ಸರ್ ಚರ್ಚಿಲ್, ಸ್ಮರಣ ಮಂದಿರ, ವೆಸ್ಟ್ ಮಿನ್ಸ್ಟರ್ ಕಾಲೇಜ್ , ಫುಲ್ಟನ್, ಅಮೆರಿಕ , !

ಸರ್ ಚರ್ಚಿಲ್, ಸ್ಮರಣ ಮಂದಿರ, ವೆಸ್ಟ್ ಮಿನ್ಸ್ಟರ್ ಕಾಲೇಜ್ , ಫುಲ್ಟನ್, ಅಮೆರಿಕ , !

ಬರಹ

'ಸರ್ ಲೆಯೊನಾರ್ಡ್ ಸ್ಪೆನ್ಸರ್ ಚರ್ಚಿಲ್', KG, OM, CH, TD, FRS, PC, PC (Can) (೩೦, ನವೆಂಬರ್, ೧೮೭೪-೨೪, ಜನವರಿ, ೧೯೬೫) ನಾವಿದ್ದ ಕೊಲಂಬಿಯ ಊರಿನಲ್ಲಿ ನೋಡಲು ಜಾಗಗಳು ಒಂದೇ ಎರಡೇ ? ಇಲ್ಲಿನ ಫಲವತ್ತಾದ ನದಿಪ್ರದೇಶದ ಭೂಮಿಯಲ್ಲಿ ಮೆಕ್ಕೆಜೋಳ, ಹಾಗೂ ಅನೇಕ ತರಕಾರಿ, ಹಣ್ಣು-ಹಂಪಲುಗಳನ್ನು ಯತೇಚ್ಛವಾಗಿ ಬೆಳೆಯುತ್ತಾರೆ. ದ್ರಾಕ್ಷಿ ತೋಟಗಳು ದಾರಿಯುದ್ದಕ್ಕೂ ಪರ್ಯಟಕರನ್ನು ಕೈಬೀಸಿ ಸ್ವಾಗತಿಸುತ್ತವೆ. ಹತ್ತಿರದ ಡಿಸ್ಟಲರಿಗಳಲ್ಲಿ ತಯಾರಿಸಿದ ತಾಜಾ ಶುದ್ಧವಾದ, ದ್ರಾಕ್ಷಾರಸ (ಮದ್ಯ)ಹೋಟೆಲ್ ಗಳಲ್ಲಿ ಸಿಗುತ್ತದೆ. ದಾರಿಯುದ್ದ, ಬದಿಯ ದಿಬ್ಬಗಳಿಂದ ಕೆಳಗೆ ಇಳಿದು, ಹರಿಯುವ ಝರಿಗಳು ಜುಳು-ಜುಳು ಕಲರವಮಾಡುತ್ತವೆ. ಎಲ್ಲೆಲ್ಲೂ ನಿಶ್ಶಬ್ದ, ಜನಸಂದಣಿಯಿಲ್ಲ. ಪಕ್ಷಿಗಳ ಚಿಲಿ-ಪಿಲಿಯೂ ಇಲ್ಲ. ಇದು ನಮಗೆ ಖೇದವನ್ನುಂಟುಮಾಡಿತು. ಕೆಲವೇ ಕಾಗೆಗಳು ಯಾವಾಗಲೋ ಕಾಣಿಸುತ್ತಿದ್ದವು. ನನ್ನ ತಮ್ಮ ಅನೇಕ ಸುಂದರ ಸ್ಥಳಗಳಿಗೆ ನಮ್ಮನ್ನು ಕರೆದುಕೊಂಡು ಹೋಗಿ ತೋರಿಸಿಕೊಂಡುಬಂದನು. ಅದರಲ್ಲಿ ಚಿರ-ಸ್ಮರಣೀಯವಾದ ಸ್ಥಳವೊಂದು ನಮ್ಮೆಲ್ಲರ ಮನಸ್ಸಿನಲ್ಲಿ ಮರೆಯಲಾರದ ಅಚ್ಚೊತ್ತಿದೆ. ಅದೇ, ಫುಲ್ಟನ್ ನಲ್ಲಿರುವ ’ವಿನ್ಸ್ಟನ್ ’ಚರ್ಚಿಲ್’ ರ ಸ್ಮರಣಮಂದಿರ’ !

