ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????

ನಮಸ್ಕಾರ ಎಲ್ಲರಿಗು "ನನ್ನೀ" ಅಂದ್ರೆ ಏನ್ರೀ ???

ಕ್ಷಮೆ ಇರಲಿ, ನನ್ಗೆ ಇದರ ಅರ್ಥ ಗೊತ್ತಿಲ್ಲ :(

ವಂದನೆಗಳೊಂದಿಗೆ
ಪ್ರಶಾಂತ ಜಿ ಉರಾಳ

ಆಧುನಿಕ "ಬೇಡರ ಕಣ್ಣಪ್ಪ"..

ಇತ್ತೀಚೆಗೆ ತಾನೇ ಬಾದಾಮಿ ತಾಲ್ಲೂಕಿನಲ್ಲೊಬ್ಬ ತನ್ನ ಬಲಗಣ್ಣನ್ನೇ ಕೈಯಿಂದ ಕಿತ್ತು ಭಕ್ತಿಯ ಪರಾಕಷ್ಟೆಯನ್ನು ಮೆರೆದಿದ್ದನ್ನು ಪತ್ತ್ರಿಕೆಯಲ್ಲಿ ಓದಿದೆ.

ವೃತ್ತಿಜೀವನದ ಹಂತಗಳು...

ಇವತ್ತಿವೆ ಸರಿ ಸುಮಾರು ೭ ವರುಷ ಕಳೆದಿದೆ, ನಾನು ನನ್ನೂರು ನನ್ನ ಜನರನ್ನ ಬಿಟ್ಟು ಬಂದು. ಕೆಲಸದ ಹುಡುಕಾಟದಲ್ಲಿ, ನನಗರಿವಿಲ್ಲದಂತೆ ನಾನೇ ವಲಸೆ ಬಂದಿದ್ದೇನೆ. ಇಂದಿಗೂ ಆ ನನ್ನ ಹಳೆಯ ನೆನಪುಗಳು ಕಾಡುತ್ತವೆ, ಕೊನೆತನಕ ಕಾಡುತ್ತಲೇ ಇರುತ್ತವೆ. ಮೈಸೂರಿನಲ್ಲಿ ೧.೫೦೦ ರೂಪಾಯಿಗೆ ಕೆಲಸ ಮಾಡುತ್ತಿದ್ದ ನಾನು ಇಂದು ಬೆಂಗಳೂರಿನಲ್ಲಿ ೫ ಅಂಕಿಯ ಸಂಬಳ ಪಡೆಯುತ್ತಿದ್ದೇನೆ.

...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!

ಪೂರ್ಣ ಆವೃತ್ತಿಗಾಗಿ ಕೆಳಗೆ (ಚಿತ್ರದ ಮೇಲೆ) ಕ್ಲಿಕ್ ಮಾಡಿ.
cartoon by HPNadig

"ಪೌಡರ್ ಗಿವ್ಡರ್ ಹಾಕಿಕೊಂಡ ಮನುಷ್ಯಳೊಬ್ಬಳು
ಕಣ್ಣು ಗಿಣ್ಣು ತಿರ್ಸಿ ಗಿರ್ಸಿ ಮಿಟುಗ್ಸಿ ಗಿಟುಕ್ಸಿ ನೋಡಿ ನಕ್ಕಾಗ...

ಓದಿದ್ದು ಕೇಳಿದ್ದು ನೋಡಿದ್ದು-10

"ತಾಳಿ" ದವ ಬಾಳಿಯಾನು!

ಮದುವೆ ಮುಹೂರ್ತ ಹೊತ್ತಿನಲ್ಲಿ ವಿದ್ಯುತ್ ಕಡಿತವಾದರೆ? ಮುಹೂರ್ತ ಮೀರುತ್ತದೆಂದು ಅವಸರದಲ್ಲಿ ತಾಳಿ ಕಟ್ಟುವುದೇ? ಅದೂ ಸಾಮೂಹಿಕ ವಿವಾಹದಲ್ಲಿ? ವಿದ್ಯುತ್ ಬಂದಾಗ ಪಕ್ಕದಲ್ಲಿ ನಿಂತ ವಧುವನ್ನು ನೋಡಿ ವರ ಮಹಾಶಯ ಮೂರ್ಛೆ ಹೋಗುವುದೊಂದು ಬಾಕಿ! ಮದುವೆ

