ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಾರಾಂತ್ಯ ಹೇಗಿತ್ತು?

ವಾರಾಂತ್ಯ ಹೇಗಿತ್ತು? ಸೋಮವಾರ ಬೆಳಿಗ್ಗೆ ಆಫೀಸಿಗೆ ಬಂದರೆ ನಿಮಗೆ ಈ ಪ್ರಶ್ನೆ ಎದುರಾಗಬಹುದು, ಅಥವಾ ನೀವೇ ಈ ಪ್ರಶ್ನೆ ಕೇಳುವವರಲ್ಲಿ ಒಬ್ಬರಾಗಿರಬಹುದು. ವಾರಾಂತ್ಯ ಚೆನ್ನಾಗಿತ್ತು ಎಂಬ ಸಂಕ್ಷೇಪ ಉತ್ತರದಿಂದ ಹಿಡಿದು ನಾನು ಶೋಪ್ಪಿಂಗ್ಗೆ ಹೋಗಿದ್ದೆ, ಫಿಲ್ಮ್ಗೆ ಹೋಗಿದ್ದೆ, ಅಥವಾ ಆ ಹೋಟೆಲ್ ಈ ರೆಸಾರ್ಟ್ಗೆ ಹೋಗಿದ್ದೆ ಮುಂತಾದ ವಿವರವಾದ ಉತ್ತರ ನಿರೀಕ್ಷಿಸಬಹುದು. ಕೆಲವರಿಗೆ ಈ ಪ್ರಶ್ನೆ ಅತ್ಯಂತ ಕಠಿಣದ್ದಾಗಿ ಕಾಣಿಸಬಹುದು, ಅಥವಾ ಇತರರ ಉತ್ತರ ಕೇಳಿ ತಾವು ಮಾಡಿದ್ದನ್ನು ಹೇಳಲು ಸಂಕೋಚವೂ ಆಗಬಹುದು. ಸಂಕೋಚ ಪಡುವಂತಹ ಕೆಟ್ಟ ಕೆಲಸ ಏನೂ ಮಾಡದಿದ್ದರೂ, ಅವರ ವಾರಾಂತ್ಯ ಎಂದಿನ ದಿನಕ್ಕಿಂತ ಭಿನ್ನವಾಗಿಲ್ಲದಿರುವುದೇ ಈ ಸಂಕೋಚಕ್ಕೆ ಕಾರಣ. ನಾನೂ ಈ ಕೊನೆಯ ವರ್ಗಕ್ಕೆ ಸೇರಿದವನಾದ್ದರಿಂದ, ನನಗೆ ಈ ಪ್ರಶ್ನೆ ಎದುರಾದಾಗಲೆಲ್ಲ ಒಂದು ಬಗೆಯ ಮುಜುಗರ. ಆದ್ದರಿಂದಲೇ ನನ್ನ ವೈವಿಧ್ಯಪೂರ್ಣವಲ್ಲದ ವಾರಾಂತ್ಯದ ಚುಟುಕು ಪರಿಚಯ ಈ ಬರಹದ ಮೂಲಕ ಮಾಡಿಕೊಟ್ಟು, ನನಗೆ ಈ ಪ್ರಶ್ನೆ ಕೇಳುವವರಿಗೆ ಉತ್ತರ ಕೊಡುವ ಗೋಜಿಗೆ ಹೋಗದೆ ಈ ಬರಹದ ಕಡೆಗೆ ಬೊಟ್ಟು ಮಾಡಿ ನನ್ನ ಸಮಯದ ಸದುಪಯೋಗ ಪಡಿಸಿಕೊಳ್ಳುವ ದುರಾಲೋಚನೆ.

ಎಲ್ಲೇ ಹೋಗು ಹಿಂಬಾಲಿಸುವೆ...................,

ಎಲ್ಲೇ ಹೋಗು ಹಿಂಬಾಲಿಸುವೆ...................,

ಕತ್ತಲೆ ಇರಲಿ, ಬೆಳಕೆ ಇರಲಿ,
ಮಳೆ ಇರಲಿ, ಬಿಸಿಲೆ ಇರಲಿ,
ನಿನ್ನನು ಬಿಡದೆ ನಾ ಇರುವೆ, ನಿನ್ನೆ ನಾ ಹಿಂಬಾಲಿಸುವೆ,

ನಿ ನಿಂತರೆ ನಿಲ್ಲುವೆ, ನಡೆದರೆ ನಡೆವೆ,
ನೀ ಮಲಗಿದರೂ ಪಕ್ಕದಲ್ಲೇ ಇರುವೆ,
ನಿನಗೆ ನಿದ್ದೆ ಬರಲೂಬಹುದು.
ನಾ ಮಾತ್ರ ಸದಾ ಎಚ್ಚರ ವಾಗಿರುವೆ.

ನೀ ಯಾರಿಗಾದರೂ ಪ್ರೀತಿಸು, ಎಲ್ಲಿಗಾದರೂ ಹೋಗು

"ಗುಲಾಬಿ ಟಾಕೀಸ್" ನೋಡಿದ್ರಾ?