ಯೂರೋಪ್ ನ ಹಲವು ರಾಷ್ಟ್ರಗಳ ಉಳಿವಿಕೆಗೇ ಒಂದು ದೊಡ್ದ ಸಮಸ್ಯೆಯಂತಿದ್ದ ಹಿಟ್ಲರ್ ನ ವಿಚಿತ್ರದೇಶಪ್ರೇಮದ ವಿಚಾರಹೀನವಾದ, ದುಷ್ಟಶಕ್ತಿಯನ್ನು ಹತ್ತಿಕ್ಕಲು ಹೋರಾಡಿ ತಮ್ಮದೇಶವನ್ನು ಉಳಿಸಿಕೊಂಡ, ೨೦ ನೆಯ ಶತಮಾನದ ಅತ್ಯಂತ ದಕ್ಷ ಹಾಗೂ ಧೀರ ದೇಶನಿರ್ಮಾಪಕ, ಚರ್ಚಿಲ್ ರವರ ವಿಚಾರ ಯಾರಿಗೆ ಗೊತ್ತಿಲ್ಲ ? ಬ್ರಿಟಿಷ್ ನಾಗರಿಕರು ತಮ್ಮ ಜೀವನದ ಪ್ರತಿಗಳಿಗೆಯಲ್ಲೂ ಸ್ಮರಿಸಬೇಕಾಗುವ ಈ ಆಪತ್ಬಾಂಧವ ಚರ್ಚಿಲ್ ರ ಸ್ಮರಣ ಮಂದಿರ, ಹಾಗೂ ಪುಸ್ತಕಸಂಗ್ರಹಾಲಯ, ಸೇಂತ್ ಮೇರಿ ಚರ್ಚ್ ನ, ಕೆಳಭಾಗದ ಮಜಲಿನಲ್ಲಿದೆ. ಅಲ್ಲಿಯೇ ಚರ್ಚಿಲ್ ರವರು ಸೋವಿಯತ್ ರಷ್ಯಾದ ರಣನೀತಿಗಳನ್ನು ಖಂಡಿಸಿ, ಕಬ್ಬಿಣದ ತೆರೆಯೆಂದು ಕರೆದು ಮಾಡಿದ, ಸುಪ್ರಸಿದ್ಧ ಭಾಷಣದ, ಸ್ಥಳವಿರುವುದು ಇಲ್ಲೇ- ವೆಸ್ಟ್ ಮಿನ್ಸ್ಟರ್ ಕಾಲೇಜ್ ಫುಲ್ಟನ್ : ೧೮೫೧ ರಲ್ಲಿ "ಫುಲ್ಟನ್ ವಿವಿದ್ಯಾಲಯ" ಹೆಸರನ್ನು ಪಡೆಯಿತು. ಖಾಸಗೀ ವಿ.ವಿ ಹುಡುಗ-ಹುಡುಗಿಯರಿಗೆ, ಸಹವಿದ್ಯಾಭ್ಯಾಸಕ್ಕೆ ಆದ್ಯತೆ. ವಾಸಕ್ಕೆ ವ್ಯವಸ್ಥೆಕಲ್ಪಿಸಿದ್ದಾರೆ. ಮುಕ್ತಮನಸ್ಸಿನ, ಕಲೆಸಾಹಿತ್ಯ, ಗಳಿಗೆ ಪ್ರಾಮುಖ್ಯತೆಕೊಡುತ್ತದೆ. ವಿದ್ಯಾರ್ಥಿ-ಶಿಕ್ಷಕರ ಅನುಪಾತ ೧೪ ; ೧ ರಷ್ಟಿದೆ. ೧೩,೦೦೦ ಜನವಾಸಿಸುವ ಫುಲ್ಟನ್ ಹಳ್ಳಿ ಕೊಲಂಬಿಯಕ್ಕೆ ೨೫ ಮೈಲಿದೂರದಲ್ಲಿದೆ. ಇಲ್ಲಿಂದ ಜೆಫರ್ಸನ್ ಸಿಟಿಗೂ ಅಷ್ಟೇದೂರ. ’ಗ್ಯಾಲೊವೆ ಕೌಂಟಿ,’ ಯಲ್ಲಿರುವ ’ಫುಲ್ಟನ್ ಹಳ್ಳಿಯ ವೆಸ್ಟ್ ಮಿನ್ಸ್ಟರ್ ಕಾಲೇಜ್ ಚರ್ಚ್, ನ ಬದಿಯಲ್ಲಿರುವ, ಜಿಮ್ನೇಶಿಯಮ್,’ ನಲ್ಲಿ, ’ಬ್ರೇಕ್ ಥ್ರೂ’ ಎಂಬ ಶಿಲ್ಪವಿನ್ಯಾಸ ರೂಪುಗೊಂಡಿತು.