ಮೊದಲ ಚಿತ್ರ

Hari Prasad Nadig Cartoon
ಪೂರ್ಣ ಆವೃತ್ತಿಗೆ ಮೇಲೆ ಕ್ಲಿಕ್ ಮಾಡಿ.
ಮಕ್ಕಳು ಮೊದಲ ಬಾರಿ ಚಿತ್ರ ಬಿಡಿಸಿದಾಗ, ಮೊದಲ ಬಾರಿ ಪೆನ್ನು ಹಿಡಿದು ಗೀಚಿದಾಗ ಅದನ್ನು ಜೋಪಾನ ತೆಗೆದಿಡುತ್ತೇವೆ, ಅಲ್ವ? ಇದೋ, ನನ್ನ ಮೊದಲ ಚಿತ್ರ - ಮಕ್ಕಳು ಪೆನ್ನು ಹಿಡಿದು ಬರೆಯುವುದ ಕಲೆತಂತೆ ಇವತ್ತು ಈ ಡಿಜಿಟಲ್ ಪೆನ್ನು ಹಿಡಿದು ಕಲೆಯುವಾಗ ಗೀಚಿದ ಮೊದಲ ಚಿತ್ರ! ಬಹಳ ದಿನಗಳ ನಂತರ ಗೊತ್ತು ಗುರಿಯಿಲ್ಲದೆ ಪರಿಚಯವಿಲ್ಲದ ಕಂಪ್ಯೂಟರ್ ಸಾಧನವೊಂದನ್ನು ಪ್ರಯತ್ನಿಸಿ ಕಲೆತದ್ದು ಖುಷಿಕೊಟ್ಟಿತು. ಇದನ್ನು ಸಂಪದದಲ್ಲಿ ತೆಗೆದಿಡುತ್ತಿದ್ದೇನೆ.

ಬಿಗುಮಾನದ ಚಿತ್ರಗಳು

ಸಿಡ್ನಿಗೆ ವಸಂತ ಕಾಲಿಟ್ಟಾಗ ಮನಸ್ಸು ಅರಳುತ್ತದೆ. ಇಲ್ಲಿಯ ಮಣ್ಣಿನದೇ ಆದ ವಾಟ್ಲ್ ಹೂಗಳ ಒಂದಷ್ಟು ಚಿತ್ರವನ್ನು ಉತ್ಸಾಹದಲ್ಲಿ ತೆಗೆದಿದ್ದೆ. ಆದರೆ ಯಾಕೋ ಅದನ್ನು ಇಲ್ಲಿ ಹಾಕಬೇಕೆಂದು ಒಂದು ವಾರದಿಂದ ಹೆಣಗುತ್ತಿದ್ದೇನೆ. ಮನಸ್ಸಾಗುತ್ತಿಲ್ಲ.

ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 12, 2008 ರ ಸಂಚಿಕೆಯಲ್ಲಿನ ಲೇಖನ.)