ಕಳೆದ ವಾರ ಬಿಡುಗಡೆಯಾದ ವೈದೇಹಿಯವರ ಸಣ್ಣ ಕಥೆಯಾಧಾರಿತ ಗುಲಾಬಿ ಟಾಕೀಸ್ ಚಿತ್ರ, ಹತ್ತನೇ Osian cinefan ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿತಲ್ಲದೇ, ಹಿರಿಯ ನಟಿ ಉಮಾಶ್ರೀಯವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಂದು ಕೊಟ್ಟಿದೆ.
ಕನ್ನಡ ಚಿತ್ರರಂಗಕ್ಕೆ ಗಿರೀಶ್ ಕಾಸರವಳ್ಳಿಯವರ ಮತ್ತೊಂದು ಅತ್ಯಮೂಲ್ಯ ಕಾಣಿಕೆ "ಗುಲಾಬಿ ಟಾಕೀಸ್".

ನಾನು ನಿಜವಾಗಿಯು ಹುಚ್ಚಾನ?

ನಾನು ನಿಜವಾಗಿಯು ಹುಚ್ಚಾನ?

ಪ್ರತಿಸಲ ನಿನ್ನ ನೋಡಿದಾಗ ಮನಸಲ್ಲಿ ಉದ್ಭವಿಸುವ ಪ್ರಥಮ ಪ್ರಶ್ನೆ ಇದು,
ಇನ್ನು ಉತ್ತರ ಸಿಕ್ಕಿಲ್ಲ, ಉತ್ತರ ನಿನಗೂ ಕೂಡ ಗೊತ್ತಿಲ್ಲ, ಗೊತ್ತಾ? ಹೇಳು ನೋಡೋಣ ?

ನಿನಗೆ ಮಾರ್ನಿಂಗ್ ವಾಕ್,ಇವಿನಿಂಗ್ ಟಾಕ್ ಇಷ್ಟ. ಆದ್ರೆ ನನಗೆ ಮಧ್ಯಾನದ ಬಿಸಿಲಂದ್ರೆ ಇಷ್ಟ.
ನಿನಗೆ ಚೆಲುವಿನ ಚಿತ್ತಾರ ಆದ್ರೆ ನನಗೆ ಆ ದಿನಗಳು ಇಷ್ಟ,

ಬಾಲ್ಯದ ನೆನಪುಗಳು

ಬಾಲ್ಯದ ನೆನಪುಗಳೇ ಮಧುರ. ಅದ ಬಣ್ಣಿಸಲು ಶಬ್ದಗಳೇ ಸಾಲದು, ಆ ಮೋಜಿನ ದಿನಗಳು ಮತ್ತೆ ಬಂದಾವೆ?.. ಆ ಸಂತಸದ ಕ್ಷಣಗಳ ಅಮರ ಮಧುರ ನೆನಪುಗಳ ಮೆಲುಕು ಹಾಕುವದೆ ಒಂದು ಹಿತಕರ ಅನುಭವ. ಆ ದಿನಗಳಲ್ಲಿ ಆಡದ ಆಟಗಳಿವೆಯೆ? ಅದ ಹಂಚಿಕೊಳ್ಳಲೆಂದೇ ಈ ಸಾಲುಗಳು.

ನೆನಪುಗಳು ಈಗಲೂ ಹಚ್ಚಹಸಿರು. ಆ ಆಟಗಳಲ್ಲಿದ್ದ ತನ್ಮಯತೆ ಈಗ ಮಾಡುವ ಕೆಲಸದಲ್ಲಿ ಸಹ ಇರಲಿಕ್ಕಿಲ್ಲ.

ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ

ಗೆಳೆಯರೇ ಈವತ್ತು ಹಿಂದಿ ಹೇರಿಕೆ ವಿರೋದಿ ದಿನ - ಸರಕಾರ ಹಿಂದಿ ಹೇರಿಕೆಗಾಗಿ ಅನೇಕ ಕೋಟಿ ರುಪಾಯಿಗಳನ್ನು ಮೀಸಲಿಡುತ್ತದೆ. ನಾವು ಕಷ್ಟ ಪಟ್ಟು ಸಂಪಾದಿಸಿ ತೆರಿಗೆಯಂತೆ ಕಟ್ಟುತ್ತಿರುವ ಅದೆಷ್ಟೋ ಕೋಟಿ ರೂಪಾಯಿಗಳು ಹಿಂದಿ ಹೇರಿಕೆಗಾಗಿ ಬಳಸಲ್ಪಡುತ್ತದೆ. ಅಲ್ಲ ಹೇಳಿ ಕೇಳಿ ಹಿಂದಿ ಅಬ್ಬಬ್ಬ ಅಂದ್ರೆ ೧೦೦ - ೧೫೦ ವರ್ಷದ ಹಿಂದಿನ ಭಾಷೆ.