ವಿಶ್ವಯುದ್ಧದಲ್ಲಿ ವಿನಾಶದಹಂತದಲ್ಲಿದ್ದ ೧೭ನೇ ಶತಮಾನದ, ಆಲ್ಡರ್ಮನ್ ಬರಿ, ’ಸೇಂಟ್ ವರ್ಜಿನ್ ಮೇರಿ ಚರ್ಚ್ ನ್ನು’, ಕ್ರಿಸ್ಟೋಫರ್ ರೆನ್ ಎಂಬುವರು, ೧೬೭೭ ರಲ್ಲಿ ಲಂಡನ್ ನಲ್ಲಿ ಮರು-ಸ್ಥಾಪಿಸಿದರು. ರೆನ್ ಗ್ರೇಟ್ ಬ್ರಿಟನ್ ನಲ್ಲಿ ಸುಮಾರು ೫೩ ಚರ್ಚ್ ಗಳನ್ನು ನಿರ್ಮಿಸಿ ಎಲ್ಲರ ಪ್ರಸಂಶೆಗೆಪಾತ್ರರಾಗಿದ್ದರು. ಆದರೆ ಪುನಃ ೧೯೪೧ ರಲ್ಲಿ ಬ್ರಿಟನ್ ಮೇಲೆ ಜರ್ಮನ್ ದೇಶದ ಬಾಂಬ್ ದಾಳಿಯಿಂದ ಅನೇಕ ಕಟ್ಟಡಗಳು ಸ್ಮಾರಕಗಳೂ ನೆಲಸಮವಾದವು. ಅವುಗಳಲ್ಲಿ ಮೇರಿ ಚರ್ಚ್ ಕೂಡ ಒಂದು. ನಾಶವಾಗಿ, ಅದು ಸಂಪೂರ್ಣವಾಗಿ ನಾಶಗೊಂಡಿತು.

ಅಮೆರಿಕದೇಶದ ಮಿಸ್ಸೂರಿರಾಜ್ಯದಲ್ಲಿರುವ ಫುಲ್ಟನ್ ನಲ್ಲಿನ, 'ವೆಸ್ಟ್ ಮಿನ್ಸ್ಟರ್ ಕಾಲೇಜಿನ ಒಳ ಆಂಗಣ' ದಲ್ಲಿ ಲಂಡನ್ ನಿಂದ ಕಟ್ಟಡದ ಪ್ರತಿಕಲ್ಲುಗಳು ಹಾಗೂ ಅಲ್ಲಿ ಕೈಗೆ-ಸಿಕ್ಕ ಮರಮುಟ್ಟುಗಳನ್ನು ತಂದು, ಅತ್ಯಂತ ಎಚ್ಚರಿಕೆಯಿಂದ ಮಿಸ್ಸೂರಿರಾಜ್ಯದ, ವೆಸ್ಟ್ ಮಿನ್ಸ್ಟರ್ ಕಾಲೇಜ್, ಫುಲ್ಟನ್ ಗ್ರಾಮದ ಪ್ರಾಂಗಣದಲ್ಲಿನ ವಿಶಾಲ ಮೈದಾನದಲ್ಲಿ 'ಸ್ಮರಣ ಮಂದಿರ,' ವನ್ನು, ೧೯೬೯ ರಲ್ಲಿ ಚರ್ಚ್ ನ ಕೆಳಮಹಡಿಯಲ್ಲಿನಿರ್ಮಾಣ ಮಾಡಲಾಯಿತು. ಅದರಹತ್ತಿರವೇ ಚರ್ಚಿಲ್ಲರ ಅತಿ ಪ್ರತಿಭಾನ್ವಿತ-ಮೊಮ್ಮಗಳಾದ, ಎಡ್ವಿನಾಸ್ಯಾಂಡೀಸ್ ಳ’ ಬ್ರೇಕ್ ಥ್ರೂ’ ಎಂಬ ಶಿಲ್ಪವಿನ್ಯಾಸ, ಬರ್ಲಿನ್ ವಾಲಿನ ಏಳು ಭಾಗಗಳಿಂದ ಹೆಕ್ಕಿತೆಗೆದು ತಂದು ನಿರ್ಮಿಸಿದ ಗೋಡೆ ರಚಿಸಿದ್ದಾರೆ. ಚರ್ಚಿಲ್ ಕಬ್ಬಿಣದ ತೆರೆಯೆಂದು ವರ್ಣಿಸಿಮಾಡಿದ ಭಾಷಣದ ಧ್ವನಿ-ಸುರಳಿಯನ್ನು ಈಗಲೂ ನಾವು ಸ್ಪಷ್ಟವಾಗಿ ಆಲಿಸಬಹುದು.

