ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೌರಿ ಗಣೇಶ ಹಬ್ಬಕ್ಕೊಂದು ಕವನ

ಪ್ರಿಯ ಓದುಗರಿಗೇ, ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು

ಹಬ್ಬ..ಹಬ್ಬ..ಗೌರಿ ಗಣೇಶ ಹಬ್ಬ ಬಂತು ನಾಡಲಿ|
ಹಬ್ಬಕ್ಕೆಂದು ಅಮ್ಮ ಮಾಡಿದ ಬಿಸಿಬಿಸಿ ಚಕ್ಕುಲಿ
ತಿನ್ನುತಾ ನಾ ಏರಿದ ಮನೆಯಂಗಳದ ಜಗುಲಿ|

ಪೂಜೆಗೆ ಮುಂಚಿತವಾಗಿ ಚಕ್ಕುಲಿ ನಾ ತಿನ್ನವುದಾ
ಮರೆಯಲಿ ಓರೆಗಣ್ಣಲಿ ನೋಡಿದ ದಪ್ಪನೆಯ ಮೂಗಿಲಿ|

ನನ್ನ ಮೊತ್ತ ಮೊದಲ ರೈಲು ಪ್ರಯಾಣ

ವಿಶ್ವದಲ್ಲೇ ಅತಿ ದೊಡ್ಡ ರೈಲು ಸಂಪರ್ಕ ವ್ಯವಸ್ಥೆ ಭಾರತದಲ್ಲಿದೆ. ರೈಲು ಪಯಣದ ಸವಿಯನ್ನ ಅನುಭವಿಸಲಿಕ್ಕೆ ನನಗೆ ಸಾಧ್ಯವಾದದ್ದು ೨೫ ವರ್ಷಗಳ ನಂತರವೆ. ಆಶ್ಚರ್ಯ ಮತ್ತು ಅನಂದ ಎರಡೂ ಒಮ್ಮೆಗೆ. ಗ್ನು/ಲಿನಕ್ಸ್ ಹಬ್ಬದ ಪೂರ್ವಸಿದ್ದತೆಗೆ ಹೊರಟಾಗಲೇ ನನಗಿದು ಸಾಧ್ಯವಾದದ್ದು. ಆ ರಸ ನಿಮಿಷಗಳನ್ನ ಸೆರೆ ಹಿಡಿದಿದ್ದೇನೆ. ನನ್ನ ಗ್ಯಾಲರಿಯಲ್ಲೊಮ್ಮೆ ಇಣುಕಿ ನೋಡಿ.

ಅನುಚಿತ ಬರಹಗಳನ್ನು ನಿರ್ವಾಹಕರ ಗಮನಕ್ಕೆ ತರಬಹುದು

ಸಂಪದದಲ್ಲಿ ಅನುಚಿತ ಬರಹಗಳಾಗಲಿ, ಪ್ರತಿಕ್ರಿಯೆಗಳಾಗಲಿ ಕಂಡುಬಂದಲ್ಲಿ ಸದಸ್ಯರು ಈಗ ತಕ್ಷಣ ಒಂದೇ ಕ್ಲಿಕ್ಕಿನಲ್ಲಿ ನಿರ್ವಾಹಕರ ಗಮನಕ್ಕೆ ತರಬಹುದು.

ಪ್ರತಿ ಲೇಖನ ಹಾಗು ಪ್ರತಿಕ್ರಿಯೆ ಕೆಳಗೆ ಇರುವ ಲಿಂಕುಗಳ ಪಟ್ಟಿಯಲ್ಲಿ "ನಿರ್ವಾಹಕರ ಗಮನಕ್ಕೆ ತನ್ನಿ" ಎನ್ನುವುದನ್ನು ಕ್ಲಿಕ್ ಮಾಡಿ ಅದರ ಮೂಲಕ ಸಂದೇಶ ಕಳುಹಿಸಿದರಾಯಿತು.

ನೀವು ಹೇಳಿದ ಸುಳ್ಳು ಯಾವುದು?

ಸಂಪದಿಯರೆಲ್ಲ ತುಂಬಾ ಕ್ಯೂಟ್ ಕ್ಯೂಟ್ ಚರ್ಚೆಯಲ್ಲಿರುವಾಗಲೇ ನಾನು ಒಂದು ಪ್ರಶ್ನೆ ಕೇಳಿ ನಿಮ್ಮನ್ನ ಕಾಡೋಕೆ ಅಂತನೆ ಬಂದಿದ್ದೀನಿ..ಅದೇನಪ್ಪ ಅಂದ್ರೆ ಯಾವತ್ತಾದ್ರು ನೀವು ಸುಳ್ಳು ಹೇಳಿದ್ದಿದೆಯಾ?( ಇಲ್ಲ ಅಂತ ಮಾತ್ರ ಹೇಳಬೇಡಿ)..ನೀವು ಹೇಳಿದ್ದೇ ಆದಲ್ಲಿ ಅದೆಂತಹ ಸುಳ್ಳು? ಅದ್ರಿಂದ ನಿಮಗಾದ ಉಪಕಾರವೇನು ? ನಸ್ಟವೇನು?