ದಿನಕ್ಕೊಂದು ಪದ

ದಿನಕ್ಕೊಂದು ಪದದಡಿಯಲ್ಲಿ ಬರೆದ ನನ್ನ ಲೇಖನಗಳನ್ನೋದುವವರ ಸಂಖ್ಯೆ ಕಡಿಮೆಯಾಗಿದೆ. ಇದಱಡಿಯಲ್ಲಿ ನಾನು ಹೆಚ್ಚಾಗಿ ದೇಸಿ ಪದಗಳನ್ನೇ ಕುಱಿತು ಹಾಗೂ ೞ ಮತ್ತು ಳ ಹಾಗೂ ಱ ಮತ್ತು ರ ಅಕ್ಷರಗಳುಳ್ಳ ಪದಗಳಲ್ಲಿ ಅರ್ಥವ್ಯತ್ಯಾಸ ತೋಱಿಸಲು ಸಾಕಷ್ಟು ಪದಗಳನ್ನು ಸೇರಿಸಿದ್ದೇನೆ. ಓದುಗರ ಪ್ರತಿಕ್ರಿಯೆ ಮತ್ತು ಹೆಚ್ಚಿನ ಮಾಹಿತಿಯನ್ನು ಬಯಸುತ್ತೇನೆ.

ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?

ಮೊದಲ ಸಲ ನೆಟ್ವರ್ಕಿಂಗ್ ಬಗ್ಗೆ ಹೇಳಿದಾಗ Static ಮತ್ತು DHCP ವಿಧಾನ ಉಪಯೋಗಿಸಿ ಕೊಂಡು ಬಿ.ಎಸ್.ಎನ್.ಎಲ್ ಬ್ರಾಡ್ಬ್ಯಾಂಡ್ ಹ್ಯಾಗೆ ಕಾನ್ಫಿಗರ್ ಮಾಡೋದು ಅಂತ ಹೇಳಿದ್ದೆ. ಕೆಲವರು ಬ್ರಾಡ್ಬ್ಯಾಂಡ್ ಉಪಯೋಗಿಸ ಬೇಕಾದ್ರೆ ಕೂಡ ಲಾಗಿನ್ ಐ.ಡಿ ಮತ್ತು ಪಾಸ್ವರ್ಡ್ ಕೊಡ ಬೇಕಾಗತ್ತೆ. ಅಂತಹವರು ಹ್ಯಾಗೆ ಉಬುಂಟುವಿನಲ್ಲಿ ಇದನ್ನ ಮಾಡ ಬಹುದು ಅನ್ನೋದನ್ನ ಈಗ ನೋಡೋಣ. (ವಿಂಡೋಸ್ ನಲ್ಲಿ ಇದಕ್ಕೆ ಅಂತ ಒಂದು ಐಕಾನ್ ನಿಮಗೆ ಡೈಯಲ್ ಅಪ್ ನೆಟ್ವರ್ಕ್ ನ ಕನೆಕ್ಷನ್ ರೀತಿ ಯಲ್ಲೇ ಇರತ್ತೆ ಅದನ್ನ ಕ್ಲಿಕ್ ಮಾಡಿ ಇಂಟರ್ನೆಟ್ ಗೆ ಕನೆಕ್ಟ್ ಆಗ್ತೀರ)
ನನಗೆ ತಿಳಿದಿರುವ ಪ್ರಕಾರ ಕೆಲ ಟೈಪ್ ೧ ಎ.ಡಿ.ಎಸ್.ಎಲ್ ಮೊಡೆಮ್ ಗಳಿಗೆ ಮಾತ್ರ ಇದು ಅನ್ವಯಿಸುತ್ತದೆ.

ಪ್ರೀತಿ ಇಲ್ಲದ ಮೇಲೆ

ಪ್ರೀತಿ ಇಲ್ಲದ ಮೇಲೆ ಸ್ವಾತಿಯ ಹನಿಯು ಭೂಮಿಗೆ ತಾಗಿತು ಹೇಗೆ...
ಪ್ರೀತಿ ಇಲ್ಲದ ಮೇಲೆ ರೈತನ ಬೇವರ ಹನಿಯು ಅನ್ನವಾದಿತು ಹೇಗೆ...

ಪ್ರೀತಿ ಇಲ್ಲದ ಮೇಲೆ ಪಾರಕಾಷ್ಟೇಯ ಪರಿಧಿಗೆ ಕೊನೆಯಿಲ್ಲ ಗೆಳತಿ
ಪ್ರೀತಿ ಇಲ್ಲದ ಮೇಲೆ ಶಿಶುವಿನ ರೊಧನ ಕೆಳುವವರಿಲ್ಲ ಗೆಳತಿ
ಪ್ರೀತಿ ಇಲ್ಲದ ಮೇಲೆ ತಾಯಿಯ ಮೊಲೆಹಾಲಿಗೆ ಬೆಲೆಯಿರುವುದಿಲ್ಲ ಗೆಳತಿ