ಸರ್ ಲೆಯೊನಾರ್ಡ್ ಸ್ಪೆನ್ಸರ್ ಚರ್ಚಿಲ್ ರವರಿಗೆ ಅಮೆರಿಕ ಸರ್ಕಾರ ಗೌರವಸದಸ್ಯತ್ವವನ್ನು ಕೊಟ್ಟು ಆದರಿಸಿ ಗೌರವಿಸಿತು ! ಅಮೆರಿಕದ ಗೌರವಸದಸ್ಯತ್ವಕ್ಕೆ ಹಕ್ಕುದಾರರಾದ ಮತ್ತೊಬ್ಬ ಫ್ರೆಂಚ್ ಸೈನ್ಯಾಧಿಕಾರಿಯೆಂದರೆ, 'ಲಾಫಯೆಟ್,' ರವರು. ಚರಿತ್ರೆಯ ಪುಟಗಳಲ್ಲಿ ಈಗಾಗಲೇ ದಾಖಲಾಗಿರುವ ಅನೇಕಾನೇಕ ಸಂಗತಿಗಳನ್ನು ವಿವರಿಸುವಂತಹ ಸನ್ನಿವೇಷಗಳನ್ನು ವೀಕ್ಷಕರು ಅವಲೋಕಿಸಲು ಅನುವುಮಾಡ್ಕೊಟ್ಟಿದ್ದಾರೆ. ಪುಸ್ತಕಗಳು, ಅವರು ಬಳಸುತ್ತಿದ್ದ ವಸ್ತುಗಳ ಸಂಗ್ರಹಗಳು, ಇತ್ಯಾದಿ. ಗೆಳೆಯರಿಗೆ ಕೊಡಲು ಅನೇಕ ಉಡುಗೊರೆಸಾಮಾನುಗಳು ಲಭ್ಯ. ವೆಸ್ಟ್ ಮಿನ್ಸ್ಟರ್ ಕಾಲೇಜ್, ಗೆ ಬಂದು ಮಾರ್ಗರೆಟ್ ಥ್ಯಾಚರ್, ರೋನಾಳ್ಡ್ ರೀಗನ್, ಮಿಖೇಲ್ ಗರ್ಬಚಾವ್ ರವರ ಭಾಷಣಗಳ ತುಣುಕುಗಳ ಟೇಪ್ ಗಳನ್ನು ಕೇಳಬಹುದು. ಹಿಟ್ಲರ್ ನ ಭಾಷಣದ ಭಾಗಗಳು, ಆಗಿನಸಮಯದಲ್ಲಿ ಲಂಡನ್ ನಗರದಮೇಲೆ ಆದ ಬಾಂಬ್ ದಾಳಿಯ ಚಿತ್ರಗಳು, ಲಂಡನ್ ಸೈನ್ಯದಳವನ್ನೂ, ಹಾಗೂ ನಾಗರಿಕರನ್ನು ಹುರಿದುಂಬಿಸಿ ಮಾಡಿದ ಭಾಷಣಗಳ ಮಾಲೆಗಳು, ಚರ್ಚಿಲ್ ರ ಹ್ಯಾಟ್, ಉಡುಪುಗಳು, ಬರೆದ ಪತ್ರಗಳು, ಉಪಯೋಗಿಸುತ್ತಿದ್ದ ವಸ್ತುಗಳು, 'ಮ್ಯಾಜಿಕ್ ಲ್ಯಾಂಟ್ರಿನ್,' ಅವರ ಆಟಿಗೆವಸ್ತು. ಇವೆಲ್ಲ ಸನ್ನಿವೇಷಗಳನ್ನು ಅತಿ ಆಸಕ್ತಿಯಿಂದಬಣ್ಣಿಸುವ ವಾಲ್ಟರ್ ಕಾಂಕ್ರೈಟ್ ರವದ್ವನಿಯ ಪರಿ, ನಮ್ಮನ್ನು ಎರಡನೆಯ ಮಹಾಯುದ್ಧದ ರಣಾಂಗಣಕ್ಕೆ ಕರೆದೊಯ್ಯುತ್ತವೆ.