ಕಾಲ್ಪನಿಕ ಕತೆಗಳನ್ನು ಬರೆಯುವ ಕತೆಗಾರರನ್ನೂ ಮೀರಿಸುವಂತಹ ಅದ್ಭುತವಾದ ಐತಿಹಾಸಿಕ ಸಂದರ್ಭದಲ್ಲಿ ಇವತ್ತು ಅಮೆರಿಕ ಬಂದು ನಿಂತುಬಿಟ್ಟಿದೆ. ಈ ದೇಶದ ಕೋಟ್ಯಾಂತರ ಜನರು ಮತ್ತು ಕೆಲವು ಅರ್ಹ ವ್ಯಕ್ತಿಗಳು ಸೇರಿಕೊಂಡು ಈ ಇತಿಹಾಸ ನಿರ್ಮಿಸ ಹೊರಟಿದ್ದಾರೆ. ಈಗಾಗಲೆ ಒಂದು ಹಂತದ ಇತಿಹಾಸ ನಿರ್ಮಾಣವಾಗಿ ಹೋಗಿದೆ. ಕೇವಲ ನಲವತ್ತು-ಐವತ್ತು ವರ್ಷಗಳ ಹಿಂದೆ ಅಮೆರಿಕದ ಕೆಲವು ದಕ್ಷಿಣ ರಾಜ್ಯಗಳ ರೆಸ್ಟಾರೆಂಟ್‌ಗಳಿಗೆ, ಟಾಯ್ಲೆಟ್‌ಗಳಿಗೆ, ಬಸ್ಸಿಗೆ ಕಾಯುವ ಕೋಣೆಗಳಿಗೆ, ಮತ್ತೂ ಇನ್ನೂ ಅನೇಕ ಸಾರ್ವಜನಿಕ ಸ್ಥಳಗಳಿಗೆ ಯಾವೊಬ್ಬ ಕಪ್ಪು ಮನುಷ್ಯನಿಗೂ ಪ್ರವೇಶವಿರಲಿಲ್ಲ. ಬಿಳಿಯರಿಗೇ ಒಂದು ಜಾಗ, ಕರಿಯರಿಗೇ ಒಂದು ಜಾಗ ಎಂದು ಆಗ ಬೇರ್ಪಡಿಸಲಾಗಿತ್ತು. ಶಾಲಾಕಾಲೇಜುಗಳೂ ಅಷ್ಟೆ. ಬಸ್ಸಿನಲ್ಲಿ ಯಾರಾದರೂ ಬಿಳಿಯ ಸ್ತ್ರೀ/ಪುರುಷ ಬಂದರೆ ಅವರಿಗೆ ಕರಿಯರು ಎದ್ದು ಸೀಟು ಬಿಡಬೇಕಿತ್ತು. ಬಿಳಿಯ ಕ್ರಿಶ್ಚಿಯನ್ನರ ಮತಾಂಧ ಗುಂಪಾದ ಕೂ ಕ್ಲಕ್ಸ್ ಕ್ಲಾನ್ (KKK) ಇನ್ನೂ ಕೆಲವೆಡೆ ಸಕ್ರಿಯವಾಗಿತ್ತು. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ನೇತೃತ್ವದಲ್ಲಿ ನಾಗರಿಕ ಹಕ್ಕುಗಳ ಹೋರಾಟ ನಡೆಯುತ್ತಿದ್ದಾಗ ಕೆಕೆಕೆ ಮತಾಂಧರು ಕೆಲವು ಕಡೆ ಕರಿಯರನ್ನು ಮತ್ತು ಚಳವಳಿಕಾರರನ್ನು ಮರಕ್ಕೆ ನೇತು ಹಾಕಿ ನೇಣು ಬಿಗಿಯುತ್ತಿದ್ದರು. ಕರಿಯರನ್ನು ಬೆದರಿಸಲು ಅವರುಗಳ ಮನೆಯ ಮುಂದೆ ಶಿಲುಬೆ ಸುಡುತ್ತಿದ್ದರು. ಆಗ ಅಮೆರಿಕದ ಜನಸಂಖ್ಯೆಯಲ್ಲಿ ಶೇ. 14 ರಷ್ಟಿದ್ದ ಕಪ್ಪು ಜನಾಂಗದ ಬಹುಪಾಲು ಜನರು ಮತದಾರರ ಪಟ್ಟಿಯಲ್ಲಿಯೇ ಇರಲಿಲ್ಲ.

ಆದರೆ ಕಳೆದ ಐವತ್ತು ವರ್ಷಗಳಲ್ಲಿ ಆಗಿರುವ ಬದಲಾವಣೆ ನೋಡಿ. ತಮ್ಮ ಹಿಂದಿನ ತಲೆಮಾರಿನ ವರ್ಣಭೇದ, ಅಸಮಾನತೆ, ಜನಾಂಗೀಯದ್ವೇಷ ಮುಂತಾದ ಕೀಳು ಸಂಗತಿಗಳನ್ನೆಲ್ಲ ದಾಟಿಕೊಂಡು ಒಬ್ಬ ಕಪ್ಪು ಮನುಷ್ಯನನ್ನು ಅಮೆರಿಕದ ಅಧ್ಯಕ್ಷನನ್ನಾಗಿ

ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!

