ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾಲಿಗೆ ಹೇಗೆ ಹೊರಳಿದರೆ ಹಾಗೆ ಕನ್ನಡವೆ?

ನಾನು ಕನ್ನಡದಲ್ಲಿ ಬರೆಯುವಾಗ ನಿಘಂಟನ್ನು ಹತ್ತಿರ ಇಟ್ಟುಕೊಂಡೇ ಬರೆಯುವುದು. ನಾನು ಬಳಸುವ ಪದಗಳು ನಿಘಂಟಿನಲ್ಲಿದ್ದರೆ ಸರಿ ಅಂತ ನಂಬಿಕೆ. ಆದ್ರೆ ಈ ನಂಬಿಕೆ ಮಾಯ್ಸ್, ಸುನೀಲ್, ಮತ್ತಿತರರ ಮಾತು ಕೇಳುತ್ತ ಮಾಯವಾಗುತ್ತಿದೆ. ಅವರ ಪ್ರಕಾರ ಅಲ್ಲಿರುವ ಪದಗಳೆಲ್ಲ ಸಂಸ್ಕೃತಮಯ. ಸೂರ್ಯ, ಚಂದ್ರ, ಆಕಾಶ ತಪ್ಪು. ಪದ್ಯಗಳಲ್ಲಿ ಮಾತ್ರ ಕೇಳಿರುವ ಚಂದಿರ, ನೇಸರು ಸರಿ!

ಪ್ರಶ್ನೆ-ಉತ್ತರ

ನಾ ಸೋತಿದ್ದು..
ಮಲೆನಾಡ
ಸೊಬಗಿಗೆ,
ಮನಸೆಳೆದ
ಬೆಡಗಿಗೆ.
ತುಂಟಿಯ
ಚೇಷ್ಟೆಗೆ,
ಬೇಕೆನಿಸುವ
ಕುಚೇಷ್ಟೆಗೆ.

ನಾ ಸೋತಿದ್ದು..
ನನ್ನೆದೆ
ಮಿಡಿತಕೆ,
ನನ್ನದೇ
ತುಡಿತಕೆ.
ಒಲವಿನ
ಹಣತೆಗೆ
ಒಲುಮೆಯ
ಗೆಳತಿಗೆ.

ನಾ ಸೋತಿದ್ದು...
ಬಟ್ಟ ಕಂಗಳ
ಇಣುಕು
ನೋಟಕೆ,
ಮೋಡಿ
ಮಾತಿನ
ಮೃದುಮನಕೆ.

ನಾ ಸೋತಿದ್ದು...
ಭವಿಷ್ಯದ
ಬದುಕಿಗೆ,
ಭವಿತವ್ಯದ
ಬೆಳಕಿಗೆ.
ಬತ್ತದ

ಕರ್ನಾಟಕದಲ್ಲಿ ಕನ್ನಡ ಭಾಷೆಯ ಸಾರ್ವಭೌಮತ್ವಕ್ಕೆ ಇರುವ ತೊಡಕುಗಳೇನು?

ಕನ್ನಡ ನಾಡು, ನುಡಿಯ ಬಗ್ಗೆ ಕಾಳಜಿಯ ಲೇಖನವೊಂದನ್ನು ಬರೆಯದೆ ತುಂಬಾನೇ ದಿನಗಳಾಗಿ ಹೋದವಲ್ಲ ಎನ್ನುವ ಸಂಗತಿಯು ಮನವನ್ನು ಹಗಲಿರುಳು ಕಾಡುತ್ತಲೇ ಇತ್ತು. ಅದನ್ನು ಅರಿತು ನನ್ನ ಮನದಲ್ಲೇ ಕ್ರೋಢೀಕರಿಸಿದ್ದ ಅಭಿಪ್ರಾಯದ ನುಡಿಗಳನ್ನು ಬಿತ್ತರಿಸುವ ಸಲುವಾಗಿ ಈ ಲೇಖನವನ್ನು ಬರೆದಿರುವೆನು. ಕರ್ನಾಟಕದಲ್ಲಿ ಕನ್ನಡ ಭಾಷೆಯ ಸಾರ್ವಭೌಮತ್ವಕ್ಕೆ ಇರುವ ತೊಡಕುಗಳೇನು?