ನನ್ನ ಹಬ್ಬ

ಹಬ್ಬ ಬಂತೆಂದರೆ ನನ್ನ ಹೆಂಡತಿಗೆ ಖುಷಿಯೊ ಖುಷಿ
ಏಕೆಂದರೆ ನನಗೆ ತುಂಬಾ ಕಸಿವಿಸಿ

ಕೊಡಿಸ್ಬೇಕು ಸೀರಿ, ಕುಡಿಸ್ಬೇಕು ಬಂಗಾರ
ಇಲ್ಲದಿದ್ದರೆ ಹೊಟ್ಟೆಗೆ ನೀರೆ ಆಹಾರ

ಮಾಡ್ಯಾಳ ಅಡುಗೆ ಬಲು ಜೋರು
ಆದರೆ ಅದನ್ನ ತಿನ್ನೊಕೆ ನನಗೆ ಬೋರು

ಕರೆದಾಳ ಸಂಡಿಗೆ ಹಪ್ಪಳಾ
ತಿಂದರೆ ಬಾಯಾಗ ಅದರದೇ ಸಪ್ಪಳಾ

ಮಡ್ಯಾಳ ಚಕ್ಕುಲಿ, ಕಡಬೊಳಿ, ಉಂಡಿ
ತಿಂದರೆ ಬಾಯಿಯೆ ಉಗಿಬಂಡಿ.

ಕೌಮಾರೀ ಗೌರೀ ವೇಳಾವಳಿ

ಗೌರಿ ಹಬ್ಬ ಕನ್ನಡ ನಾಡಿನ ದೊಡ್ಡ ಹಬ್ಬ. ವರ್ಷಾವಧಿ ಹಬ್ಬಗಳಲ್ಲಿ ಅತಿ ಹೆಚ್ಚಿನ ಹಿರಿಮೆ ಇರುವ ಹಬ್ಬ. ಹೆಣ್ಣು ಮಕ್ಕಳಿರುವ ಮನೆಯಲ್ಲಂತೂ ಬಹಳ ಹೆಚ್ಚಾಯದ್ದೇ. ನಮ್ಮ ನೆರೆಯ ನಾಡುಗಳಲ್ಲಿ ಗೌರಿ ಹಬ್ಬಕ್ಕೆ ಅಷ್ಟು ಪ್ರಾಶಸ್ತ್ಯವಿಲ್ಲದ್ದೂ, ನಮ್ಮಲ್ಲಿ ಇರುವುದೂ ಏಕೆ ಎನ್ನುವುದು ನನಗೆ ಗೊತ್ತಿಲ್ಲ.

ನಾನು ಚಿಕ್ಕವನಾಗಿದ್ದಾಗ, ಮಳೆಗಾಲದ, ಅದರಲ್ಲೂ ಸೋನೆಮಳೆಗಾಲದಲ್ಲಿ ಬರುವ ಈ ಹಬ್ಬಗಳ ಮುನ್ನಾದಿನ, ಅಷ್ಟಾಗಿ ದುರಸ್ತಿಯಲ್ಲ ರಸ್ತೆಯ ಆಚೀಚೆ ಕುಳಿತ ವ್ಯಾಪಾರಸ್ಥರ  ನಡುವೆ ಹೋಗಿ ಪೇಟೆ ಬೀದಿಯಲ್ಲಿ ಸುತ್ತಿ ಹೂವು ಹಣ್ಣು ಖರೀದಿಸುವ ಆ ಅನುಭವ ಮಾತ್ರ ಇನ್ನೂ ಮರೆತಿಲ್ಲ.

ಅದೆಲ್ಲಾ ಇರಲಿ; ಸಂಪದಿಗರೆಲ್ಲರಿಗೂ ಹಬ್ಬಗಳು ಚೆನ್ನಾಗಿ ಕಳೆಯಲಿ ಎನ್ನುವ ಹಾರೈಕೆಗಳೊಂದಿಗೆ ಒಂದು ಒಳ್ಳೆ ಹಾಡನ್ನು ಕೇಳಿಸಹುದು ಎನ್ನಿಸಿತು.

ಭೂತಾಯಿಯ ಒಕ್ಕಲು ಮಗ ಗಣಪ್ಪ

ಭೂತಾಯಿಯ ಒಕ್ಕಲು ಮಗ ಗಣಪ್ಪ

ನಮ್ಮ ಸಂಸ್ಕೃತಿಯಲ್ಲಿಯ ಅನೇಕ ಆಚರಣೆಗಳು ನಮ್ಮ ಪಾರಂಪರಿಕ ಬದುಕಿನ ಕಾಲಘಟ್ಟದ ಅನೇಕ ಸಂಗತಿಗಳನ್ನು ರೂಪಕ, ಸಂಕೇತಗಳ ಮೂಲಕ ತಲೆಮಾರಿನಿಂದ ತಲೆಮಾರಿಗೆ ಹೊತ್ತು ತಂದಿವೆ. ಅಂತಹ ರೂಪಕವಾಗಿ ಕಾಲ ಕಾಲಕ್ಕೆ ಹೊಸ ಅರ್ಥ ಪಡೆಯುತ್ತ ಬಂದಿರುವ ಜೀವಂತ ಆಚರಣೆಯೇ ಚವತಿಯ ಗಣಪ್ಪ.

ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...

ಕೆಲವು ದಿನಗಳ ಹಿಂದಷ್ಟೇ 'ಜ್ಯೋತಿಷ್ಯ ವಿಜ್ಞಾನ ಅಲ್ಲ' ಎಂಬ ವಾದವನ್ನು ಹಲವಾರು ಮಂದಿ ಮಂಡಿಸಿದರು...
ಇದನ್ನು ವಿಜ್ಞಾನ ಎಂದು ನಾನಿಲ್ಲಿ ಮಂಡಿಸುವುದಿಲ್ಲ...
ಆದರೆ ನಾವೆಷ್ಟು ಇಬ್ಬಗೆಯಾ ನೀತಿ ಪಾಲಿಸುತ್ತೆವೆಂದು ನೋಡೋಣ...

ಉದಾ:
------------------------------------------------------------------------
ನಾನು ತಲೆ ನೋವೆಂದು ಡಾಕ್ಟರ ಹತ್ತಿರ ಹೋದೆ...