೧೯೪೬ ನೇ ಇಸವಿಯಲ್ಲಿ, ಚರ್ಚಿಲ್ ಟ್ರೂಮನ್ ಒಟ್ಟಿಗೆ ಜೊತೆಯಲ್ಲಿ ಮೋಟಾರ್ ಕಾರಿನಲ್ಲಿ ವೆಸ್ಟ್ ಮಿನ್ಸ್ಟರ್ ವಿಶ್ವವಿದ್ಯಾಲಯಕ್ಕೆ ಭೇಟಿಕೊಟ್ಟ ವಿವರಗಳನ್ನು ಓದಿ, ನೋಡಿ-ಕೇಳಬಹುದು. ಚರ್ಚಿಲ್ ಹುಟ್ಟಿನಿಂದಲೇ ಎಲ್ಲರನ್ನೂ ನಿಭಾಯಿಸಿಕೊಂಡು, ಪರಿಸ್ಥಿಯನ್ನು ಎದುರಿಸುವ ಸಾಹಸ ಪ್ರವೃತ್ತಿಯ ರವರು ಬಹುಶಃ ಯುದ್ಧದಲ್ಲಿ ಬ್ರಿಟನ್ ದೇಶವನ್ನು ಗೆಲ್ಲಿಸಲೆಂದೇ ಜನ್ಮವೆತ್ತಿರಬಹುದೆನ್ನಿಸುವಷ್ಟು ಸಕ್ರಿಯವಾಗಿ ಹೋರಾಡಿ ತಾಯ್ನಾಡಿನ ಸ್ವಾತಂತ್ರವನ್ನು ಕಾಪಾಡಿದರು. ’ಸೇಂಟ್ ವರ್ಜಿನ್ ಮೇರಿ ಚರ್ಚ್ ನಲ್ಲಿ ಶೇಕ್ಸ್ ಪಿಯರ್ ಪ್ರತಿಮೆಯಿದೆ. ಸೇಂಟ್ ವರ್ಜಿನ್ ಮೇರಿ ಚರ್ಚ್ ನಲ್ಲಿ ಅನೇಕ ವಿವಾಹಗಳಾಗಿವೆ, ಕವಿ ಮಿಲ್ಟನ್ ಈ ಚರ್ಚ್ ನಲ್ಲೇ ವಿವಾಹವಾದರು. ಈಗಲೂ ಯಾರಾದರೂ ವಿವಾಹವಾಗಲು ಇಚ್ಛಿಸುವವರು ಅಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಬಹುದು.

