ನಮ್ಮವ್ವ ಭೂಮವ್ವ
ನಮ್ಮಾವ ಚಂದ್ರಪ್ಪ
ಅವನ ಮಗಳು ತಾರೆsss

ನಿನ್ನ ಕರೆತಂದು ನಮ್ಮಟ್ಟಿಗೆ

ಅಮೆರಿಕದಲ್ಲಿ ಕ್ರಿಶ್ಚಿಯನ್ ಮತೀಯ ರಾಜಕಾರಣ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 19, 2008 ರ ಸಂಚಿಕೆಯಲ್ಲಿನ ಲೇಖನ.)

ಅಮೆರಿಕ ಎಂದ ತಕ್ಷಣ ಎಷ್ಟೋ ಸಲ ಅದೊಂದು ಅಂಕೆಶಂಕೆಯಿಲ್ಲದ ಮಹಾನ್ ಲಿಬರಲ್ ದೇಶ ಎನ್ನುವ ಕಲ್ಪನೆ ತಾನೆತಾನಾಗಿ ಬಂದುಬಿಡುತ್ತದೆ. ವಿಚ್ಚೇದನಗಳು, ಮರುಮದುವೆಗಳು, half-sisterಗಳು, hlaf-brotherಗಳು, ಸಿಂಗಲ್ ಮಾಮ್‌ಗಳು, ಸಮಾನತೆಗೆ ಹೋರಾಡುವ ಜನರು, ಪ್ರಜಾಪ್ರಭುತ್ವವಾದಿಗಳು; ಇವೆಲ್ಲ ಅಮೆರಿಕದ ಸಮಾಜದ ಬಗ್ಗೆ ನಮ್ಮಂತಹ ವಿದೇಶಿಯರಲ್ಲಿ ತಕ್ಷಣ ಮೂಡುವ ಚಿತ್ರಗಳು. ಆದರೆ, ಈ ಮುಂದುವರೆದ ದೇಶದಲ್ಲಿ ಕೋಮುವಾದಂತಹ ಸಂಕುಚಿತತೆ ಯಾವ ಹಂತದಲ್ಲಿ ಜೀವಂತವಾಗಿದೆ ಎನ್ನುವುದನ್ನು ನಮ್ಮ ಓದುಗರಿಗೆ ಪರಿಚಯಿಸಲು ಈ ಲೇಖನ.

ಈ ದೇಶವನ್ನು, ವಿಶೇಷವಾಗಿ ಇಲ್ಲಿಯ ಅಧ್ಯಕ್ಷೀಯ ಚುನಾವಣೆಗಳನ್ನು ಗಮನಿಸಿದಾಗ ಈ ದೇಶದ ಕಠೋರ ಸಂಪ್ರದಾಯವಾದ ಮತ್ತು ಕ್ರಿಶ್ಚಿಯನ್ ಬಲಪಂಥೀಯತೆ ಎದ್ದು ಕಾಣಿಸುವ ಅಂಶ. ಈ ಸಲದ ಅಧ್ಯಕ್ಷೀಯ ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳ ಹಿನ್ನೆಲೆ ಮತ್ತು ಇಲ್ಲಿಯ ಜನ ಮತ್ತು ಮೀಡಿಯ ಅದಕ್ಕೆ ಸ್ಪಂದಿಸುತ್ತಿರುವ ರೀತಿಯನ್ನೆ ನೋಡಿ. ಕ್ರಿಶ್ಚಿಯನ್ supremacy ಗೆ ತೊಂದರೆಯಾಗದಂತಹ ಇಲ್ಲಿನ ಬಹುಸಂಖ್ಯಾತ ಜನತೆಯ ಬಯಕೆಯನ್ನು ಅದು ತೋರಿಸುತ್ತದೆ.

ಬರಾಕ್ ಒಬಾಮನ ತಂದೆ ಮುಸ್ಲಿಂ