ಬಾರಾ ಗೆಳೆಯಾ...

ಬಾರಾ ಗೆಳೆಯಾ...

ಆ ಬಾನ ನೀಲಂಗಳದ ಕೆಳಗಾss
ಬಣ್ಣ ಬಣ್ಣದಾ ಮೋಡಗಳ ಬಳಗಾss
ಓಡುತ್ತಿವೆ ಓಡುತ್ತಿವೆ
ಒಂದೊಂದು ಒಂದೊಂದರ ಒಳಗಾss//ಪ//

ಹೇ ಮೋಡ..ಇಲ್ಲಿ ನೋಡ
ನಾವಾಗುವಾ ಬಾರ ಗೆಳೆಯಾss

ನಿನ್ನ ಕರೆತಂದು ನಮ್ಮಟ್ಟಿಗೆ
ಹಸಿರಾಗಿಸ್ಕೊಳ್ತೀನಿ ಇಳೆಯಾsss

ನಮ್ಮಪ್ಪ ಸೂರ್ಯಪ್ಪ
ನಮ್ಮವ್ವ ಭೂಮವ್ವ
ನಮ್ಮಾವ ಚಂದ್ರಪ್ಪ
ಅವನ ಮಗಳು ತಾರೆsss

ನಿನ್ನ ಕರೆತಂದು ನಮ್ಮಟ್ಟಿಗೆ
ನಿನಗೂ ಅವಳಿಗೂ ಮಾಡಿಸ್ತೀವಿ ಧಾರೆ
ನೀ ಹರಿಸಬಾರಯ್ಯ ವರ್ಷಧಾರೆsss
ನೀ ಹರಿಸಬಾರಯ್ಯ ವರ್ಷಧಾರೆsss