’ಬ್ರೇಕ್ ಥ್ರೂ’ ಎಂಬ ಶಿಲ್ಪವಿನ್ಯಾಸ : ಫೋರ್ಡ್, ಬುಷ್, ಡಾ. ಮೇಜರ್, ಶೀತಯುದ್ಧದ ಪರಿಸಮಾಪ್ತಿಯ ದ್ಯೋತಕವಾಗಿ, ಕಬ್ಬಿಣದ ತೆರೆಸರಿದ ವರ್ಷ, ನವೆಂಬರ್, ೯, ೧೯೮೯ ರಲ್ಲಿ ಜರ್ಮನ್ ದೇಶದ ಬರ್ಲಿನ್ ನಗರದ ಅನಿಷ್ಟ-ಗೋಡೆಯನ್ನು ಕಿತ್ತುಬೀಳಿಸಿದಸ್ಮರಣೆಯ ಕುರುಹಾಗಿ , ೧೧ ಅಡಿ ಎತ್ತರ, ೩೨ ಅಡಿ ಉದ್ದದ, ೮ ಕಡೆಗಳಲ್ಲಿ ಹೆಕ್ಕಿ ಆರಿಸಿಕೊಂಡುಬಂದು ಕಟ್ಟಿದ ಗೋಡೆಯನ್ನು ರೀಗನ್ ರವರಿಂದ ಸ್ಥಾಪಸಿದ್ದಾರೆ. ಸರ್ ಲೆಯೊನಾರ್ಡ್ ಸ್ಪೆನ್ಸರ್ ಚರ್ಚಿಲ್ ರ ವ್ಯಕ್ತಿವಿಚಾರ : ತಂದೆ, ರ್ಯಾಂಡಾಲ್ಫ್, ಚರ್ಚಿಲ್, ಕನ್ಸರ್ವೇಟಿವ್ ಪಕ್ಷದ ರಾಜಕಾರಿಣಿ, ಲಂಡನ್ ನಗರದ, ಬ್ಲೆನ್ ಹೇಮ್ ಅರಮನೆ, ವುಡ್ ಸ್ಟಾಕ್ ನಲ್ಲಿ ೩೦ನೇ ನವೆಂಬರ್, ೧೮೭೪, ರಲ್ಲಿ ಜನಿಸಿದರು. ತಾಯಿ, ಜೆನ್ನಿ ಜೆರೋಮ್, ಅಮೆರಿಕದ, ನ್ಯೂಯಾರ್ಕ್ ನಗರದ ವ್ಯಾಪಾರಿ, ಲೆನಾರ್ಡ್ ಜೆರೋಮ್ ರವರ ಮಗಳು. ಬ್ರಿಟಿಷ್ ಸಾಮ್ರಾಜ್ಯದ ರಾಜಕೀಯಪಟು, ೨ ನೆಯ ವಿಶ್ವ ಯುದ್ಧದಲ್ಲಿ ಅವರು ನೀಡಿದ ನಾಯಕತ್ವ,ಚರಿತ್ರೆಯಲ್ಲಿ ದಾಖಿಸಲು ಯೋಗ್ಯವಾದದ್ದು.

ಬ್ರಿಟನ್ ನ, ಯುದ್ಧ ಸಮಯದ  ಪ್ರಧಾನಿಯಾಗಿ ೧೯೪೦ ರಿಂದ ೧೯೪೫ ರ ವರೆಗೆ ಮತ್ತೆ ಪುನಃ ೧೯೫೧ ರಿಂದ ೧೯೫೫ ರ ವರೆಗೆ, ನಿರ್ವಹಿಸಿದರು. ಭಾರತದಲ್ಲಿ ಯುದ್ಧದ ಸಮಯದಲ್ಲಿ ಆಫೀಸರ್ ಆಗಿ ದುಡಿದ, 'ನೋಬೆಲ್ ಪ್ರಶಸ್ತಿ,' ಪಡೆದ ಅತ್ಯಂತ ಪ್ರಭಾವಿ-ಬರಹಗಾರ, ಚಿತ್ರ-ಕಲಾಕಾರ, ಮಾತುಗಾರ, ಚರ್ಚಿಲ್ , ಒಬ್ಬ ಮರೆಯಲಾರದ ವ್ಯಕ್ತಿ. ಸ್ಮರಣ ಮಂದಿರದ ವೀಕ್ಷಕರಿಗೆ ಮೀಸಲಾಗಿಟ್ಟಿರುವ ಸಮಯ : ಪ್ರಾತಃಕಾಲ ೧೦ ರಿಂದ-ಮಧ್ಯಾನ್ಹ ೪-೩೦ ರ ವರೆಗೆ. ಟಿಕೆಟ್ ದರಗಳು : ೫ ವರ್ಷದಕೆಳಗಿನ ಮಕ್ಕಳಿಗೆ ಉಚಿತ (೬-೧೨)- ೩ಡಾಲರ್ (೧೨-೧೮) ವಯೋಮಿತಿ-೪ ಡಾಲ ಸದಸ್ಯರಿಗೆ, ಹಾಗೂ ವರಿಷ್ಠನಾಗರಿಕರಿಗೆ- ೫ಡಾಲರ್/ತಲಾ ವಯಸ್ಕರಿಗೆ ೬ ಡಾಲರ್

 

-ಅಮೇರಿಕಾದ ಪ್ರವಾಸ ಕಥನಗಳು (೨೦೦೮)

-ಹೊರಂಲವೆಂ