ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒಲಿಂಪಿಕ್ಸ್ : ಬರ ಕೊನೆಯಾಗುತ್ತದೆ, ಆದರೆ...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಆಗಸ್ಟ್ 29, 2008 ರ ಸಂಚಿಕೆಯಲ್ಲಿನ ಲೇಖನ.)

ಈ ಬಾರಿಯೂ ಭಾರತ ಏನಾದರೂ ಒಂದು ಪದಕ ಗೆದ್ದರೆ ಅದು ಪವಾಡವೆ ಎನ್ನುವಂತಹ ಸ್ಥಿತಿ ೨೦೦೮-ಒಲಿಂಪಿಕ್ಸ್ ಆರಂಭವಾದಾಗಲೆ ಇತ್ತು. ಬಹುಶಃ ಕೆಲವೆ ಕೆಲವರನ್ನು ಬಿಟ್ಟರೆ ಇಡೀ ದೇಶ ಅಂತಹ ದೊಡ್ಡ ಆಸೆಗಳನ್ನು ಇಟ್ಟುಕೊಂಡಿರಲಿಲ್ಲ. ಅಂತಹುದರಲ್ಲಿ ಅಭಿನವ್ ಬಿಂದ್ರಾ ಹತ್ತು ಮೀಟರ್‌ಗಳ ಏರ್ ರೈಫಲ್ ವಿಭಾಗದಲ್ಲಿ ಚಿನ್ನದ ಪದಕ ಪಡೆದದ್ದು ಒಂದು ಚಾರಿತ್ರಿಕ ಘಟನೆ. ಅಷ್ಟೆ ಮುಖ್ಯವಾದದ್ದು ಆ ಪೈಪೋಟಿಯ ಸಮಯದಲ್ಲಿ ಆತ ತೋರಿಸಿದ ಪ್ರಬುದ್ಧ ನಡವಳಿಕೆ.

ಆದರೆ, ಈ ಎಲ್ಲಾ ಸಾಧನೆಗೆ ಮತ್ತು ಹೆಮ್ಮೆಗೆ ವಿರುದ್ಧವಾಗಿದ್ದದ್ದು ನಮ್ಮ ರಾಜಕೀಯ ನಾಯಕರುಗಳ, ಕ್ರೀಡಾಸಂಸ್ಥೆಗಳ ಪದಾಧಿಕಾರಿಗಳ, ಮತ್ತು ಸರ್ಕಾರಗಳ ನಡವಳಿಕೆ. ಬಿಂದ್ರಾ ಚಿನ್ನ ಗೆದ್ದದ್ದೇ, ತಮ್ಮ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಮಾಡುವ ತಮ್ಮ ಮಾಮೂಲಿ ನಿಕೃಷ್ಟ ನಡವಳಿಕೆಗಳನ್ನು ಎಂದಿನಂತೆ ಭಾರತದ ಘನತೆವೆತ್ತ ಕೇಂದ್ರ ಸರ್ಕಾರ ಮತ್ತು ಹಲವಾರು ರಾಜ್ಯ ಸರ್ಕಾರಗಳು ಆರಂಭಿಸಿಬಿಟ್ಟವು. ಅತ್ತ ಟಿವಿಯಲ್ಲಿ ಬಿಂದ್ರಾರ ಅಪ್ಪ, "ಅಭಿನವ್‌ನ ಈ ಸಾಧನೆಗಾಗಿ ಇಡೀ ಜೀವನ ಪಣ ಇಟ್ಟಿದ್ದೆವು. ಜೀವನಪೂರ್ತಿ ಮಾಡಿದ ಉಳಿತಾಯವನ್ನು ಆತನಿಗಾಗಿ ಖರ್ಚು ಮಾಡಿದ್ದೇವೆ. ಯಾಕೆಂದರೆ, ನಾವು ಸರ್ಕಾರದ ಬಳಿಗೆ ಆತನಿಗಾಗಿ ಅದು ಬೇಕಾಗಿದೆ, ಇದು ಬೇಕಾಗಿದೆ ಎಂದು ಹೋದಾಗಲೆಲ್ಲ ಅವರು... (ಹೇಳುವುದೊ ಬೇಡವೊ ಎಂಬ ಗೊಂದಲ, ಸ್ವಲ್ಪ ತಡವರಿಕೆ) ಅವರೂ ಕೊಟ್ಟಿದ್ದಾರೆ; ಸರ್ಕಾರವೂ ಕೊಟ್ಟಿದೆ. ಆದರೆ ಈ ಚಿನ್ನದ ಪದಕ ಗೆಲ್ಲಬೇಕಾದರೆ ಎಷ್ಟು ಕಷ್ಟ ಪಡಬೇಕಾಗುತ್ತದೆ ಎನ್ನುವುದು ಅವರಿಗೆ ಗೊತ್ತಾಗಲಿಲ್ಲ. ಆ ಕಷ್ಟದ ಗ್ಯಾಪ್ ಏನಿತ್ತು ಅದನ್ನು ನಾವು ತುಂಬಿದೆವು..." ಎನ್ನುತ್ತಿದ್ದರೆ ಇತ್ತ

ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!

ಅಬ್ಬಾ ಆಲನಹಳ್ಳಿಯೇ. ಏಕೆ ಸತ್ತೆ ಕವಿಯೇ... ಎನ್ನುತ್ತಿದೆ ಮನಸ್ಸು. ಕೈಲಿ ಆಲನಹಳ್ಳಿ ಕೃಷ್ಣ ಅವರ ಕವಿತೆಗಳು, ಕತೆಗಳ ಪುಸ್ತಕವಿದೆ. ತುಂಬು ಗುಂಗುರುಗೂದಲಿನ ಚೆಲುವ ಕೃಷ್ಣ ತುಂಟ ಕಣ್ಣು ಬೀರುತ್ತಿದ್ದಾನೆ.