ಜಾಸ್ತಿ ಬರೆಯಲು ಸಮಯವಿಲ್ಲ. ಆದರೂ ಮೊನ್ನೆ ನಡೆದ ತಮಾಷೆ ಪ್ರಸಂಗ ಹಂಚಿಕೊಳ್ಳಬೇಕೆನ್ನಿಸಿತು. ಅಮೆರಿಕೆಗೆ ಮಗಳ ಬಾಣಂತನಕ್ಕೆ ಬಂದಿರುವ ಹಿರಿಯ ಮಹಿಳೆಯೊಬ್ಬರು ಸಿಕ್ಕಿದ್ದರು. ಅಪ್ಪಟ ಕನ್ನಡಿಗರೆ. ಆದ್ರೆ, ನಾನು ಕನ್ನಡದಲ್ಲಿ ಕೇಳಿದ್ದಕ್ಕೆಲ್ಲ ಇಂಗ್ಲೀಷಿನಲ್ಲಿ ಉತ್ತರಿಸುತ್ತಿದ್ದರು. ಅದೂ ಹರಕು ಮುರಕು ಇಂಗ್ಲೀಷು :-) ಯಾಕೆ ಹೀಗೇಂತ ಯೋಚಿಸಿದೆ.

ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!

 

ಲ೦ಡನ್ನಿನಲ್ಲಿದ್ದಷ್ಟು ಕಾಲ (ಎ೦ಟು ತಿ೦ಗಳು ಅಥವ ಇನ್ನೂರ ನಲವತ್ತು ದಿನ ಅಥವ ಒ೦ದು ವರ್ಷ ಮೈನಸ್ ನಾಲ್ಕು ತಿ೦ಗಳು) ನನಗೆ ನಾಪಿತನಾಗಿದ್ದ ಟರ್ನರನ ಕುಲಕಸುಬಿನದ್ದೇ ಚಿ೦ತೆ. ಅ೦ದರೆ ಟರ್ನರ್ ನನಗೆ ನಾಪಿತನಗಿದ್ದನೆ೦ದಲ್ಲ! ನಾಪಿತನಾಗಿದ್ದ ಟರ್ನರನ ತ೦ದೆಯ ಬಗ್ಗೆ ನನ್ನ ಸ್ಮೃತಿ ಚಿರ೦ತನವಾಗಿತ್ತು. ಜಾನ್ ಬರ್ಜರ್ ಇವನ ಬಗ್ಗೆ, ಇವನ ಕುಲಕಸುಬಿನ ಬಗ್ಗೆ ಅದ್ಬುತವಾಗಿ ಬರೆದಿದ್ದಾನೆ—ಒ೦ದೆಡೆಯಲ್ಲ, ಹಲವೆಡೆ. ಏಕೆ೦ದರೆ ನನ್ನ ತಲೆಕೂದಲು ಆ ಚಳಿಯಲ್ಲಿ ಬೆಳೆದದ್ದೇ ಬೆಳೆದದ್ದು. ಯಾರಾದರೂ ಚಳಿಗಾಲದಲ್ಲಿ ತಲೆಗೂದಲು ಬೆಳೆವುದು ನಿಧಾನವಲ್ಲವೆ? ಎ೦ದು ಪ್ರಶ್ನಿಸಬಹುದು. ಹಾಗೆನ್ನುವವರ ತಲೆಯಲ್ಲಿ ತರ್ಕ, ವೈಜ್ನಾನಿಕ ಜ್ನಾನವೆ೦ಬೆರೆಡು ರೀತಿಗಳನ್ನು ಬಿಟ್ಟು ಬೇರೆ ರೀತಿಯ ರೂಪಕಗಳಲ್ಲಿ ವಿಶ್ವವನ್ನು ಗ್ರಹಿಸುವ ಕ್ರಮ ತಿಳಿಯದು ಎ೦ದೇ ನನ್ನ ಭಾವನೆ.