"ಕವಲು" ದಾರಿ

ಸವೆದ ಹಾದಿಯಲ್ಲಿ ಬರಿ ಸಂಕಷ್ಟಗಳೆ ಬಂದವು
ಎಡರು ತೊಡರುಗಳೆನ್ನದೆ ಬಂದೆ
ಸಾಗದ ಜೀವನವನ್ನು ಸಾಗಿಸಿ ಬಂದೆ
ಒಂದೇ ದಾರಿಯಲ್ಲಿ ವೇಗವಾಗಿ ಬಂದೆ.....

ಆ ಹಾದಿಯಲ್ಲಿ ಬರುವಾಗ ಚುಚ್ಚಿದ
ಕಲ್ಲು ಮುಳ್ಳುಗಳೆಲ್ಲ ನನ್ನ ಶತ್ರುಗಳಂತೆ ಕಂಡೆ
ಹಾದಿಯಮದ್ಯದಲ್ಲಿ ಕೆಲವರು ಹೊವುಗಳಂತೆ ಕಂಡರು
ಅವರೆಲ್ಲ ನನ್ನ ಸ್ನೆಹಿತರೆಂದು ಬಾವಿಸಿದೆ.......

ವಾದ ಮತ್ತು ಚರ್ಚೆ - ಒಂದು ಚಂದಮಾಮಾ ಕತೆ.

ಹಿಂದೊಮ್ಮೆ ವಿವೇಚನೆ (ಡಿಸ್ಕ್ರಿಶನ್) ಬಗ್ಗೆ ಚಂದಮಾಮಾದಲ್ಲಿ ಹಿಂದೆ ಎಂದೋ ಓದಿ ನಾನು ಮೆಚ್ಚಿ ನೆನಪಿನಲ್ಲುಳಿದ ಒಂದು ಕತೆ ಬರೆದಿದ್ದೆ .
ಈಗ ಇದನ್ನು ಓದಿ ..

ಲಿನಕ್ಸಾಯಣ - ೧೫ - ಲಿನಕ್ಸ್ ಬೂಟಿಂಗ್ - ಭಾಗ ೨

ಬಯೋಸ್ ಬಗ್ಗೆ ಓದ್ಲಿಕ್ಕೆ ಹೇಳಿದ್ದೆ, ನಿಮ್ಮ ಹೋಮ್ವರ್ಕ್ ಮುಗ್ಸಿದ್ರಾ? ;) ಇರಲಿ ಅದರ ಬಗ್ಗೆ ಆಮೇಲೆ ಚಿಂತಿಸುವ. ಈಗ ಮುಂದೆ ಓದಿ.

ಎಷ್ಟು ದಿನದ ನಂತರ

ಎಷ್ಟು ದಿನದ ನಂತರ ಕೇಳಿದೆ ನಿನ್ನ ದನಿ
ಬತ್ತಿಹೋಗಿದ್ದ ಕನಸುಗಳಿಗೆ ಸಿಕ್ಕಿತು ಜೀವ ಹನಿ
ಸೆಟೆದು ನಿಂತವು ನೆನಪುಗಳ ಪ್ರೇಮ್ ಕಹಾನಿ
ಮತ್ತೊಮ್ಮೆ ಉಸಿರು ಕಂಡ ಈ ಜೀವಕ್ಕೆ ಇಲ್ಲ ಹಾನಿ

ಎಷ್ಟು ದಿನದ ನಂತರ ಕಂಡೆ ನಿನ್ನ ಮುಖ
ಕಾದು ಕಾದು ಬೆಳಲಿ ಬೆಂಡಾಗಿ ಹೋಗಿದ್ದ ನಿನ್ನ ಸಖ
ನಿನ್ನೊಂದಿಗೆ ಮತ್ತೆ ಮರಳಿ ಬಂತು ಸುಖ