ಲಾಲಿ

ಲಾಲಿ
ಮುದ್ದು ಕಂದ ನಿನಗೆ, ಅಂದ ಚೆಂದ ಮಾಡಿ,
ಮಂಗಳಾರತಿ ಎತ್ತಿ ಲಾಲಿ ಲಾಲಿ
ಹೆಸರಿಟ್ಟು ಕರೆದು, ತೊಟ್ಟಿಲ ತೂಗಿ
ಜೋಗುಳ ಹಾಡಿರೋ, ಲಾಲಿ ಲಾಲಿ
ಚಂದಿರ ಮುಖದವನೆ ,ಅಂದದ ಮೊಗದವನೆ,
ಸುಂದರಾಂಗನೇ ನಿನಗೆ ಲಾಲಿ ಲಾಲಿ.
ನಕ್ಕು ನಗಿಸುವ,ಅತ್ತು ಅಳಿಸುವ
ಮುದ್ದು ಕಂದ ನಿನಗೆ ಲಾಲಿ ಲಾಲಿ
ರಂಗು ರಂಗಿನ ಅಂಗಿ ಉಡಿಸಿ.
ಬಂಗಾರದ ಒಡವೆಯಾ ತೊಡಿಸಿ,

ಅಕ್ಕಾ..ಅಕ್ಕಾ..ನಾನೂ ಬತ್ತೀನಿ...

ಅಕ್ಕ ಸಮ್ಮೇಳನಕ್ಕೆ ನಮ್ಮ ರಾಜಕಾರಣಿಗಳು ಮಜ ಮಾಡಲು ಹೋಗುತ್ತಾರೆಂದು ಪ್ರಚಾರ ಮಾಡುತ್ತಿದ್ದಾರೆ.
ಯಾವ ಒಳ್ಳೆಯ ಕೆಲಸ ಮಾಡಲು ಹೊರಡುವಾಗಲೂ ಅಡ್ಡಕಾಲಿಡುವುದು ಕೆಲವರ ಅಭ್ಯಾಸ.
ನಿಜ ಸಂಗತಿ ಅದಲ್ಲ..
ಹತ್ತಿರ ಬನ್ನಿ.. ಗುಟ್ಟಿನ ವಿಚಾರ..
ಇನ್ನೂ ಹತ್ತಿರ ಬನ್ನಿ.. ಶ್.. ಬುಶ್‌ಗೆ ಕೇಳಿಸೀತು.

ಅಪರೇಷನ್!! ಹೌದೂ. ‘ಆಪರೇಷನ್ ಅಕ್ಕ’!!

ಬಂಡಿ, ಬಂಡೆ

ಬಂಡಿ=ಚಕ್ರಗಳಿರುವ ವಾಹನ.
ಉದಾಹರಣೆ: ನಾವು ಎತ್ತಿನ ಬಂಡಿಯಲ್ಲಿ ಹಳ್ಳಿಗೆ ಹೋದೆವು.

ಬಂಡೆ=ದೊಡ್ದ ಕಲ್ಲು.
ಉದಾಹರಣೆ: ಜನರು ನದಿಯ ದಂಡೆಯಲ್ಲಿರುವ ಬಂಡೆಯ ಮೇಲೆ ಬಟ್ಟೆ ಒಗೆಯುತ್ತಾರೆ.

ಮಳೆಯ ಮೇಲೇಕೆ ದೂರು?

ಮಳೆ... ಇದು ಅದೇ ಮಳೆಯ ನೀರಲ್ಲವೇ? ಚಿಕ್ಕಂದಿನಲ್ಲಿ ಮಳೆ ಬಂದ ಕೂಡಲೇ ಮನೆಯಿಂದ ಹೊರಕ್ಕೋಡಿ ಕುಣಿದಾಡುತ್ತಿದ್ದೆವಲ್ಲವೇ? ಬೊಗಸೆಯಲ್ಲಿ ನೀರ ಹಿಡಿದು ಗೆಳೆಯನ ಮುಖಕ್ಕೆ ಸೋಕುತ್ತಿದ್ದೆವಲ್ಲವೇ?

ಎಲ್ಲ ತುಸುಹೊತ್ತು...

ಕೆಂಪೆಂದರೆ ಮೂಗು ಮುರಿಯುತ್ತಿದ್ದವಳಿಗೆ
ಆ ನವಿರುಗೆಂಪು ಅದ್ಯಾಕೋ
ಇಷ್ಟವಾಯಿತು.
ಮತ್ತೆ ಮತ್ತೆ
ಬೆರಳಾಡಿಸಿದಳು. . .
ಬೆರಳಾಡಿಸುತ್ತಲೇ
ಕಣ್ಹೊರಳಿಸಿ ಅರಳಿಸಿದಳು.
ಅದ್ಯಾಕೋ ಒಮ್ಮೆಲೇ
ಕೈಕೊಸರಿಕೊಂಡಳು!
ಆ ನವಿರು
ಮಾಯವಾದೀತೆಂದು.

ಅಷ್ಟಕ್ಕೂ ಅದರ ಆಯಸ್ಸು
ಅವಳಿಗೆ ಗೊತ್ತಿಲ್ಲವೇನಂತಲ್ಲ.
ಪುಟ್ಟ ಕಂದ
ಒಮ್ಮೆ ಆಕಳಿಸುತ್ತ
ಹೊಟ್ಟೆಯುಬ್ಬಿಸಿ,