ನಾಲಿಗೆ ಹೇಗೆ ಹೊರಳಿದರೆ ಹಾಗೆ ಕನ್ನಡವೆ?

ನಾಲಿಗೆ ಹೇಗೆ ಹೊರಳಿದರೆ ಹಾಗೆ ಕನ್ನಡವೆ?

Comments

ಬರಹ

ನಾನು ಕನ್ನಡದಲ್ಲಿ ಬರೆಯುವಾಗ ನಿಘಂಟನ್ನು ಹತ್ತಿರ ಇಟ್ಟುಕೊಂಡೇ ಬರೆಯುವುದು. ನಾನು ಬಳಸುವ ಪದಗಳು ನಿಘಂಟಿನಲ್ಲಿದ್ದರೆ ಸರಿ ಅಂತ ನಂಬಿಕೆ. ಆದ್ರೆ ಈ ನಂಬಿಕೆ ಮಾಯ್ಸ್, ಸುನೀಲ್, ಮತ್ತಿತರರ ಮಾತು ಕೇಳುತ್ತ ಮಾಯವಾಗುತ್ತಿದೆ. ಅವರ ಪ್ರಕಾರ ಅಲ್ಲಿರುವ ಪದಗಳೆಲ್ಲ ಸಂಸ್ಕೃತಮಯ. ಸೂರ್ಯ, ಚಂದ್ರ, ಆಕಾಶ ತಪ್ಪು. ಪದ್ಯಗಳಲ್ಲಿ ಮಾತ್ರ ಕೇಳಿರುವ ಚಂದಿರ, ನೇಸರು ಸರಿ! ಮತ್ತೆ ಕೆಲವೆಡೆ, ಹಕಾರ ಬಳಸದಿದ್ರೂ ಪರ್ವಾಗಿಲ್ಲ. ಯಾಕೆಂದ್ರೆ, ಕೆಲವರು ಹೀಗೆ ಮಾತಾಡೋದು, ಅವರಿಗೋಸ್ಕರ ನಮ್ಮ ಕನ್ನಡವನ್ನು ಸಡಿಲಗೊಳಿಸೋಣ. ಕಮೆಂಟ್ ಅಂತ ಆಂಗ್ಲ(ಇಂಗ್ಲೀಸು?) ಪದ ಬಳಸಿ, ಆದ್ರೆ ಪ್ರತಿಕ್ರಿಯೆ ಅನ್ನಬೇಡಿ. ಇಲ್ಲಿ ಕಮೆಂಟ್ ಅಂತಾನೆ ಅನ್ಬೇಕ? ಅಮೇರಿಕದ ಕಾಮೆಂಟ್ ಬಳಸಬಹುದ? :-) ಬಹಳ ಬಹಳ confusing ಆಗಿ ಇದೆ ಈ theoryಗಳು! ಕೊನೆಗೆ ನನ್ನ ನಾಲಿಗೆ ಹೇಗೆ ಹೊರಳುತ್ತೋ ಹಾಗೆ ಮಾತಾಡಿ, ಬೆರಳು ಕುಟ್ಟಿದ ಹಾಗೆ ಬರೆದು, ಅದನ್ನೆ ಕನ್ನಡ ಅಂತೀನಿ ಅಷ್ಟೆ,( i mean ಅಶ್ಟೆ?). ಅದನ್ನೂ ಒಪ್ಪಬೇಕು, ಯಾಕೆಂದ್ರೆ ಇದು NRI ಕನ್ನಡ :-D

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet