ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡ ತಾಯಿಗೆ ನಮನ

ಎದ್ದೇಳಿ ಕನ್ನಡಿಗರೆ ಎದ್ದೇಳಿ
ಹರಡಲು ಕರುನಾಡ ಕಂಪನ್ನು
ಹಾಡಲು ಕನ್ನಡದ ಹಾಡನ್ನು

ಭಕ್ತಿ ಕೀರ್ತಿ ಹೊತ್ತು ಮೆರೆವ ನಾಡು ನಮ್ಮ ಕರ್ನಾಟಕ
ಊರುಗಳು ಸಾವಿರಾರು ಭಾವನೆಗಳು ನೂರಾರು
ನಮ್ಮ ಭಾಷೆ ಒಂದೆ ಕನ್ನಡ

ಬನ್ನಿ ಕನ್ನಡಿಗರೆ ಬನ್ನಿ ಕನ್ನಡಕ್ಕಾಗಿ ದುಡಿಯೋಣ ಬನ್ನಿ
ಎಲ್ಲರು ಸೇರಿ ಮೊಳಗಿಸೋಣ ಕರ್ನಾಟಕದ ಕಹಳೆಯನ್ನು

ಪಂದಿ/ಹಂದಿ, ಪಂದೆ/ಹಂದೆ

ಹಂದಿ(ಪಂದಿ)= ಹೆಚ್ಚಾಗಿ ಹೊಲಸು ತಿನ್ನುವ, ಎಲ್ಲವನ್ನು ತಿನ್ನುವ ಪ್ರಾಣಿ
ಉದಾಹರಣೆಗೆ:

ಹರಿ ಹಂದಿಯಾದಂದು ಹರ ತಿರಿದುಂಡಂದು ಹರನಜನ ಶಿರವನರಿ-
ದಂದು ಲಿಖಿತವನು ಬರೆದವರಾರು?...........
...... ಸರ್ವಜ್ಞ

ಹಂದೆ(ಪಂದೆ)= ಹೇಡಿ
ಬಸವಣ್ಣನವರ ವಚನ ನೋಡಿ:

ಅರ್ಥರೇಖೆಯಿದ್ದಲ್ಲಿ ಫಲವೇನು?
ಆಯುಷ್ಯರೇಖೆಯಿಲ್ಲದನ್ನಕ್ಕ
ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದು ಫಲವೇನು?

ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....

ನನ್ನಲ್ಲಿ ಒಬ್ಬ ಕವಿ ಇದಾನೆ ಅನ್ನೋ ಸತ್ಯ ನನಗೆ ಗೊತ್ತಿರಲಿಲ್ಲ. ನನ್ನ ಸ್ನೇಹಿತರೆಲ್ಲ ನೀನು ಒಂದೊಂದ್ ಸಲ ಕವಿ ಥರ ಮಾತಾಡ್ತಿಯ ಅಂಥ ಹೇಳ್ತಿದ್ರು ಆದ್ರೆ ನನಗೆ ಎಂದು ಆ ಥರ ಅನ್ನಿಸಿರಲಿಲ್ಲ. ಈಗ ಕವಿ ಹುಟ್ಟಿದ ಕಥೆ ಹೇಳ್ತೀನಿ, ಆಗಸ್ಟ 4, 2007 ರಾತ್ರಿ 9 ಗಂಟೆಗೆ ಬೆಂಗಳೂರು ಮಜೆಸ್ಟಿಕ್ ಇಂದ ಹೊಸಕೆರೆಹಳ್ಳಿ ನಲ್ಲಿ ಇದ್ದ ನನ್ನ ಮನೆಗೆ ಹೋಗೋಕೆ 45G ಬಸ್ ಹತ್ತಿದೆ.

‘............’

ದಿನ ರಾತ್ರಿ

ಹುಟ್ಟಿ-ಸತ್ತು

ಗೆದ್ದು-ಸೋತ

ಭಾವನೆಗಳಿಗೆಲ್ಲ

ಅಕ್ಷರಗಳ ಶ್ರದ್ಧಾಂಜಲಿ ಅರ್ಪಿಸಿ

ಮನಸು ತೊಳೆದುಕೊಳ್ಳುತ್ತಾಳೆ

***

ಕೂಡಿಟ್ಟ ಹೂಡಿಟ್ಟ

ಮನಸ್ತಾಪವನ್ನೆಲ್ಲ

ಒಟ್ಟು ಮಾಡಿ

ಆಗೊಮ್ಮೆ ಈಗೊಮ್ಮೆ

ಸ್ಫೋಟಿಸುತ್ತಾನೆ

***

ಇಬ್ಬರದೂ

ದಾಖಲಾಗುತ್ತದೆ

ಪುಟಗಳ ಮೇಲೆಯೇ

ಅವಳದು

ಬಿಳಿ ಪುಟಗಳ ಮೇಲೆ

ಅವನದು

ಬಣ್ಣವಿಲ್ಲದ

ಪುಟಗಳ ಮೇಲೆ

ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?

ಕವಿ -ಲೇಖಕ -ಕತೆಗಾರ ಇವರುಗಳ ಬಗ್ಗೆ ಒಂದು ಕುತೂಹಲದ ಕಣ್ಣು ಎಲ್ಲರಿಗು ಇದ್ದೆ ಇರುತ್ತೆ ಅಲ್ವಾ ?

ಲೈಬ್ರೆರಿಗಳ ಒಳ ಹೊಕ್ಕರೆ ನನಗೆ ತಲೆ ಕೆಟ್ಟು ಹೋಗೋದುಂಟು .ಯಾವ ವಿಷಯಗಳ ಬಗ್ಗೆ ಈಗಾಗಲೇ

ಬರೆದಿಲ್ಲ ಹೇಳಿ .ಎಲ್ಲ ಮುಗಿದಿದೆಯೇನೋ ಅನ್ನಿಸುತ್ತದೆ ಅಲ್ವಾ ? ಆದ್ರೂ ನಮಗೆ ಏನೋ ತೋಚುತ್ತೆ ,

ಮತ್ತೆ ಹಾಳೆ ,ಪೆನ್ನು ತೆಗೊಂಡು ಗೀಚೋಕೆ ಶುರು ಮಾಡ್ತೀವಿ.

ಮೊರೆ, ಮೊಱೆ

ಮೊರೆ(ಕ್ರಿಯಾಪದ): ಧ್ವನಿಮಾಡು, ಮರಮರ ಎಂದು ಸದ್ದು ಮಾಡು, ದುಂಬಿಯಂತೆ ಝೇಂಕರಿಸು, ಸಮುದ್ರದಂತೆ ಧ್ವನಿಮಾಡು, ಶಂಖದಂತೆ ಧ್ವನಿಮಾಡು

ಭೂತಕೃದ್ವಾಚಿ: ಮೊರೆದು
ವರ್ತಮಾನಕೃದ್ವಾಚಿ: ಮೊರೆವ/ಮೊರೆಯುವ

ಕೃದಂತ ಭಾವನಾಮ: ಮೊರೆತ
ಮೊಱೆ(ನಾಮಪದ)=ಹೆದಱಿಕೆಯಿಂದ ಅೞು, ಶರಣಾಗು

ಉದಾಹರಣೆ: ಮೊರೆಯುವ ದುಂಬಿಗೆ ಹೆದಱಿ ಮಗ ನನ್ನೆಡೆ ಮೊಱೆಯಿಟ್ಟ.

ಸಹಜ ಕೃಷಿ ಹರಿಕಾರ ಮಸನೊಬು ಫುಕುಓಕಾ ಮರಳಿ ಮಣ್ಣಿಗೆ.

ಭಾರತ ಕೃಷಿ ಸಂಸ್ಕೃತಿ ರಾಷ್ಟ್ರ. ನಮ್ಮಲ್ಲಿ ಕೃಷಿ ‘ಸಂಸ್ಕೃತಿ’ ‘ವ್ಯವಹಾರ’ ಅಲ್ಲ. ‘ಅಗ್ರಿಕಲ್ಚರ್’ ಅದು ‘ಅಗ್ರಿ ಬಿಸಿನೆಸ್’ (ಉಳಿದ ದೇಶಗಳಲ್ಲಿ ಪ್ರಚಲಿತವಿರುವಂತೆ) ಅಲ್ಲ!

ಎತ್ತು, ಆಕಳು ಮತ್ತು ಎಮ್ಮೆ ಮೊದಲಾದವನ್ನು ಸಾಕಿಕೊಂಡು ಶ್ರಮ ನಂಬಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದ ನಮ್ಮ ನೇಗಿಲಯೋಗಿ. ಹಣವಿರದಿದ್ದರೂ ಹಾಲು, ಮೊಸರು, ಬೆಣ್ಣೆ, ತುಪ್ಪ ಹೀಗೆ ಹೈನಿಗೆ, ಜಾನುವಾರುಗಳ ಸಗಣಿ, ಮೂತ್ರ ಹೀಗೆ ಸಾವಯವ ಗೊಬ್ಬರಕ್ಕೆ, ಅಡುಗೆಗೆ ಗೋಬರ್ ಗ್ಯಾಸ್, ಧಾನ್ಯ ಲಕ್ಷ್ಮಿಯ ಕೃಪಾಕಟಾಕ್ಷ ಊಳುವಯೋಗಿಯ ನೆರಳಾಗಿತ್ತು. ಹಳ್ಳಿಗಳು ಸಮೃದ್ಧವಾಗಿದ್ದವು. ಅನ್ನದ ಬಟ್ಟಲು ಅರಿವಿನ ಮುಗಿಲಿಗಿಂತ ಶ್ರೇಷ್ಠವಾಗಿತ್ತು.

ಕ್ರಮೇಣ ಆಧುನಿಕ ಕೃಷಿ ಉಪಕರಣಗಳು ನಮ್ಮ ಭೂಮಿಗೆ ಕಾಲಿಟ್ಟವು. ಮಾನವ ಶ್ರಮ ಪೂರಕ, ಪ್ರೇರಕವಾಗಿದ್ದ ಕೃಷಿ ಸಂಸ್ಕೃತಿ ಯಂತ್ರ ಅವಲಂಬಿತ ಕೃಷಿ ವ್ಯವಹಾರವಾಗಿ ಚಾಲನೆ ಪಡೆಯಿತು. ಊಳುವ ಒಡೆಯ ಆಳಾದ. ಕೃಷಿ ಕೂಲಿಯಾದ. ಕ್ರಮೇಣ ಉದ್ಯೋಗ ಅರಸಿ ಪಟ್ಟಣಗಳಿಗೆ ಅನಿವಾರ್ಯವಾಗಿ ಉಳ್ಳವರ ಗುಲಾಮನಾಗಿ ಬಂದ. ಕೃಷಿ ನಿರಾಶ್ರಿತ ಎಂಬ ಹೊಸ ಹಣೆಪಟ್ಟಿ ಅಂಟಿಸಲಾಯಿತು. ಟ್ರ್ಯಾಕ್ಟರ್ ಭೂಮಿಗೆ ಕಾಲಿಟ್ಟಿದ್ದೇ ತಡ ಕೃಷಿಕರ ಬೆನ್ನೆಲುಬಾಗಿದ್ದ ಜಾನುವಾರು ಕಟುಕರ ಮನೆ ಸೇರಿದವು. ರೈತನ ಮಕ್ಕಳು ಹಾಲು-ಹೈನಿನಿಂದ ವಂಚಿತರಾಗಿ ದಾರಿ ತಪ್ಪಿದ ಮಕ್ಕಳಾದರು. ಇದನ್ನೇ ಅಭಿವೃದ್ಧಿ ಎಂದು ಮಾಧ್ಯಮಗಳು ಜಾಹಿರಾತುಗಳ ಮೂಲಕ ಸಾರಿದವು. ರೈತ ಅಭಿವೃದ್ಧಿ ರಥದ ಚಕ್ರದಡಿಯಲ್ಲಿ ಸಿಲುಕಿ ಹಣ್ಣುಗಾಯಿ-ನೀರುಗಾಯಿಯಾದ.

ಇನಿಯ

ದಾರಿಯ ಕಲ್ಲಲ್ಲ ನನ್ನ
ಮೂಗುತಿಯ ವಜ್ರ ನೀನು
ಕಣ್ಣ ಹೊಳಪೇ ನೀನಾಗಿರುವಾಗ
ಬಾನಂಗಳದ ನಕ್ಷತ್ರವೇಕೆನಗೆ
ಮೊನ್ನೊಮ್ಮೆ ನೋಡುತಲಿದ್ದೆ ಬಾನೆಡೆಗೆ
ಸಂಕೋಚದಿಂದ ಸೆರಗೆಳೆದುಕೊಂಡಿತು
ತಾರೆ ಮುಖಕ್ಕೆ ಯಾಕೆ.... ಎಂದೆ
ಅಷ್ಟೊಂದು ಹೊಳಪೇನು ನಿನ್ನ ಕಣ್ಣಲ್ಲಿ
ಕೇಳಿತು ಅಸೂಯೆಯಿಂದ ಅದು
ನನ್ನಿನಿಯನ ನೆನಪು! ಎಂದೆ
ಕೇಳಿದ ನಕ್ಷತ್ರ ನಲ್ಲನ
ಹುಡುಕ ಹೊರಟಿತು.

ಮಾಯಾಂಗಿನಿ ಮೋಡಿ

ಕಣ್ಣಿಗೆ ಕಾಣದ ಮಾಯೆಯೊಂದು ಮಾಡುತಿದೆ ಮೋಡಿ ಇಂದು
ಸೆಳೆಯುತಿದೆ ನನ್ನನ್ನು , ಕೆದಕುತಿದೆ ಅಂತರಂಗವನ್ನು
ಅದ್ಯಾವ ಮಾಯೆಯೋ , ಅದ್ಯಾವ ಮೋಡಿಯೋ ಅರಿಯದಾಗಿದೆ
ಸೋಲಿಲ್ಲದ ಸರದಾರ ನಾನು, ಸೋತು ಹೋಗುವೆನೆ ಈ ಮಾಯೆಗೆ
ತೀರಗಳಿಂದಾಚೆಗೆ ಕರೆದುಕೊಂಡು ಹೋಗಲೆಂದೆ ಬಂದಿವುದೆ ಈ ಮಾಯೆ
ಮರುಭೂಮಿಯಂತ ಮನಸಿಗೆ ನೀರೆರೆಯಲು ಬಂದಿರುವಳೇ ಈ ಮಾಯೆ

ಹನಿಗವನಗಳು ಭಾಗ 3

ಬೇಲೂರ ಬಾಲೆ

ಬೇಲೂರ ಬಾಲೆಯರಿಗೆಲ್ಲ
ಕಡಿಮೆಯಾಗಿದೆ ಬೇಡಿಕೆ
ಕಾರಣ ಬೆಂಗಳೂರ ಬಾಲೆಯರೆಲ್ಲ
ತೋಡುವುದನ್ನ ಬಿಟ್ಟಿದ್ದಾರೆ ರವಿಕೆ!!

 ಸ್ಕೂಟಿ ಬ್ಯೂಟಿ